ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ಬಿಟ್ಟುಬಿಡಿ – ಠಾಣೆ ಮುಂದೆ ಗಲಭೆಕೋರರ ಮನೆಯವರ ಅಳಲು.
Posted On August 16, 2020
0

ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ಬಿಟ್ಟುಬಿಡಿ – ಠಾಣೆ ಮುಂದೆ ಗಲಭೆಕೋರರ ಮನೆಯವರ ಅಳಲು,
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 300ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಗಲಭೆಕೋರರ ಮನೆಯವರು ಜಮಾಯಿಸಿ ಕಣ್ಣೀರು ಹಾಕುತ್ತಿದ್ದಾರೆ.
ನಮ್ಮ ಮಕ್ಕಳು ಗಲಾಟೆ ನಡೆದ ದಿನ ಇರಲಿಲ್ಲ. ಕೆಲಸ ಮುಗಿಸಿ ಬಂದು ಮಕ್ಕಳು ಮಲಗಿದ್ದರು. ಆದರೆ ಪೊಲೀಸರು ಮಧ್ಯರಾತ್ರಿ ಬಂದು ಮಲಗಿದ್ದವರನ್ನು ಕರೆದುಕೊಂಡು ಬಂದಿದ್ದಾರೆ. ಅವರನ್ನು ನೋಡಲು, ಮಾತನಾಡಲು ಬಿಡುತ್ತಿಲ್ಲ. ನಮ್ಮ ಮಕ್ಕಳು ತಪ್ಪು ಮಾಡಿಲ್ಲ. ಅವರನ್ನ ಬಿಟ್ಟು ಬಿಡಿ ಎಂದು ಸ್ಟೇಷನ್ ಮುಂದೆ ಪೋಷಕರು ಕಣ್ಣೀರು ಹಾಕಿದ್ದಾರೆ.