• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನ ‌‌ಸ್ಮಾರ್ಟ ಸಿಟಿ ಹೇಗಾಗಬೇಕಿತ್ತು ಹೇಗಾಗುತ್ತಿದೆ.

Tulunadu News Posted On October 24, 2020


  • Share On Facebook
  • Tweet It

ಅಷ್ಟಕ್ಕೂ ಸ್ಮಾರ್ಟ ಸಿಟಿ ಎಂದರೆ ಏನು? ಮಂಗಳೂರಿನವರು ಮೀನು ತಿಂದು smart ಇರುತ್ತಾರೆ ಎನ್ನುವುದು ಇಲ್ಲಿಂದ ಹೊರಗೆ ವಾಸಿಸುವ ಜನರ ಬಹುತೇಕ ಒಂದೇ ತರಹದ ಅನಿಸಿಕೆ. ಆದರೆ ಸ್ಮಾರ್ಟ ಸಿಟಿ ಎಂದರೆ ಏನು ಎನ್ನುವುದು ನಮಗೂ ಗೊತ್ತಿರಲಿಲ್ಲ. ನಮಗೆ ಎಂದರೆ ಪ್ರಾರಂಭದಲ್ಲಿ ಸಾಮಾನ್ಯ ನಾಗರಿಕನಿಂದ ಹಿಡಿದು ಐಎಎಸ್, ಕೆಎಎಸ್ ಕಲಿತ ಯಾರಿಗೂ ಗೊತ್ತೇ ಇರಲಿಲ್ಲ. ಮೋದಿಯವರು ಏನೋ ಕಲ್ಪನೆ ಇಟ್ಟುಕೊಂಡಿದ್ದಾರೆ, ಚೆನ್ನಾಗಿಯೇ ಇರುತ್ತೆ, ಅಭಿವೃದ್ಧಿ ಆಗಿಯೇ ಆಗುತ್ತದೆ, ಇನ್ನೂ ನಮ್ಮ ನಗರಗಳು ಹಿಂದಿನಂತೆ ಇರಲ್ಲ, ಅವೈಜ್ಞಾನಿಕವಾಗಿ ಬೆಳೆಯಲ್ಲ ಎನ್ನುವ ನಂಬಿಕೆ., ಅಷ್ಟೇ.

ಪ್ರಾರಂಭದಲ್ಲಿ ಇಡೀ ರಾಷ್ಟ್ರದಿಂದ ಸ್ಮಾರ್ಟ ಸಿಟಿ ಆಗಬಲ್ಲ ಆರು ಊರು ನಗರಗಳ ಪಟ್ಟಿಯನ್ನು ಕೇಂದ್ರ ಸರಕಾರ ಮಾಡಿತ್ತು. ಹಾಗಂತ 600ಕ್ಕೆ 600ರನ್ನು ಕೂಡ ಸ್ಮಾರ್ಟ ಸಿಟಿ ಮಾಡಲು ಐದು ವರ್ಷಗಳಲ್ಲಿ ಸಾಧ್ಯವಿಲ್ಲವಲ್ಲ. ಆದ್ದರಿಂದ ಆ 600 ರಲ್ಲಿ ನೂರು ನಗರಗಳನ್ನು ಆಯ್ಕೆ ಮಾಡೋಣ ಎಂದು ತೀಮರ್ಾನಿಸಿದ ಕೇಂದ್ರ ಸರಕಾರ ಈ ಮೊದಲ ಅವಧಿಯಲ್ಲಿ ನೂರು ನಗರಗಳನ್ನು ಸ್ಮಾರ್ಟ ಸಿಟಿ ಮಾಡೋಣ ಎಂದು ನಿರ್ಧರಿಸಿತ್ತು. ಆ ಮೂಲಕ ಹತ್ತು ಲಕ್ಷದ ತನಕ ಜನಸಂಖ್ಯೆ ಇರುವ ನೂರು ನಗರಗಳನ್ನು ಪಟ್ಟಿ ಮಾಡಲಾಯಿತು. ಮೊದಲು ಓವರ್ ಆಲ್ ಆಗಿ ಆರು ನೂರು ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಹನ್ನೊಂದು ನಗರಗಳ ಹೆಸರು ಇದ್ದವು. ಆರು ನೂರರಿಂದ ನೂರು ನಗರಗಳಿಗೆ ಶಾರ್ಟ ಲಿಸ್ಟ್ ಮಾಡಿದಾಗ ನಮ್ಮKarnatakaದ 11 ನಗರಗಳಲ್ಲಿ ಐದನ್ನು ಕೈ ಬಿಡಲಾಯಿತು. ನಮ್ಮ ಪುಣ್ಯ, ಆ ಕೈ ಬಿಟ್ಟ ಐದು ನಗರಗಳಲ್ಲಿ ಮಂಗಳೂರು ಇರಲಿಲ್ಲ. ನಂತರ ಉಳಿದ ನೂರು ನಗರಗಳಿಂದ ” ನಿಮ್ಮ ಊರು ಸ್ಮಾರ್ಟ ಆಗಬೇಕಾದರೆ ನೀವು ಏನು ಮಾಡಲು ಇಚ್ಚಿಸುವಿರಿ” ಎನ್ನುವ ಅರ್ಥದ ಪ್ರಶ್ನೆಗಳನ್ನು ಆ ನೂರು ನಗರಗಳಿಗೆ ಕೇಳಲಾಯಿತು. ಕೇಂದ್ರ ಸರಕಾರ ನೇಮಿಸಿದ್ದ ಸಮಿತಿಗೂ ಚೆನ್ನಾಗಿ ಗೊತ್ತಿತ್ತು, ಒಮ್ಮೆಲ್ಲೆ ನೂರು ನಗರವನ್ನು ಸ್ಮಾರ್ಟ ಮಾಡಲು ಹೊರಡಲು ಸಾಧ್ಯವಿಲ್ಲ. ಆದ್ದರಿಂದ ಅವರು ಆಯಾ ನಗರಗಳಿಗೆ ತಲಾ ಎರಡು ಕೋಟಿ ರೂಪಾಯಿ ಕೊಟ್ಟು ನಿಮ್ಮ ನಿಮ್ಮ ಊರಿನ ಬೇರೆ ಬೇರೆ ಸ್ತರದ ನಾಗರಿಕರೊಂದಿಗೆ ಮಾತನಾಡಿ, ನಿಮ್ಮ ಊರಿಗೆ ಎಷ್ಟು ಅನುದಾನ ಬಂದರೆ ಊರು ಸ್ಮಾರ್ಟ ಆಗುತ್ತೆ ಎಂದು ತಿಳಿಸಿ ಎಂದು ಕೇಳಿತು. ಕೂಡಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ನಾಗರಿಕರೊಂದಿಗೆ ಸರಣಿ ಸಭೆಗಳನ್ನು ಕರೆದರು. ಕೊನೆಗೆ ಒಂದು ಪ್ರಪ್ರೋಸಲ್ ರೆಡಿಯಾಯಿತು. ನಮಗೆ ಇಷ್ಟು ಕೊಡಿ!

ನಮ್ಮವರು ಕೇಳಿದ್ದು ಐದು ವರ್ಷಗಳಿಗೆ ಕನಿಷ್ಟ 3500 ಕೋಟಿ ಬೇಕು. ಇಪ್ಪತ್ತು ವರ್ಷದ ಪ್ಲಾನ್ ಆದರೆ 14 ಸಾವಿರ ಕೋಟಿ ಸಿಕ್ಕಿದರೆ ಮಂಗಳೂರನ್ನು ಸ್ಮಾರ್ಟ ಸಿಟಿ ಮಾಡಲಿಕ್ಕೆ ಏನೂ ಪ್ರಾಬ್ಲಂ ಇರುವುದಿಲ್ಲ, ನೀವು ಇಷ್ಟು ಸಾವಿರ ಕೋಟಿ ಕೊಟ್ಟರೆ ಇಷ್ಟು ಅಭಿವೃದ್ಧಿ ಮಾಡುತ್ತೇವೆ ಎಂದು ರಿಪೋರ್ಟ ಕೊಟ್ಟಿದ್ದನ್ನು ನೋಡಿದ ಕೇಂದ್ರ ಸಮಿತಿಗೆ ಷಾಕ್ ಕಾದಿತ್ತು. ಅವರಿಗೆ ಆವಾಗಲೇ ಗೊತ್ತಾದದ್ದು, ಮಂಗಳೂರಿನವರ ತಲೆಯೊಳಗೆ ಸ್ಮಾರ್ಟ ಸಿಟಿ ಕಾನ್ಸೆಪ್ಟ್ ಹೋಗಿಯೇ ಇಲ್ಲ. ನಮ್ಮ ವರದಿಯನ್ನು ಪಕ್ಕಕ್ಕೆ ತೆಗೆದಿಡಲಾಯಿತು.

ಯಾವಾಗ ಮೊದಲ ಪಟ್ಟಿಯಲ್ಲಿ ಮಂಗಳೂರಿಗೆ ಸ್ಮಾರ್ಟ ಸಿಟಿಯ ಚಾನ್ಸ್ ಸಿಗಲಿಲ್ಲ ಎಂದು ಗೊತ್ತಾಯಿತೊ, ಆವತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ಸಿಗರಿಗೆ ಮೊದಲು ಕಂಡಿದ್ದು ಸಂಸದ ನಳಿನ್ ಕುಮಾರ್ ಕಟೀಲು. ಸಿಕ್ಕಿದ್ದೇ ಚಾನ್ಸ್ ಎನ್ನುವಂತೆ ಕಾಂಗ್ರೆಸ್ಸಿನ ಅತಿರಥ ನಾಯಕರು ಸಂಸದರಿಗೆ ಟೀಕಿಸಿದ್ದೇ ಟೀಕಿಸಿದ್ದು. ನಂಬರ್ 1 ಎಂದು ಸನ್ಮಾನಿಸಿಕೊಂಡಿದ್ದಾರೆ, ಈಗ ನೋಡಿದರೆ ಮಂಗಳೂರಿಗೆ ಸ್ಮಾರ್ಟ ಸಿಟಿ ತರಲು ಆಗುವುದಿಲ್ಲ, ಇವರದ್ದು ಅಲ್ಲಿ ನಡೆಯುವುದಿಲ್ಲ ಎಂದು ಹೀಯಾಳಿಸಲು ಶುರು ಮಾಡಿದರು. ದೆಹಲಿಯಲ್ಲಿ ಚೆನ್ನಾಗಿ ಹಿಂದಿ, ಇಂಗ್ಲೀಷ್ ಗೊತ್ತಿದ್ದರೆ ಮಾತ್ರ ಕೆಲಸ ಆಗುತ್ತೇ ಎಂದು ಮೂದಲಿಸಲು ಶುರು ಮಾಡಿದರು. ಆವಾಗಲೇ ಸಂಸದರಿಗೆ ಮತ್ತು ಇತರ ಬಿಜೆಪಿ ನಾಯಕರಿಗೆ ತಾವೇಲ್ಲೊ ದಾರಿ ತಪ್ಪಿದ್ದೇವೆ, ನಮ್ಮ ಪ್ರಯತ್ನ ಸಿಸ್ಟಮೇಟಿಕ್ ವೇನಲ್ಲಿ ನಡೆಯುತ್ತಿಲ್ಲ ಎಂದು ಅನಿಸಲು ಶುರುವಾಯಿತು. ಅದಕ್ಕೆ ಸರಿಯಾಗಿ ಅಗಿನ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ಮಂಗಳೂರಿಗೆ ಯುವಬ್ರಿಗೇಡ್ನವರು ಕರೆಸಿದರು. ಸ್ಮಾರ್ಟ ಸಿಟಿ ಬರಲು ಯಾವ ರೀತಿಯಲ್ಲಿ ಪ್ರಯತ್ನ ಮಾಡಬೇಕು ಎನ್ನುವುದರ ಕುರಿತು ಮಂಗಳೂರಿನ ಸಂಘನಿಕೇತನದಲ್ಲಿ ವೆಂಕಯ್ಯ ನಾಯ್ಡು ಭಾಷಣ ಮಾಡಿದರು. ಹಾಗಾದ್ರೆ ನಾವು ಕಳುಹಿಸಿಕೊಟ್ಟ ವರದಿಯಲ್ಲಿ ಏನು ತಪ್ಪಿತ್ತು ಸರ್ ಎಂದು ನಾಯ್ಡು ಅವರನ್ನು ಅವರು ತಂಗಿದ್ದ ಹೋಟೇಲಿಗೆ ಹೋಗಿ ಇಲ್ಲಿನ ಬಿಜೆಪಿ ನಾಯಕರು ಕೇಳಿದರು. ಆಗ ಕಿವಿ ಹಿಂಡಿ ಹೇಳಿದ ವೆಂಕಯ್ಯ ನಾಯ್ಡು ನೀವು ಕೇಳಿದ್ದಷ್ಟು ಸಾವಿರ ಕೋಟಿ ಕೊಡಲು ಅಲ್ಲೇನೂ ನರೇಂದ್ರ ಮೋದಿ ಹಣದ ತೋಟ ಬೆಳೆಸುತ್ತಿದ್ದಾರಾ, ಸುಮ್ಮನೆ ಒಂದಿಷ್ಟು ಕೊಟ್ಟರೆ ಎಷ್ಟು ಚೆನ್ನಾಗಿ ಅಭಿವೃದ್ಧಿ ಮಾಡ್ತಿರಿ ಎಂದು ಬರೆದು ಕೊಡಿ ಎಂದು ಇಲ್ಲಿನವರ ತಲೆಗೆ ಹೊಡೆದಾಗೆ ಹೇಳಿ ಹೈದ್ರಾಬಾದ್ ವಿಮಾನ ಹತ್ತಿದ್ದರು.

ಅದರ ನಂತರ ಹೊಸದಾಗಿ ಪ್ರಪೋಸಲ್ ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆಗ ಅಳೆದು ತೂಗಿ ಎರಡು ಸಾವಿರ ಸಿಕ್ಕಿದರೆ ಇಷ್ಟು ಅಭಿವೃದ್ಧಿ ಮಾಡುತ್ತೇವೆ ಎಂದು ಸೋಲಾರ್ ಪಾರ್ಕ,ಹಳೆ ಬಂದರು ಅಭಿವೃದ್ಧಿ, ಅದು ಇದು ಎಂದು ಪಟ್ಟಿ ಮಾಡಿ ಹೊಸ ವರದಿ ಕಳುಹಿಸಿಕೊಡಲಾಯಿತು. ಸರಿ, ಇಷ್ಟಾದರೆ ಓಕೆ, ಮೊದಲನೇ ಸಲ ಇವರು ಕೊಟ್ಟ ಪ್ರಪೋಸಲ್ ಓಕೆ ಮಾಡಿದ್ದರೆ ಇಷ್ಟೊತ್ತಿಗೆ ಹಲವು ನಾಯಕರು, ಅಧಿಕಾರಿಗಳು ಸೆಟಲ್ ಆಗುತ್ತಿದ್ದರು ಎಂದು ಮನದಲ್ಲಿಯೇ ಲೆಕ್ಕ ಹಾಕಿದ ಕೇಂದ್ರೀಯ ಸಮಿತಿ ಮಂಗಳೂರನ್ನು ಎರಡನೇ ಪಟ್ಟಿಯಲ್ಲಿ ಓಕೆ ಮಾಡಿತು. ಹಾಗಂತ ಇದೇನೂ ಏಶಿಯನ್ ಡೆವಲಪ್ ಮೆಂಟ್ ಬ್ಯಾಂಕಿನವರು ಕೊಡುವ ಸಾಲವಲ್ಲ. ಏಳು ನೂರು ಕೋಟಿ ತೆಗೆದುಕೊಳ್ಳುವುದು ನಂತರ ಸಾಕಾಗಲಿಲ್ಲ ಎಂದು ಹೇಳುವುದು ಮತ್ತೆ ಮೂನ್ನೂರ ಐವತ್ತು ಕೋಟಿ ಕೊಡಿ ಎನ್ನುವುದು, ಅದು ಬರುತ್ತೆ ಎಂದು ಕಾಯುವುದು. ಹಣ ಕಡಿಮೆ ಬಿತ್ತು. ಅದಕ್ಕೆ ಅಭಿವೃದ್ಧಿಯಾಗಿಲ್ಲ ಎಂದು ಹಿಂದೆ ಹೇಳಿದ ಹಾಗೆ ಈ ಯೋಜನೆಯಲ್ಲಿ ಹೇಳಲು ಆಗುವುದಿಲ್ಲ. ಕಳೆದ ಬಾರಿ ಬಿಎಸ್ ಯಡಿಯೂರಪ್ಪನವರು ತಲಾ ನೂರು ಕೋಟಿಯಂತೆ ಎರಡು, ಮೂರು ಸಲ ಕೊಟ್ಟರಲ್ಲ, ಅದರಿಂದ ಎಷ್ಟು ಅಭಿವೃದ್ಧಿ ಆಗಿದೆ ಎಂದು ಪಾಲಿಕೆ ತೋರಿಸುತ್ತಾರಾ? ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆದ ನಂತರ ಒಮ್ಮೆ ನೂರು ಕೋಟಿ ಕೊಟ್ಟರಲ್ಲ, ಅದರಲ್ಲಿ ಎಷ್ಟು ಹಣ ವಿನಿಯೋಗವಾಗಿದೆ, ಎಷ್ಟು ಹಾಗೇ ಉಳಿದಿದೆ ಎಂದು ಪಾಲಿಕೆ ಹೇಳಲಿ. ಮಾತನಾಡಿದರೆ ಅಷ್ಟು ಕೋಟಿ ಹಣ ಬಂದರೆ ಇಷ್ಟು ಮಾಡುತ್ತೇವೆ, ಅಷ್ಟು ಮಾಡುತ್ತೇವೆ ಎಂದು ಕೊಚ್ಚಿಕೊಂಡ ಹಾಗೇ ಸ್ಮಾರ್ಟ ಸಿಟಿಯ ಯೋಜನೆ ನಮಗೆ ಸುಲಭವಾಗಿ ದಕ್ಕುವುದಿಲ್ಲ.

ಸ್ಮಾರ್ಟ ಸಿಟಿ ಯೋಜನೆ ಜಾರಿಗೆ ಬರುವ ಸಮಯ ನಮಗೊಂದು ಸ್ಪೆಶಲ್ ಪರ್ಪಸ್ ವೆಹಿಕಲ್ ಬರುತ್ತದೆ. ಅದಕ್ಕೊಬ್ಬ ಮುಖ್ಯಸ್ಥ ಇರುತ್ತಾರೆ. ಆತ ಐಎಎಸ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಬೇರೆ ಬೇರೆ ಹುದ್ದೆಗಳನ್ನು ನಿಭಾಯಿಸಿ ಅನುಭವ ಹೊಂದಿರುವವನಾಗಿರುತ್ತಾನೆ. ಆತನ ಅಡಿಯಲ್ಲಿ ಇನ್ನೊಂದಿಷ್ಟು ಅಧಿಕಾರಿಗಳು ಇರುತ್ತಾರೆ. ಇವರೆಲ್ಲಾ ಸೇರಿ ನಮ್ಮ ರಥಬೀದಿ, ದಕ್ಕೆ, ಬಂದರು ಸ್ಮಾರ್ಟ ಸಿಟಿಯನ್ನಾಗಿ ಮಾಡುತ್ತಾರೆ ಎಂದು ಹೇಳಿ ಈಗ ಬೇಕಾಬಿಟ್ಟಿ ಬೇಡದ ಕಾಮಗಾರಿ ಮಾಡುತಿದ್ದರು ನಾವು ಯಾರು ಮಾತಾಡುತಿಲ್ಲ.

  • Share On Facebook
  • Tweet It


- Advertisement -


Trending Now
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Tulunadu News March 25, 2023
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Tulunadu News March 24, 2023
Leave A Reply

  • Recent Posts

    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
  • Popular Posts

    • 1
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 2
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 3
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 4
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 5
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search