ಕೇರಳದ ಸಿಎಂಗೆ ಹಗಲಿನಲ್ಲಿಯೇ “ಸ್ವಪ್ನ” ತೋರಿಸುತ್ತಿರುವ ಸುಂದರಿ!!
ಆಕೆಯದ್ದು ಮಾದಕ ಸೌಂದರ್ಯ. ಆಕೆಯನ್ನು ಸ್ವಪ್ನಾ ಸುಂದರಿ ಎಂದು ಮಾಧ್ಯಮಗಳು ಕರೆದಿವೆ. ಕೇರಳ ಹೆಣ್ಣುಮಕ್ಕಳ ಸಹಜ ದೇಹಾಕೃತಿಯನ್ನು ಹೊಂದಿದ ಆಕೆಗೆ ಬಹುತೇಕ ಮಹಿಳೆಯರಿಗೆ ಇರುವ ಚಿನ್ನದ ಆಸೆ ಇತ್ತು. ತನಗೆ ಬೇಕಾದ ಚಿನ್ನಾಭರಣಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗುವಂತಹ ಉದ್ಯೋಗ ಕೂಡ ಇತ್ತು. ಆಕೆ ಕೇರಳ ಸರಕಾರದ ಪ್ರಾಯೋಜಿತ ಸಂಸ್ಥೆಗಳಲ್ಲಿ ಕೆಲಸಕ್ಕೆ ಇದ್ದಳು. ನೋಡಲು ಕೇರಳದ ಸಿನೆಮಾ ತಾರೆಯರಂತೆ ಆಕರ್ಷಕವಾಗಿದ್ದ ಕಾರಣ ಅವಳಿಗೆ ಕೇರಳ ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಸಂಬಂಧ ಸಾಧಿಸುವುದು ಕಷ್ಟವಾಗಿರಲಿಲ್ಲ. ಅವಳ ಫ್ಲಾಟಿಗೆ ಶನಿವಾರ, ಭಾನುವಾರ ಕೇರಳ ಸರಕಾರದ ಹೈಪ್ರೋಫೈಲ್ ಗಣ್ಯರು ಆಗಮಿಸುತ್ತಿದ್ದರು. ಅಲ್ಲಿ ಅವರು ಶನಿವಾರದ ರಾತ್ರಿಗಳಲ್ಲಿ ಭಜನೆಗೆ ಸೇರುವ ಚಾನ್ಸೇ ಇರಲಿಲ್ಲ. ಯಾಕೆ ಬರುತ್ತಿದ್ದರು ಎನ್ನುವುದು ಗೊತ್ತಾದ ಕೂಡಲೇ ಆ ಅಪಾರ್ಟ್ ಮೆಂಟಿನ ಸಭ್ಯರು ಸ್ವಪ್ನ ಸುಂದರಿಯನ್ನು ಅಸಹ್ಯದಿಂದ ನೋಡುವ ಮಟ್ಟಿಗೆ ವಿಷಯ ತಲುಪಿತ್ತು. ಪ್ರಕರಣ ಪೊಲೀಸ್ ಠಾಣೆಗೆ ಹೋದರೂ ಪೊಲೀಸರು ಆರೋಪಕ್ಕೆ ಒಳಗಾದ ಮಹಿಳೆಯನ್ನು ಅಥವಾ ಆಕೆಯ ಮನೆಗೆ ತಡರಾತ್ರಿ ಬರುತ್ತಿದ್ದವರನ್ನು ವಿಚಾರಣೆಗೆ ಕರೆಸುವಷ್ಟು ಧೈರ್ಯ ಮಾಡುತ್ತಿರಲಿಲ್ಲ. ಹೀಗೆ ಉನ್ನತ ಅಧಿಕಾರಿಗಳ ಏಣಿ ಹಿಡಿದು ಹತ್ತಿದ ಸ್ವಪ್ನಾಳಿಗೆ ಮುದಿ ವಯಸ್ಸಿನ ಮುಖ್ಯಮಂತ್ರಿಯನ್ನು ತಲುಪುವುದು ಕಷ್ಟವೇ ಆಗಿರಲಿಲ್ಲ. ಅವಳು ಮುಖ್ಯಮಂತ್ರಿ ಕಚೇರಿಯನ್ನು ಪ್ರವೇಶಿಸಿದರೆ ಅವಳಿಗೆ ಎಲ್ಲಾ ಬಾಗಿಲುಗಳು ತೆರೆಯಲ್ಪಡುತ್ತಿದ್ದವು. ನೈತಿಕತೆ ಯಾರಲ್ಲೂ ಇರಲಿಲ್ಲವಾದ್ದರಿಂದ ಯಾವ ಅಧಿಕಾರಿ ಕೂಡ “ಮುಖ್ಯಮಂತ್ರಿ ಬಿಝಿ ಇದ್ದಾರೆ, ನಾಳೆ ಬನ್ನಿ” ಎನ್ನುವ ಧೈರ್ಯ ಮಾಡುತ್ತಿರಲಿಲ್ಲ.
ಸಿಎಂ ಪಿಣರಾಯಿ ವಿಜಯನ್ ಜೊತೆಗೆ ಕಾರ್ಯಕ್ರಮದಲ್ಲಿ ಹತ್ತಿರ ನಿಂತು ಫೋಟೋ ತೆಗೆಸಿಕೊಳ್ಳುವುದು ಅವಳಿಗೆ ಕಷ್ಟವೇ ಆಗಿರಲಿಲ್ಲ. ತಂದೆ ಯುಎಇ ರಾಜಮನೆತನಕ್ಕೆ ಸೇರಿದ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಕಾರಣ ಅಲ್ಲಿಯೇ ಬೆಳೆದ ಸ್ವಪ್ನಾಳಿಗೆ ಆ ಭಾಷೆ ನಾಲಗೆಯ ಮೇಲೆಯೇ ಹೊರಳಾಡುತ್ತಿತ್ತು. ಆದ್ದರಿಂದ ಯಾವ ವಶೀಲಿಬಾಜಿಯೋ, ಸೌಂದರ್ಯದ ಅಡಮಾನದ ಕಾರಣವೋ, ಭಾಷೆಯ ನಿರ್ಗಳ ಸಾಮರ್ತ್ಯವೋ ಅವಳು ಯುಎಇ ದೂತವಾಸದಲ್ಲಿ ಕೆಲಸಕ್ಕೂ ಒಂದಿಷ್ಟು ವರ್ಷ ಸೇರಿದ್ದಳು. ಆದರೆ ನಂತರ ಆ ಕೆಲಸ ಹೋಯಿತು. ಲೆಕ್ಕಕ್ಕೆ ಇಬ್ಬರು ಗಂಡಂದಿರನ್ನು ಹೊಂದಿರುವ ಸ್ವಪ್ನಾಳಿಗೆ ಚಿನ್ನದ ಮೊಟ್ಟೆ ಇಡುವ ಕೆಲಸಗಿಂತ ಚಿನ್ನದ ಕೋಳಿಯ ಮೇಲೆನೆ ಆಸೆ. ಅವಳು ವಿದೇಶದಿಂದ ಸ್ಮಗ್ಲಿಂಗ್ ಆಗಿ ಬರುವ ಕೆಜಿಗಟ್ಟಲೆ ಚಿನ್ನವನ್ನು ವಿಮಾನ ನಿಲ್ದಾಣದಲ್ಲಿ ಸೇಫ್ ಆಗಿ ಲ್ಯಾಂಡ್ ಮಾಡಿಸಿ ನಂತರ ಕೇರಳದಲ್ಲಿ ಅದನ್ನು ಸಂಬಂಧಪಟ್ಟವರಿಗೆ ನೀಡುವ ಕಳ್ಳಮಾರ್ಗವನ್ನು ಹುಡುಕಿಬಿಟ್ಟಿದ್ದಳು. ಆದರೆ ಜನಸಾಮಾನ್ಯರು ಹಾಗೆ ವಿಮಾನದ ಮೂಲಕ ವಿದೇಶಿದಿಂದ ಕೆಜಿಗಟ್ಟಲೆ ಚಿನ್ನ ತರುವ ಸಾಧ್ಯತೆ ಇರುವುದೇ ಇಲ್ಲ. ಯಾಕೆಂದರೆ 25 ಕೆಜಿ ಚಿನ್ನ ಸ್ಮಗ್ಲಿಂಗ್ ನಲ್ಲಿ ತಂದು ಸಿಕ್ಕಿಬಿದ್ದರೆ ಸಿಕ್ಕಿಬಿದ್ದವ ಜೀವಮಾನವೀಡಿ ಜೈಲಿನಲ್ಲಿ ರುಬ್ಬುವ ಕೆಲಸ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕಳ್ಳ ಸಾಗಾಣಿಕೆದಾರರು ಉನ್ನತ ರಾಜತಾಂತ್ರಿಕ ಸಂಬಂಧ ಹೊಂದಿರುವ ಗಣ್ಯರನ್ನು ಪಟಾಯಿಸುವ ಕೆಲಸಕ್ಕೆ ಕೈಹಾಕುತ್ತಾರೆ. ಇದು ಗುಪ್ತ ಡಿಲೀಂಗ್. ಯಾಕೆಂದರೆ ರಾಜತಾಂತ್ರಿಕ ಸುರಕ್ಷೆ ಹೊಂದಿರುವ ಸೂಟ್ ಕೇಸುಗಳನ್ನು ಚೆಕ್ ಮಾಡಿ ಬಿಡಿಸಿ ತೋರಿಸಿ ಎಂದು ಹೇಳಲು ಕಸ್ಟಮ್ ಅಧಿಕಾರಿಗಳು ಹೋಗುವುದಿಲ್ಲ. ಹಾಗೆ ಹುಡುಕುವಾಗ ಕಳ್ಳ ಸಾಗಾಣಿಕೆದಾರರಿಗೆ ಸಿಕ್ಕಿದ್ದು ಇದೇ ಸ್ವಪ್ನಾ.
ವಿಮಾನ ನಿಲ್ದಾಣದಿಂದ ಆ ರಾಜತಾಂತ್ರಿಕ ಸುರಕ್ಷೆಯ ಬ್ಯಾಗುಗಳಿಗೆ ಏನೂ ಲೋಪವಾಗದೇ ಅದನ್ನು ತಂದು ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದವನು ಯುಎಇ ದೂತವಾಸದ ಮಾಜಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಶರತ್ ಕುಮಾರ್. ಅವನು ಒಂದು ರೀತಿಯಲ್ಲಿ ಸ್ವಪ್ನಾಳ ಇಳಿಸಂಜೆಯ ಗೆಳೆಯ. ಕೆಲಸ ಆದ ಕೂಡಲೇ ಶರತ್ ಸ್ವಪ್ನಾಳ ಬಾಹುಗಳಲ್ಲಿ ಬಂಧಿಯಾಗಿ ತನಗೆ ಬೇಕಾದದ್ದನ್ನು ಪಡೆದುಕೊಳ್ಳುತ್ತಿದ್ದ. ಸ್ವಪ್ನಾ ತನ್ನ ಕಳ್ಳ ವ್ಯವಹಾರಕ್ಕೆ ಪ್ರತಿ ಸಲ 25 ರಿಂದ 30 ಲಕ್ಷ ಫೀಸ್ ಪಡೆಯುತ್ತಿದ್ದಳು. ಆದರೆ ಮೊನ್ನೆ ಶರತ್ ವಿಮಾನ ನಿಲ್ದಾಣಕ್ಕೆ ತಲುಪುವಾಗ ತಡವಾಗಿದೆ. ಈ ಬ್ಯಾಗ್ ಲಾಂಜ್ ನಲ್ಲಿ ಅನಾಥವಾಗಿ ಬಿದ್ದಿದೆ. ಯಾವುದೋ ಉನ್ನತ ಅಧಿಕಾರಿಯ ಬ್ಯಾಗ್ ಎಂದು ಕಸ್ಟಮ್ ಅಧಿಕಾರಿಗಳು ಜಾಗ್ರತೆಯಾಗಿ ಎತ್ತಿಟ್ಟುಕೊಂಡಿದ್ದಾರೆ. ಯಾರದ್ದಿರಬಹುದು ಎಂದು ಯೋಚಿಸುವಾಗ ಶರತ್ ಬಂದು ತಲುಪಿದ್ದಾನೆ. ಆಗ ಸಂಶಯ ಬಂದ ಕಸ್ಟಮ್ ಅಧಿಕಾರಿಗಳು ಬ್ಯಾಗ್ ಚೆಕ್ ಮಾಡಿದಾಗ ಚಿನ್ನದ ಗಣಿ ಬಾಯಿ ತೆರೆದುಕೊಂಡಿದೆ. ಅಷ್ಟೇ ಆಗಿದ್ದಿದ್ದರೆ ಅದು ಕೇರಳದ ಸಿಎಂ ಪಿಣರಾಯಿ ಕುತ್ತಿಗೆಗೆ ಬರುತ್ತಿರಲಿಲ್ಲ. ಆದರೆ ಅಷ್ಟರಲ್ಲಿ “ಹುಡುಗ ನಮ್ಮವ, ಬ್ಯಾಗ್ ಮತ್ತು ಅವನನ್ನು ಬಿಟ್ಟು ಕಳುಹಿಸಿ” ಎಂದು ಸ್ವತ: ಮುಖ್ಯಮಂತ್ರಿ ಕಾರ್ಯಾಲಯದಿಂದ ವಿಮಾನನಿಲ್ದಾಣಕ್ಕೆ ಕರೆ ಹೋಗಿದೆ. ಈಗ ಹಾಲನ್ನು ಕಣ್ಣು ಮುಚ್ಚಿ ಕುಡಿದಿದ್ದ ಬೆಕ್ಕೊಂದು ಪ್ರಧಾನಮಂತ್ರಿಗೆ ಪತ್ರ ಬರೆದು ಬೇಕಾದರೆ ಸೂಕ್ತ ತನಿಖೆ ಮಾಡಿದೆ ಎಂದಿದೆ. ಉಳಿದದ್ದು ನಿಮಗೆ ಅರ್ಥವಾಗಿದೆ!
Leave A Reply