ಹಳ್ಳಿಯಲ್ಲಿ ಶುರುವಾಗಿದೆ ಈಗ ಒಂದು ಅಗರಬತ್ತಿಯ ಕಥೆ!
ಮೊನ್ನೆಯಷ್ಟೆ ಒಂದು ಮೊಟ್ಟೆಯ ಕಥೆ ಸಿನೆಮಾ ಬಿಡುಗಡೆಯಾಗಿ ಬಹಳಷ್ಟು ಸುದ್ದಿ ಮಾಡುತ್ತಿದೆ. ಈ ನಡುವೆ ಗ್ರಾಮೀಣ ಭಾಗದಲ್ಲೆಲ್ಲ ಈ ಒಂದು ಅಗರ ಬತ್ತಿ ಬಾರಿ ಸುದ್ದಿಮಾಡಿದೆ. ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವ ಹಾಗೆ ಮೊಟ್ಟೆಯ ಕಥೆಗೂ ಅಗರಬತ್ತಿಯ ಕಥೆಗೂ ಪರಸ್ಪರ ಸಂಬಂಧವಿಲ್ಲ. ವಿಷಯ ಎನೂ ಅಂತ ನಿಮಗೂ ಕುತೂಹಲ ಅಲ್ವ?
ದ.ಕ ಜಿಲ್ಲೆಯ ಕಡಬ ಪರಿಸರ ಮತ್ತು ಕೆಲವು ಭಾಗಗಳಲ್ಲಿಮನೆ ಮನೆಗೆ ಇಬ್ಬರು ಯುವಕರು ಅಗರಬತ್ತಿ ಮಾರಿಕೊಂಡು ಬರುತ್ತಿದ್ದಾರೆ. ಒಂದು ಅಗರ ಬತ್ತಿಯ ಬೆಲೆ ಕೇವಲ ಐದು ರೂಪಾಯಿಗಳು. ಈ ಯುವಕರು ಮಾತ್ರ ಹತ್ತು ರೂಪಾಯಿಗೆ ಎರಡು ಅಗರಬತ್ತಿಗಳನ್ನು ನೀಡುತ್ತ ಬಂದಿದ್ದಾರೆ. ಆ ಅಗರ ಬತ್ತಿ ಕಟ್ಟಿನ ಯಾವೂದಾದರೊಂದರಲ್ಲಿ ಕೂಪನ್ ಇದ್ದೇ ಇರುತ್ತದೆ. ಕೂಪನ್ ಸಿಕ್ಕಿದವರಿಗೆ ಮಿಕ್ಸಿ ಅಥವಾ ಸೋಪಾ ಸೆಟ್ ಗ್ಯಾರಂಟಿ! ಕೂಪನ್ ಅಲ್ಲೆ ಇದೆಯೋ ಇಲ್ಲವೋ ಎಂದು ನೋಡಲು ಹೇಳುತ್ತಾರೆ. ಕೂಪನ್ ತೆಗೆದು ನಿಮಗೆ ಮಿಕ್ಸಿ ಮತ್ತು ಕೆಲವು ಮನೆ ಸಾಮಾಗ್ರಿ ಸಿಗುತ್ತದೆ ಅದೂ ಅರ್ಧ ಬೆಲೆಯಲ್ಲಿ ಎಂದು ಸಾಮಾನ್ಯ ಜನರ ತಲೆಗೆ ಹುಳ ಬಿಡುತ್ತಾರೆ.
ಅಂದ ಹಾಗೆ ಕೂಪನ್ ಸಿಕ್ಕ ಮೇಲೆ ಎಲ್ಲವೂ ಉಚಿತವಾಗಿ ಸಿಗುತ್ತೆ ಅನ್ನೊದು ನಿಮ್ಮ ಭ್ರಮೆ ಅಷ್ಟೆ. ಆದರೆ ಶಿಕ್ಷಣವಂತರಲ್ಲದ ಹಳ್ಳಿ ಜನ ಯಾವುದೇ ಪ್ರಶ್ನೆ ಮಾಡಲು ಹೋಗುವುದಿಲ್ಲ ಮೂರು ಕಂತುಗಳಲ್ಲಿ ನಾಲ್ಕು ಸಾವಿರವನ್ನು ಕಟ್ಟುವಂತೆ ಸೂಚಿಸುತ್ತಾರೆ. ಬಹಳ ಸುಂದರವಾಗಿರುವ ಮಿಕ್ಸಿಯ ಜೊತೆ ಚಮಚ, ತೆಂಗಿನ ಕಾಯಿ ತುರಿಯಲುಬಳಸುವ ಸಾಧನ ಮತ್ತೆ ಉಚಿತವೆಂದು ಹೇಳುತ್ತಾರೆ. ಕಡಿಮೆ ಬೆಲೆಯ ಮಿಕ್ಸಿ ಮತ್ತು ಇತರ ಸಾಮಾಗ್ರಿಗಳನ್ನು ಹೊತ್ತುಕೊಂಡು ಮನೆಮನೆಗೆ ತೆರಲಿ ಅಲ್ಲೆ ಡ್ರಾ ಅಲ್ಲೆ ಬಹುಮಾನ ಎನ್ನುವ ಹಾಗೆ ಪೂರ್ವ ನಿರ್ಧರಿತ ಹೈಟೆಕ್ ವ್ಯವಹಾರ ಮಾಡುತ್ತಾರೆ. ಮುಗ್ದ ಹಳ್ಳಿ ಜನ ಮಾತ್ರ ಮೊಸ ಹೋಗಿದ್ದು ಮಾತ್ರ ಸುಳ್ಳಲ್ಲ.
Leave A Reply