• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸರಕಾರದ ಕೆಲಸ ದೇವರ ಕೆಲಸ ಇರಬಹುದು, ಆದರೆ ದೇವರ ಹಣ ಸರಕಾರದ ಹಣ ಆಗಬೇಕಂತಿಲ್ಲ!

Tulunadu News Posted On August 30, 2020


  • Share On Facebook
  • Tweet It

ದೇವರೇ ನನಗೆ ಒಳ್ಳೆಯದು ಮಾಡು ಎಂದು ಬೇಡಿ ನಾವು ದೇವರ ಕಾಣಿಕೆ ಡಬ್ಬಿಯಲ್ಲಿ ಹಣ ಹಾಕುತ್ತೇವೆ. ಇನ್ನು ಕೆಲವರು ದೇವರೇ, ನಮ್ಮ ಊರನ್ನು ಚೆನ್ನಾಗಿ ಇಡು ಎಂದು ಪ್ರಾರ್ಥಿಸಿ ಗಾಂಧಿ ನೋಟುಗಳನ್ನು ಡಬ್ಬಿಗೆ ಹಾಕಬಹುದು. ಇನ್ನು ಕೆಲವರು ನಾನು ಕೇಳಿದಂತೆ ನೀನು ನನಗೆ ಇಂತಿಂತಹ ಕೆಲಸದಲ್ಲಿ ಒಳ್ಳೆಯದು ಮಾಡಿದ್ದಿ, ಅದಕ್ಕಾಗಿ ಇಷ್ಟು ಹಣವನ್ನು ನಿನಗೆ ಅರ್ಪಿಸುತ್ತಿದ್ದೇನೆ ಎಂದು ಒಂದು ಕಂತೆ ಹಣವನ್ನು ಡಬ್ಬಿಯಲ್ಲಿ ಹಾಕಬಹುದು. ಒಟ್ಟಿನಲ್ಲಿ ಎಲ್ಲರೂ ತನಗೆ, ತನ್ನವರಿಗೆ, ತನ್ನ ಊರಿಗೆ ಒಳ್ಳೆಯದು ಆಗಲಿ ಎಂದೇ ಹಣವನ್ನು ದೇವರಿಗೆ ಕೊಡುತ್ತಾರೆ. ಕೆಲವು ದೇವಸ್ಥಾನಗಳಿಗೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಆಯಾ ದೇವಸ್ಥಾನಗಳ ಡಬ್ಬಿಗಳು ಬೇಗನೆ ತುಂಬುತ್ತವೆ. ಉದಾಹರಣೆಗೆ ಕಟೀಲು, ಕೊಲ್ಲೂರು, ಸುಬ್ರಹ್ಮಣ್ಯ ದೇವಸ್ಥಾನವನ್ನು ನಂಬುವ ಆಸ್ತಿಕರ ಸಂಖ್ಯೆ ಜಿಲ್ಲೆ, ರಾಜ್ಯ, ರಾಷ್ಟ್ರಗಳಿಂದ ಇದೆ. ಶ್ರೀಲಂಕಾದ ಪ್ರಧಾನಿಗಳೆ ಇತ್ತೀಚೆಗೆ ಕೊಲ್ಲೂರಿಗೆ ಬಂದು ಹೋದ್ರು ಎಂದರೆ ಅರ್ಥ ಮಾಡಿಕೊಳ್ಳಿ, ಅದರ ಪ್ರಖ್ಯಾತಿ ಎಷ್ಟರಮಟ್ಟಿಗೆ ಇದೆ. ಹಾಗಿರುವಾಗ ಅಂತಹ ಪ್ರಸಿದ್ಧ ದೇವಸ್ಥಾನಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಅಗತ್ಯ ಇದ್ದೆ ಇರುತ್ತದೆ. ಬಜ್ಪೆಯಿಂದ ಕಟೀಲಿನ ತನಕ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿದರೆ ಅದರಿಂದ ಅಲ್ಲಿಗೆ ಹೋಗಿ ಬರುವ ಭಕ್ತರಿಗೆ ಅನುಕೂಲಕರವಾಗುತ್ತದೆ. ಹಾಗೆ ಗುಂಡ್ಯದಿಂದ ಸುಬ್ರಹ್ಮಣ್ಯಕ್ಕೆ, ಕುಂದಾಪುರದಿಂದ ಕೊಲ್ಲೂರಿಗೆ ಹೋಗುವ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಿದರೆ ಅದರಿಂದ ಈ ದೇವಸ್ಥಾನಗಳಿಗೆ ಬರುವ ಹೊರ ಜಿಲ್ಲೆಗಳ, ಹೊರ ರಾಜ್ಯಗಳ ಭಕ್ತಾದಿಗಳ ಮನಸ್ಸಿನಲ್ಲಿ ನಮ್ಮ ಜಿಲ್ಲೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ಪ್ರತಿಯೊಂದನ್ನು ಸರಕಾರಗಳೆ ಮಾಡಬೇಕು ಎಂದು ನಾವು ನಿರೀಕ್ಷೆ ಮಾಡಬೇಕಾಗಿಲ್ಲ. ದೇವಸ್ಥಾನಗಳ ಆದಾಯವನ್ನು ಬಳಸಿ ಅದನ್ನು ಅಭಿವೃದ್ಧಿ ಮಾಡಬಹುದು. ಇನ್ನು ದೇವರ ಹಣ ಎಂದ ಕೂಡಲೇ ಗುತ್ತಿಗೆದಾರ ಕೂಡ ತುಂಬಾ ನಿಷ್ಟೆಯಿಂದ ಕೆಲಸ ಮಾಡುತ್ತಾನೆ. ದೇವರ ಹಣವನ್ನು ತಿಂದು ಕಳಪೆ ಕೆಲಸ ಮಾಡಿದರೆ ಜೀವನದಲ್ಲಿ ಉದ್ಧಾರ ಆಗುವುದಿಲ್ಲ ಎಂದು ಕಾಮಗಾರಿ ಕೊಡುವಾಗಲೇ ಹೇಳಿ ಕೊಟ್ಟರೆ ಅದರಿಂದ ಅವನು ತುಂಬಾ ಲಾಭ ಕೂಡ ನಿರೀಕ್ಷೆ ಮಾಡದೆ ದೇವರ ಕೆಲಸ ಮಾಡಲು ಸಿಕ್ಕಿದ್ದೇ ಅದೃಷ್ಟ ಎಂದು ಅಂದುಕೊಂಡು ಕೆಲಸ ಮಾಡುತ್ತಾನೆ. ಆದ್ದರಿಂದ ಈ ರಸ್ತೆಗಳಲ್ಲಿ ಕಳಪೆ ಎನ್ನುವ ವಿಷಯವೇ ಬರುವುದಿಲ್ಲ. ಅಷ್ಟೂ ಕಾಮಗಾರಿಯ ಹಣ ಸಮರ್ಪಕವಾಗಿ ವಿನಿಯೋಗವಾಗುತ್ತದೆ. ಗುತ್ತಿಗೆದಾರ ಹಿಂದೂ ಅಗ್ಗಿದರೆ. ಇನ್ನು ಸರಕಾರದ ಯೋಜನೆಯಂತೆ ಆತ ಈ ಹಣದಲ್ಲಿ ಯಾರಿಗೂ ಕಮಿಷನ್ ಕೊಡುವ ಅಗತ್ಯವೇ ಬರುವುದಿಲ್ಲ. ಸರಕಾರದ ಅನುದಾನ ಆದರೆ ಕೆಲವು ಜನಪ್ರತಿನಿಧಿಗಳು ಫಿಕ್ಸ್ ಮಾಡಿರುವ ಏಳೂವರೆ ಶೇಕಡಾವನ್ನು ಇದರಲ್ಲಿ ಮುಟ್ಟುವ ಧೈರ್ಯ ಯಾರಿಗೂ ಬರಲಿಕ್ಕಿಲ್ಲ. ಇನ್ನು ದೇವರ ಕೆಲಸವನ್ನು ಮಾಡುವ ಭಾಗ್ಯ ಎಂದು ಗುತ್ತಿಗೆದಾರರು ಅದನ್ನೇ ಪಬ್ಲಿಸಿಟಿ ಪಡೆದುಕೊಂಡು ಲಾಭ ಬೇಡಾ ನಮಗೆ ಕೆಲಸ ಕೊಡಿ ಎಂದು ದಮ್ಮಯ್ಯ ಹಾಕಲುಬಹುದು. ಒಟ್ಟಿನಲ್ಲಿ ದೇವರ ಹಣ ಊರಿಗೆ ಒಳ್ಳೆಯ ಹೆಸರು ತರಬಹುದು. ಹಾಗೆ ಮೊನ್ನೆ ಹೇಳಿದ ಹಾಗೆ ಮಕ್ಕಳಿಗೆ ಮಧ್ಯಾಹ್ನದ ಊಟ, ಸಮವಸ್ತ್ರ, ಪುಸ್ತಕ, ಪೀಠೋಪಕರಣಗಳು ಕೂಡ ಕಳಪೆಯಾಗದೆ ಒಳ್ಳೆಯ ರೀತಿಯಲ್ಲಿ ಮಕ್ಕಳಿಗೆ ಲಭ್ಯವಾಗಲಿದೆ. ಇನ್ನು ಅಕ್ಕಪಕ್ಕದ ದೇವಸ್ಥಾನಗಳು ಕೂಡ ಅಭಿವೃದ್ಧಿ ಹೊಂದಲು ಇದೇ ನೆರವನ್ನು ಬಳಸಬಹುದು. ಹಾಗೆ ಯೋಜನೆಗಳನ್ನು ವಿಸ್ತರಿಸಬಹುದು. ಅದು ಆಗಲಿ ಎನ್ನುವುದು ನನ್ನ ಆಶಯ. ಆಗ ಹುಂಡಿಯಲ್ಲಿ ಹಣ ಹಾಕುವ ಭಕ್ತರಿಗೆ ತಮ್ಮ ಹಣ ಯೋಗ್ಯ ಕಾರ್ಯಕ್ಕೆ ಪೂರೈಕೆಯಾಗುತ್ತದೆ ಎನ್ನುವ ಗ್ಯಾರಂಟಿ ಬರುತ್ತದೆ. ಹಾಗೆ ಮಸೀದಿ, ಚರ್ಚ್ ಗಳಿಗೆ ಬರುವ ಆದಾಯವನ್ನು ಕೂಡ ಹೀಗೆಯೇ ಬಳಸಬಹುದು. ಎಲ್ಲಾ ಧರ್ಮಗಳಲ್ಲಿಯೂ ಶ್ರೀಮಂತರು ಇದ್ದಾರೆ, ಮಧ್ಯಮ ವರ್ಗದವರು ಇದ್ದಾರೆ, ಬಡವರು ಇದ್ದಾರೆ. ಶ್ರೀಮಂತ ದಾನಿಗಳ ಹಣ ಈ ಮೂಲಕ ಎಲ್ಲರಿಗೂ ಉಪಯೋಗವಾದರೆ ಅದರಿಂದ ಸಂತೋಷ ಬೇರೆ ಇಲ್ಲ. ದೇವಸ್ಥಾನ ಇರುವ ಊರಿನ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾದರೆ ಅದು ಕೇವಲ ಹಿಂದೂಗಳಿಗೆ ಮಾತ್ರ ಉಪಕಾರವಾಗುವುದಿಲ್ಲ. ಹಾಗೆ ಶಾಲೆಗಳಲ್ಲಿ ಮಕ್ಕಳಿಗೆ ಊಟ, ಸಮವಸ್ತ್ರ ಒಳ್ಳೆಯದು ಸಿಕ್ಕಿದರೆ ಅಲ್ಲಿ ಓದುವ ಎಲ್ಲಾ ಮಕ್ಕಳಿಗೂ ಅದು ಉಪಯೋಗವಾಗಲಿದೆ. ಇಷ್ಟೆಲ್ಲ ಅನುಷ್ಟಾನಕ್ಕೆ ಬರಬೇಕಾದರೆ ಆ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳು ಸರಿಯಾಗಬೇಕು. ಅವುಗಳನ್ನು ಬದಲಾವಣೆ ಮಾಡಬೇಕು. ದೇವರ ಹುಂಡಿಯ ಹಣ ಬೇರೆ ಧರ್ಮದ ಕೆಲಸ ಕಾರ್ಯ ಗಳಿಗೆ ಖರ್ಚು ಮಾಡುತ್ತಾರೆ ಎಂದು ಬಿಜೆಪಿಯವರು ಹೇಳಿಕೆ ನೀಡುತ್ತಿದರು ಈಗ ಇವರದ್ದೆ ಸರಕಾರವಿದೆ ಹೊಸ ಅದೇಶ ಹೊರಡಿಸಲಿ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search