ಧರ್ಮಸ್ಥಳದಲ್ಲಿ ಗಬ್ಬದ ಹಸುವಿನ ಕಳ್ಳತನ!
Posted On August 11, 2017
ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ ಕಾಪಿನಡ್ಕದಲ್ಲಿ ಮೇಯಲು ಕಟ್ಟಿದ ಗಬ್ಬದ ಹಸುವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿ ಹತ್ಯೆಗೈದ ಘಟನೆ ನಡೆದಿದ್ದು ಆರೋಪಿಗಳನ್ನು ಧರ್ಮಸ್ಥಳ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸಿದ್ದಾರೆ.
ಅರಸಿನಮಕ್ಕಿಯ ಕಾಪಿನಡ್ಕದ ಆನಂದ ಎಂಬವರು ತನ್ನ ಮನೆಯ ಪಕ್ಕದಲ್ಲಿ ಗಬ್ಬದ ಹಸುವನ್ನು ಮೇಯಲು ಕಟ್ಟಿದ್ದರು. ಸಂಜೆ ಹೊತ್ತಿಗೆ ದುಷ್ಕೃಮಿಗಳು ದನವನ್ನು ಕಳ್ಳತನ ಮಾಡಿದ್ದರು. ವಿಷಯ ತಿಳಿದ ರೆಖ್ಯಾ ಹಾಗೂ ಅರಸಿನಮಕ್ಕಿಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕತ್ತರು ಕಾಡಿನಲ್ಲಿ ಹುಡುಕಾಡಿದಾಗ ದನದ ಮಾಂಸ ಪತ್ತೆಯಾಗಿದೆ. ಇದೇ ಸಂದರ್ಭ ಪೊಲೀಸರಿಗೆ ವಿಷಯ ತಿಳಿಸಿ ಸಾಗಾಟಕ್ಕೆ ಉಪಯೋಗಿಸಿದ ರಿಕ್ಷಾ, ಆಯುಧ ಹಾಗೂ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಾದ ಸಂತೋಷ್ ಆಲಿಯಾಸ್ ಪಾಂಡಿ ಸಂತು, ಬಿನೀಷ್, ಬಿನೋಜ್ ಆಲಿಯಾಸ್ ಬಿನು, ರಾಜಪ್ಪ ಅವರನ್ನು ಧರ್ಮಸ್ಥಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply