• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಗಾಂಧಿ-ಶಾಸ್ತ್ರಿಯವರು ಮಡದಿ, ಮಕ್ಕಳಿಗಾಗಿ ಏನೂ ಮಾಡಿಲ್ಲ, ಇಂದಿನವರು ತಮ್ಮ ಪ್ರತಿ ಕಟ್ಟಡಕ್ಕೂ ಹೆಸರಿಡುತ್ತಾರೆ!

Tulunadu News Posted On October 2, 2020
0


0
Shares
  • Share On Facebook
  • Tweet It

ಇವತ್ತು ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮದಿನ. ಇಬ್ಬರೂ ಸರಳತೆಯನ್ನೇ ಮೈಗೂಡಿಸಿಕೊಂಡವರು. ಒಬ್ಬರು ಅಧಿಕಾರದಿಂದ ದೂರ ಇದ್ದು ಸಿಂಪಲ್ ಆಗಿ ಬದುಕಿ ತೋರಿಸಿದ್ದರು. ಇನ್ನೊಬ್ಬರು ಅಧಿಕಾರ ಕೈಯಲ್ಲಿ ಇದ್ದರೂ ಕೂಡ ತಮ್ಮತನವನ್ನು ಕಳೆದುಕೊಳ್ಳದೆ ಯಾರ ಮುಲಾಜಿಗೂ, ಹಂಗಿಗೂ, ಕೃಪಾಕಟಾಕ್ಷಕ್ಕೂ ಒಳಗಾಗದೆ ಸರಳ ಜೀವನವನ್ನು ಅಪ್ಪಿಕೊಂಡು ಬದುಕಿದರು. ಒಬ್ಬ ವ್ಯಕ್ತಿ ಎಷ್ಟು ಒಳ್ಳೆಯವನು ಎಂದು ಗೊತ್ತಾಗಬೇಕಿದ್ದರೆ ಅವನ ಕೈಗೆ ಅಧಿಕಾರ ಕೊಟ್ಟು ನೋಡು ಎನ್ನುತ್ತದೆ ಪ್ರಾಜ್ಞರ ವಲಯ.

ಯಾಕೆಂದರೆ ಅಧಿಕಾರ ಕೈಗೆ ಸಿಕ್ಕಿದ ಮನುಷ್ಯ ಅದನ್ನು ತನ್ನ ಹಿತ ಸಾಧನೆಗಾಗಿ ಬಳಸಿಕೊಳ್ಳುತ್ತಾನೆ ವಿನ: ಸಮಾಜಕ್ಕಾಗಿ ಅಲ್ಲ ಎನ್ನುವುದು ಸಾಮಾನ್ಯ ಚಿಂತನೆ. ಆ ನಿಟ್ಟಿನಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿಯವರು ಸ್ವಾತಂತ್ರ್ಯ ಹೋರಾಟಗಾರರಾಗಿ ದೇಶಪ್ರೇಮ ಮೆರೆದರು ನಿಜ, ಅಷ್ಟೇ ಆಗಿದ್ದರೆ ಅವರನ್ನು ದೇಶ ಇಷ್ಟು ಕೊಂಡಾಡುತ್ತಿರಲಿಲ್ಲ, ಅದರೊಂದಿಗೆ ಶಾಸ್ತ್ರಿ ದೇಶದ ಚುಕ್ಕಾಣಿಯನ್ನು ಕೂಡ ಹಿಡಿದು, ಒಂದೇ ಒಂದು ಭ್ರಷ್ಟಾಚಾರದ ಆರೋಪವನ್ನು ಕೂಡ ತನ್ನ ಹತ್ತಿರ ಸುಳಿಯಲು ಬಿಡದೆ, ತನ್ನ ಪತ್ನಿ, ಮಕ್ಕಳಿಗಾಗಿ ಆಸ್ತಿ ಮಾಡದೆ, ಆ ಆಸ್ತಿಯಲ್ಲಿ ಲಾಭ ಮಾಡಿಕೊಳ್ಳಲು ಅನಧಿಕೃತ ನಿರ್ಮಾಣ ಮಾಡಿಕೊಳ್ಳದೆ, ಅದನ್ನು ಉಳಿಸಿಕೊಳ್ಳಲು ಬೇರೆ ಪಕ್ಷದವರ ಮೊರೆ ಹೋಗದೆ, ಮೊರೆ ಹೋಗುವ ಅಗತ್ಯ ಬರಬಹುದು ಎಂದು ಬೇರೆ ಪಕ್ಷದವರಿಗೆ ಆ ಪಕ್ಷದ ವಿಶಾಲ ಕಟ್ಟಡ ಕಟ್ಟಲು ಜಾಗ ಮಂಜೂರಾತಿ ಮಾಡದೆ, ತನ್ನ ಪಕ್ಷದಲ್ಲಿ ಸ್ಥಾನಮಾನ ಸಿಗಲ್ಲ ಎಂದಾಗ ಬೇರೆ ಪಕ್ಷಕ್ಕೆ ಹಾರಲು ಸಿದ್ಧತೆ ನಡೆಸದೆ, ತಾನು ಸಿಕ್ಕಿಬೀಳುವುದಿಲ್ಲ ಎಂದು ಅನಿಸಿ ತನ್ನ ಖಾತೆಯಲ್ಲಿ ಅಧಿಕಾರ ಸಿಕ್ಕಿದ ಕೆಲದಿನಗಳಲ್ಲಿಯೇ ಏನೋ ಮಾಡಲು ಹೋಗಿ ಮಂತ್ರಿಗಿರಿಯಿಂದ ಎತ್ತಂಗಡಿ ಆಗದಂತೆ ಬದುಕಿದರಲ್ಲ ಶಾಸ್ತ್ರಿ ಇದೇನೂ ಚಿಕ್ಕ ವಿಷಯವೇ. ಇವತ್ತಿನ ದಿನಗಳಲ್ಲಿ ಅಧಿಕಾರ ಸಿಕ್ಕಿದ ತಕ್ಷಣ ಉಣ್ಣಲು ಕುಳಿತುಕೊಳ್ಳುವ ರಾಜಕಾರಣಿಗಳ ಎದುರು ಲಾಲ್ ಬಹುದ್ದೂರ್ ಶಾಸ್ತ್ರಿಯಂತವರು ಒಬ್ಬಿಬ್ಬರಾದರೂ ಇದ್ದರೆ ಅದು ನಮ್ಮ ದೇಶದ ಪುಣ್ಯ. ಶಾಸ್ತ್ರಿಯವರು ಸಾಯುವ ದಿನಗಳಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣಕ್ಕೂ, ಇವತ್ತಿನ ದಿನಗಳಲ್ಲಿ ಶಾಸಕನಿಂದ ಕೇಂದ್ರ ಮಂತ್ರಿಯಾಗುವ ತನಕ ಕೆಲವು ವ್ಯಕ್ತಿಗಳು ತಮ್ಮ ಸ್ವಜಿಲ್ಲೆಯಿಂದ ಹಿಡಿದು, ಪಕ್ಕದ ಜಿಲ್ಲೆ, ರಾಜಧಾನಿ, ಅಧಿಕಾರದಲ್ಲಿ ಇರುವ ಸ್ಥಾನಗಳಲ್ಲಿ ಮಾಡುವ ಆಸ್ತಿಯಿದೆಯಲ್ಲ ಅದೇನು ಕಡಿಮೆಯಾ. ಅವರೇ ಇವತ್ತು ಮೈಕಿನ ಎದುರು ನಿಂತು ಶಾಸ್ತ್ರಿಯವರನ್ನು ನೆನೆದು ಕಣ್ಣೀರಿಡುತ್ತಾರೆ. ಶಾಸ್ತ್ರಿಯವರ ಜೀವನದ ಒಂದು ಶೇಕಡಾದಷ್ಟು ಸಾಧನೆಯನ್ನೂ ಮಾಡದ, ಆದರೆ ಅವರಿಗಿಂತ ಕೋಟಿಗಟ್ಟಲೆ ಹೆಚ್ಚು ಆಸ್ತಿಯನ್ನು ಮಾಡಿದಂತವರೇ ಶಾಸ್ತ್ರಿಜಿಯಂತವರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ ಎಂದು ವೇದಿಕೆಯಲ್ಲಿ ನಿಂತು ಭಾಷಣ ಬಿಡುತ್ತಾ ಶಾಲೆಯಲ್ಲಿ ಇವರ ಭಾಷಣ ಕೇಳಲು ಕುಳಿತುಕೊಂಡ ಮಕ್ಕಳಿಗೆ ಮಂಗ ಮಾಡುತ್ತಾರೆ. ಶಾಸ್ತ್ರಿಜಿಯವರು ಯಾರದ್ದೋ ಷಡ್ಯಂತ್ರಕ್ಕೆ ಬಲಿಯಾಗಿ ವಿಷಪ್ರಾಶಣವಾಗಿ ಸತ್ತು ಹೋಗಿದ್ದರೆ ಇವತ್ತಿಗೆ ಕೆಲವರು ನಮ್ಮ ಜೀವನದಿಗಳಿಗೆ ವಿಷ ಹಾಕಿ ನಮ್ಮ ನದಿಯನ್ನು ಬತ್ತಿಸುತ್ತಿದ್ದಾರೆ. ಇಂತಹ ರಾಜಕಾರಣಿಗಳ ನಡುವೆ ನಾವು ಗಾಂಧಿಜಿಯವರನ್ನು, ಲಾಲ್ ಬಹುದ್ದೂರ್ ಶಾಸ್ತ್ರಿಯವರನ್ನು ಹುಡುಕುವ ಪ್ರಯತ್ನ ಮಾಡಲು ಸಾಧ್ಯವೇ?

ಹಾಗಂತ ಈ ವ್ಯವಸ್ಥೆಯೇ ಸರಿಯಿಲ್ಲ, ನಮ್ಮಂತಹ ಕೆಲವರಿಂದ ಏನೂ ಮಾಡಲು ಸಾಧ್ಯವಿದೆ ಎಂದು ನಾವು ಕೈಕಟ್ಟಿ ಕುಳಿತರೆ ನಮಗೆ ಜನ್ಮ ಕೊಟ್ಟ ಭಾರತಾಂಬೆಯ ಈ ಪುಣ್ಯದ ನೆಲ, ಜಲಕ್ಕೆ ನಾವು ಅಪಚಾರ ಮಾಡಿದಂತೆ. ತಪ್ಪು ಎಲ್ಲೇ ಆಗಲಿ ಎಂದು ನಿಂತು ಪ್ರತಿಭಟಿಸುವ ಸಂಕಲ್ಪವನ್ನು ಇವತ್ತು ನಾವು ಪ್ರತಿಯೊಬ್ಬರು ಕೈಗೊಳ್ಳೋಣ. ಅದಕ್ಕೆ ಗಾಂಧಿ-ಶಾಸ್ತ್ರೀ ಜನ್ಮದಿನವೇ ಪ್ರೇರಣೆಯಾಗಲಿ. ನನ್ನ ಹೋರಾಟವಂತೂ ನಿರಂತರವಾಗಿರುತ್ತದೆ. ಅಂದ ಹಾಗೆ ಎಲ್ಲ ಸನ್ಮಿತ್ರರಿಗೂ ಗಾಂಧಿ-ಶಾಸ್ತ್ರೀ ಜನ್ಮದಿನದ ಶುಭಾಶಯಗಳು

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search