1991 ರಲ್ಲಿ ಅಯೋಧ್ಯೆಗೆ ಬಂದಿದ್ದ ಮೋದಿ ಪತ್ರಕರ್ತರಿಗೆ ಹೇಳಿದ್ದ ಮಾತು ಉಳಿಸಿಕೊಂಡ್ರಾ?
ಅದು 1991 ರ ಸಮಯವಿರಬಹುದು. ಆವತ್ತಿನ ಒಂದು ಅಪರೂಪವಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ನಾಯಕರುಗಳಲ್ಲಿ ಪ್ರಮುಖರಾಗಿದ್ದ ಮುರಳಿ ಮನೋಹರ್ ಜೋಷಿಯವರೊಂದಿಗೆ ಇರುವಂತಹ ಒಂದು ಫೋಟೋ. ಅಯೋಧ್ಯೆಯ ರಾಮಜನ್ಮ ಭೂಮಿಯ ವಿವಾದ ತಾರಕಕ್ಕೆ ಏರುತ್ತಿದ್ದಾಗ ತೆಗೆದಿರುವಂತಹ ಫೋಟೋ ಎಂದು ಹೇಳಲಾಗಿದೆ. ಅಯೋಧ್ಯೆಯ ರಾಮಜನ್ಮ ಭೂಮಿಯ ಸಮೀಪದಲ್ಲಿಯೇ ಸ್ಟುಡಿಯೋ ಇಟ್ಟುಕೊಂಡಿದ್ದ ಮಹೇಂದ್ರ ತ್ರಿಪಾಠಿ ಎನ್ನುವವರು ಈ ಫೋಟೋ ತೆಗೆದಿದ್ದಾರೆ ಎಂದು ಹೇಳಲಾಗುತ್ತದೆ.
ಈ ಬಗ್ಗೆ ತಮ್ಮ ಹಳೆ ಅನುಭವಗಳನ್ನು ಹಂಚಿಕೊಂಡಿರುವ ಮಹೇಂದ್ರ ತ್ರಿಪಾಠಿಯವರು ಈಗಿನ ಪ್ರಧಾನಿ ನರೇಂದ್ರ ಮೋದಿಜಿಯವರು ಆಗ 1991, ಎಪ್ರಿಲ್ ತಿಂಗಳಲ್ಲಿ ರಾಮಜನ್ಮಭೂಮಿಗೆ ಭೇಟಿ ನೀಡಿದ್ದರು. ಆಗ ಅವರೊಂದಿಗೆ ಮುರಳಿ ಮನೋಹರ ಜೋಷಿಯವರು ಕೂಡ ಇದ್ದರು. ಆ ದಿನ ನಾನೊಬ್ಬನೇ ಛಾಯಾಗ್ರಾಹಕ ಅಲ್ಲಿ ಹಾಜರಿದ್ದೆ. ವಿಶ್ವ ಹಿಂದೂ ಪರಿಷತ್ ವತಿಯಿಂದ ನನಗೆ ಅಧಿಕೃತ ಆಹ್ವಾನವಿತ್ತು. ನನಗೆ ಇಬ್ಬರು ಘಟಾನುಘಟಿ ನಾಯಕರು ಒಟ್ಟಿಗೆ ಇರುವ ಫೋಟೋ ಕ್ಲಿಕ್ಕಿಸುವ ಅವಕಾಶ ದೊರಕಿತು ಎಂದು ಹೇಳಿಕೊಂಡಿದ್ದಾರೆ.
ನಂತರ ಒಂದಿಷ್ಟು ಪತ್ರಕರ್ತರು ಆಗಮಿಸಿದ ಬಳಿಕ ಮುರಳಿ ಮನೋಹರ ಜೋಷಿಯವರು ನರೇಂದ್ರ ಮೋದಿಯವರನ್ನು ಪತ್ರಕರ್ತರಿಗೆ ಪರಿಚಯಿಸುತ್ತಾ ಗುಜರಾತಿನಲ್ಲಿ ನಮ್ಮ ಪಕ್ಷದ ಮುಖಂಡರು ಎಂದು ಪರಿಚಯಿಸಿದ್ದರು. ಆಗ ಪತ್ರಕರ್ತರು ಮಾತನಾಡುತ್ತಾ ನಿಮ್ಮ ಮುಂದಿನ ಭೇಟಿ ಅಯೋಧ್ಯೆಗೆ ಯಾವಾಗ ಎಂದು ಮೋದಿಯವರನ್ನು ಕೇಳಿದ್ದರು. ಆಗ ನರೇಂದ್ರ ಮೋದಿಜಿಯವರು ಖಡಕ್ಕಾಗಿ ಏನು ಹೇಳಿದ್ದರೆಂದರೆ _” ಇದೇ ಸ್ಥಳದಲ್ಲಿ ರಾಮ ದೇವರಿಗೆ ಭವ್ಯ ಮಂದಿರ ನಿರ್ಮಾಣವಾಗುವ ದಿನ ನಾನು ಮತ್ತೆ ಅಯೋಧ್ಯೆಗೆ ಬರುತ್ತೇನೆ”
ಮೋದಿಜಿಯವರು ಅಂದು ಹೇಳಿದ ಮಾತು ಇಂದು ನಿಜವಾಗಿದೆ. ಆವತ್ತು ಅಯೋಧ್ಯೆಯಿಂದ ಗುಜರಾತಿಗೆ ಮರಳಿದ ಮೋದಿಜಿಯವರು ಪ್ರಧಾನಿಯಾಗಿ ಮೊದಲ ಬಾರಿ ಅಯೋಧ್ಯೆಗೆ ಆಗಮಿಸಿ ಭವ್ಯ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ.
Leave A Reply