ಶಿಲಾನ್ಯಾಸದ ಕಲ್ಲಿಗೆ ಧೂಳು ಹಿಡಿಯಿತೇ ವಿನ: ರಸ್ತೆ ಸಂಪೂರ್ಣ ಅಗಲಗೊಳ್ಳಲೇ ಇಲ್ಲ!
ಮಂಗಳೂರಿನ ಟಿಎಂಎ ಪೈ ಹಾಲಿನಲ್ಲಿ ಒಂದು ಮದುವೆ ಇತ್ತು. ಅದಕ್ಕೆ ರಾಜ್ಯದ ಆಗಿನ ಕಾಂಗ್ರೆಸ್ ಸರಕಾರದ ನಗರಾಭಿವೃದ್ಧಿ ಸಚಿವರಾಗಿರುವ ರೋಶನ್ ಬೇಗ್ ಅವರು ಬಂದಿದ್ದರು. ಅದರ ನಂತರ ಉಳ್ಳಾಲದಲ್ಲಿಯೂ ಒಂದು ಖಾಸಗಿ ಕಾರ್ಯಕ್ರಮ ಅವರಿಗೆ ಇತ್ತು. ಅದನ್ನು ಮುಗಿಸಿಕೊಂಡು ಅವರು ಬೆಂಗಳೂರಿಗೆ ಹೋಗುವ ಕಾರ್ಯಕ್ರಮ ನಿಗದಿಯಾಗಿತ್ತು. ಹೇಗೂ ಸಚಿವರು ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೆ ಮಂಗಳೂರಿಗೆ ಬಂದು ಹೋದರೆ ಪಾಪ, ಅದು ಅವರ ಖಾಸಗಿ ಕಾರ್ಯಕ್ರಮ ಆಗುತ್ತದೆ. ಅದರ ಬಿಲ್ಲನ್ನು ಸರಕಾರ ಭರಿಸಲು ಆಗುವುದಿಲ್ಲ. ಅದರ ಬದಲಿಗೆ ಅವರು ಮಂಗಳೂರಿಗೆ ಬರುವ ದಿನಕ್ಕೆ ಸರಿಯಾಗಿ ಒಂದು ಸರಕಾರಿ ಕಾರ್ಯಕ್ರಮ ಇಟ್ಟರೆ ಏನಾಗುತ್ತದೆ, ಸಚಿವರ ಮಂಗಳೂರು ಪ್ರವಾಸ ಸರಕಾರಿ ಕಾರ್ಯಕ್ರಮ ಆಗುತ್ತದೆ. ಇದರಿಂದ ರೋಶನ್ ಬೇಗ್ ಅವರು ತಮ್ಮ ಕಿಸೆಯಿಂದ ಒಂದು ರೂಪಾಯಿ ಕೂಡ ವ್ಯಯಿಸಬೇಕಾಗಿಲ್ಲ. ಇಂತಹ ಯೋಜನೆಯನ್ನು ಹಾಕುವ ಮೂಲಕ ಮಂಗಳೂರು ಮಹಾನಗರ ಪಾಲಿಕೆ ತನ್ನ ಪಾಲಿನ ಕೆಲಸವನ್ನು ನಿರ್ವಹಿಸಿ ಸಚಿವರ ಶ್ಲಾಘನೆಗೆ ಪಾತ್ರವಾಗಿದೆ. ಸಚಿವರು ತಮ್ಮ ಖಾಸಗಿ ಕಾರ್ಯಕ್ರಮಗಳಲ್ಲಿ ಮುತುರ್ವಜಿಯಿಂದ ಭಾಗವಹಿಸಿ, ಪಾಲಿಕೆಯ ಖುಷಿಗೆ ಒಂದು ಶಿಲಾನ್ಯಾಸದ ಪ್ರೋಗ್ರಾಂನಲ್ಲಿ ಭಾಗವಹಿಸಿ ಬೆಂಗಳೂರಿಗೆ ಹೋಗಿ ಟಿಎ ಡಿಎ ಪಡೆದುಕೊಂಡಿರಬಹುದು. ಅವರು ಆವತ್ತು ಶಿಲಾನ್ಯಾಸ ಮಾಡಿ, ಮಾರ್ಬಲ್ ಕಲ್ಲಿನ ಮೇಲೆ ಕರ್ಟನ್ ಎಳೆದು ಹೋದ ದಿನ ಅಗಸ್ಟ್ 4 2016.ಈಗ ಆ ಮಾರ್ಬಲ್ ಕಲ್ಲು ಎಲ್ಲಿದಯೊ ಆ ರಸ್ತೆಯಲ್ಲಿ ಕಾಣುವುದಿಲ್ಲ ಬೇಕಾದರೆ ನಾನು ಹಾಕಿರುವ ಫೋಟೊ ನೋಡಿ. ಯಾಕೆಂದರೆ ಅದು ಗಣಪತಿ ಹೈಸ್ಕೂಲ್ ರಸ್ತೆ. ಅದರ ಕ್ಯಾಪೆಸಿಟಿನೆ ಬೇರೆ.
ನಾವು ಯಾವುದೇ ಕಾರಣಕ್ಕೂ ಗಣಪತಿ ಹೈಸ್ಕೂಲ್ ರಸ್ತೆಯನ್ನು ಅಗಲೀಕರಣ ಮಾಡುವ ಪ್ರಕ್ರಿಯೆಯಿಂದ ಹಿಂದೆ ಸರಿಯುವ ಪ್ರಶ್ನೆನೆ ಇಲ್ಲ, ಈ ಮಾತನ್ನು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಮೀಷನರ್ ಮತ್ತು ಮಂಗಳೂರು ನಗರ ದಕ್ಷಿಣದ ಮಾಜಿ ಶಾಸಕರು ಹೇಳಿದ್ದರು ಹೇಳಿದ ಮಾತಿನಂತೆ ಚುನಾವಣೆ ಹತ್ತಿರ ಬಂದಾಗ ಕಾಂಕ್ರಿಟ್ ಕಾಮಗಾರಿ ಪ್ರಾರಂಭಿಸಿದರು ಕಾಮಗಾರಿ ಮಾತ್ರ ಅರ್ದ
ಯಾಕೆಂದರೆ ಯಾವುದೇ ಚುನಾವಣೆಗಳು ಬರಲಿ, ಶ್ರೀನಿವಾಸ್ ಗ್ರೂಪಿನ ಮಾಲೀಕರು ಪಕ್ಷಭೇದ ಮರೆತು ಎಲ್ಲಾ ರಾಜಕೀಯ ಪಕ್ಷಗಳಿಗೆ ಫಂಡಿಂಗ್ ಮಾಡುತ್ತಾರೆ. ಗೆಲ್ಲುವ ಪಕ್ಷಗಳಿಗೆ ಒಂದಿಷ್ಟು ಮೊತ್ತದಲ್ಲಿ ಹೆಚ್ಚಳ ಇರಬಹುದು, ಅದೇ ರೀತಿಯಲ್ಲಿ ಡೋನೇಶನ್ ಕೇಳಲು ಬರುವ ವ್ಯಕ್ತಿಯ ರಾಜಕೀಯ ತೂಕ ನೋಡಿ ಒಂದಿಷ್ಟು ಹೆಚ್ಚು ಕಡಿಮೆ ಇರಬಹುದು. ಒಟ್ಟಿನಲ್ಲಿ ಇವರಂತಹ ಅನೇಕ ಉದ್ದಿಮೆದಾರರ ಕೃಪೆಯಿಂದ ಹಲವು ರಾಜಕೀಯ ನಾಯಕರ ಚುನಾವಣಾ ಯಾತ್ರೆ ಇಲ್ಲಿಯ ತನಕ ಸುಗಮವಾಗಿ ಸಾಗಿದೆ. ಯಾವ ಉದ್ಯಮಿ ಚುನಾವಣೆಯಲ್ಲಿ ರಾಜಕಾರಣಿಗಳಿಗೆ ಸಹಾಯ ಮಾಡುತ್ತಾನೊ ಅವನ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಅಗತ್ಯ ಬಿದ್ದಾಗ ತನ್ನ ಸಹಾಯಕ್ಕೆ ಬರಲಿ ಎಂದು ಆಶಿಸುತ್ತಾನೆ. ಶ್ರೀನಿವಾಸ್ ಗ್ರೂಪ್ ಕೂಡ ಇದಕ್ಕೆ ಹೊರತಾಗಿಲ್ಲ. ಇವರಿಗೆ ಎಲ್ಲಿಯ ತನಕ ಈ ರಾಜಕೀಯ ಪಕ್ಷದವರ, ಪಾಲಿಕೆಯ ಅಧಿಕಾರಿಗಳ ಹೆದರಿಕೆ ಇಲ್ಲ ಎಂದರೆ ರಸ್ತೆ ಅಗಲೀಕರಣದ ಸಮಯದಲ್ಲಿ ಇವರ ಹೋಟೇಲು ಕೃಷ್ಣ ಭವನದ ಅವರಣ ಗೋಡೆ ಮತ್ತು ಎರಡು ಕಾಂಕ್ರಿಟ್ ಕಂಬಗಳನ್ನು ಕಟ್ಟಲಾಗಿತ್ತು ಅಲ್ಲಿ ಪಾಲಿಕೆ ರಸ್ತೆ ಅಗಲಗೊಳಿಸಿದ ನಂತರ ತಮ್ಮ ಪಾಲಿನ ರಸ್ತೆಗೆ ಹೋಗಿದ್ದ ಜಾಗದ ಮೇಲೆ ಸಾರ್ವಭೌಮತ್ವವನ್ನು ಸಾಧಿಸಿದ್ದರು.ಸಂಪೂರ್ಣ ಜಾಗವನ್ನು ಬಿಟ್ಟು ಕೊಟ್ಟಿಲ್ಲ
ಅವರಿಗೆ ಗೊತ್ತಿದೆ, ಪಾಲಿಕೆಯಲ್ಲಿ ಯಾವ ಪಕ್ಸದ ಅಡಳಿತ ಇದ್ದರೂ ರಾಜ್ಯದಲ್ಲಿ ಯಾರದೆ ಸರಕಾರ ಇದ್ದರೂ, ನಗರ ದಕ್ಷಿಣಕ್ಕೆ ಯಾವ ಪಕ್ಷದ ಶಾಸಕ ಬಂದರೂ ತಮ್ಮ ಸಂಸ್ಥೆಯ ಕಟ್ಟಡಗಳನ್ನು ಮುಟ್ಟುವ ಧೈರ್ಯ ಮಾಡುವುದಿಲ್ಲ. ಆದರೂ ಪಾಲಿಕೆ ಕಳೆದ 2016ರಲ್ಲಿ ಶಿಲಾನ್ಯಾಸದ ಕೆಲಸ ಮುಗಿಸಿ 2019ರಲ್ಲಿ ಅರ್ದಂಬರ್ದ ಅಗಲೀಕರಣ ಮಾಡಿದೆ ಸಂಪೂರ್ಣ ಅಗಲ ವಾಗುವ ಸೂಚನೆ ಕಾಣಿಸುವುದಿಲ್ಲ.
ಶ್ರೀನಿವಾಸ ಗ್ರೂಪಿನವರದ್ದು ಇಷ್ಟೇ ಅಲ್ಲ, ಇವರು ತಮ್ಮ ಹೋಟೇಲಿನ ಕಂಪೌಂಡ್ ಗೋಡೆಯನ್ನು ಮುಟ್ಟಿದರೆ ಇಷ್ಟು ಆಡುತ್ತಾರಾದರೆ, ಅದೇ ರಸ್ತೆಯಲ್ಲಿ ಇರುವ ಫೇಲಿಕ್ಸ್ ಪೈ ಬಜಾರ್ ನಲ್ಲಿರುವ ಇವರದೇ ಮತ್ತೊಂದು ಕಟ್ಟಡ ಅನಧಿಕೃತ ಎಂದು ನ್ಯಾಯಾಲಯ judgement ಕೊಟ್ಟಿದೆ. ಅದನ್ನು ಪಾಲಿಕೆ ಕೆಡವಲು ಮುಂದಾಗಬೇಕಲ್ಲ? ಅಷ್ಟೇ ಯಾಕೆ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಶ್ರೀನಿವಾಸ ಹೋಟೇಲಿನ ಕೊನೆಯ ಫ್ಲೋರ್ ಅಕ್ರಮವಲ್ಲವೇ, ಇಡ್ಯಾ ಸುರತ್ಕಲ್ ಶ್ರೀನಿವಾಸ ಅಸ್ವತ್ರೆಯ ವಠಾರದಲ್ಲಿ ಪರವಾನಿಗೆ ಇಲ್ಲದೆ ಐದು ಮಹಡಿಗಳ ಮೂರು ಅನಧಿಕ್ರತ ಕಟ್ಟಡಗಳು ನೀವೆ ಅಲೋಚಿಸಿ ಶ್ರೀನಿವಾಸ ಗ್ರೂಪ್ ಎಷ್ಟು strong ಇವರ ಈ ಅನಧಿಕ್ರತ ಸಾಮ್ರಜ್ಯವನ್ನು ಕೆಡವಲು ಪಾಲಿಕೆ ಮುಂದಾಗಬೇಕು. ಹೋಟಲ್ ಶ್ರೀನಿವಾಸನ ಪಾರ್ಕಿಂಗ್ ಜಾಗದಲ್ಲಿ ವರ್ಷವೀಡಿ ಬಟ್ಟೆ ಪ್ರದರ್ಶನ ಮತ್ತು ಮಾರಾಟ ಎಂದು ಬೋರ್ಡ ಹಾಕಿಸಿ ಅಲ್ಲಿ ಕೂಡ ದುಡ್ಡು ಮಾಡುತ್ತಾರಲ್ಲ,ಹಾಗಾದರೆ parking ನಿಯಮ ಇರುವುದು ಬಡ ಮತ್ತು ಮಧ್ಯಮ ವರ್ಗದವರಿಗೆ ಮಾತ್ರವೇ? ಕೃಷ್ಣ ಭವನದ ಆವರಣ ಗೋಡೆಯನ್ನೇ ಉಳಿಸಿಕೊಳ್ಳಲಾಗದ ಪಾಲಿಕೆ ಶ್ರೀನಿವಾಸ ಗ್ರೂಪಿನವರ ಮಹಡಿ, ಫೆಲೀಕ್ಸ್ ಪೈ ಬಜಾರಿನ ಅನಧಿಕೃತ ಕಟ್ಟಡ, parking ಜಾಗ ಸುರತ್ಕಲ್ ಅನಧಿಕ್ರತ ಅಸ್ಪತ್ರೆ ಕಟ್ಟಡ ಮುಟ್ಟಿದರೆ ಅವರು ಬಿಡುತ್ತಾರೆಯೇ? ಬಹುಶ: ಈ ಇಡೀ ಕಾಮಗಾರಿಯನ್ನು ಒಂದೂವರೆ ಕೋಟಿಯೊಳಗೆ ಮುಗಿಸಲು ಪಾಲಿಕೆ ನಿರ್ಧರಿಸಿದೆ. ಅದು ಕಷ್ಟಸಾಧ್ಯ ಎನ್ನುವ ಭಾವನೆ ನನ್ನದು. ಒಟ್ಟಿನಲ್ಲಿ ರಾಜಕಾರಣಿಗಳನ್ನು ತನ್ನ ಕಿಸೆಯಲ್ಲಿ ಇಟ್ಟುಕೊಂಡಿರುವ ಶ್ರೀನಿವಾಸ್ ಗ್ರೂಪಿನ ಸಂಸ್ಥೆಯ ಕಟ್ಟಡಗಳನ್ನು ಮುಟ್ಟುವ ಧೈರ್ಯ ಪಾಲಿಕೆ ಹೊಸ ಅಯುಕ್ತರು ಮಾಡಬೇಕುಈಗ ಅರ್ದಂಬರ್ದ ರಸ್ತೆ ಅಗಲಿಕರಣವಾಗಿ ಮುಕ್ತಾಯ ವಾಗಿದೆ.ಸದ್ಯ ಇನ್ನು ಅಗಲಿಕರಣ ಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ ರಸ್ತೆ ಅಗಲೀಕರಣದ ವೇಳೆ ಬೇರೆಯವರಿಗೆ ಇರುವ ನಿಯಮಗಳೇ ಇವರಿಗೂ ಎಪ್ಲೈ ಆದರೆ ಸರಿ ಇಲ್ಲದೆ ಹೋದರೆ ಸರಕಾರ,ಶಾಸಕರುಮತ್ತು ಪಾಲಿಕೆ ಅಯುಕ್ತರು ಬದಲಾದರೂ ಶ್ರೀನಿವಾಸ ಗ್ರೂಪ್ ನವರದೇ ನಡೆಯುವುದು ಎಂದು ಜನರು ನಂಬಬೇಕಾಗುತ್ತದೆ.
Leave A Reply