• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅಂತ್ಯಕ್ರಿಯೆಗೆ ಮನೆಯವರೇ ಬರುವುದಿಲ್ಲ, ಹಾಗಿರುವಾಗ!!

Tulunadu News Posted On July 4, 2020
0


0
Shares
  • Share On Facebook
  • Tweet It

ಕೊರೊನಾ ಶಬ್ದ ಕೇಳಿದ ಕೂಡಲೇ ಎಂತೆಂತವರಿಗೆ ಒಂದು ಕ್ಷಣ ಆತಂಕವಾಗುವುದು ಸಹಜ. ಹಾಗಿರುವಾಗ ಕೋವಿಡ್ 19 ರೋಗಿಗಳನ್ನು ಪರೀಕ್ಷೆ ಮಾಡುವ, ಆ ರೋಗಿಗಳು ನಿಧನರಾದರೆ ಆ ಶವಗಳ ಅಂತ್ಯಕ್ರಿಯೆ ಮಾಡುವವರಿಗೆ ಒಳಗೆ ಸಣ್ಣಮಟ್ಟದ ಆತಂಕ ಇರದೇ ಇರಲು ಸಾಧ್ಯವೇ? ಅವರು ಕೂಡ ಮನುಷ್ಯರಲ್ಲವೇ? ಈ ಮಾತುಗಳನ್ನು ಯಾಕೆ ಹೇಳಬೇಕಾಯಿತು ಎಂದರೆ ಬಳ್ಳಾರಿ ಅಥವಾ ರಾಜ್ಯದ ಒಂದೆರಡು ಕಡೆ ಕೋವಿಡ್ ಪಾಸಿಟಿವ್ ಶವಗಳನ್ನು ಗುಂಡಿಗೆ ಬಿಸಾಡಲಾಯಿತು, ಎಳೆದುಕೊಂಡು ಹೋದರು, ಸೈಕಲ್ಲಿನಲ್ಲಿ ತೆಗೆದುಕೊಂಡು ಹೋದರು ಎಂದು ಹೀಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವಿಸ್ತ್ರತ ವರದಿ ಬರುತ್ತಾ ಇದೆ. ಹಾಗೇ ಗುಂಡಿಯಲ್ಲಿ ಬಿಸಾಡಿ ಮಣ್ಣು ತುಂಬಿಸಿದ ಆಸ್ಪತ್ರೆಯ ಸಿಬ್ಬಂದಿಗಳನ್ನು ಅಮಾನತು ಕೂಡ ಮಾಡಲಾಗಿದೆ. ಈ ಬಗ್ಗೆ ಟಿವಿಯವರು ಗಂಟೆಗಟ್ಟಲೆ ತೋರಿಸಿದ್ದು ಆಯಿತು, ರಾಜ್ಯ ಸರಕಾರದ ಸಚಿವರಿಗೆ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಪ್ರಶ್ನೆ ಕೇಳಿದ್ದು ಆಯಿತು, ಒಟ್ಟಿನಲ್ಲಿ ಅಮಾನವೀಯ ಎನ್ನುವ ಶಬ್ದ ಗಂಟೆಗೆ ನೂರು ಸಲ ಬಳಸಿದ್ದು ಆಯಿತು. ಆದರೆ ವಾಸ್ತವ ಏನು? ಆ ಶವಗಳನ್ನು ಬಹಳ ಗೌರವಪೂರ್ಣವಾಗಿ ದಹನ ಮಾಡಬೇಕು ಎಂದು ತಾನೆ ವಿಷಯ?
ಇವತ್ತಿನ ದಿನಗಳಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಒಬ್ಬ ಕೋವಿಡ್ ಸೊಂಕೀತ ಸತ್ತರೆ ಅವನ ಮನೆಯವರೇ ಶವಸಂಸ್ಕಾರಕ್ಕೆ ಬರದ ಪರಿಸ್ಥಿತಿ ಇದೆ. ಒಂದು ವೇಳೆ ಸತ್ತವರು ಹಿರಿಯ ಜೀವವಾದರೆ ಆ ವ್ಯಕ್ತಿಯ ಮಗ, ಪತ್ನಿ, ಸಹೋದರ, ಸಹೋದರಿಯರೇ ಶವದ ಸನಿಹಕ್ಕೆ ಬರುವುದಿಲ್ಲ. ಗರಿಷ್ಟ 20 ಜನರು ಬರಬಹುದು ಎಂದು ಸರಕಾರದಿಂದ ಅನುಮತಿ ಇದ್ದರೂ ಅನೇಕ ಶವದಹನದ ಸಂದರ್ಭದಲ್ಲಿ ಅವರ ಮನೆಯವರೇ ಇರಲ್ಲ. ಒಡಹುಟ್ಟಿದವರು ಬರಲ್ಲ. ಜನ್ಮಕೊಟ್ಟವರು ಬರಲ್ಲ. ಎಲ್ಲಿಯ ತನಕ ಅಂದರೆ ಕನಿಷ್ಟ ಮುಖ ನೋಡುವ ಅವಕಾಶ ಕೊಡುತ್ತೇವೆ ಎಂದರೂ ಬರದೇ ಇರುವವರು ಇದ್ದಾರೆ. ಬನ್ನಿ ಎಂದು ಕರೆದಾಗಲೇ ರಕ್ತ ಹಂಚಿಕೊಂಡು ಬದುಕಿದವರು ಬರದೇ ಇದ್ದಾಗ, ಯಾವುದೇ ಸಂಬಂಧವಿಲ್ಲದೇ, ಬೆರಳೆಣಿಕೆಯ ದಿನ ಕೂಡ ಒಟ್ಟಿಗೆ ಇಲ್ಲದವರು ಎಷ್ಟರಮಟ್ಟಿಗೆ ಪ್ರೀತಿ ತೋರಿಸಿಯಾರು? ಯಾಕೆಂದರೆ ಸತ್ತವರು ಹೇಗೋ ಸತ್ತು ಹೋದರು. ಹಾಗಂತ ನಾವು ಪಿಪಿಇ ಕಿಟ್ ಧರಿಸಿಯೂ ಕೊರೊನಾ ಬರಲ್ಲ ಎಂದು ಏನು ಗ್ಯಾರಂಟಿ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹಾಗೇ ವರ್ತಿಸಿರಬಹುದು. ಅದನ್ನು ಅಮಾನವೀಯ ಎಂದು ಹೇಳಲೇಬಾರದು. ಟಿವಿ ಸ್ಟುಡಿಯೋದಲ್ಲಿ ಕುಳಿತು ಬಡಪಾಯಿ ಸಿಬ್ಬಂದಿಗಳನ್ನು ತೆಗಳುವುದು ತುಂಬಾ ಸುಲಭ. ಆದರೆ ವಾಸ್ತವ ಎಷ್ಟು ಮಂದಿ ಮಾಧ್ಯಮದವರಿಗೆ ಗೊತ್ತಿದೆ.
ಇನ್ನು ಹಿಂದೂ ಶಾಸ್ತ್ರದ ಪ್ರಕಾರ ಶವದಹನದ ಮೂರನೇ ದಿನ ಬೂದಿ ತೆಗೆದುಕೊಂಡು ಹೋಗಬೇಕು ಎನ್ನುವ ಸಂಪ್ರದಾಯವಿದೆ. ಕೋವಿಡ್ 19 ರೋಗಿಯ ಶವದಹನದ ಬಳಿಕ ಬೂದಿಯನ್ನು ತೆಗೆದುಕೊಂಡು ಹೋಗಲು ಕೂಡ ಎಷ್ಟೋ ಸಲ ಯಾರೂ ತಯಾರಿರುವುದಿಲ್ಲ. ಒಂದು ಹೆಣವನ್ನು ಸುಟ್ಟ ಬಳಿಕ ಅದರಲ್ಲಿ ಕೋವಿಡ್ 19 ವೈರಾಣು ಇರಲು ಸಾಧ್ಯವೇ ಇಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅದಕ್ಕಾಗಿ ವೈದ್ಯರು ದಿನಕ್ಕೆ ನಾಲ್ಕು ಸಲ ಬಿಸಿನೀರು ಮಾಡಿ ಕುಡಿಯಿರಿ ಎಂದು ಹೇಳುವುದು. ಒಂದು ವೇಳೆ ಕೋವಿಡ್ 19 ವೈರಾಣು ನಿಮ್ಮ ಗಂಟಲಭಾಗದಲ್ಲಿ ಇದ್ದರೆ ಬಿಸಿ ನೀರು ಹಾಕಿದ ಕೂಡಲೇ ಅದು ಅಲ್ಲಿಂದ ಇಳಿದು ಹೊಟ್ಟೆಯನ್ನು ಸೇರುತ್ತದೆ. ಬಿಸಿಯಲ್ಲಿ ಈ ವೈರಸ್ ಉಳಿಯುವುದಿಲ್ಲ ಎಂದು ಗೊತ್ತಿದ್ದರೂ ನಮ್ಮ ಜನ ಹೆದರುತ್ತಾರೆ ಎಂದಾದರೆ ಆ ಬಡಪಾಯಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಪಾಪ ಹೆದರಿಕೆ ಇರಲ್ವಾ? ಒಂದು ವೇಳೆ ಹೆದರಿಕೆ ಸತ್ತವನ ಮನೆಯವರಿಗೆ ಇದೆ ಎಂದಾದರೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಇರಬಾರದೇ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 20 ದಾಟಿದೆ. ಇಲ್ಲಿಯೇ ಶವದಹನಕ್ಕೆ ಆಗಿರುವ ಅಡಚಣೆ ಗೊತ್ತೆ ಇದೆ. ಇಷ್ಟೆಲ್ಲಾ ಜಾಗೃತಿ ಆದ ಬಳಿಕವೂ ಇತ್ತೀಚೆಗೆ ಮುಸ್ಲಿಂ ಭಾಂದವರೊಬ್ಬರು ಸತ್ತಾಗ ಅವರ ಶವದಫನಕ್ಕೆ ಆದ ಕಿರಿಕಿರಿ ಅಷ್ಟಿಷ್ಟಲ್ಲ. ಶವ ದಫನ ಮಾಡುವುದು ಇಲ್ಲಿ ಬೇಡಾ, ಅಲ್ಲಿ ಬೇಡಾ ಎಂದು ಹೇಳುವ ಜನ ಆ ಹೆಣಗಳನ್ನು ತೆಗೆದುಕೊಂಡು ಬರುವ ಕನಿಷ್ಟ ಸಂಬಳದ ಸಿಬ್ಬಂದಿಗಳ ಜೀವವನ್ನು ಗಮನಿಸಿದ್ದೀರಾ? ಈಗಾಗಲೇ ಕೊರೊನಾ ಯಾರನ್ನೂ ಬಿಟ್ಟಿಲ್ಲ. ಲ್ಯಾಬ್ ಟೆಕ್ನಿಶಿಯನ್ ಅವರಿಂದ ಹಿಡಿದು ಉನ್ನತ ವೈದ್ಯರಿಗೂ ಬಂದಿದೆ. ಹಾಗಿರುವಾಗ ಒಂದು ತಪ್ಪನ್ನು ಹಿಡಿದು ಆಸ್ಪತ್ರೆಯ ಸಿಬ್ಬಂದಿಗಳನ್ನು ಅಮಾನತು, ಕೆಲಸದಿಂದ ತೆಗೆಯುವುದು ಎಲ್ಲಾ ಸರಿಯಲ್ಲ. ಈಗಾಗಲೇ ಕೆಲಸಕ್ಕೆ ಜನ ಸಿಗುವುದು ಕಷ್ಟವಾಗಿದೆ. ಹಾಗಿರುವಾಗ ಟಿವಿಯವರ ಆರ್ಭಟದಿಂದ ಇನ್ನಷ್ಟು ಆಸ್ಪತ್ರೆಯ ಸಿಬ್ಬಂದಿಗಳು ಜೀವ ಉಳಿದರೆ ಸಾಕು, ದೊಡ್ಡ ನಮಸ್ಕಾರ ಎಂದು ಹೇಳಿದರೆ ಮುಂದೆ ಗತಿ ಏನು!
0
Shares
  • Share On Facebook
  • Tweet It




Trending Now
ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
Tulunadu News July 7, 2025
ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
Tulunadu News July 7, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
  • Popular Posts

    • 1
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 2
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 3
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • 4
      ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 5
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!

  • Privacy Policy
  • Contact
© Tulunadu Infomedia.

Press enter/return to begin your search