• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಭ್ರಷ್ಟರನ್ನು ಎಷ್ಟು ದಿನ ಪಾಲಿಕೆಯಲ್ಲಿ ಉಳಿಸುತ್ತಿರಿ ಎನ್ನುವುದರ ಮೇಲೆ ಕೆಲವರ ಭವಿಷ್ಯ ನಿಂತಿದೆ!!

Hanumantha Kamath Posted On September 30, 2020
0


0
Shares
  • Share On Facebook
  • Tweet It

ಒಬ್ಬ ವ್ಯಕ್ತಿ ಕಡುಭ್ರಷ್ಟನಾದರೆ ಮಾತ್ರ ಆತ ಆರ್ ಟಿಒದಲ್ಲಿ ಇರಲು ಸಾಧ್ಯ ಎನ್ನುವ ಮಾತು ನಿಜವೆನಿಸಿದೆ. ಅಪ್ಪಟ ಸಸ್ಯಹಾರಿಗೆ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಏನು ಕೆಲಸ ಎನ್ನುವ ಹಾಗೆ ಪ್ರಾಮಾಣಿಕ ಅಧಿಕಾರಿ ಎನಿಸಿಕೊಂಡವರು ಹೇಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಆಗಲು ಸಾಧ್ಯ ಎಂದು ಹೇಳಬೇಕಾಗುತ್ತದೆ. ಒಬ್ಬ ಅಧಿಕಾರಿ ಎಆರ್ ಟಿಒ ಆಗಿದ್ದಾಗ ಆ ಅಧಿಕಾರಿಯ ಮೇಲೆ ರೇಡ್ ಆಗಿ ಲಕ್ಷಗಟ್ಟಲೆ ಹಣ ವಶಪಡಿಸಿಕೊಂಡು ಆ ಮನುಷ್ಯ ಭ್ರಷ್ಟ ಎಂದು ಅನಿಸಿಕೊಂಡ ಮೇಲೆಯೇ ನಮ್ಮ ಮಂಗಳೂರಿನಲ್ಲಿ ಆರ್ ಟಿಒ ಆಗಲು ಸಾಧ್ಯ ಎಂದು ನಮ್ಮ ಜನಪ್ರತಿನಿಧಿಗಳು ಅಂದುಕೊಂಡಿರಬೇಕು. ಅದಕ್ಕಾಗಿ ಅವರಿಗೆ ಮಂಗಳೂರಿನಲ್ಲಿ ಆರ್ ಟಿಒ ಆಗಲು ಅವಕಾಶ ಸಿಕ್ಕಿದೆ.

ಭಾರತೀಯ ಜನತಾ ಪಾರ್ಟಿಯ ಸರಕಾರ ಕಳೆದ ಬಾರಿ ಅಧಿಕಾರಕ್ಕೆ ಬಂದಿದ್ದಾಗ ಆಗ ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಮಾನ್ಯ ಸುರೇಶ್ ಕುಮಾರ್ ಅವರು ಒಂದು ನಿಯಮ ಜಾರಿಗೆ ತಂದಿದ್ದರು. ಇನ್ನು ಮುಂದೆ ಒಬ್ಬ ಅಧಿಕಾರಿ ಒಂದೇ ಕಡೆ ಹಲವು ವರ್ಷ ಇರುವಂತಿಲ್ಲ ಎಂದು ಹೇಳಿದ್ದರು. ಅದರ ಕಥೆ ಏನಾಯಿತು ಎಂದು ನಂತರ ಹೇಳುತ್ತೇನೆ. ಆದರೆ ನಮ್ಮ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಷಯ ತೆಗೆದುಕೊಳ್ಳಿ. ಅಲ್ಲಿಯೂ ಟ್ರಾನ್ಸಫರ್ ಆಗುತ್ತದೆ. ಅಲ್ಲಿ ಟ್ರಾನ್ಸಫರ್ ಹೇಗೆ ಎಂದರೆ ಒಂದು ಟೇಬಲಿನವರು ಕೆಲವು ವರ್ಷಗಳ ನಂತರ ಇನ್ನೊಂದು ಟೇಬಲ್ಲಿಗೆ ಶಿಫ್ಟ್ ಆಗುತ್ತಾರೆ. ಈ ಟೇಬಲ್ಲಿನಲ್ಲಿ ಇದ್ದವರು ಆ ಟೇಬಲ್ಲಿಗೆ, ಆ ಟೇಬಲ್ಲಿನಲ್ಲಿ ಇದ್ದವರು ಈ ಟೇಬಲ್ಲಿಗೆ ಶಿಫ್ಟ್ ಆಗುತ್ತಾರೆ. ಅಲ್ಲಿ ಅಷ್ಟೇ ಆಗುವುದು, ಅದನ್ನು ಕೇಳುವವರು ಯಾರೂ ಇಲ್ಲ. ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಬ್ಬ ಅಧಿಕಾರಿ ಕೆಲಸಕ್ಕೆ ಸೇರಿದರೆ ಆತ ನಿವೃತ್ತಿಯಾಗುವ ತನಕ ಅಲ್ಲಿಯೇ ಇರುವ ಸಂಪ್ರದಾಯ ಇತ್ತು. ಆದ್ದರಿಂದ ತಾವು ಎಷ್ಟೇ ಲಂಚ ತೆಗೆದುಕೊಂಡರೂ ಏನೂ ಆಗುವುದಿಲ್ಲ ಎನ್ನುವ ಧೈರ್ಯ ಅವರಲ್ಲಿತ್ತು. ಇದರಿಂದ ಅವರು ಮಾಡಿದ್ದೇ ನಿಯಮ, ಆಡಿದ್ದೇ ಆಟ ಎನ್ನುವಂತೆ ಆಗಿತ್ತು. ಅದನ್ನು ಬದಲಾಯಿಸಿದವರೇ ಸಚಿವ ಸುರೇಶ್ ಕುಮಾರ್. ರಾಜ್ಯದಲ್ಲಿರುವ ಒಟ್ಟು ಏಳು ಪಾಲಿಕೆಯಲ್ಲಿ ಆಂತರಿಕ ವರ್ಗಾವಣೆ ಮಾಡಲೇಬೇಕು ಎನ್ನುವ ನಿಯಮ ಜಾರಿಗೆ ಬಂತು. ಆದರೆ ಅದಾಗಿ ಹತ್ತು ವರ್ಷಗಳಾಗಿವೆ. ಎಷ್ಟು ಜನ ವರ್ಗಾವಣೆಯಾಗಿದ್ದಾರೆ ಎಂದು ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ಗೊತ್ತಿದೆಯಾ? ಈ ಬಗ್ಗೆ ನಂತರ ರಾಜ್ಯದಲ್ಲಿ ಯಾವ ಸರಕಾರ ಕೂಡ ಕ್ರಮ ತೆಗೆದುಕೊಂಡಿಲ್ಲ, ಯಾವ ಜನಪ್ರತಿನಿಧಿಯೂ ಬಾಯಿ ತೆರೆದಿಲ್ಲ. ಇದಕ್ಕೆ ಏನು ಕಾರಣ? ಎಲ್ಲರೂ ಒಳಗೊಳಗೆ ಭ್ರಷ್ಟ ಅಧಿಕಾರಿಗಳೊಂದಿಗೆ ಸೇರಿಕೊಂಡಿದ್ರಾ? ಸರಿಯಾಗಿ ನೋಡಿದರೆ ಈ ನಿಯಮವನ್ನು ಪ್ರತಿ ಸರಕಾರ ಕೂಡ ಅನುಷ್ಟಾನಕ್ಕೆ ತರಬೇಕಿತ್ತು. ಯಾಕೆಂದರೆ ಸರಕಾರದ ಈ ನಿಯಮದ ವಿರುದ್ಧ ಪಾಲಿಕೆ ಅಧಿಕಾರಿಗಳು ಒಟ್ಟಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೆ ನ್ಯಾಯಾಲಯ ಸರಕಾರ ತೀರ್ಮಾನವೇ ಸರಿ ಎಂದು ತೀರ್ಪು ನೀಡಿದ ಕಾರಣ ಸರಕಾರಿ ಅಧಿಕಾರಿಗಳಿಗೆ ತೀವ್ರ ಮುಜುಗರ ಉಂಟಾಗಿತ್ತು.
ಇನ್ನು ಹೀಗೆ ಹಲವರು ಟ್ರಾನ್ಸಫರ್ ಆಗದೇ ಇದ್ದ ಕಾರಣ ಪಾಲಿಕೆಗೆ ಪ್ರತಿ ತಿಂಗಳು ಹೆಚ್ಚುವರಿ ಆರ್ಥಿಕ ಹೊರೆ ಕೂಡ ಬೀಳುತ್ತಿದೆ. ಅದೇನೆಂದರೆ ಅನೇಕ ಇಂಜಿನಿಯರ್ ಗಳು ಬೇರೆ ಬೇರೆ ಇಲಾಖೆಯಿಂದ ಎರವಲು ಸೇವೆಯ ಮೇಲೆ ಪಾಲಿಕೆಗೆ ಬಂದಿದ್ದಾರೆ. ಅವರ ಕರ್ತವ್ಯ ಮುಗಿದ ಬಳಿಕ ಅವರು ತಮ್ಮ ಮಾತೃ ಇಲಾಖೆಗೆ ಮರಳಬೇಕು. ಆದರೆ ಅಚ್ಚುಕಟ್ಟಾದ ಹುಲ್ಲುಗಾವಲು ಬಿಟ್ಟು ಯಾವ ಮೇಕೆ, ಆಡು ಬೇರೆ ಕಡೆ ಹೋದಿತು? ಇಲ್ಲಿ ಬಂದು ಝಂಡಾ ಊರಿರುವ ಇಂಜಿನಿಯರ್ ಗಳಿಗೆ ತಮ್ಮ ಮಾತೃ ಇಲಾಖೆಯಲ್ಲಿ ಕೊಡುತ್ತಿದ್ದ ಸಂಬಳವನ್ನೇ ಪಾಲಿಕೆ ಕೊಡಬೇಕಾಗುತ್ತದೆ. ಅಲ್ಲಿ ಒಬ್ಬ ಇಂಜಿನಿಯರ್ ಗೆ ಉದಾಹರಣೆಗೆ 60 ಸಾವಿರ ಇದ್ರೆ, ಪಾಲಿಕೆಯಲ್ಲಿ ಅದೇ ಕ್ಯಾಟಗರಿಯ ಇಂಜಿನಿಯರ್ ಗೆ 30 ಸಾವಿರ ಇದ್ರೆ ಪಾಲಿಕೆ ಎರವಲು ಸೇವೆಯ ಇಂಜಿನಿಯರ್ ಗೆ 60 ಸಾವಿರ ನೀಡಬೇಕಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಒಕೆ. ಆದರೆ ಮಾವನ ಮನೆಗೆ ಬಂದ ಅಳಿಯನಂತೆ ಕೆಲವರು ಪಾಲಿಕೆಯಲ್ಲಿಯೇ ಉಳಿದುಬಿಟ್ಟಿದ್ದಾರೆ. ಲೋಕೋಪಯೋಗಿ ಅಥವಾ ವಾಟರ್ ಬೋರ್ಡ್ ಇಂಜಿನಿಯರ್ ಗಳಿಗೆ ಇಡೀ ವರ್ಷ ಸಂಬಳ ಕೊಟ್ಟು ಸಾಕುವ ಅಗತ್ಯ ಪಾಲಿಕೆಗೆ ಏನಿದೆ?

ಇನ್ನು 25 ವರ್ಷದಿಂದಲೂ ಇಲ್ಲಿಯೇ ಇರುವ ಅಧಿಕಾರಿಗಳಿದ್ದಾರೆ. ನಿವೃತ್ತರಾಗಿ ಮೊಮ್ಮೊಕ್ಕಳೊಂದಿಗೆ ಆಟವಾಡಿ ಯುವಕರಿಗೆ ಅವಕಾಶ ಕೊಡಬೇಕಾದ ಅಧಿಕಾರಿಗಳನ್ನು ಕರೆಸಿಕೊಂಡಿರುವ ಪಾಲಿಕೆಯಲ್ಲಿ ಬಿಜೆಪಿ ಸರಕಾರ ಬಂದು ವರ್ಷ ಆಗುತ್ತಾ ಬಂದಿದೆ. ಇಬ್ಬರು ಶಾಸಕರ ಕಚೇರಿ ಕೂಡ ಪಾಲಿಕೆ ಕಟ್ಟಡದಲ್ಲಿಯೇ ಇದೆ.

ಸಾಮಾನ್ಯವಾಗಿ ಸರಕಾರ ಬದಲಾದಾಗ ಎಲ್ಲಾ ಕಡೆ ಅಧಿಕಾರಿಗಳ ಬದಲಾವಣೆ ಆಗುತ್ತದೆ. ಆದರೆ ಯಡಿಯೂರಪ್ಪನವರ ಸರಕಾರ ಬಂದು ಒಂದೂವರೆ ವರ್ಷ ಆದರೂ ಅದೇ ಭ್ರಷ್ಟ ಮುಖಗಳು ಇವೆ. ಯಾಕೆಂದರೆ ಭ್ರಷ್ಟರು ಎಲ್ಲಿಯೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ. ಯಾಕೆಂದರೆ ಅವರಿಗೆ ತಾವು ತಿನ್ನುವುದರಲ್ಲಿ ಪಾಲು ಕೊಡುವುದರಲ್ಲಿ ಮಾತ್ರ ನಿಷ್ಟೆ ಇದೆ. ಅಂತವರು ಇಲ್ಲಿಯೇ ಉಳಿದರೆ ಶಾಸಕರು ಕೂಡ ಅಡ್ಜಸ್ಟ್ ಆಗಿದ್ದಾರೆ ಎಂದು ಜನ ಅಂದುಕೊಳ್ಳುತ್ತಾರೆ. ಉಳಿದದ್ದು ಎಲ್ಲರಿಗೂ ಖುಷಿ ಕೊಡೋಣ ಎಂದು ನಿರ್ಧರಿಸಿದವರಿಗೆ ಬಿಟ್ಟಿದ್ದು!

 

0
Shares
  • Share On Facebook
  • Tweet It




Trending Now
ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
Hanumantha Kamath December 15, 2025
ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
Hanumantha Kamath December 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
  • Popular Posts

    • 1
      ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • 2
      ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • 3
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!

  • Privacy Policy
  • Contact
© Tulunadu Infomedia.

Press enter/return to begin your search