ಹೋರ್ಡಿಂಗ್ ಗೋಲ್ ಮಾಲ್ ಆಯ್ತು. ಕಟ್ಟಡ ತೆರಿಗೆ ಗೋಲ್ ಮಾಲ್
ನಿನ್ನೆಗೆ ಹೋರ್ಡಿಂಗ್ ಗೋಲ್ ಮಾಲ್ ಈ ಸರಣಿಯ ಜಾಗೃತಿ ಲೇಖನ ಮುಗಿಯಿತು. ನಾಳೆಯಿಂದ ಹೊಸ ವಿಷಯದ ಮೇಲೆ ನಿಮ್ಮನ್ನು ಜಾಗೃತಿಗೊಳಿಸುವ ಯತ್ನ ಮಾಡುತ್ತೆನೆ. ವಾಣಿಜ್ಯ ಮಳಿಗೆಗಳು ತೆರಿಗೆ ಕಟ್ಟುವಾಗ ದಾಖಲೆಗಳಲ್ಲಿ ಕಡಿಮೆ ಜಾಗವನ್ನು ತೋರಿಸಿ ಮಂಗಳೂರು ಮಹಾನಗರ ಪಾಲಿಕೆಗೆ ಹೇಗೆ ವಂಚಿಸುತ್ತವೆ ಎನ್ನುವುದರ ಕುರಿತು.
ನಿಮಗೆ ತಿಳಿದಿರಬಹುದು.ಹಿಂದೆ ಮನಪಾದ ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ ಮಾಜಿ ಮೇಯರ್ ಹರಿನಾಥ್ ಅವರು ಅಧಿಕಾರಿಗಳೊಂದಿಗೆ ಕುಳಾಯಿಯಲ್ಲಿರುವ ಮಾರ್ಬಲ್ ಅಂಗಡಿಯೊಂದಕ್ಕೆ ದಾಳಿ ಮಾಡಿದ್ದರು. ಈ ಮೂಲಕ ತೆರಿಗೆಯನ್ನು ಕಡಿಮೆ ಕಟ್ಟಿ ಮನಪಾಗೆ ವಂಚಿಸುತ್ತಿದ್ದ ಅಂಗಡಿಯ ಮಾಲೀಕನಿಗೆ ದಂಡ ಹಾಕಿದ್ದರು. ಇಪ್ಪತ್ತು ಲಕ್ಷದಷ್ಟು ಹಣ ದಂಡದ ರೂಪದಲ್ಲಿ ಬಂದಿದೆ ಎಂದು ತಿಳಿದುಕೊಂಡಿದ್ದೇನೆ. ಅ ಸಮಯ ಪ್ರೆಸ್ ಕರೆದು ಪಾಲಿಕೆ ವ್ಯಾಪ್ತಿಯಲಿ ಈರೀತಿ ತೆರಿಗೆ ವಂಚಿಸುವ ಹಲವು ಮಳಿಗೆಗಳಿವೆ ಯಾರನ್ನು ಬಿಡುವುದಿಲ್ಲ ಎಲ್ಲರನ್ನು ಪತ್ತೆ ಹಚ್ಚಿ ಪಾಲಿಕೆಯ ಬೊಕ್ಕಸ ತುಂಬಿಸುತ್ತೆವೆ ಎಂದು ಹೇಳಿದರು.ಆ ಒಂದೇ ಒಂದು ಮಳಿಗೆಗೆ ದಾಳಿ ಮಾಡಿದ ನಂತರ ಮಾತ್ತಿನ್ನೊಂದು ಮಳಿಗೆಗೆ ಕಾಂಗ್ರೆಸ್‌ನ ಉಳಿದ ಆಡಳಿತದ ಅವಧಿಯಲ್ಲಿ ದಾಳಿಯೇ ನಡೆಯಲಿಲ್ಲ ಯಾಕೆ ಎಂದು ಕಾಂಗ್ರೆಸ್ ನವರೇ ಹೇಳಬೇಕು ಒಂದು ಮಳಿಗೆಗೆ ದಾಳಿ ಮಾಡಿ ಪ್ರೆಸ್ ಕರೆದು ಇನ್ನೂ ಇದೆ ಯಾರನ್ನೂ ಬಿಡುವುದಿಲ್ಲ ಎಂದ ಕಾಂಗ್ರೆಸ್ ಮತ್ತೆ ದಾಳಿ ಮಾಡಲಿಲ್ಲ ಎಂದು ತಿಳಿಯುವ ಹಕ್ಕು ತೆರಿಗೆ ಪಾವತಿಸುವ ಮಂಗಳೂರಿನ ನಾಗರಿಕರಿಗೆ ಇದೆಯಲ್ಲವೇ. ಕೇವಲ ಅಂಗಡಿಯೊಂದರ ಕಥೆ ಅಲ್ಲವೇ ಅಲ್ಲ. ಮನಪಾ ವ್ಯಾಪ್ತಿಯಲ್ಲಿ ಇಂತಹ ಅಸಂಖ್ಯಾತ ಮಳಿಗೆಗಳಿವೆ.ನಂತರ ತೆರಿಗೆ ವಂಚಿಸುತಿರುವ ಒಂದೇ ಒಂದು ಮಳಿಗೆಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಲಿ,ಮೇಯರುಗಳಾಗಲಿ ದಾಳಿ ಮಾಡಲಿಲ್ಲ ಯಾಕೆ? ಅಂಗಡಿಗಳ ಮಾಲೀಕರು ಹೇಗೆಲ್ಲ ವಂಚಿಸುತ್ತಾರೆ ಎನ್ನುವುದರ ಬಗ್ಗೆ ನಾನು ನಿಮಗೆ ಹೇಳುತ್ತೇನೆ ಮತ್ತು ಪಾಲಿಕೆಯ ಅಧಿಕಾರಿಗಳು ಮತ್ತು ಮಾಜಿ ಸದಸ್ಯರು ಯಾಕೆ ಎಲ್ಲ ಅಂಗಡಿಗಳ ಮೇಲೆ ದಾಳಿ ಮಾಡಿಸಲಿಲ್ಲ ಈಗಿನ ಸದಸ್ಯರು ಕೂಡ ಈಗೆಯೇ ಮಾಡುತ್ತಾರ ಎಂದು ತಿಳಿಸುತ್ತೇನೆ. ಅಂದ ಹಾಗೆ ಹೋರ್ಡಿಂಗ್ ಗೋಲ್ ಮಾಲ್ ಮೂಲಕ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ವಂಚಿಸುತ್ತಿರುವ ಜಾಹೀರಾತು ಏಜೆನ್ಸಿಗಳ ಹಿಂದಿರುವ ಮುಖಗಳ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯಲ್ಲಿ ಕೇಳಿದ್ದೇನೆ. ಇನ್ನೂ ಎಲ್ಲ ಉತ್ತರ ಬಂದಿಲ್ಲ. ಒಂದು ಗೋಲ್ ಮಾಲ್ ಸರಣಿಯಿಂದ ಮತ್ತೊಂದು ಗೋಲ್ ಮಾಲ್ ಸರಣಿಗೆ ಹೋಗುವ ನಡುವೆ ಒಂದು ಚಿಕ್ಕ ಬ್ರೇಕ್.
Leave A Reply