ಇಂದ್ರಜಿತ್ ಲಂಕೇಶ್ ಕನ್ನಡದಲ್ಲಿ ಬೆರಳೆಣಿಕೆಯ ಸಿನೆಮಾಗಳನ್ನು ನಿರ್ದೇಶನ, ನಿರ್ಮಾಣ ಮಾಡಿದ್ದಾರೆ. ಹಿಂದಿಯಲ್ಲಿಯೂ ಒಂದು ಮಾಡಿದ್ದಾರಂತೆ. ಹಿಂದಿಯ ಅರ್ಚನಾ ಪೂರನ್ ಸಿಂಗ್ ಮಾಡುವುದನ್ನು ಕನ್ನಡದ ಟಿವಿಯಲ್ಲಿ ಇವರು ಮಾಡುತ್ತಾರೆ. ಇದು ಇವತ್ತಿನ ದಿನಗಳಲ್ಲಿ ಸಿನೆಮಾ, ಟಿವಿ ನೋಡಿದವರಿಗೆ ಗೊತ್ತಿರುವ ಸಂಗತಿ. ಆದರೆ ಅವರ ಹೆಸರಿನೊಂದಿಗೆ ಲಂಕೇಶ್ ಎನ್ನುವುದು ಇದೆಯಲ್ಲ, ಅದು ಕನ್ನಡ ಪತ್ರಿಕೋದ್ಯಮದಲ್ಲಿ ಬಹಳ ದೊಡ್ಡ ಹೆಸರು. ಈಗಿನ ತಲೆಮಾರಿಗೆ ಅದರಲ್ಲಿಯೂ ಒಂದಿಷ್ಟು ಟ್ಯಾಬ್ಲಾಯಿಡ್ ಪತ್ರಿಕೆ ಓದುವವರಿಗೆ ಲಂಕೇಶ್ ಪತ್ರಿಕೆ ಗೊತ್ತಿದೆ ವಿನ: ಲಂಕೇಶರು ಗೊತ್ತಿಲ್ಲ. ಲಂಕೇಶ್ ಪತ್ರಿಕೆ ಕೂಡ ಅಕ್ಕ, ತಮ್ಮನ ಗಲಾಟೆಯಲ್ಲಿ ಬೇರೆ ಬೇರೆಯಾಗಿ ಪ್ರಿಂಟಾಗುತ್ತಿತ್ತು. ಗೌರಿ ಲಂಕೇಶ್ ಸಂಪಾದಕತ್ವದ ಪತ್ರಿಕೆಯಾ, ಇಂದ್ರಜಿತ್ ಲಂಕೇಶ್ ಸಂಪಾದಕತ್ವದ ಪತ್ರಿಕೆಯಾ ಎನ್ನುವುದು ದೂರದಿಂದ ಗೊತ್ತಾಗುತ್ತಿರಲಿಲ್ಲ. ಅಂತಹ ಇಂದ್ರಜಿತ್ ನೋಡಲು ಮಾತ್ರ ಸ್ಟೈಲಿಶ್ ಎನ್ನುವುದರಲ್ಲಿ ಎರಡು ಮಾತಿಲ್ಲ. ತಂದೆಯಿಂದ ಬಂದ ಪತ್ರಿಕೋದ್ಯಮದ ಹುಮ್ಮಸ್ಸು ಮತ್ತು ಒಂದಿಷ್ಟು ಸಮರ ಎದುರಿಸುವ ಧೈರ್ಯ ಅವರಲ್ಲಿ ಇದೆ ಎಂದು ಗೊತ್ತಾಗಿದ್ದೇ ಮೊನ್ನೆ. “ನನಗೆ ಸಿನೆಮಾ ರಂಗದಲ್ಲಿ ಇರುವ ಯಾರ್ಯಾರು ಎಲ್ಲೆಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎನ್ನುವುದು ಗೊತ್ತು” ಎನ್ನುವ ಅರ್ಥದ ಮಾತುಗಳನ್ನು ಇಂದ್ರಜಿತ್ ಆಡಿದಾಗ ಪ್ರಾರಂಭದಲ್ಲಿ ಅದೊಂದು ಸಾಮಾನ್ಯ ಹೇಳಿಕೆ ಎಂದೇ ಜನ ಪರಿಗಣಿಸಿದ್ದರು. ಆದರೆ ಅದನ್ನು ಸೀರಿಯಸ್ ಆಗಿ ತೆಗೆದುಕೊಂಡದ್ದು ಮಾತ್ರ ಬೆಂಗಳೂರು ಪೊಲೀಸ್ ಕಮೀಷನರ್ ಕಮಲ ಪಂಥ್.
ನಮಗೆ ನಿಮ್ಮಲ್ಲಿ ಇದ್ದ ಮಾಹಿತಿ ಕೊಡಬಹುದಾ ಎಂದು ಅವರು ಕೇಳಿದಾಗ ಕೊಡುವುದಿಲ್ಲ ಎನ್ನಲು ಇಂದ್ರಜಿತ್ ಗೆ ಸಾಧ್ಯವಿರಲೇ ಇಲ್ಲ. ಹಾಗಂತ ಯಾರ್ಯಾರದ್ದೋ ಹೆಸರು ಹೇಳಿ ನುಣುಚಿಕೊಳ್ಳುವುದು ಕಷ್ಟ. ಯಾಕೆಂದರೆ ಸುಳ್ಳು ಹೆಸರು ಹೇಳಿದರೆ ಮುಂದೆ ಇಂದ್ರಜಿತ್ ಅವರನ್ನು ಯಾರೂ ನಂಬುವುದಿಲ್ಲ. ಹಾಗಂತ ಇಂದ್ರಜಿತ್ ಹೆಸರು ಕೊಟ್ಟ ಕೂಡಲೇ ಅಂತವರನ್ನು ತಕ್ಷಣ ಬಂಧಿಸಿ ಕೇಸು ದಾಖಲಿಸುವುದು ಕೂಡ ಸಾಧ್ಯವಿಲ್ಲ. ಇದೇನಿದ್ದರೂ ಮಾಧ್ಯಮಗಳಿಗೆ ಕೊರೊನಾ ತೋರಿಸಿ ತೋರಿಸಿ ಬೇಜಾರಾಗಿರುವುದಕ್ಕೆ ಇಂದ್ರಜಿತ್ ಹೆಸರಿನಲ್ಲಿ ನಾಲ್ಕು ದಿನ ಸ್ವಲ್ಪ ವೆರೈಟಿ ಸಿಕ್ಕಿದೆ ಬಿಟ್ಟರೆ ಬೇರೆ ಏನೂ ಇಲ್ಲ. ಹಾಗಂತ ಇಂದ್ರಜಿತ್ ಹೆಸರು ಹೇಳಲು ಹೋದ ತಕ್ಷಣ ತಮ್ಮ ಹೆಸರನ್ನೇ ಹೇಳಲು ಹೋಗಿದ್ದಾರೆ ಎನ್ನುವಂತೆ ಕೆಲವು ಕುಂಬಳಕಾಯಿ ಕಳ್ಳರು ವರ್ತಿಸುವುದು ಯಾಕೆಂದು ಗೊತ್ತಾಗುವುದಿಲ್ಲ. ಇನ್ನು ಇಂದ್ರಜಿತ್ ಹೇಳಿದ ಹೆಸರುಗಳು ಪೊಲೀಸರಿಗೆ ಗೊತ್ತಿರಲ್ಲ ಎಂದಲ್ಲ. ಇಂದ್ರಜಿತ್ ಹೇಳಿದ ನಂತರವೇ ಗೊತ್ತಾಯಿತು ಎಂದು ಪೊಲೀಸರು ಹೇಳಿದರೆ ಬೆಂಗಳೂರಿನ ಶಿವಾಜಿನಗರದ ಪುಟ್ಟ ಮಗು ಕೂಡ ಮುಖ ಅಗಲಮಾಡಿ ನಕ್ಕುಬಿಡುತ್ತದೆ. ನಮ್ಮಲ್ಲಿಯೂ ಅಷ್ಟೇ. ನಿನ್ನೆ ಮೊನ್ನೆ ಮೀಸೆ ಬಿಟ್ಟ ಪಡ್ಡೆ ಹುಡುಗರಿಗೆ ಗಾಂಜಾ, ಅಫೀಮು, ಚರಸ್ ಎಲ್ಲಿ ಸಿಗುತ್ತದೆ ಎಂದು ಗೊತ್ತಾಗಿರುತ್ತದೆ. ಪೊಲೀಸರು ಅಪರೂಪಕ್ಕೆ ಹಿಡಿದಾಗ ಸಿಕ್ಕಿಬಿದ್ದವರು ಅಂತಹ ಎಳಸು ಹುಡುಗರು. ಆದರೆ ಪೊಲೀಸರಿಗೆ ಮಾತ್ರ ಯಾರಾದರೂ ಬಂದು ಹೇಳಬೇಕಂತೆ. ಆಗಲೇ ಅವರಿಗೆ ಗೊತ್ತಾಗುವುದಂತೆ.
ಇಂದ್ರಜಿತ್ ಗೆ ಆದ್ರೆ ಖಾಸಗಿ ಗನ್ ಮ್ಯಾನ್ ಗಳನ್ನು ಇಟ್ಟುಕೊಳ್ಳುವಷ್ಟು ಆರ್ತಿಕ ಶಕ್ತಿ ಇದೆ. ಅವರಿಗೆ ಪೊಲೀಸರ ರಕ್ಷಣೆಯ ಹಂಗು ಇಲ್ಲ. ಆದರೆ ನಮ್ಮ ಊರಿನ ಮೀನಿನ ದಕ್ಕೆ, ಬಂದರಿನಲ್ಲಿ, ಸೆಂಟ್ರಲ್ ಮಾರುಕಟ್ಟೆ ಬಳಿ ದುರುಳರು ಗಾಂಜಾ ಮಾರುವಾಗ ನಮ್ಮಂತವರಿಗೆ ಗೊತ್ತಾಗಿ ನಾವು ಯಾರಾದರೂ ಹೇಳಿದರೆ ನಮ್ಮ ಜೀವ ಉಳಿಯುತ್ತಾ? ಮೊದಲು ನೀವು ಯಾವ ನಂಬರ್ ನಿಂದ ಕರೆ ಮಾಡಿದ್ದೀರೋ ಅಲ್ಲಿ ಪೊಲೀಸರು ತಕ್ಷಣ ಬಂದು ಬಿಡುತ್ತಾರೆ. ಡ್ರಗ್ಸ್ ಮಾರುವವರನ್ನು ಹಿಡಿಯಲು ಅಲ್ಲ. ಮಾಹಿತಿ ಕೊಟ್ಟಿದ್ದು ಯಾರು ಎಂದು ತಿಳಿಯಲು. ಇಂದ್ರಜಿತ್ ಬಂಗ್ಲೆಯಲ್ಲಿ ವಾಸ ಮಾಡುತ್ತಾ ಸೆಕ್ಯೂರಿಟಿಗಳನ್ನು ಗೇಟ್ ನಲ್ಲಿ ಕಾಯಲು ಇಟ್ಟು ಮಲಗುವ ವ್ಯಕ್ತಿ. ನಾವು ನೀವು ಮಾಹಿತಿ ಕೊಟ್ಟರೆ ಅವತ್ತೆ ರಾತ್ರಿ ಮನೆಯ ಕಿಟಕಿಗೆ ಕಲ್ಲು ಬಿತ್ತು ಎಂದೇ ಅರ್ಥ. ನಾವು ದೂರು ಕೊಟ್ಟಿದ್ದು ಆ ಗಾಂಜಾ ಡೀಲರ್ ಗಳಿಗೆ ಹೇಗೆ ಗೊತ್ತಾಯಿತು ಎಂದು ಯೋಚನೆ ಮಾಡುವುದು ಮಾತ್ರ ಬಾಕಿ. ಅಲ್ಲಿ ಸುಶಾಂತ್ ಆಪ್ತ ಗೆಳತಿಯಿಂದ ತನಿಖೆ ಆರಂಭವಾಗಿ ಈಗ ಅದು ಬೆಂಗಳೂರು ತನಕ ಬಂದು ನಿಂತಿದೆ. ಆದರೆ ಯಾವುದೇ ಪೊಲೀಸ್ ಅಧಿಕಾರಿ ಈ ನೈಜೀರಿಯಾದಿಂದ ಬಂದು ಇಲ್ಲಿಯೇ ಬಾಕಿ ಆಗಿದ್ದಾರಲ್ಲ, ಅವರು ಜೀವನಕ್ಕಾಗಿ ಏನು ಕೆಲಸ ಮಾಡುತ್ತಿದ್ದಾರೆ ಎಂದು ನೋಡಿದ್ದಾರಾ? ಮೊದಲಿಗೆ ತಮ್ಮ ಮಗ ಹೀಗೆ ಡ್ರಗ್ಸ್ ಸೇವಿಸುವಾಗ ಸಿಕ್ಕಿಬಿದ್ದಿದ್ದಾನೆ ಅಥವಾ ಬಿದ್ದಿದ್ದಾಳೆ ಎಂದು ಗೊತ್ತಾದಾಗ ಯಾವುದೇ ರಾಜಕಾರಣಿ ಪೊಲೀಸರಿಗೆ ಇನ್ಸಫುಲೆನ್ಸ್ ಮಾಡಿ ಬಿಡಿಸಿ ತರಲೇಬಾರದು. ಅವನಿಗೆ ಅಥವಾ ಅವಳಿಗೆ ಪೊಲೀಸರು ತಮ್ಮದೇ ರೀತಿಯಲ್ಲಿ ಬುದ್ಧಿ ಹೇಳಲು ಬಿಡಬೇಕು. ಇನ್ನು ತಮ್ಮ ನೆಟ್ ವರ್ಕ್ ನಿಂದ ಡ್ರಗ್ಸ್ ಮಾರುವವರನ್ನು ಬಂಧಿಸಬೇಕು. ಇಲ್ಲಿ ಏನಾಗುತ್ತೆ ಎಂದರೆ ಪೊಲೀಸ್ ಸಿಬ್ಬಂದಿಯಿಂದ ಹಿಡಿದು ಪೊಲೀಸ್ ಉನ್ನತಾಧಿಕಾರಿಗಳ ತನಕ, ಗ್ರಾಮ ಪಂಚಾಯತ್ ಸದಸ್ಯನಿಂದ ಮಂತ್ರಿಗಳ ತನಕ ಎಲ್ಲರಿಗೂ ಡ್ರಗ್ಸ್ ಜಾಲದ ಸುಳಿವಿದೆ. ಆದರೂ ಯಾರಾದರೂ ಹೇಳಲಿ ಎಂದು ಬಯಸುತ್ತಾರೆ. ಯಾಕೋ!

- Advertisement -
Leave A Reply