• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

“2018”ರಲ್ಲಿ ರಾಗಿಣಿ ಕೊಟ್ಟ ಪಟ್ಟಿ ಎಲ್ಲಿದೆ ಕುಮಾರಸ್ವಾಮಿ?

Hanumantha Kamath Posted On September 16, 2020
0


0
Shares
  • Share On Facebook
  • Tweet It

ಇವತ್ತು ಕನ್ನಡದ ಮಾದಕ ನಟಿ ರಾಗಿಣಿ ಜೈಲಿನಲ್ಲಿ ಇದ್ದಾಳೆ. ಅವಳು ಈಗಾಗಲೇ ಅನೇಕ ರಾಜಕಾರಣಿಗಳ, ಸಿನೆಮಾ ಸ್ಟಾರ್ ಗಳ ಹೆಸರನ್ನು ಸಿಸಿಬಿಗೆ ಕೊಟ್ಟಿರಲೂಬಹುದು. ಅವರನ್ನು ಪೊಲೀಸರು ಬಂಧಿಸಲು ತಯಾರಿ ನಡೆಸಿರಲೂಬಹುದು. ಆದರೆ ಇದು 2020 ನೇ ಇಸವಿ. ಸರಿಯಾಗಿ ಎರಡು ವರ್ಷಗಳ ಹಿಂದಿನ ವಿಷಯಕ್ಕೆ ಬರೋಣ. ಆಗ ಪೊಲೀಸರು ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರಿನಲ್ಲಿ ಹಿಡಿದಿದ್ದರು. ಆಗಲೂ ರಾಗಿಣಿಯ ನೆರಳು ಆ ಡ್ರಗ್ಸ್ ನಲ್ಲಿ ಕೇಳಿಬಂದಿತ್ತು. ಪೊಲೀಸರು ಸೈಲೆಂಟಾಗಿ ರಾಗಿಣಿಯನ್ನು ಕರೆಸಿ ಗೌರವಯುತವಾಗಿ ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದರು. ಆಗಲೂ ಪೊಲೀಸರ ಎದುರು ರಾಗಿಣಿ ತನ್ನ ಜೊತೆ ಯಾವ ರಾಜಕಾರಣಿಗಳು ಇದ್ದಾರೆ, ಯಾವ ತಾರೆಯರು ಇದ್ದಾರೆ ಎಂದು ಹೇಳಿದ್ದಳು. ಆ ಪಟ್ಟಿಯನ್ನು ಮಾಡಿಕೊಂಡ ಪೊಲೀಸರು ನಂತರ ಏನು ಮಾಡಿದರೋ ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರಿಗೆ ಮಾತ್ರ ಗೊತ್ತು.

ಎರಡು ವರ್ಷಗಳಲ್ಲಿ ಸರಕಾರ ಬದಲಾಗಿದೆ. ಬಿಎಸ್ ವೈ ಮುಖ್ಯಮಂತ್ರಿಯಾಗಿದ್ದಾರೆ. ಈ ಡ್ರಗ್ಸ್ ಜಾಲವನ್ನು ಮಟ್ಟ ಹಾಕುತ್ತೇವೆ ಎಂದು ಗೃಹಸಚಿವರಾದಿಯಾಗಿ ಬಿಜೆಪಿ ಮುಖಂಡರು ಅಬ್ಬರಿಸುತ್ತಿದ್ದಂತೆ ಎಚ್ ಡಿಕೆ ನೇರವಾಗಿ ಬಿಎಸ್ ವೈಯವರನ್ನು ಭೇಟಿಯಾಗಿದ್ದಾರೆ. “ನಿಮ್ಮ ಸಚಿವರು ಕೊರೊನಾ ವೈಫಲ್ಯದಿಂದ ಜನರ ದಾರಿ ತಪ್ಪಿಸಲು ಹೀಗೆ ಅಬ್ಬರಿಸುತ್ತಿರಬಹುದು. ಆದರೆ ನನ್ನ ಬಳಿ ರಾಗಿಣಿ ಎರಡು ವರ್ಷಗಳ ಹಿಂದೆ ಕೊಟ್ಟ ಪಟ್ಟಿ ಇದೆ. ಅದನ್ನು ಹೊರಗೆ ತೆಗೆಯಲಾ?” ಎಂದು ಕೇಳಿರಬಹುದಾ ಎನ್ನುವ ಅನುಮಾನ ಈಗ ರಾಜ್ಯದ ಜನರನ್ನು ಕಾಡುತ್ತಿದೆ. ಈಗ ಬಿಎಸ್ ವೈ ಧೈರ್ಯ ಮಾಡಿ ಆ ಪಟ್ಟಿಯನ್ನು ತೆಗೆಯಲು ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು. ಯಾಕೆಂದರೆ ಈಗ ರಾಗಿಣಿ ಕೊಟ್ಟಿರುವ ಪಟ್ಟಿಗೂ ಆ ಪಟ್ಟಿಗೂ ಇರುವ ವ್ಯತ್ಯಾಸವನ್ನು ನೋಡಬೇಕು. ಒಂದು ವೇಳೆ ಎರಡರಲ್ಲೂ ಕಾಮನ್ ಜನ ಇದ್ದರೆ ಅವರು ಸಂಶಯವೇ ಇಲ್ಲ, ಇದರ ದೊಡ್ಡ ಕಿಂಗ್ ಪಿನ್ ಎಂದೇ ಅರ್ಥ. ಒಂದು ವೇಳೆ ಆವತ್ತಿನ ಪಟ್ಟಿಯ ಬಗ್ಗೆ ಯಾಕೆ ತನಿಖೆ ಮಾಡಿಲ್ಲ ಎಂದು ಸಿಎಂ ಸಿಸಿಬಿ ಉನ್ನತ ಅಧಿಕಾರಿಗಳನ್ನು, ಪೊಲೀಸ್ ಉನ್ನತ ಅಧಿಕಾರಿಗಳನ್ನು ಕೇಳಲು ಸಭೆ ನಡೆಸಬೇಕು. ಆಗ ಅವರು ಹೇಳುವ ಸತ್ಯವನ್ನು ಕೇಳಿಬಿಡಬೇಕು. ಬಿಜೆಪಿಯ ಮಟ್ಟಿಗೆ ಇದು ದೊಡ್ಡ ಇಶ್ಯೂ. ಯಾಕೆಂದರೆ ಆವತ್ತು ತನಿಖೆ ಮಾಡದಂತೆ ಕುಮಾರಸ್ವಾಮಿ ಅಥವಾ ಕಾಂಗ್ರೆಸ್ಸಿನ ಸಿದ್ಧರಾಮಯ್ಯ ಹೇಳಿದ್ದಾರೆ ಎಂದಾದರೆ ಅವರನ್ನು ಜನರ ಮುಂದೆ ಇಡಲು ಬಿಜೆಪಿಗೆ ಇದಕ್ಕಿಂತ ಸೂಕ್ತ ಸಮಯ ಬೇರೆ ಇರಲಿಕ್ಕಿಲ್ಲ. ಯಾಕೆಂದರೆ ಆವತ್ತು ನಡೆಯುತ್ತಿದ್ದದ್ದೇ ಇವರಿಬ್ಬರ ಮಾತು, ತಪ್ಪಿದರೆ ಡಿಕೆಶಿ. ಹಾಗಾದರೆ ಯಡಿಯೂರಪ್ಪ ಆವತ್ತಿನ ಲಿಸ್ಟ್ ಹೊರಗೆ ಹಾಕುತ್ತಾರಾ? ಯಾಕೋ ಡೌಟು. ಹೊಂದಾಣಿಕೆ ರಾಜಕಾರಣದಲ್ಲಿ ತನ್ನ ರಾಜಕೀಯ ಜೀವನದ ಕೊನೆಯ ಎರಡು ವರ್ಷಗಳನ್ನು ತೆಗೆಯಬೇಕು ಎಂದು ನಿರ್ಧರಿಸಿ ಹಾಗೆಯೇ ವರ್ತಿಸುತ್ತಿರುವ ಯಡ್ಡಿಗೆ ತನ್ನ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಕತ್ತಿ ಹಿಡಿಯುವ ಮನಸ್ಸೂ ಇಲ್ಲ, ವಯಸ್ಸೂ ಅದಕ್ಕಿಂತ ಮುಂಚೆ ಇಲ್ಲ.

ಆದರೆ ಜೀವರಾಜ್ ಆಳ್ವಾ ಅವರಿಗೆ ಆಗ ವಯಸ್ಸಿತ್ತು. ನೋಡಲು ಆಕರ್ಷಕ ಸಿನೆಮಾ ತಾರೆಯರಂತೆ ಹೊಳೆಯುತ್ತಿದ್ದರು. ಅವರದ್ದು ರಂಗೀನ ಬದುಕು. ಅವರಿಗೆ ರಾಜಕೀಯ ರಕ್ತದಲ್ಲಿ ಬಂದಿತ್ತು. ತಂದೆ ಡಾ.ನಾಗಪ್ಪ ಆಳ್ವ ಅವರು ಸುರತ್ಕಲ್ ನಲ್ಲಿ ಶಾಸಕರಾಗಿದ್ದರು, ಆ ಬಳಿಕ ಆರೋಗ್ಯ ಸಚಿವರೂ ಆಗಿದ್ದರು. ಸುರತ್ಕಲ್ ನಿಂದ ಗೆದ್ದು ಬೆಂಗಳೂರಿನಲ್ಲಿಯೇ ಅತೀ ಹೆಚ್ಚು ಸಮಯ ಇದ್ದ ಕಾರಣ ನಂತರದ ಚುನಾವಣೆಯಲ್ಲಿ ಪಿ.ವಿ. ಐತಾಳ್ ಎನ್ನುವಂತಹ ಸಾಮಾನ್ಯ ವಕೀಲರ ಎದುರು ಸೋತು ಹೋಗಿ ಶಾಶ್ವತವಾಗಿ ಬೆಂಗಳೂರು ಸೇರಿಬಿಟ್ಟಿದ್ದರು. ಅವರ ಮಗ ಜೀವರಾಜ್ ಆಳ್ವ ಒಂದು ರೀತಿಯಲ್ಲಿ ಜನತಾದಳದ ಪ್ರಮೋದ್ ಮಹಾಜನ್ ಇದ್ದ ಹಾಗೆ. ಎಲ್ಲದರಲ್ಲಿಯೂ ಒವರ್ ಬುದ್ಧಿವಂತರು. ಪ್ರಮೋದ್ ಮಹಾಜನ್ ರಂತೆ ಅವರು ಕೂಡ ಸಾಯುವ ವಯಸ್ಸಲ್ಲದ ಸಮಯದಲ್ಲಿ ಸತ್ತರು. ಈಗ ಅವರ ಮಗ ಆದಿತ್ಯ ಆಳ್ವ. ತಂದೆ, ತಾತ ಮಾಡಿದ ಹಣ, ಆಸ್ತಿ ಇದೆ. ಖರ್ಚು ಮಾಡುವುದು ಗೊತ್ತಾಗದೇ ತಂದೆ ಮಾಡಿಟ್ಟಿದ್ದ ರೆಸಾರ್ಟ್ ಅನ್ನು ದಿನಕ್ಕೆ ಎಂಟು ಲಕ್ಷ ಬಾಡಿಗೆಯಂತೆ ಕೊಟ್ಟು ಅಲ್ಲಿ ಏನೂ ಬೇಕಾದರೂ ಅದು ಮಾಡಲು ಬಿಟ್ಟು ಈಗ ಎಸ್ಕೇಪ್ ಆಗಿದ್ದಾರೆ. ನಾನು ಒಂದು ಹೇಳುವುದು ಏನೆಂದರೆ ರೆಸಾರ್ಟ್ ಗಳನ್ನು ಬಾಡಿಗೆಗೆ ಕೊಡುವ ಅದರ ಮಾಲೀಕರು, ಅದರ ಮಾಲೀಕರ ಏಜೆಂಟರು ಹಣ ಬರುತ್ತದೆ ಎನ್ನುವ ಕಾರಣಕ್ಕೆ ಕಣ್ಣು ಮುಚ್ಚಿ ಕೊಟ್ಟರೆ ನಾಳೆ ಅಲ್ಲಿ ಕೂಡ ಗಾಂಜಾ, ಡ್ರಗ್ಸ್ ಸೇವನೆ, ಅದು ಇದು ಎಂದು ನಡೆದು ಯಾವುದಾದರೂ ಪೊಲೀಸ್ ಅಧಿಕಾರಿ ರೇಡ್ ಮಾಡಿದರೆ ಆಗ ಮಾಲೀಕರೇ ಹೊಣೆಗಾರರಾಗಬೇಕಾಗುತ್ತದೆ. ಯಾವುದಾದರೂ ಪ್ರಭಾವಿ ವ್ಯಕ್ತಿಗಳ, ರಾಜಕಾರಣಿಗಳ, ಅವರ ಮಕ್ಕಳ ರೆಸಾರ್ಟ್ ಎಂದು ಅಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿಲ್ಲದೇ ಪೊಲೀಸರು ಮೌನ ವಹಿಸಿರಬಹುದು. ಅಕಸ್ಮಾತ್ ಆಗಿ ಯಾರಿಗೂ ಕ್ಯಾರ್ ಮಾಡದ ಪೊಲೀಸ್ ಕಮೀಷನರ್ ಮುಗಿಬಿದ್ದರೆ?

0
Shares
  • Share On Facebook
  • Tweet It




Trending Now
ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
Hanumantha Kamath August 30, 2025
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
Hanumantha Kamath August 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!
    • ತಿಮರೋಡಿ ಮನೆ ಮೇಲೆ ಬೆಳ್ಳಂಬೆಳಗ್ಗೆ SIT ದಾಳಿ.. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪ!
  • Popular Posts

    • 1
      ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • 2
      ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • 3
      ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • 4
      ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • 5
      ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..

  • Privacy Policy
  • Contact
© Tulunadu Infomedia.

Press enter/return to begin your search