ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ!
ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಅನೇಕ ವರ್ಷಗಳ ಹೋರಾಟ ಮಾಡಿದರೂ ಯಾವುದೇ ಪಲ ಸಿಗಲಿಲ್ಲ. ಈ ಕಾರಣ ತುಳುನಾಡಿನ ಪ್ರಬಲವಾದ ರಾಜ್ಯಕೀಯ ಪಕ್ಷಗಳು ಹಾಗು ಸಂಘಟನೆಗಳು ಇದರ ಬಗೆ ಗಂಭೀರವಾಗಿ ಚಿಂತಿಸದಿರುವುದು ಹಾಗು ತುಳು ಒಂದು ವೋಟ್ ಬ್ಯಾಂಕು ಆಗದಿರುವುದು. ಇದನ್ನು ಮನಗಂಡು ಯಾವುದೇ ರಾಜ್ಯಕೀಯ ಹಾಗು ಧಾರ್ಮಿಕ ಬೆಂಬಲವಿರುದ 24/7 ತುಳುವಿನ ಬಗೆ ಹಾಗು ತುಳುನಾಡಿನ ಇಂದಿನ ಪರಿಸ್ಥಿತಿಯ ಬಗೆ ಚಿಂತೆ ಹೊಂದಿರುವ ಯುವಕರ ಪಡೆಯಾದ ಜೈ ತುಳುನಾಡ್ ಸಂಘಟನೆ ಇದರ ಬಗೆ ನೇರವಾಗಿ ಪ್ರಧಾನಿಗೆ ತಲುಪಲು ಒಂದು ಟ್ವಿಟರ್ ಹೋರಾಟದ ಹಾದಿ ಹಿಡಿಯಬೇಕಾಯಿತು.. ಜೈ ತುಳುನಾಡು ಸಂಘಟನೆ ಇವತ್ತಿಗೆ 3ನೇ ವರ್ಷದ ಆಚರಣೆ ಸಂಭ್ರಮವನ್ನು ಯಾವುದೇ ಸಾರ್ವಜನಿಕ ಕಾರ್ಯಕ್ರಮ ಮಾಡದೇ ಇಂತಹ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ..
ತುಳು ಬಾಷೆಯು ಅವನತಿಯ ಕಡೆಗೆ ಸಾಯಲು ಕಾರಣ ತುಳುನಾಡಿನ ಬುದ್ಧಿವಂತರೇ ಕಾರಣ. ತಮ್ಮ ಊರಿನಲ್ಲಿ ತಮ್ಮ ಮಾತ್ರ ಬಾಷೆಯ ಬೆಳವಣಿಗೆಗೆ ಚಿಂತಿಸದಿರುವುದು ಹಾಗು ಪ್ರಬಲ ಭಾಷೆಗಳಾದ ಕನ್ನಡ ಮಲಯಾಳಂ ಹಾಗು ಇಂಗ್ಲಿಷ್ ನ ಮೋಹದಿಂದ ತುಳು ತನ್ನ ವ್ಯಾಪ್ತಿಯನ್ನು ದಿನದಿಂದ ದಿನಕ್ಕೆ ಕಡಿಮೆಗೊಳಿಸುತ್ತಿದೆ. ಇಲ್ಲಿ ವ್ಯಾಪಕ ಕನ್ನಡಿಕರಣವಾದರೆ ಪಕ್ಕದ ರಾಜ್ಯದಲ್ಲಿ ಮಲಯಾಳಿಕಣ ಇದನ್ನು ಪ್ರಶ್ನೆ ಮಾಡುವ ಯಾವುದೇ ಗಂಡೆದಯ ಪಕ್ಷಗಳಿಲ್ಲ ಹಾಗು ತುಳು ಸಂಘಟನೆಗಳು ಇಲ್ಲ. ಇಂದು ತುಳು ಬಾಷೆಯು ತನ್ನ ಉಳಿವು ಅಳುವಿನ ಪ್ರಶ್ನೆಯಾಗಿದೆ.
ತುಳುಬಾಷೆಯು ಅವನತಿಯ ಕಡೆಗೆ ಸಾಗಲು ಇನ್ನೂ ಅನೇಕ ಶೇಕಡ 25 ರಷ್ಟು ಪುರಾತನ ಶುದ್ಧ ತುಳುಪದಗಳು ನಾಶವಾಗಿವೆ ಅವುಗಳ ಜಾಗಕ್ಕೆ ಕನ್ನಡ ಪದಗಳು ಬಂದಿವೆ! ಇವುಗಳು ತುಳು ಪದ ಎಂದು ಜನರು ನಂಬುವುದಿಲ್ಲ. ಒಂದು ಬಾಷೆ ಉಳಿಯಲು ಬೆಳೆಯಲು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ, ಇದು ಮಕ್ಕಳಿಗೆ ತುಳುವಿನ ಬಗೆಗೆ ಅದರ ಆಳವನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಇತಿಹಾಸವನ್ನು ನೋಡಿದರೆ ರಾಜ್ಯಾಡಳಿತ ಇಲ್ಲದ ಅನೇಕ ಭಾಷೆಗಳು ನಾಶವಾಗುದನ್ನು ನಾವು ನೋಡಿದ್ದೇವೆ. ಕರ್ನಾಟಕದ ಅನೇಕ ಚಿಕ್ಕ ಚಿಕ್ಕ ಭಾಷೆಗಳು ಸಾಯಲು ಕಾರಣ ಇದೇ ಅನಿಸುತ್ತದೆ, ಕರ್ನಾಟಕ ಎಂದೆ ಕನ್ನಡ ಮಾತ್ರ ಎನ್ನುವ ಮನಸ್ಥಿತಿಯು ಆಡಳಿತ ಮಾಡುವ ಜನರಿಗೆ ಇರುವಾಗ ಕೊಡವ, ತುಳು ಭಾಷೆಗಳು ಹೇಗೆ ಉದ್ಧಾರವಾಗುತ್ತದೆ? ಕರ್ನಾಟಕ ಸರಕಾರ ಕನ್ನಡಕ್ಕೆ ಕೊಡುವ ಮಹತ್ವದ ಶೇಕಡ 5 ರಷ್ಟು ತುಳುವಿಗೆ ಕೊಟ್ಟಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.
ವಿ.ಸೂ. ಈ ಹೋರಾಟದ ಹಿಂದೆ ಯಾವುದೇ ರಾಜ್ಯಕೀಯ ಪಕ್ಷಗಳು ಇಲ್ಲ, ನಮ್ಮ ಹೋರಾಟಕ್ಕೆ ಅನೇಕ ಕನ್ನಡ ಸಂಘಟನೆಗಳು ಬೆಂಬಲಿಸಿದೆ. ಅನೇಕ ಮಾಧ್ಯಮಗಳು ತುಳುನಾಟಕ- ಸಿನಿಮರಂಗದ ಕಲಾವಿದರು ಬೆಂಬಲವಾಗಿ ನಿಂತಿವೆ.
ಕಿರಣ್ ತುಳುವೆ
Leave A Reply