• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಹೊಟೇಲಿನ ಟೇರಿಸಿನ ಮೇಲೆ ಕುಡಿದು ಬಿಲ್ ಕೊಟ್ಟು ಬರುವಾಗ ಅವರು ಅದಕ್ಕೆ ತೆರಿಗೆ ಕಟ್ಟುತ್ತಾರಾ, ಕೇಳಿ!

Hanumantha Kamath Posted On September 11, 2020
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ಕೆಲವು ಪ್ರಖ್ಯಾತ ಹೊಟೇಲುಗಳಿವೆ. ಅವು ಮಂಗಳೂರು ಮಹಾನಗರ ಪಾಲಿಕೆಗೆ ಮಾಡುವ ಮೋಸ ಏನೂ ಚಿಕ್ಕದ್ದಲ್ಲ. ಹಾಗಂತ ಇವತ್ತು ನಾನು ಬರೆಯುತ್ತಿರುವ ಈ ಜಾಗೃತಿ ಲೇಖನ ಕೇವಲ ಹೊಟೇಲುಗಳಿಗೆ ಮಾತ್ರ ಸೀಮಿತ ಅಲ್ಲ. ಯಾರೆಲ್ಲ ಕಡಿಮೆ ಜಾಗದ ಲೆಕ್ಕ ತೋರಿಸಿ ಮನಪಾದ ಕಿವಿಯಲ್ಲಿ ಹೂವಿನ ಕುಂಡ ಇಡುತ್ತಿದ್ದಾರೆ ಎನ್ನುವುದರ ಬಗ್ಗೆ ಇವತ್ತಿನಿಂದ ಬರೆಯುತ್ತಾ ಹೋಗುತ್ತೇನೆ. ಅವುಗಳಲ್ಲಿ ಮಂಗಳೂರಿನ ಕೆಲವು ಪ್ರಖ್ಯಾತ ಮದುವೆಯ ಹಾಲ್ ಗಳು ಇವೆ. ಹಲವದರ ನಿಖರ ಲೆಕ್ಕ ನನ್ನ ಬಳಿ ಇವೆ. ಆದರೆ ಮದುವೆ ಹಾಲಿನ ಆಡಳಿತ ಮಂಡಳಿಯವರು ಹೇಗೆ ಸುಳ್ಳು ಲೆಕ್ಕ ತೋರಿಸಿ ಇಲ್ಲಿಯ ತನಕ ಕಡಿಮೆ ತೆರಿಗೆ ಕಟ್ಟುತ್ತಿದ್ದಾರೆ ಎಂದು ವಿವರಿಸಲಿದ್ದೇನೆ, ಅವುಗಳ ಹೆಸರಿನೊಂದಿಗೆ.ಮೊದಲಿಗೆ ಮಂಗಳೂರಿನ ಪ್ರಖ್ಯಾತ ಹೊಟೇಲುಗಳು ಹೇಗೆ ಪಾಲಿಕೆಗೆ ಮೋಸ ಮಾಡುತ್ತವೆ ಎನ್ನುವುದರ ಉದಾಹರಣೆ ನಿಮಗೆ ನೀಡುತ್ತೇನೆ. ಮಂಗಳೂರಿನ ಹೆಚ್ಚಿನ ಶ್ರೀಮಂತ ಹೊಟೇಲುಗಳ ಅಕ್ರಮದ ಕತೆ ಒಂದೇ ರೀತಿಯಲ್ಲಿ ಇರುವದರಿಂದ ಯಾವ ಹೊಟೇಲನ್ನು ಬಿಡುವುದು, ಯಾವುದನ್ನೂ ಹಿಡಿಯುವುದು ಎಂದು ಗೊತ್ತಾಗುವುದಿಲ್ಲ. ಆದ್ದರಿಂದ ಮೊದಲಿಗೆ ಅಂತಹ ಹೊಟೇಲುಗಳು ಮಾಡುವ ಮೋಸದ ಶೈಲಿಯನ್ನು ನಿಮಗೆ ತಿಳಿಸುತ್ತೇನೆ. ನಂತರ ಹೆಸರು,ಗಿಸರು ಎಲ್ಲಾ ನೋಡುವ. ಅನೇಕ ಬಾರ್ ಗಳಿರುವ ಹೊಟೇಲು ಕಟ್ಟಡಗಳ ಮೇಲೆ ರೂಫ್ ಟಾಪ್ ಇರುತ್ತದೆ. ಅಂದರೆ ನಮ್ಮ ವಸತಿ ಸಂಕೀರ್ಣಗಳ ಟೆರೇಸ್ ಇರುತ್ತದೆಯಲ್ಲ, ಆ ರೀತಿಯಲ್ಲಿ. ಆ ಟೇರೆಸಿನಲ್ಲಿ ಆ ಕಟ್ಟಡಗಳಲ್ಲಿರುವ ಹೊಟೇಲಿನವರು ಬಾರ್ ಅಂಡ್ ರೆಸ್ಟೋರೆಂಟನ್ನು ತೆರೆಯುತ್ತಾರೆ. ಉದಾಹರಣೆಗೆ ಜ್ಯೋತಿ ಟಾಕೀಸಿನ ಬಳಿಒಂದು ಬಾರ್ ಇರುವ ಒಂದು ಬಿಲ್ಡಿಂಗ್ ಇದೆ ಎಂದು ಇಟ್ಟುಕೊಳ್ಳಿ. ಅದರ ನಾಲ್ಕನೇ ಮಹಡಿಯಲ್ಲಿ ಒಂದು ಫ್ಯಾಮಿಲಿ ರೆಸ್ಟೋರೆಂಟ್ ಇರುತ್ತದೆ. ಅದೇ ಕಟ್ಟಡದ ಟೆರೇಸಿನಲ್ಲಿ ಅದೇ ಹೊಟೇಲಿನ ಬಾರ್ ಅಂಡ್ ರೆಸ್ಟೋರೆಂಟ್ ಕೂಡ ಇರುತ್ತದೆ. ಯಾರಿಗೆ ಒಪನ್ ಏರ್ ನಲ್ಲಿ ಕುಳಿತು ಮದ್ಯ ಕುಡಿಯಬೇಕು, ಗಮ್ಮತ್ ಮಾಡಬೇಕು ಎಂದು ಇರುತ್ತದಾ, ಅವರು ನೇರವಾಗಿ ಮಾಳಿಗೆಗೆ ಲಿಫ್ಟ್ನಲ್ಲಿ ಹೋಗಬಹುದು. ಅಲ್ಲಿಂದ ನೇರವಾಗಿ ಟೆರೇಸಿಗೆ. ನೀವೆನೊ ಅಲ್ಲಿ ಕುಡಿದು, ತಿಂದು ಸಾವಿರಾರು ರೂಪಾಯಿ ಬಿಲ್ ಮಾಡಿ ಹಣ ಕೊಟ್ಟು ಹೋಗುತ್ತಿರಿ. ಮಾಲೀಕ ಅದನ್ನು ಕಿಸೆಗೆ ಹಾಕಿಕೊಂಡು ಭರ್ಜರಿ ನಗೆ ಬೀರುತ್ತಾನೆ. ಏಕೆಂದರೆ ನೀವು ಅಷ್ಟೂ ಹೊತ್ತು ಎಂಜಾಯ್ ಮಾಡಿದ್ದು ಅಕ್ರಮವಾಗಿ ಆ ಹೊಟೇಲಿನವರು ತೆರೆದಿಟ್ಟಿರುವ ಜಾಗದಲ್ಲಿ. ಅಷ್ಟಕ್ಕೂ ಸಂಭ್ರಮಿಸಲು ಹೋಗುವವರು ಅದನ್ನೆಲ್ಲ ನೋಡಬೇಕಾ ಎನ್ನುವುದು ನಿಮ್ಮ ಪ್ರಶ್ನೆ ಇರಬಹುದು. ಆದರೆ ಒಂದು ಕ್ಷಣ ಯೋಚಿಸಿ. ನೀವು ಎಂಜಾಯ್ ಮಾಡಲು ಹೋಗಿದ್ದಿರಲ್ಲ, ಅಲ್ಲಿ ಹೊಟೇಲಿನವರು ದಯೆ, ದಾಕ್ಷಿಣ್ಯ ಇಲ್ಲದೆ ಬಿಲ್ ಮಾಡುವಾಗ ಒಂದೊಂದು ಫುಡ್ ಮೇಲೆ ಎಷ್ಟು ಹಣ ಹಾಕುತ್ತಾರೆ ಎಂದು ನಿಮಗೆ ಗೊತ್ತಿದೆ. ಒಂದೊಂದು ಮದ್ಯಕ್ಕೂ ಅದು, ಇದು ತೆರಿಗೆ ಎಂದು ನಿಮ್ಮನ್ನು ಸುಲಿಗೆ ಮಾಡಲು ತಯಾರಾಗಿ ನಿಂತಿರುತ್ತಾರೆ. ತಿಂದದ್ದು, ಕುಡಿದದ್ದು ಏನಿಲ್ಲ, ಬಿಲ್ ಮಾತ್ರ ಮೂರು ಸಾವಿರ ಆಯಿತು ಎಂದು ನೀವು ಅಂದುಕೊಳ್ಳಬಹುದು. ನಿಮ್ಮ ಬಳಿ ಏನೂ ತುಂಬಾ ಹಣ ಇರಬಹುದು. ಅದನ್ನು ನೀವು ಆ ಹೊಟೇಲಿನವರ ಉದ್ಧಾರಕ್ಕೆ ಕೊಡಬೇಕು ಎಂದು ನಿಯಮ ಇದೆಯಾ? ನಿಮಗೆ ಬಿಲ್ ನಲ್ಲಿ ಸುಲಿದು, ಸುಲಿದು ಆ ಹೊಟೇಲಿನ ಮಾಲೀಕ ಮತ್ತೊಂದು ಕಟ್ಟಡ ಕಟ್ಟುತ್ತಾನೆ ವಿನ: ಅದರಿಂದ ಸಮಾಜಕ್ಕೆ ಏನು ಲಾಭ. ಯಾಕೆಂದರೆ ಆ ಹೊಟೇಲಿನ ಮಾಲೀಕ ನ್ಯಾಯಯುತವಾಗಿ ಮನಪಾಗೆ ಕಟ್ಟಬೇಕಾದ ತೆರಿಗೆಯನ್ನು ಕೂಡ ಕಟ್ಟಿರುವುದಿಲ್ಲ. ಯಾಕೆಂದರೆ ಅವನು ಲೆಕ್ಕ ತೋರಿಸುವುದು ಕೇವಲ ಆ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಇರುವ ತನ್ನ ಹೊಟೇಲಿನ ಬಗ್ಗೆ ಮಾತ್ರ. ಅದು ಕೂಡ ನೈಜ ಲೆಕ್ಕ ಅಲ್ಲ, ಅದನ್ನು ಮತ್ತೇ ಹೇಳುತ್ತೇನೆ. ಆದರೆ ನೀವು ಮಜಾ ಉಡಾಯಿಸಿ ಬಂದರಲ್ಲ, ಆ ಟೆರೇಸಿನಲ್ಲಿ ಆದ ಅಷ್ಟೂ ವ್ಯಾಪಾರದ ಹಣ ಸಂಪೂರ್ಣವಾಗಿ ಆ ಹೊಟೇಲಿನ ಮಾಲೀಕನ ಕಿಸೆಗೆ. ಯಾಕೆಂದರೆ ಅಲ್ಲೊಂದು ಹೊಟೇಲ್ ಅಥವಾ ಬಾರ್ ಅಂಡ್ ರೆಸ್ಟೋರೆಂಟ್ ತೆರೆದು ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ತಾನು ಮಾಡುತ್ತೇನೆ ಎಂದು ಅವನು ಮನಪಾಗೆ ತಿಳಿಸಿರುವುದೇ ಇಲ್ಲ. ಆ ಟೇರೆಸ್ ತನ್ನ ಪಿರ್ತಾಜಿತ ಆಸ್ತಿಯಂತೆ ಇವನು ಬಳಸುತ್ತಾ ಇರುತ್ತಾನೆ. ಒಂದು ವೇಳೆ ಪಿರ್ತಾಜಿತ ಆಸ್ತಿಯಾದರೂ ಅದಕ್ಕೂ ತೆರಿಗೆ ಕಟ್ಟಬೇಕು!ಒಂದು ವೇಳೆ ಅವನು ಅದಕ್ಕೆ ಅನುಮತಿ ತೆಗೆದುಕೊಂಡು ವ್ಯಾಪಾರ ಮಾಡಿದರೆ ಏನಾಗುತ್ತೆ? ಅವನು ಟೇರಿಸಿನಲ್ಲಿ ಎಷ್ಟು ಚದರ ಅಡಿ ಜಾಗ ಇದೆಯೊ ಅಷ್ಟಕ್ಕೂ ತೆರಿಗೆ ಕಟ್ಟಬೇಕಾಗುತ್ತದೆ. ಆದರೆ ಅವನು ಆ ಕಟ್ಟಡದಲ್ಲಿರುವ ತನ್ನ ಹೊಟೇಲಿನ ಜಾಗದ ಲೆಕ್ಕ ಒಂದು ಸಾವಿರ ಸ್ಕ್ವೇರ್ ಫೀಟ್ ಎಂದು ತೋರಿಸಿ ( ನಿಜವಾಗಿ ನೋಡಿದರೆ ಅದು ಅದರ ಡಬ್ಬಲ್ ಅಥವಾ ನಾಲ್ಕು ಪಟ್ಟು ಇರುತ್ತದೆ) ಅದಕ್ಕೆಉದ್ದಿಮೆ ಪರವಾನಿಗೆ ಶುಲ್ಕಮತ್ತು ತ್ಯಾಜ ಶುಲ್ಕಎಷ್ಟು ಬೀಳುತ್ತದೊ, ಅಷ್ಟನ್ನು ಮಾತ್ರ ಪಾವತಿಸಿ ಅನುಮತಿ ಪಡೆದುಕೊಂಡಿರುತ್ತಾರೆ.ಈ ಟೆರೀಸಿನ ಲೆಕ್ಕ ಹೇಳುವುದೇ ಇಲ್ಲ. ಒಂದು ವೇಳೆ ಅವರು ಅದರ ಲೆಕ್ಕ ಕೂಡ ಹೇಳಿದರೆ ಪಾಲಿಕೆಗೆ ಒಂದಿಷ್ಟು ಲಕ್ಷ ರೂಪಾಯಿ ಆದಾಯ ಹೆಚ್ಚು ಬರುತ್ತಿತ್ತು. ಇದು ಮಂಗಳೂರಿನಲ್ಲಿರುವ ಹಲವು ಬಾರ್ ಎಂಡ್ ರೆಸ್ಟೋರೆಂಟ್ ಗಳಿವೆ ಅಷ್ಟೂ ಹೊಟೇಲಿಗೆ ಹೋಲಿಸಿದಾಗ ಎಷ್ಟು ಕೋಟಿಯಾಯಿತೊ, ಲೆಕ್ಕ ಮಾಡಿದವರು ಯಾರು? ಇದರಿಂದ ಪಾಲಿಕೆಗೆ ಬೇರೆ ಏನಾದರೂ ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗುತ್ತಿತ್ತು. ಆದರೆ ಈಗ ಕೇವಲ ಹೊಟೇಲಿನ ಮಾಲೀಕನ ಅಭಿವೃದ್ಧಿ ಮಾತ್ರ ಆಗುತ್ತದೆ. ಇದರಿಂದಲೇ ಸಮಾಜದಲ್ಲಿ ಮೋಸ ಮಾಡಿ ಹಣ ಮಾಡುತ್ತಿರುವ ಶ್ರೀಮಂತರ ಮತ್ತು ನಾಲ್ಕು ಕಾಸು ನಿಯತ್ತಿನಿಂದ ದುಡಿದು ಜೀವನ ಮಾಡುತ್ತಿರುವವರ ಆದಾಯದ ಅಂತರ ಹೆಚ್ಚುತ್ತಾ ಹೋಗುತ್ತಿರುವುದು. ಶ್ರೀಮಂತರು ಹೀಗೆ ಪಾಲಿಕೆಗೆ ವಂಚಿಸಿ ಶ್ರೀಮಂತರಾಗುತ್ತಲೇ ಹೋಗುತ್ತಾರೆ. ಮಧ್ಯಮ ವರ್ಗದವರು ಹೀಗೆ ಉಳಿದು ಬಿಡುತ್ತಾರೆ. ಹಾಗೆಂದು ಇಂತಹ ಹೊಟೇಲಿನವರು ಮಾಡುವ ಈ ಅಕ್ರಮ ದಂಧೆ ಅಲ್ಲಿಯೇ ಇರುವ ಪಾಲಿಕೆಯ ಅಧಿಕಾರಿಗಳಿಗೆ,ಕಾರ್ಪೋರೇಟರ್ ಮತ್ತು ಅಯುಕ್ತರಿಗೆ ಗೊತ್ತಾಗುವುದಿಲ್ಲವೇ? ಖಂಡಿತ ಗೊತ್ತಿರುತ್ತವೆ. ಆದರೆ ಅವರಗಳು ನಾನು ಹಿಂದೆನೆ ಹೇಳಿದ ಹಾಗೆ ಅವರು ಕೆಟ್ಟದ್ದನು ನೋಡುವುದಿಲ್ಲ, ಕೆಟ್ಟದ್ದನ್ನು ಕೇಳುವುದಿಲ್ಲ, ಕೆಟ್ಟದ್ದನ್ನು ಮಾತನಾಡುವುದಿಲ್ಲ. ಕೇವಲ ಕೆಟ್ಟದ್ದನ್ನು ತೆಗೆದುಕೊಳ್ಳುತ್ತಾರೆ ಮೇಜಿನ ಅಡಿಯಲ್ಲಿ!

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Hanumantha Kamath June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Hanumantha Kamath June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search