• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಫ್ರಾನ್ಸ್ ನಲ್ಲಿ ಪ್ರವಾದಿ ಕಾರ್ಟೂನ್ ತೋರಿಸಿದ್ದಕ್ಕೆ ಟೀಚರ್ ಹತ್ಯೆ, ನಮ್ಮಲ್ಲಿ ಹಿಂದೂ ದೇವತೆಗಳ ಅವಮಾನಿಸಿದರೆ…

Hanumantha Kamath Posted On October 30, 2020
0


0
Shares
  • Share On Facebook
  • Tweet It

ಅಭಿನಂದನ್ ವರ್ಧಮಾನ್, ವಾಯುಪಡೆಯ ವಿಂಗ್ ಕಮಾಂಡರ್ ಅವರು ಪಾಕ್ ಗಡಿಯೊಳಗೆ ಹೋಗಿದ್ದರಲ್ಲ, ಆವತ್ತು ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಪಾಕಿಗಳು ಯಾರಿಗೂ ಸುಳಿವು ಸಿಗದೇ ಇದ್ದಿದ್ದರೆ ಚಿತ್ರಹಿಂಸೆ ಕೊಟ್ಟು ಸಾಯಿಸಿಬಿಡುತ್ತಿದ್ದರೇನೋ. ಆದರೆ ಯಾವಾಗ ಭಾರತಕ್ಕೆ ನಮ್ಮ ಯೋಧನೊಬ್ಬ ದಾರಿತಪ್ಪಿ ಪಾಕಿನೊಳಗೆ ಹೋಗಿದ್ದಾರೆ ಎಂದು ಗೊತ್ತಾಯಿತೋ, ಭಾರತ ಆಲರ್ಟ್ ಆಗಿಬಿಟ್ಟಿತ್ತು. ಎಲ್ಲಿಯ ತನಕ ಅಂದರೆ ಅಭಿನಂದನ್ ಅವರನ್ನು ತಕ್ಷಣ ಗೌರವಯುತವಾಗಿ ಭಾರತಕ್ಕೆ ಬಿಟ್ಟುಕೊಡದಿದ್ದರೆ ಅದರ ಪರಿಣಾಮವನ್ನು ಎದುರಿಸಬೇಕಾದಿತು ಎಂದು ನೇರ ಎಚ್ಚರಿಕೆಯನ್ನು ಕೊಡಲಾಗಿತ್ತು.
ನಿಮಗೆಲ್ಲ ಗೊತ್ತಿರುವ ಹಾಗೆ, ಪಾಕಿಸ್ತಾನದಲ್ಲಿ ಮೂರು ರೀತಿಯ ಆಡಳಿತ ಇದೆ. ಒಂದು ಇಮ್ರಾನ್ ಖಾನ್ ಆಡಳಿತ, ಇನ್ನೊಂದು ಮಿಲಿಟರಿ ಆಡಳಿತ ಮತ್ತು ಐಎಸ್ ಐ ಆಡಳಿತ. ಇವು ಮೂರು ಒಬ್ಬರನ್ನೊಬ್ಬರು ಕೇಳುವುದಿಲ್ಲ. ಇಮ್ರಾನ್ ಖಾನ್ ಗೆ ಅಭಿನಂದನ್ ನಮ್ಮಲ್ಲಿ ಇರುವುದು ರಿಸ್ಕ್ ಎಂದು ಅನಿಸಿದರೆ ಸಾಕುವುದಿಲ್ಲ, ಅದು ಉಳಿದ ಎರಡೂ ಆಡಳಿತ ವರ್ಗಗಳಾದ ಮಿಲಿಟರಿ ಮತ್ತು ಐಎಸ್ ಐಗೂ ಅನಿಸಬೇಕು. ಆದರೆ ಈ ಒಂದು ವಿಷಯದಲ್ಲಿ ಪಾಕಿನ ಮಿಲಿಟರಿ ಆಡಳಿತ ಮಾತ್ರ ಒಂದೇ ಹಟಕ್ಕೆ ಕುಳಿತಿತ್ತು. ಅದೇನೆಂದ್ರೆ ಅಭಿನಂದನನ್ನು ಆದಷ್ಟು ಬೇಗ ಕಳುಹಿಸಿಕೊಡಿ. ಸ್ವತ: ಪಾಕ್ ಮಿಲಿಟರಿ ಸೇನಾಧಿಕಾರಿ ಭಾಜ್ವಾ ಈ ವಿಷಯದಲ್ಲಿ ಎಷ್ಟು ಹೆದರಿದ್ದರು ಎಂದರೆ ಐಎಸ್ ಐ ಒಂದು ವೇಳೆ ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸುವುದು ಬೇಡಾ ಎಂದರೆ ನಮ್ಮ ಗತಿಯೇನು ಎಂದು ಜೀವ ಭಯದಿಂದ ಒದ್ದಾಡುತ್ತಿದ್ದರು, ಸ್ವತ: ಅವರ ಕಾಲುಗಳು ನಡುಗಿದ್ದವು ಎಂದು ಮಾಹಿತಿಗಳು ಬರುತ್ತಿವೆ. ಆದರೆ ಕೊನೆಗೆ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಘಾ ಗಡಿಯ ಮೂಲಕ ಕಳುಹಿಸಿಕೊಡಲಾಗಿತ್ತು. ಇದರ ನಂತರವೇ ಭಾಜ್ವಾ ನೆಮ್ಮದಿಯ ನಿಟ್ಟುಸಿರುಬಿಟ್ಟರು ಎಂದು ಹೇಳಲಾಗುತ್ತದೆ. ಒಂದು ವೇಳೆ ಭಾರತೀಯ ಯೋಧನನ್ನು ನಮ್ಮಲ್ಲಿ ಒಂದೆರಡು ದಿನ ಹೆಚ್ಚಿಗೆ ಇಟ್ಟುಕೊಂಡರೆ ಪಾಕ್ ದುಸ್ಥಿತಿ ನೆನೆಯಲು ಆಗಲ್ಲ, ಭಾರತದ ದಾಳಿಗೆ ನಮ್ಮಲ್ಲಿ ಸಿದ್ಧತೆಗಳೇ ಇರಲಿಲ್ಲ, ನಾವು ಚಿಂದಿಯಾಗಿ ಹೋಗುತ್ತಿದ್ದೇವು ಎಂದು ಭಾಜ್ವಾ ತಮ್ಮ ಸಹೋದ್ಯೋಗಿಗಳ ಬಳಿ ಹೇಳಿಕೊಂಡಿದ್ದರಂತೆ. ಅದು ಈಗ ಹೊರಗೆ ಬಂದು ಪಾಕ್ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಸರಕಾರ ನಗೆಪಾಟಲಿಗೆ ಈಡಾಗಿದೆ. ಆದರೂ ಪಾಕ್ ಕೆಲವೊಮ್ಮೆ ಭಾರತಕ್ಕೆ ಬುದ್ಧಿ ಕಲಿಸುತ್ತೇವೆ ಎಂದು ಗುಡುಗುತ್ತದೆ. ಸೊಂಟದಲ್ಲಿ ಬಲ ಇಲ್ಲದಿದ್ದರೂ ಫುಟ್ ಬಾಲ್ ಆಡುತ್ತೇನೆ ಎಂದು ಹೊರಡುವ ಮನಸ್ಥಿತಿ ಅದು.
ಇನ್ನು ಫ್ರಾನ್ಸ್ ಸರಕಾರದ ಪ್ರಧಾನಿ ವಿರುದ್ಧ ಫತ್ವಾ ಹೊರಡಿಸಿ ಎಂದು ಯಾವುದೂ ತಲೆಗೆಟ್ಟ ಸಂಘಟನೆಯೊಂದು ಇಸ್ಲಾಂ ರಾಷ್ಟ್ರಗಳಿಗೆ ಕರೆ ನೀಡಿದೆ. ಅದಕ್ಕೆ ಮುಖ್ಯ ಕಾರಣ ಪ್ರವಾದಿ ಮೊಹಮ್ಮದ್ ಅವರ ಕಾರ್ಟೂನ್ ಒಂದನ್ನು ಒಂದು ಶಾಲೆಯ ಟೀಚರ್ ತನ್ನ ಕ್ಲಾಸಿನ ಮಕ್ಕಳಿಗೆ ತೋರಿಸಿ ಪಾಠ ಮಾಡಿದ್ದರಂತೆ. ಈ ವಿಷಯ ಕೇಳಿದ ಇಸ್ಲಾಂ ಮೂಲಭೂತವಾದಿಗಳು ಪ್ಯಾರಿಸ್ ನ ಆ ಶಿಕ್ಷಕಿಯನ್ನು ಅಪಹರಿಸಿ ರುಂಡ ತುಂಡು ಮಾಡಿ ಬಿಸಾಡಿದರಂತೆ. ಇದು ನಿಜಕ್ಕೂ ಅಮಾನವೀಯ ಘಟನೆ. ಆ ಶಿಕ್ಷಕಿಯ ವಿರುದ್ಧ ಅಷ್ಟು ಅಸಮಾಧಾನ ಇದ್ದರೆ ಅವರಿಂದ ಸಾರಿ ಕೇಳಿಸಬಹುದಿತ್ತು. ಇನ್ನು ಹೀಗೆ ಮಾಡಲ್ಲ, ಇದು ಮುಸ್ಲಿಂ ಅವರಿಗೆ ಕೋಪ ಬರುತ್ತದೆ ಎಂದು ಟೀಚರ್ ಕೈಯಿಂದ ಹೇಳಿಸಬಹುದಿತ್ತು. ಆ ಶಿಕ್ಷಕಿಯನ್ನು ಶಾಲೆಯಿಂದ ಅಮಾನತು ಮಾಡಬಹುದಾಗಿತ್ತು. ಆದರೆ ಏಕಾಏಕಿ ಕುತ್ತಿಗೆ ತೆಗೆಯುವುದೆಂದರೆ ಅದು ಅಸಹನೆಯ ಪರಮಾವಧಿ. ಒಂದು ವೇಳೆ ಭಾರತದಲ್ಲಿ ಹಿಂದೂ ದೇವರನ್ನು ಅವಹೇಳನ ಮಾಡಿದವರಿಗೂ ಹೀಗೆ ಆಗುತ್ತಿದ್ದರೆ ಇಲ್ಲಿನ ಬುದ್ಧಿಜೀವಿಗಳು ತಕ್ಷಣ ಮೋರ್ಚಾ ತೆಗೆಯುತ್ತಿದ್ದರು. ಅಮೀರ್ ಖಾನ್ ತನ್ನ ಎರಡನೇಯ ಹೆಂಡತಿ ಮತ್ತು ಆಕೆಯ ಮೊದಲ ಮಗುವನ್ನು ಕರೆದುಕೊಂಡು ಪಾಕಿಸ್ತಾನಕ್ಕೆ ಹೊರಡುತ್ತಿದ್ದ. ಹೋಗುವಾಗ ಏರ್ ಪೋರ್ಟಿನಲ್ಲಿ ಭಾರತ ಅಸಹಿಷ್ಣು ರಾಷ್ಟ್ರ ಎಂದು ಘೋಷಿಸುತ್ತಿದ್ದ. ಶಾರೂಖ್ ಖಾನ್ ತನ್ನ ಪತ್ನಿ, ಮಕ್ಕಳೊಂದಿಗೆ ತನ್ನ ದುಬೈ ಮನೆಗೆ ಹೊರಟು ಹೋಗುತ್ತಿದ್ದ. ದೇವೆಗೌಡ ಅಂತವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎನ್ನುತ್ತಿದ್ದರು. ಪ್ರಕಾಶ್ ರೈ ಕೆಂಡಾಮಂಡಲನಾಗಿ ನಾಲ್ಕು ಪೆಗ್ ಜಾಸ್ತಿ ಕುಡಿದು ಪ್ರೆಸ್ ಮೀಟ್ ಮಾಡುತ್ತಿದ್ದ. ಆದರೆ ಫ್ರಾನ್ಸ್ ಪ್ರಧಾನಿ ಏನು ಮಾಡಿದರು ಗೊತ್ತೆ?
ಇದು ಗೊತ್ತಾದ ಕೂಡಲೇ ಫ್ರಾನ್ಸ್ ಪ್ರಧಾನಿ ಆ ಕಾರ್ಟೂನ್ ನ ದೊಡ್ಡ ಸೈಜ್ ಮಾಡಿ ಎಲ್ಲಾ ಸರಕಾರಿ ಕಟ್ಟಡಗಳ ಮೇಲೆ ಹಾರಿಸಲು ಆದೇಶ ನೀಡಿದರಂತೆ. ಇದರಿಂದ ಕೆರಳಿದ ಇಸ್ಲಾಂ ಸಂಘಟನೆಗಳು ಆ ಫ್ರಾನ್ಸ್ ಪ್ರಧಾನಿ ವಿರುದ್ಧ ಫತ್ವಾ ಹೊರಡಿಸಲು ಯೋಚಿಸುತ್ತಿವೆ. ಯಾವುದೋ ರಾಷ್ಟ್ರದಲ್ಲಿ ಆದ ಘಟನೆಗೆ ಇಡೀ ಇಸ್ಲಾಂ ಆಡಳಿತವುಳ್ಳ ರಾಷ್ಟ್ರಗಳು ರಿಯಾಕ್ಟ್ ಮಾಡಿವೆ. ಆದರೆ ನಮ್ಮಲ್ಲಿ ನೋಡಿ, ಇಲ್ಲಿ ಬಹುಸಂಖ್ಯಾತ ಹಿಂದೂಗಳ ದೇವರನ್ನು ಅವಹೇಳನ ಮಾಡಿದರೂ ನಮ್ಮಲ್ಲಿ ವೋಟಿನ ಕಾರಣಗಳಿಂದಾಗಿ ಮೌನವಾಗಿರುವವರೇ ಹೆಚ್ಚು. ನಮ್ಮ ರಾಷ್ಟ್ರದಲ್ಲಿ ಹಿಂದೂಗಳ ದೇವತೆಗಳನ್ನು ಕೆಟ್ಟದಾಗಿ ಬಿಂಬಿಸಿದರೆ ಮೌನ ಪ್ರತಿಭಟನೆ, ಪಾದಯಾತ್ರೆ ಮಾಡಿ ನಾವು ನೋವು ತೋಡಿಕೊಳ್ಳುತ್ತೇವೆ. ಅದೇ ಬೇರೆ ಧರ್ಮದವರ ದೇವರನ್ನು ಜಗತ್ತಿನ ಯಾವುದೇ ಖಂಡದಲ್ಲಿ ಅವಹೇಳನ ಮಾಡಿದರೆ ಇಡೀ ಇಸ್ಲಾಂ ಪ್ರಪಂಚ ಎದ್ದು ನಿಲ್ಲುತ್ತದೆ.
0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Hanumantha Kamath December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Hanumantha Kamath December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search