• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇಷ್ಟು ಗಲಾಟೆಯ ಬಳಿಕ ಸದ್ಯ 126 ಹೋರ್ಡಿಂಗ್ಸ್ ಮಾತ್ರ ಅಧಿಕೃತಗೊಂಡಿವೆ. ಉಳಿದವುಗಳ ಕಥೆ ಏನು? ಅವು ಎಷ್ಟು ಕೋಟಿಗಳ ಕಥೆ?

Hanumantha Kamath Posted On August 29, 2020


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಿಂದ ನಮ್ಮನ್ನು ರಕ್ಷಿಸುವವರು ಯಾರು? ಕಾನೂನುಗಳು ಎಷ್ಟೇ ಕಠಿಣವಾಗಿರಲಿ ಯಾರೂ ಪ್ರಶ್ನಿಸದೆ ಹೋದರೆ ಅದನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಬದಲಾಯಿಸಿ ಬಿಡಬಲ್ಲ ಚತುರರು ನಮ್ಮ ಪಾಲಿಕೆಯಲ್ಲಿ ಇದ್ದಾರೆ. ಇಲ್ಲದೆ ಹೋದರೆ 1996 ರಲ್ಲಿಯೇ ಜಾರಿಯಲ್ಲಿರುವ ಒಂದು ನಿಯಮದ ಪ್ರಕಾರ ಮನಪಾದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಜಾಗಗಳಲ್ಲಿ ಯಾವುದೇ ಹೋರ್ಡಿಂಗ್ ಹಾಕುವಂತಿಲ್ಲ. ಆದರೆ ಯಾವಾಗ ಫಿಜಾ ಮಾಲ್ ಪಾಂಡೇಶ್ವರದಲ್ಲಿ ನಿರ್ಮಾಣವಾಯಿತೊ ಆವಾಗ ಧುತ್ತನೆ 14 ಹೋರ್ಡಿಂಗ್ ಗಳು ಅಲ್ಲಿ ಪ್ರತ್ಯಕ್ಷವಾಗಿದ್ದವು. ನಾನು ಪ್ರಶ್ನಿಸಿದ್ದಕ್ಕೆ ಇವರು ಏನು ಉತ್ತರ ಕೊಟ್ಟರು ಗೊತ್ತೆ? ಸರಕಾರಿ ಜಾಗಗಳಲ್ಲಿ ಯಾವುದೇ ಹೋರ್ಡಿಂಗ್ ಹಾಕಬಾರದು ಎಂಬುದಾಗಿ ಮಾತ್ರವಿದೆ. ಯಾವುದೇ ಹೋರ್ಡಿಂಗ್ ಅನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಶಿಫ್ಟ್ ಮಾಡಬಾರದು ಎಂಬುದಾಗಿ ಇಲ್ಲ. ಇದು ಇವರ ಉತ್ತರ. ನಾನು ಕೇಳಿದೆ- ಹೊಸ ಹೋರ್ಡಿಂಗ್ ಹಾಕಬಾರದು ಎನ್ನುವುದು ಮತ್ತು ಬೇರೆ ಕಡೆಯಲ್ಲಿದ್ದ ಹೋರ್ಡಿಂಗ್ ಇಲ್ಲಿ ಶಿಫ್ಟ್ ಮಾಡಬಾರದು ಎನ್ನುವುದು ಎರಡು ಕೂಡ ಒಂದೇ ಅಲ್ಲವೇ. ಯಾವುದೇ ಹೊಸ ಹೋರ್ಡಿಂಗ್ ಹಾಕಲು ಸರಕಾರಿ ಜಾಗಗಳಲ್ಲಿ ಅನುಮತಿ ಇಲ್ಲ ಎಂದ ಮೇಲೆ ಶಿಫ್ಟ್ ಗೆ ಇನ್ನೊಂದು ಕಾನೂನಾ? ನೀವು ಪರಿಷತ್ತಿನಲ್ಲಿ ಆದೇಶ ಮಾಡಿದ ಬಳಿಕ ಅದನ್ನು ನೀವೆ ಉಲ್ಲಂಘನೆ ಮಾಡಿದರೆ ಹೇಗೆ? ನೀವು ಶಿಫ್ಟ್ ಮಾಡಲು ಅನುಮತಿ ಕೊಟ್ಟ ಆದೇಶದ ಪ್ರತಿಯನ್ನು ತೋರಿಸಿ ಎಂದೆ. ನನಗೆ ಗೊತ್ತಿತ್ತು. ಮನಪಾದ ಯಾವ ಏರಿಯಾದಲ್ಲಿ ಎಷ್ಟು ಹೋರ್ಡಿಂಗ್ ಇದೆ? ಅದಕ್ಕೆ ಅನುಮತಿ ಇದೆಯಾ? ಅದಕ್ಕೆ ದೀಪ ಹಾಕಲು ಅಥವಾ ಹಾಕದೇ ಇರಲು ಏನಾದರೂ ಅನುಮತಿ ಸಿಕ್ಕಿದೆಯಾ? ಇಂತಹ ಯಾವುದೇ ದಾಖಲೆ ಮನಪಾದ ಕಂದಾಯ ವಿಭಾಗದಲ್ಲಿ ಇಲ್ಲವೇ ಇಲ್ಲ. ಅದರಿಂದ ಮನಪಾದ ಕೋಟ್ಯಾಂತರ ರೂಪಾಯಿ ಆಸ್ತಿ ಹಾಗೆ ಸೋರಿ ಹೋಗುತ್ತಿದೆ. ಅಂದರೆ ಮನಪಾಗೆ ಬರಬೇಕಿದ್ದ ಆದಾಯ ಸೋರಿ ಹೋಗುತ್ತದೆ ಎಂದು ನಾನು ಹೇಳಿದ್ದು. ಅಧಿಕಾರಿಗಳಿಗೆ ಬರಬೇಕಿದ್ದ ಹಣ ಸೋರಿ ಹೋಗಿದೆ ಎಂದಲ್ಲ. ಅವರಿಗೆ ಬರಬೇಕಾದದ್ದು ಬರುತ್ತಲೇ ಇರುತ್ತದೆ. ಪಾಲಿಕೆಯ ವಿವಿದೆಡೆ ಹೋರ್ಡಿಂಗ್ ಗಳು ನಿಲ್ಲುತ್ತಲೆ ಇರುತ್ತದೆ. ಪಾಂಡೇಶ್ವರದ ಫಿಜಾ ಮಾಲ್ ಹೊರಗೆ ನಿಂತ ಹೋರ್ಡಿಂಗ್ ಗಳು ಆದೇಶದ ಶುದ್ಧ ಉಲ್ಲಂಘನೆ ಆಗಿತ್ತು. ಆದರೆ ಕೆಲವೊಮ್ಮೆ ಅಧಿಕಾರಿಗಳು ನನ್ನಂತವರ ಪ್ರಶ್ನೆಗೆ ಉತ್ತರ ಸಿದ್ಧಪಡಿಸುವುದರಲ್ಲೂ ಚಾಣಾಕ್ಷ ಮೆರೆಯುತ್ತಾರೆ.

ಮನಪಾದಿಂದ ನಾಮಫಲಕಗಳನ್ನು ಶಿಫ್ಟ್ ಮಾಡಲು ಅನುಮತಿ ಕೊಡಲಾಗಿದೆ ಎಂದು ಹೊಸ ಆದೇಶದ ಪ್ರತಿಯನ್ನು ತಯಾರು ಮಾಡಲಾಯಿತು. ಆದರೆ ನನಗೆ ಆ ಉತ್ತರ ಸಮಾಧಾನ ನೀಡಲಿಲ್ಲ. ಹಾಕಲೇಬಾರದು ಎಂದು ತೀರ್ಮಾನವಾದ ಬಳಿಕ ಶಿಫ್ಟ್ ಮಾಡಬಹುದು ಎನ್ನುವುದು ಕೂಡ ಅಸಂಬದ್ಧ ಎಂದು ನಾನು ವಾದಿಸಿದ ಬಳಿಕ ಆ ಫೆಕ್ಸ್ ಗಳು ಅಲ್ಲಿಂದ ಕಳಚಿ ಬಿದ್ದವು. ಇನ್ನೂ ಹನುಮಂತ ಕಾಮತ್ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅಂದುಕೊಂಡ ಮನಪಾದ ಕಂದಾಯ ಇಲಾಖೆ ಕೆಲವು ದಿನಗಳ ಹಿಂದೆ ಒಟ್ಟು 126 ಅನಧಿಕೃತ ಹೋರ್ಡಿಂಗ್ ಗಳನ್ನು ಸಕ್ರಮಗೊಳಿಸಿದೆ. ಈಗ ನೀವೆ ಯೋಚನೆ ಮಾಡಿ. ನಾನು 27.7.15 ರಂದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಉತ್ತರ ಕೇಳಿದಾಗ ಇದ್ದ ಅನಧಿಕೃತ ಹೋರ್ಡಿಂಗ್ ಗಳು 1846. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಪರಿಷತ್ತಿನಲ್ಲಿ ಕೇಳಿದಾಗ ಸಿಕ್ಕಿದ ಲಿಖಿತ ಉತ್ತರ ಅನಧಿಕೃತ ನಾಮಫಲಕಗಳ ಸಂಖ್ಯೆ ಕೇವಲ 19. ಅದರ ನಂತರ ಇಲ್ಲಿಯ ತನಕ 126 ಅನಧಿಕೃತ ಹೋರ್ಡಿಂಗ್ ಗಳನ್ನು ಅಧಿಕೃತಗೊಳಿಸಲಾಗಿದೆ. ಅದೇಗೆ 126 ಅಧಿಕೃತಗೊಂಡವು. ಹಾಗಾದರೆ 1846 ರಲ್ಲಿ ಉಳಿದದ್ದು ಅನಧಿಕೃತ ಎಂದು ಪಾಲಿಕೆಯೇ ಒಪ್ಪಿಕೊಂಡಂತೆ ಆಯಿತು ಅಲ್ಲವೇ? ಇದಕ್ಕಿಂತ ಬೇರೆ ಸಾಕ್ಷ್ಯ ಬೇಕೆ?

ಇನ್ನೂ ಸರಕಾರಿ ಜಾಗದಲ್ಲಿ ಮೊದಲಿನಿಂದಲೂ ಇದ್ದ ಹೋರ್ಡಿಂಗ್ ಗಳನ್ನು ಅಭಿವೃದ್ಧಿಯ ಕಾರಣ ನೀಡಿ ಅಲ್ಲಿಂದ ಕಿತ್ತು ಹಾಕಲು ಪಾಲಿಕೆಗೆ ಕಾನೂನಿನಲ್ಲಿ ಅವಕಾಶ ಇದೆ. ಆದ್ದರಿಂದ ಸರಕಾರಿ ಜಾಗದಲ್ಲಿ ಹೋರ್ಡಿಂಗ್ ಅಳವಡಿಸಲು ಅನುಮತಿ ನೀಡುವಾಗ ಒಪ್ಪಂದ ಪತ್ರದಲ್ಲಿ ಒಂದು ನಿರ್ಬಂಧ ನೀಡಿಯೇ ಒಪ್ಪಿಗೆ ಕೊಡಲಾಗುತ್ತದೆ. ಆದ್ದರಿಂದ ಮನಪಾ ಹೋರ್ಡಿಂಗ್ ಕಿತ್ತು ಹಾಕಿತು ಎಂದಾದಾಗ ಅದನ್ನು ಪ್ರಶ್ನಿಸುವ ಹಕ್ಕು ಜಾಹೀರಾತನ್ನು ಹಾಕಿದ್ದ ಏಜೆನ್ಸಿಗಳಿಗೆ ಇರುವುದೇ ಇಲ್ಲ. ಆದರೆ ಮನಪಾದಲ್ಲಿರುವ ಜಾಹೀರಾತು ಏಜೆನ್ಸಿಗಳ ಕೃಪಾಪೋಷಿತರು ಒಂದು ಕಡೆಯಿಂದ ಕಿತ್ತು ಹಾಕುವ ಸಂದರ್ಭ ಬಂದರೆ ಮತ್ತೊಂದು ಕಡೆ ಅದನ್ನು ಅಳವಡಿಸುವ ಅನುಮತಿ ನೀಡಿ ಈ ಜಾಹೀರಾತು ಏಜೆನ್ಸಿಯವರ ಗಾಯಕ್ಕೆ ಮುಲಾಮು ಹಚ್ಚುತ್ತಾರೆ. ಯಾಕೆಂದರೆ ಜಾಹೀರಾತು ಏಜೆನ್ಸಿಯವರು ಅಸಮಾಧಾನಗೊಂಡರೆ ಇವರ ಹೊಟ್ಟೆಗೆ ಕಲ್ಲಲ್ಲವೇ? ಮನಪಾದಲ್ಲಿ ಈ ಹೋರ್ಡಿಂಗ್ ಲಾಬಿ ಜೋರಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ನಾನು ಇವರ ಬಳಿ ವಾದಿಸಿದ ಬಳಿಕ ಇವರು ಹೋರ್ಡಿಂಗ್ ಗಳನ್ನು ತೆಗೆಯಲು ಒಪ್ಪಿದರು ಎಂದಾದರೆ ಮೊದಲೇ ಇವರಿಗೆ ತಾವು ಮಾಡುವುದು ತಪ್ಪು ಎಂದು ಗೊತ್ತಿತ್ತು ಅಲ್ಲವೇ?

  • Share On Facebook
  • Tweet It


- Advertisement -


Trending Now
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Hanumantha Kamath March 30, 2023
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
Hanumantha Kamath March 29, 2023
Leave A Reply

  • Recent Posts

    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
  • Popular Posts

    • 1
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 2
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 3
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 4
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 5
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search