ಜುಲೈ 26ಕ್ಕೆ ಪಾಕಿಗಳನ್ನು ನಾವು ನಮ್ಮ ಎಡಗಾಲಿನಿಂದ ಹೊಸಕಿ 21 ವರ್ಷಗಳು.
ಜುಲೈ 26 ಮತ್ತೆ ನಿಮ್ಮ ಮುಂದಿದೆ. ಪಾಕಿಗಳನ್ನು ನಾವು ನಮ್ಮ ಎಡಗಾಲಿನಿಂದ ಹೊಸಕಿ 21 ವರ್ಷಗಳು ಕಳೆಯುತ್ತಿವೆ. ಅದರ ಬಳಿಕವೂ ಪಾಪಿ ಪಾಕಿಗಳು ಅಂಡು ಸುಟ್ಟ ಬೆಕ್ಕಿನಂತೆ ಆಗಾಗ ನಮಗೆ ಗಡಿಯಲ್ಲಿ ಕಿರಿಕಿರಿ ಉಂಟು ಮಾಡುತ್ತಿರುತ್ತಾರೆ. ವರುಷದ ಹಿಂದಿನ ತನಕವೂ ಪ್ರಧಾನಿ ಕಚೇರಿಯಿಂದ ಪತ್ರಿಕೆಗಳಿಗೆ ಉಗ್ರ ಖಂಡನೆಯ ಮುದ್ರಿತ ಕಾಗದ ರವಾನೆಯಾಗುತ್ತಿತ್ತು. ಯಾವಾಗ ನಮ್ಮ ದೇಶದ ಸೊಂಟಕ್ಕೆ ಆತುಕೊಂಡು ಕುಳಿತಂತೆ ಇರುವ ಪುಟ್ಟ ದೇಶ ಮೈನ್ ಮಾರ್ ಗೆ ನುಗ್ಗಿ ನಾವು ಬುದ್ಧಿ ಕಲಿಸಿ ಬಂದೆವೊ ಪಾಕಿಗಳು ಗಡಿಯಲ್ಲಿ ದೀರ್ಘ ಉಸಿರನ್ನು ಎಳೆದುಕೊಳ್ಳಲು ಕೂಡ ಹೆದರಿಕೊಂಡರು.
ನಾವು ಮೈನ್ ಮಾರ್ ನಂತೆ ಅಲ್ಲ ಎಂದು ಪಾಕಿಸ್ತಾನ ಹೇಳುತ್ತದೆಯೆಂದರೆ ಅರ್ಥ ಇಷ್ಟೇ, ಎಲ್ಲೋ ಕಲ್ಲು ಹೊಡೆದರೆ ಮತ್ತೆ ಎಲ್ಲೊ ಹಣ್ಣು ಬಿದ್ದಿದೆ. ಹೋಗಬೇಕಾದ ಸಂದೇಶ ಹೋಗಿದೆ. ಪಾಕಿಗಳು ವೇಷ ಮರೆಸಿ ಉಗ್ರರ ಮುಖವಾಡದಲ್ಲಿ ಹೀಗೆ ಗಡಿಯಲ್ಲಿ ಚಿರಿಪಿರಿ ಮುಂದುವರೆಸಿದರೆ ಬಹುಶ: ಪಾಕಿಸ್ತಾನದ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆದು ಹಾಕಲು ಭಾರತಕ್ಕೆ ಒಂದಿಷ್ಟು ಹೆಚ್ಚು ಸೈನಿಕರು ಬೇಕಾಗಬಹುದು! ಅಷ್ಟೇ. ಈಗಂತೂ ನಮ್ಮ ಸೈನಿಕರು ಒಂದು ಆದೇಶಕ್ಕಾಗಿ ಕಾಯುತ್ತಿದ್ದಾರೆ. ಶಾಂತಿಯಿಂದ ಇದ್ದರೆ ಒಂದಿಷ್ಟು ದಿನ ಹೆಚ್ಚು ಬಾಳುತ್ತಿರಿ, ಸಂಘರ್ಷಕ್ಕೆ ಇಳಿದರೆ ಪಾಕಿಸ್ತಾನ ಎನ್ನುವ ದೇಶ ಪ್ರಪಂಚದ ಭೂಪಟದಲ್ಲಿ ಇತ್ತು ಎನ್ನುವುದನ್ನು ಇತಿಹಾಸ ಮರೆತು ಬಿಡಬೇಕು ಹಾಗೆ ಮಾಡುತ್ತೇವೆ ಎನ್ನುವ ಸಂದೇಶ ಭಾರತದ ಪ್ರಧಾನ ಮಂತ್ರಿ ಸಚಿವಾಲಯದಿಂದ ಹೋಗಿದೆ. ಅದಕ್ಕೆನೆ ಮೊನ್ನೆ ಮುಜುಗರದಿಂದ ಪಾಕಿ ಸೈನಿಕರು ನಮ್ಮ ಯೋಧರು ಕೊಡಲು ಬಂದ ಸಿಹಿಯನ್ನು ನಿರಾಕರಿಸಿದ್ದರು. ಯಾಕೆಂದರೆ ನಾವು ಕೊಟ್ಟ ಸಿಹಿ ಅವರ ಗಂಟಲಿನಿಂದ ಕೆಳಗೆ ಇಳಿಯುವುದಿಲ್ಲ. ಭಯದಿಂದ ನರಳುತ್ತಿರುವ ಪಾಕಿಸ್ತಾನ ಯಾವ ಖುಷಿಯಿಂದ ತಾನೆ ಸಿಹಿ ತಿನ್ನಲು ಸಾಧ್ಯ.
ನಾನು ಸೇರಿ ಭಾರತದ ಪ್ರತಿಯೊಬ್ಬ ನಾಗರಿಕ ಹೀಗೆನೆ ಯೋಚಿಸುತ್ತಿದ್ದಾನೆ ಎನ್ನುವುದು ನನ್ನ ಅನಿಸಿಕೆ. ನಾನು ಹೀಗೆ ಮನೆಯಲ್ಲಿ ನಿಶ್ಚಿಂತೆಯಿಂದ ಬರೆಯಲು ಕುಳಿತಿದ್ದೆನೆಂದರೆ ಅದಕ್ಕೆ ಕಾರಣ ಗಡಿಯಲ್ಲಿ ಕಾಯುತ್ತಿರುವ ನಮ್ಮ ಗಂಡುಗಲಿ ಸೈನಿಕರು. ಹೆಮ್ಮೆಯ ದೇಶಭಕ್ತ ಯೋಧರು. ಅವರು ಆವತ್ತು ಕಾರ್ಗಿಲ್ ಪರ್ವತ ಶ್ರೇಣಿಯಲ್ಲಿ ಅಸಾಮಾನ್ಯ ಧೈರ್ಯ ಪ್ರದರ್ಶಸಿ ಪಾಕಿಗಳನ್ನು ತಾವು ಹುಟ್ಟಿದ ಬಟ್ಟೆಯಲ್ಲಿಯೇ ಓಡಿಸದೇ ಇದ್ದಿದ್ದರೆ ನಾವು ವಿಶ್ವದ ಮುಂದೆ ನೂರು ಕೋಟಿ ಭಾರತೀಯರು ನಾಚಿಕೆಯಿಂದ ತಲೆತಗ್ಗಿಸಬೇಕಿತ್ತು. ಆದರೆ ಒಬ್ಬೊಬ್ಬ ಯೋಧನು ಮೈಯಲ್ಲಿ ಯಮಗಾತ್ರದ ಶಕ್ತಿಯನ್ನು ತುಂಬಿಕೊಂಡು ಪಾಕಿಗಳ ಮೇಲೆ ಬಿದ್ದರಲ್ಲ, ಭಾರತದ ಸೈನಿಕರು ಕಾರ್ಗಿಲ್ ಮೇಲೆ ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸಿ ಹೆಮ್ಮೆಯಿಂದ ಬೀಗಿದ್ದರಲ್ಲ, ನಮಗೆ ಇನ್ನೆನ್ನೂ ಬೇಕಿತ್ತು. ಹದಿನೆಂಟು ಸಾವಿರ ಅಡಿ ಎತ್ತರದಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್ ಹವಾಮಾನದಲ್ಲಿ, ಕುಡಿಯಲು ನೀರಿನ ಬಾಟಲು ತೆಗೆದುಕೊಂಡು ಹೋದರೆ ಅದು ಕ್ಷಣಾರ್ಧದಲ್ಲಿ ಐಸ್ ಆಗುತ್ತದೆ. ಅಂತಹ ಪ್ರದೇಶದಲ್ಲಿ ಊಟ, ತಿಂಡಿ, ಅಷ್ಟೇ ಏಕೆ ಕುಡಿಯಲು ನೀರು ಇಲ್ಲದ ಸಂದರ್ಭದಲ್ಲಿ ನಿಂತು ಹೋರಾಟ ಮಾಡುವುದಿದೆಯಲ್ಲ, ಅದನ್ನು ಒಬ್ಬ ಯೋಧ ಮಾತ್ರ ಅನುಭವಿಸಿ ಹೇಳಬಲ್ಲ. ಇತ್ತೀಚೆಗೆ ಭಾರತದ ವೀರ ಯೋಧ ವಿಕ್ರಂ ದತ್ತ ಅವರ ಸಂದರ್ಶನವನ್ನು ಮಾಧ್ಯಮವೊಂದರಲ್ಲಿ ನೋಡುತ್ತಿದ್ದೆ. ಅವರು ಹೇಳುತ್ತಿದ್ದರು, ಸೇನೆಗೆ ಸೇರುವಾಗಲೇ ನಮ್ಮಲ್ಲಿ ಆ ಮಟ್ಟದ ಕಿಚ್ಚು ಇರುತ್ತೆ ಎಂದು ಹೇಳಲು ಆಗುವುದಿಲ್ಲ. ಆದರೆ ಸೇನೆಗೆ ಸೇರಿ ಕೆಲವೇ ದಿನಗಳಲ್ಲಿ ಆ ಛಲ ಹೇಗೆ ಹುಟ್ಟಿಕೊಳ್ಳುತ್ತದೊ, ಊಟ, ತಿಂಡಿ, ಗಾಳಿ, ಕೊನೆಗೆ ಯಾವುದರ ಪರಿವೇ ಇಲ್ಲದೆ ಮುನ್ನುಗ್ಗುವುದು ಇದೆಯಲ್ಲ, ಅದು ಕೇವಲ ಒಬ್ಬ ಯೋಧನೆ ಬಲ್ಲ ಎನ್ನುತ್ತಿದ್ದರು.
ತಮ್ಮ ಹೃದಯದ ಹತ್ತಿರ ನೀರಿನ ಬಾಟಲಿಯನ್ನು ಇಟ್ಟುಕೊಂಡು ಹೃದಯದ ಬಿಸಿಗೆ ನೀರು ಐಸ್ ಆಗದಂತೆ ಕಾಯ್ದುಕೊಂಡು ಆ ಕಣಿವೆಯನ್ನು ಏರಿಕೊಂಡು ಸಾವು ಯಾವಾಗ ಪಕ್ಕದಿಂದ ಸುಳಿದು ಹೋಗುತ್ತದೆ ಏನ್ನುವ ಸಣ್ಣ ಸುಳಿವು ಇಲ್ಲದೆ ಭಾರವಾದ ಆಯುಧಗಳನ್ನು ಹೊತ್ತುಕೊಂಡು ನಡೆಯುವುದಿದೆಯಲ್ಲ, ಅದನ್ನು ನಾವು ಹುಲು ಮಾನವರು ಕಲ್ಪಿಸಲು ಆಗುತ್ತದಾ? ಅದಕ್ಕಿಂತ ಭಾರತಾಂಬೆಯ ಸೇವೆ ಬೇರೆ ಇದೆಯೇನ್ರಿ. ಅವರ ರಾಷ್ಟ್ರ ಸೇವೆಯ ಎದುರು ನಮ್ಮದೆಲ್ಲ ಅಳಿಲು ಸೇವೆ ಎನ್ನುತ್ತೆವಲ್ಲ, ಅದಕ್ಕೆ ಸಮ. ಎಲ್ಲಿಯ ತನಕ ಅಂದರೆ ಭಾರತೀಯರು ಎಷ್ಟು ಪಾಕಿ ಸೈನಿಕರನ್ನು ಕೊಂದಿದ್ದಾರೆ ಎಂದು ಹೇಳಲು ಪಾಕಿಸ್ತಾನ ನಾಚಿಕೆ ಪಡುತ್ತಿದೆ. ಪಾಕಿಗಳ ಪ್ರಕಾರ ಅವರ 473 ಸೈನಿಕರು ಮಾತ್ರ ಸತ್ತಿದ್ದಾರೆ. ಅಲ್ಲಿನ ಮಾಧ್ಯಮಗಳು 750 ಪಾಕಿ ಸೈನಿಕರು ಸತ್ತಿದ್ದಾರೆ ಎಂದು ಆವತ್ತು ವರದಿ ಮಾಡಿದ್ದವು. ನೈಜ ವಿಷಯ ಎಂದರೆ ಕಾರ್ಗಿಲ್ ನಲ್ಲಿ ಯುದ್ಧ ಮಾಡಿದ ಭಾರತೀಯ ಸೈನಿಕರ ಪ್ರಕಾರ ಪಾಕಿಸ್ತಾನದ ಸೈನಿಕರ ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿದೆ. ಪಾಕಿಸ್ತಾನವಂತೂ ಕಾರ್ಗಿಲ್ ಯುದ್ಧವನ್ನು ಬೇಗ ಮರೆತಿರಬಹುದು. ಕಾರಣ ಅದನ್ನು ನೆನಪಿಸಿದರೆ ಅವರ ಸೈನಿಕರು ಕೆಟ್ಟ ಕನಸು ಬಿದ್ದವರಂತೆ ಬೆಚ್ಚಿ ಬೀಳಬಹುದು. ಆದರೆ ನಮಗೆ ಅದು ಕಾರ್ಗಿಲ್ ವಿ ಜಯ ದಿವಸ. ಇವತ್ತು ಬೇರೆ ವಿಷಯವೊಂದರ ಬಗ್ಗೆ ಬರೆಯಬೇಕು ಎಂದು ನೋಟ್ ಎಲ್ಲ ರೆಡಿ ಮಾಡಿ ಕುಳಿತುಕೊಂಡಿದ್ದೆ. ಆದರೆ ಕಾರ್ಗಿಲ್ ನೆನಪಾಯಿತು. ಅದರ ಬಗ್ಗೆ ಬರೆಯೋಣ ಎಂದೆನಿಸಿತು. ಅಲ್ಲಿ ಗಡಿಯಲ್ಲಿ ಹುಟ್ಟಿದ್ದೇ ದೇಶಕ್ಕಾಗಿ ಎಂದು ಅಂದುಕೊಂಡು ಸೈನಿಕ ಕಣ್ಣಿಗೆ ಎಣ್ಣೆ ಬಿಟ್ಟು ರಾಷ್ಟ್ರ ಕಾಯುತ್ತಿದ್ದರೆ ಇಲ್ಲಿ ನಮ್ಮ ಸೈನಿಕರ ಕೃಪಾಕಟಾಕ್ಷದಿಂದ ಆರಾಮದ ಬದುಕು ಕಾಣುತ್ತಿರುವ ನಾವು ನಮ್ಮ ಸ್ವಾರ್ಥಕ್ಕಾಗಿ ಕಚ್ಚಾಡುತ್ತಿದ್ದೆವೆ. ಒಂದೊಂದು ಸಣ್ಣ ಸಣ್ಣ ವಿಷಯಕ್ಕೂ ನಾವು ಕೈಯಲ್ಲಿ ಕತ್ತಿ ಹಿಡಿಯುತ್ತಿದ್ದೆವೆ. ಅಲ್ಲಿ ಓವೈಸಿ ಎನ್ನುವ ಹುಟ್ಟಾ ಕೋಮುವಾದಿ ಯಾಕೂಬ್ ಮೆಮನ್ ಮುಸ್ಲಿಂ, ಅದಕ್ಕೆ ಗಲ್ಲು ಶಿಕ್ಷೆ ಎಂದು ಬೊಬ್ಬೆ ಹೊಡೆಯುತ್ತಾ ಹಿಂದೂ ಮುಸ್ಲಿಂಮರ ಸೌಹಾರ್ದತೆಯೆಂಬ ಹಾಲಿಗೆ ಲಿಂಬೆ ಹುಳಿ ಹಿಂಡುತ್ತಿದ್ದಾನೆ. ಅವನಿಗೆ ಅದ್ಯಾವ ಚಪ್ಲಲಿಯಿಂದ ಹೊಡೆಯೋಣ ನನ್ನ ಕನಸು ಇಷ್ಟೇ, ರಾಷ್ಟ್ರಕ್ಕಾಗಿ ಸೈನಿಕನಾಗಿ ಹುಟ್ಟುವ ಯೋಗ ಸಿಗಲಿಲ್ಲ. ಆದರೆ ದೇಶದ ಒಳಗೆ ಇರುವ ಭ್ರಷ್ಟಾಚಾರಿ ಎಂಬ ಶತ್ರುಗಳು ಇದ್ದಾರಲ್ಲ. ಅವರನ್ನು ಸಮಾಜದ ಮುಂದೆ ಬೆತ್ತಲು ಮಾಡುವ ಸೈನಿಕನಾಗಬೇಕೆಂಬ ಆಸೆ ನನ್ನದು. ಭ್ರಷ್ಟಾಚಾರದ ಎದುರು ಹೋರಾಡುವ ಸೈನಿಕರಾಗುತ್ತಿರಾ, ನಿರ್ಧಾರ ನಿಮ್ಮದು. ಹಾದಿ ಅಷ್ಟು ಸುಲಭವಿಲ್ಲ! ಅಂದ ಹಾಗೆ ನಿಮಗೆ ಕಾರ್ಗಿಲ್ ವಿಜಯ ದಿವಸದ ಶುಭಾಶಯಗಳು
Leave A Reply