• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ರೂಪಾ, ಹರ್ಷ ಗುಪ್ತ ಅವರಿಗೆ ಹೆಚ್ಚಿನ ಅಧಿಕಾರ ಕೊಡಲು ಬಿಜೆಪಿ ಸರಕಾರ ರೆಡಿ ಇದೆಯಾ?

Hanumantha Kamath Posted On August 3, 2020
0


0
Shares
  • Share On Facebook
  • Tweet It

ಬೆಂಗಳೂರಿನ ಇಬ್ಬರು ಅಧಿಕಾರಿಗಳು ರಾಜ್ಯ ಮಾತ್ರವಲ್ಲ, ರಾಷ್ಟ್ರ ಮೆಚ್ಚುವ ಮಾದರಿ ಕಾರ್ಯ ಮಾಡಿದ್ದಾರೆ. ಅದರಲ್ಲಿ ಒಬ್ಬರು ಐಪಿಎಸ್ ಅಧಿಕಾರಿ ರೂಪಾ ಮತ್ತೊಬ್ಬರು ಐಎಎಸ್ ಅಧಿಕಾರಿ ಹರ್ಷ ಗುಪ್ತ. ಐಪಿಎಸ್ ಅಧಿಕಾರಿ ರೂಪಾ ಅವರು ಸಾರ್ವಜನಿಕ ದೂರುಗಳ ಅನ್ವಯ ಬೆಂಗಳೂರಿನ ಕೆಲವು ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಅಲ್ಲಿ ಅವ್ಯಾಹತವಾಗಿ ಆಗುತ್ತಿದ್ದ ಲೂಟಿಯನ್ನು ಪತ್ತೆ ಹಚ್ಚಿದ್ದರು. ಅದರ ನಂತರ ಆ ಆಸ್ಪತ್ರೆಗಳ ಆಡಳಿತ ಮಂಡಳಿಯವರು ತಮ್ಮ ತಪ್ಪನ್ನು ಒಪ್ಪಿ ರೋಗಿಗಳಿಂದ ವಸೂಲಿ ಮಾಡುತ್ತಿದ್ದ ಹೆಚ್ಚುವರಿ ಹಣವನ್ನು ರೋಗಿಗಳಿಗೆ ಹಿಂತಿರುಗಿಸಲು ಒಪ್ಪಿದ್ದರು. ಕೆಲವೇ ಆಸ್ಪತ್ರೆಗಳ ಮೇಲೆ ದಾಳಿ ಆಗಿದ್ದರೂ ಆ ಮೊತ್ತವೇ 24 ಲಕ್ಷ ರೂಪಾಯಿ ಆಗಿತ್ತು. ರೂಪಾ ಅವರನ್ನು ಬೆಂಬಲಿಸಿ ನಾನು ಆವತ್ತೆ ಜಾಗೃತ ಅಂಕಣವನ್ನು ಬರೆದಿದ್ದೆ. ಅಷ್ಟೇ ಅಲ್ಲ, ಮಾಧ್ಯಮಗಳು ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ಎಂದು ಬರೆಯುವ ಬದಲು ಆ ಆಸ್ಪತ್ರೆಗಳ ಹೆಸರುಗಳನ್ನು ಕೂಡ ಬರೆಯಬೇಕು ಎಂದು ಆಗ್ರಹಿಸಿದೆ. ಅದರ ಬಳಿಕ ಆಶ್ಚರ್ಯ ಎಂಬಂತೆ ರಾಜ್ಯದ ಮಾಧ್ಯಮಗಳಲ್ಲಿ ಸಂಚಲನವಾಗಿದೆ. ಮೋಸ ಮಾಡುತ್ತಿದ್ದ ಆಸ್ಪತ್ರೆಗಳ ಹೆಸರುಗಳನ್ನು ಹೇಳಲಾಗುತ್ತಿದೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಇದರಿಂದ ನಿಜಕ್ಕೂ ರೋಗಿಗಳಿಗೆ ಅನುಕೂಲವಾಗುತ್ತದೆ.

ಆದರೆ ಇವತ್ತು ನಾನು ಹೇಳುತ್ತಿರುವುದು ರೂಪಾ ಅವರ ಒಂದು ಟ್ವಿಟ್ ಬಗ್ಗೆ. ಒಬ್ಬ ಅಧಿಕಾರಿ ತನಗೆ ಹೆಚ್ಚಿನ ಅಧಿಕಾರ ಕೊಡಿ. ಅನ್ಯಾಯವನ್ನು ನಿಲ್ಲಿಸುತ್ತೇವೆ ಎಂದು ಬಹಿರಂಗವಾಗಿ ಹೇಳುವುದು ಕಡಿಮೆ. ಬಹುಶ: ಅವರ ಇಲಾಖೆಯ ಸಭೆಗಳಲ್ಲಿ ಹೇಳಿರಬಹುದು. ಆದರೆ ಟ್ವೀಟ್ ಮಾಡಿ ಹೇಳಲು ನಿಜಕ್ಕೂ ತುಂಬಾ ನೈತಿಕತೆ ಬೇಕು. ಅದು ರೂಪಾ ಅವರಲ್ಲಿ ಇದೆ. ಅವರು ಟ್ವೀಟ್ ಮಾಡಿರುವುದು ಏನೆಂದರೆ ತಮಗೂ, ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರಿಗೂ ಇಡೀ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳನ್ನು ಪರಿಶೀಲಿಸುವ ಅಧಿಕಾರ ಕೊಡಿ. ಎಲ್ಲಾ ಅಕ್ರಮಗಳನ್ನು ಬಯಲಿಗೆಳೆಯುತ್ತೇವೆ ಎನ್ನುವ ಅರ್ಥದ ಮಾತುಗಳನ್ನು ಬರೆದಿದ್ದಾರೆ. ಇಲ್ಲಿ ಹರ್ಷ ಗುಪ್ತ ಅವರ ಬಗ್ಗೆ ಹೇಳಲೇಬೇಕು. ಭ್ರಷ್ಟಾಚಾರವನ್ನು ಹತ್ತಿರಕ್ಕೂ ಸುಳಿಯದಂತೆ ಇಲ್ಲಿಯ ತನಕ ನಡೆದುಕೊಂಡಿರುವ ಹರ್ಷ ಗುಪ್ತ ಅದಕ್ಕಾಗಿ ಲೆಕ್ಕವಿಲ್ಲದಷ್ಟು ಸಲ ಎತ್ತಂಗಡಿಯಾಗಿದ್ದಾರೆ. ಈಗ ಇದೇ ರೂಪಾ ಹಾಗೂ ಹರ್ಷ ಗುಪ್ತ ಅವರು ಇಡೀ ರಾಜ್ಯದಲ್ಲಿ ಕೊರೋನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿರುವ ಲೂಟಿಯನ್ನು ತಡೆಯಲು ಅಧಿಕಾರ ಕೊಡಿ ಎಂದು ಕೇಳುತ್ತಿದ್ದಾರೆ. ಕೊಡುತ್ತೀರಾ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ?

ನಿಜಕ್ಕೂ ವಿಷಯ ಏನೆಂದರೆ ನಮ್ಮ ರಾಜ್ಯದಲ್ಲಿ ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಹಲವು ರಾಜಕಾರಣಿಗಳ ನೇರ ಮಾಲೀಕತ್ವ ಇದೆ. ಇನ್ನು ಹಲವು ಆಸ್ಪತ್ರೆಗಳು ಪರೋಕ್ಷವಾಗಿ ರಾಜಕಾರಣಿಗಳ ಒಡೆತನದಲ್ಲಿವೆ. ಇನ್ನು ಉಳಿದ ಖಾಸಗಿ ಆಸ್ಪತ್ರೆಗಳ ಬಗ್ಗೆ ರಾಜಕಾರಣಿಗಳಿಗೆ ಸಾಫ್ಟ್ ಕಾರ್ನರ್ ಇದೆ. ಅದು ಜಾತಿಯ ಕಾರಣ ಇರಬಹುದು ಅಥವಾ ಇಲೆಕ್ಷನ್ ಫಂಡ್ ಕೊಡುತ್ತಾರೆ ಎನ್ನುವ ಕಾರಣಕ್ಕೆ ಇರಬಹುದು. ಆದ್ದರಿಂದ ರೂಪಾ ಅವರು ಮಾಡಿರುವ ಟ್ವೀಟ್ ಮಹತ್ವವಾಗಿದೆ. ಕೆಲವು ದಿನಗಳ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವ ಡಾ|ಸುಧಾಕರ್ ಅವರು ಯಾವುದೋ ಒಂದು ಆಸ್ಪತ್ರೆಯ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಇದು ಸಚಿವರ ಗಮನಕ್ಕೆ ಬಂದ ಬಳಿಕ ಆದ ಕ್ರಮ. ಆದರೆ ಸಚಿವರ ಗಮನಕ್ಕೆ ಬರದೇ ಅದೆಷ್ಟೋ ಆಸ್ಪತ್ರೆಗಳು ನಮ್ಮ ರಾಜ್ಯದಲ್ಲಿವೆ. ಎಲ್ಲಾ ಕಡೆ ರೂಪಾ ಹಾಗೂ ಹರ್ಷ ಗುಪ್ತ ಹೋಗಲು ಸಾಧ್ಯವಿಲ್ಲ.

ಆ ನಿಟ್ಟಿನಲ್ಲಿ ನಾವು ಭರವಸೆ ಇಡಬೇಕಾಗಿರುವುದು ನಮ್ಮ ಹೊಸ ಜಿಲ್ಲಾಧಿಕಾರಿ ಡಾ|ರಾಜೇಂದ್ರ ಅವರ ಮೇಲೆ. ಇವರು ಪುತ್ತೂರಿನಲ್ಲಿ ಸಹಾಯಕ ಕಮೀಷನರ್ ಆಗಿದ್ದಾಗ ಉತ್ತಮ ಕೆಲಸಗಳನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಈಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕೂಡ ಕೆಲವು ಖಾಸಗಿ ಆಸ್ಪತ್ರೆಗಳು ಲೂಟಿರುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವುದು ಅವರ ಗಮನಕ್ಕೆ ಕೆಳಗಿನ ಅಧಿಕಾರಿಗಳು ತರಬೇಕು. ಇಲ್ಲದಿದ್ದರೆ ಹೊಟ್ಟೆ ನೋವು ಎಂದು ಯಾರಾದರೂ ಆಸ್ಪತ್ರೆಗೆ ಸೇರಿದರೆ ಅಲ್ಲಿ ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಹೇಳಿ 4500 ರೂಪಾಯಿ ಏಕ್ಸಟ್ರಾ ಹಣ ಹಾಕಿ ನಂತರ ಕೋವಿಡ್ 19 ಪಾಸಿಟಿವ್ ಎಂದು ವರದಿ ಮಾಡಿ ಬೇರೆ ಚಿಕಿತ್ಸೆ ಕೊಟ್ಟು ಬಿಲ್ ಉದ್ದ ಪಟ್ಟಿ ಮಾಡುತ್ತಿದ್ದರ ಬಗ್ಗೆ ಹೊಸ ಜಿಲ್ಲಾಧಿಕಾರಿ ಗಮನ ಹರಿಸಲೇಬೇಕಿದೆ. ಮಾಡುತ್ತಾರಾ? ರೂಪಾ ಅವರಿಗೆ ಹೆಚ್ಚಿನ ಅಧಿಕಾರ ಸಿಗುತ್ತಾ? ರಾಜೇಂದ್ರ ಅವರು ಹರ್ಷ ಗುಪ್ತರಂತೆ ಆಗುತ್ತಾರಾ? ಎಲ್ಲವೂ ಅವರಿಗೆ ಸಿಗುವ ಸ್ವಾತಂತ್ರ್ಯದ ಮೇಲೆ ಅವಲಂಬಿತವಾಗಿದೆ!!

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Hanumantha Kamath June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Hanumantha Kamath June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ

  • Privacy Policy
  • Contact
© Tulunadu Infomedia.

Press enter/return to begin your search