• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾಂಗ್ರೆಸ್ ರಾಜಕೀಯ ದಾಳಕ್ಕೆ ವರದಾನವಾದ ವಿಘ್ನೇಶ್ ನಾಯಕ್ ಆತ್ಮಹತ್ಯೆ!

Hanumantha Kamath Posted On November 26, 2020


  • Share On Facebook
  • Tweet It

ಕೊನೆಗೂ ಕಾಂಗ್ರೆಸ್ಸಿಗರಿಗೆ ಭಾವನಾತ್ಮಕವಾಗಿ ಜನರನ್ನು ಸೆಳೆಯಲು ಒಂದು ವಿಷಯ ಸಿಕ್ಕಿದಂತೆ ಆಗಿದೆ. ಅತ್ತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಎರಡು ದಿನ ಕೂಡ ಕಳೆದಿಲ್ಲ. ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಕನಸುಗಳನ್ನು ಕಣ್ಣಿನಲ್ಲಿ ತುಂಬಿಕೊಂಡು ಇಬ್ಬರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಧಾವಿಸಿದರು. ಅವರಲ್ಲಿ ಒಬ್ಬರು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಐತಿಹಾಸಿಕ ದಾಖಲೆಯ ಅಂತರದಲ್ಲಿ ಸೋತ ಮಿಥುನ್ ರೈ ಹಾಗೂ  ಇನ್ನೊಬ್ಬರು ಯಾವುದೋ ಅದೃಷ್ಟದಲ್ಲಿ ಒಂದು ಬಾರಿ ಶಾಸಕರಾಗಿ ಗೆದ್ದು ಈಗ ಕಾಂಗ್ರೆಸ್ಸಿಗರೇ ಮರೆತಿರುವ ಮಾಜಿ ಶಾಸಕರು.

ಪತ್ರಿಕಾಗೋಷ್ಟಿಯಲ್ಲಿ ಕುಳಿತವರು ಯಾವಾಗಲೂ ಒಂದಿಷ್ಟು ಹೋಂವರ್ಕ್ ಮಾಡಿಕೊಂಡೇ ಬಂದು ಕುಳಿತುಕೊಳ್ಳಬೇಕು. ಕೇವಲ ಯಾರೋ ಕಿವಿಗೆ ಹಾಕಿದ ಗಾಸಿಪ್ ಗಳನ್ನು ನಂಬಿ ಚೀಟಿಯಲ್ಲಿ ಎರಡು ವಾಕ್ಯಗಳನ್ನು ಬರೆದು ಪತ್ರಕರ್ತರು ತಾವು ಹೇಳಿದ್ದನ್ನು ಹಾಗೆ ಕಾಪಿ ಬರೆದುಕೊಂಡು ಹೋಗುತ್ತಾರೆ ಎಂದು ಭ್ರಮೆ ಇಟ್ಟುಕೊಳ್ಳಬಾರದು. ಮಂಗಳವಾರ ಸುದ್ದಿಗೋಷ್ಟಿ ಮಾಡಿದ ಕಾಂಗ್ರೆಸ್ಸಿಗರು ಒಂದಿಷ್ಟು ತಲೆಗೆ ಕೆಲಸ ಕೊಟ್ಟಿದ್ದರೆ ಈ ಪತ್ರಿಕಾಗೋಷ್ಟಿಯೇ ಬೇಡಾ ಎನ್ನುವ ತೀರ್ಮಾನಕ್ಕೆ ಬಂದುಬಿಡುತ್ತಿದ್ದರು. ಆದರೂ ಈ ಪತ್ರಿಕಾಗೋಷ್ಟಿಯ ಪ್ರಚಾರದಿಂದ ಏನಾದರೂ ರಾಜಕೀಯ ಲಾಭ ಆಗುವುದಾದರೆ ಆಗಲಿ ಎನ್ನುವ ಆಸೆಯಿಂದ ಕಾಂಗ್ರೆಸ್ಸಿಗರು ಇದನ್ನು ಮಾಡಿ ಮುಗಿಸಿದ್ದಾರೆ.

ಮೊದಲನೇಯದಾಗಿ ಈ ಆತ್ಮಹತ್ಯೆಯನ್ನು ನಾಲ್ಕು ವರ್ಷಗಳ ಹಿಂದೆ ಕೊಲೆಯಾಗಿರುವ ವಿನಾಯಕ ಬಾಳಿಗಾ ಹತ್ಯೆಗೆ ಲಿಂಕ್ ಮಾಡಲಾಗಿದೆ. ಈ ಎರಡು ಪ್ರಕರಣಗಳನ್ನು ಕೂಡ ಸಿಒಡಿ, ಸಿಬಿಐಗೆ ಕೊಡಬೇಕು ಎನ್ನುವುದು ಮಿಥುನ್ ರೈ ಆಗ್ರಹ. ಸಾಮಾನ್ಯವಾಗಿ ಸ್ಥಳೀಯ ಪೊಲೀಸ್ ತನಿಖೆಯ ಬಗ್ಗೆ ಸಮಾಧಾನ ಇಲ್ಲದೆ ಹೋದರೆ ಮಾತ್ರ ಒಂದು ಪ್ರಕರಣವನ್ನು ಸಿಒಡಿ ಅಥವಾ ಸಿಬಿಐಗೆ ಕೊಡಲಾಗುತ್ತದೆ. ಆದರೆ ವಿನಾಯಕ ಬಾಳಿಗಾ ಕೊಲೆಯಾದಾಗ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದದ್ದು ಸಿದ್ಧರಾಮಯ್ಯನವರ ಸರಕಾರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟರಲ್ಲಿ ಏಳು ಕಾಂಗ್ರೆಸ್ ಶಾಸಕರಿದ್ದರು. ಅವರ ಕೈಯಲ್ಲಿಯೇ ಕಾನೂನು ಸುವ್ಯವಸ್ಥೆ ಅರ್ಥಾತ್ ಪೊಲೀಸ್ ಇಲಾಖೆ ಇತ್ತು.

ಇವರು ಆವತ್ತೆ ನಮಗೆ ಪೊಲೀಸ್ ಇಲಾಖೆಯ ತನಿಖೆಯ ಬಗ್ಗೆ ಅಸಮಾಧಾನ ಇದೆ ಎಂದು ಈಗ ಮಾಡಿರುವ ಪತ್ರಿಕಾಗೋಷ್ಟಿಯನ್ನು ಆವತ್ತೆ ಮಾಡಬಹುದಿತ್ತು. ಆದರೆ ಮಾಡಿರಲಿಲ್ಲ. ಇವರ ಕೈಯಲ್ಲಿಯೇ ಗೃಹ ಇಲಾಖೆ ಇತ್ತು. ನಮೋ ಬ್ರಿಗೇಡ್ ಮುಖಂಡರಾಗಿದ್ದ ನರೇಶ್ ಶೆಣೈಯವರನ್ನು ರಾಜಕೀಯವಾಗಿ ತುಳಿಯಲೇ ಬೇಕು ಎಂದು ಇದ್ದರೆ ಇವರಿಗೆ ಆವತ್ತೆ ಎಲ್ಲಾ ಅವಕಾಶ ಇತ್ತು. ಹಾಗಂತ ಇವರು ಅವಕಾಶ ಬಳಸಿಕೊಳ್ಳಲಿಲ್ಲ ಎಂದಲ್ಲ. ಆದರೆ ಆಗ ಮಂಗಳೂರಿನಲ್ಲಿ ದಕ್ಷ ಪೊಲೀಸ್ ಕಮೀಷನರ್ ಗಳು ಇದ್ದರು. ಪೊಲೀಸ್ ಅಧಿಕಾರಿಗಳ ವಿವಿಧ ತಂಡಗಳನ್ನು ರಚಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗಿತ್ತು. ಅಂತಿಮವಾಗಿ ಈಗ ಪತ್ರಿಕಾಗೋಷ್ಟಿ ಮಾಡಿರುವ ಇವರದ್ದೇ ಕಾಂಗ್ರೆಸ್ ಸರಕಾರ ಇದ್ದಾಗಲೇ ಚಾರ್ಜ್ ಶೀಟ್ ಕೂಡ ಸಲ್ಲಿಸಲಾಗಿತ್ತು. ನ್ಯಾಯಾಲಯ ಆ ಪ್ರಕರಣಗಳಲ್ಲಿ ಎಲ್ಲಾ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಅದಾಗಿ ನಾಲ್ಕು ವರ್ಷಗಳು ಕಳೆದಿವೆ. ಈಗ ಕಾಂಗ್ರೆಸ್ಸಿಗರ ಅಳಲು ಏನೆಂದರೆ ನಾಲ್ಕು ವರ್ಷಗಳ ಹಿಂದೆ ವಿಪಕ್ಷವಾಗಿದ್ದ ಭಾರತೀಯ ಜನತಾ ಪಾರ್ಟಿ ಆವತ್ತು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕಿತ್ತು.

ಇದನ್ನು ಒಂದಿಷ್ಟು ರಾಜಕೀಯ ಗೊತ್ತಿದ್ದವರು ಯಾರಾದರೂ ನಂಬುತ್ತಾರಾ?

ಸುಭದ್ರವಾಗಿದ್ದ ಒಂದು ಸರಕಾರದ ಮೇಲೆ ವಿಪಕ್ಷ ತನ್ನ ಪ್ರಭಾವ ಬಳಸಿ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕಿತ್ತು ಎಂದರೆ ಅದನ್ನು ಕೇವಲ ಹುಡುಗಾಟಿಕೆಯ ಹುಡುಗರು ಮಾತ್ರ ಹೇಳಲು ಸಾಧ್ಯ. ರಾಜಕಾರಣದಲ್ಲಿ ಪ್ರಬುದ್ಧರಾದವರು ಹೀಗೆ ಮಾತನಾಡುವುದಿಲ್ಲ. ಇನ್ನು ವಿನಾಯಕ ಬಾಳಿಗಾ ಪ್ರಕರಣದಲ್ಲಿ ವಿಘ್ನೇಶ್ ನಾಯಕ್ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಊಹಾಪೋಹದ ಮಾತುಗಳು ಬರುತ್ತಿವೆ. ಆದರೆ ಪೊಲೀಸರು ವಿಘ್ನೇಶ್ ನಾಯಕ್ ಅವರನ್ನು ಆವತ್ತು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿದ್ದರಲ್ಲ? ಅದನ್ನು ಹೇಳದೇ ಇರುವುದು ಕಾಂಗ್ರೆಸ್ಸಿನ ಜಾಣಮರೆವಾ? ಒಟ್ಟಿನಲ್ಲಿ ವಿನಾಯಕ ಬಾಳಿಗಾ ಪ್ರಕರಣದಲ್ಲಿ ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ.

ಇನ್ನು ವಿಘ್ನೇಶ್ ನಾಯಕ್ ಪ್ರಕರಣದಲ್ಲಿ ತನಿಖೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ತನಿಖೆ ಪೂರ್ಣ ಆಗುವ ಮೊದಲೇ ಈ ಬಗ್ಗೆ ಪೊಲೀಸರ ಮೇಲೆ ಒತ್ತಡ ಹಾಕಿ ತಮಗೆ ಸರಿ ಅನಿಸಿದ ರೀತಿಯಲ್ಲಿಯೇ ಆಗಬೇಕು ಎಂದು ಕಾಂಗ್ರೆಸ್ ಬಯಸುತ್ತಿರುವುದು ರಾಜಕೀಯ ಪೂರ್ವಾಗ್ರಹ ಅಲ್ಲದೇ ಮತ್ತೇನು? ಒಂದು ವೇಳೆ ಕಾಂಗ್ರೆಸ್ ಬಯಸಿದವರಿಗೆ ಶಿಕ್ಷೆ ಆಗದಿದ್ದರೆ ರಾಜ್ಯ ಸರಕಾರ ಅವರ ಪರವಾಗಿದೆ ಎಂದು ಇವರೇ ಮುಂದೆ ಹೇಳಿಕೆ ನೀಡಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಇನ್ನು ವಿನಾಯಕ ಬಾಳಿಗಾ ತಂಗಿಗೆ ನ್ಯಾಯ ಸಿಗುತ್ತಿಲ್ಲ ಎಂದು ಮಿಥುನ್ ರೈ ಹೇಳುತ್ತಿದ್ದಾರೆ. ಯಾರಿಂದ ತೊಂದರೆಯಾಗುತ್ತಿದೆ, ಯಾವ ಇಲಾಖೆ, ಯಾವ ಅಧಿಕಾರಿ ಎಂದು ಹೇಳಲಿ. ಅವರ ಬಗ್ಗೆ ತನಿಖೆಗೆ ಆಗ್ರಹಿಸಲಿ. ಇನ್ನು ವಿನಾಯಕ ಬಾಳಿಗಾ ತಂಗಿಗೆ ವಿದೇಶದಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಅವರಿಗೆ ರಕ್ಷಣೆ ಕೊಡಿ ಎಂದು ಮಿಥುನ್ ರೈ ಕೇಳುತ್ತಿದ್ದಾರೆ. ವಿದೇಶದಿಂದ ಬಂದ ಕರೆಗಳ ಬಗ್ಗೆ ಪೊಲೀಸರು ತನಿಖೆ ಮಾಡಿ ಆ ಬಗ್ಗೆ ಸತ್ಯಾಸತ್ಯತೆ ಹೊರಗೆ ತರಲಿ. ಇನ್ನು ವಿಘ್ನೇಶ್ ನಾಯಕ್ ಇವರು ವಿನಾಯಕ ಬಾಳಿಗಾ ಸಂಬಂಧಿತ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ತೀರ್ಪು ಬರುವ ಹಿಂದಿನ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಏನೋ ದೊಡ್ಡ ಅನುಮಾನ ಬರುವ ರೀತಿಯಲ್ಲಿ ಒಂದೆರಡು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ.

ಆವತ್ತು ತೀರ್ಪು ಬರಲಿದ್ದದ್ದು ಒಂದು ಸಿವಿಲ್ ವ್ಯಾಜ್ಯ. ದೇವಸ್ಥಾನದ ಪರವಾಗಿರುವ ಪ್ರಕರಣ. ಅದರಲ್ಲಿ ವಿಘ್ನೇಶ್ ವಾದಿಯೇ ವಿನ: ತೀರ್ಪಿನಿಂದ ಅವರಿಗೆ ಏನೂ ಶಿಕ್ಷೆಯಾಗುವಂತದ್ದು ಇರಲಿಲ್ಲ. ಇನ್ನು ಮುನ್ನೂರಕ್ಕೂ ಹೆಚ್ಚು ವಾದಿಗಳಲ್ಲಿ ವಿಘ್ನೇಶ್ ಕೂಡ ಕೇವಲ ಒಬ್ಬ ವಾದಿಯಷ್ಟೇ. ಆ ಪ್ರಕರಣಕ್ಕೂ ಆತ್ಮಹತ್ಯೆಗೂ ಲಿಂಕ್ ಹಾಕುವುದೇ ಸರಿಯಲ್ಲ. ಹಾಗಿರುವಾಗ ಆ ತೀರ್ಪಿಗೆ ಹೆದರಿ ಆತ್ಮಹತ್ಯೆ ಎಂದು ಹೇಳುವುದೇ ಹಾಸ್ಯಾಸ್ಪದ. ಆ ಸಿವಿಲ್ ವ್ಯಾಜ್ಯ ಅಧ್ಯಯನ ಮಾಡಿದರೆ ಅದು ಯಾರಿಗಾದರೂ ಅರ್ಥವಾಗುತ್ತದೆ. ಅದರೊಂದಿಗೆ ನರೇಶ್ ಶೆಣೈಯವರೇ ಮಾಡಿಸಿದ್ದಾರೆ ಎಂದು ಅರ್ಥ ಬರುವ ರೀತಿಯಲ್ಲಿ ಮಾತನಾಡುವುದನ್ನು ನೋಡಿದಾಗ ಇಲ್ಲಿ ರಾಜಕೀಯ ದ್ವೇಷ ಮಾತ್ರ ಎದ್ದು ಕಾಣುತ್ತದೆ. ನರೇಶ್ ಶೆಣೈಯವರು ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಎಂದು ನಮೋ ಬ್ರಿಗೇಡ್ ಮೂಲಕ ತೆರೆಮರೆಯಲ್ಲಿ ಸಾಕಷ್ಟು ಕೆಲಸ ಮಾಡಿದವರು. ಅವರು ಬಿಜೆಪಿಯ ಕಟ್ಟಾ ಕಾರ್ಯಕರ್ತರು. ಅವರನ್ನು ಹೇಗಾದರೂ ಮಾಡಿ ಷಡ್ಯಂತ್ರದಲ್ಲಿ ಸಿಲುಕಿಸಿ ತಮ್ಮ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಅದಕ್ಕೆ ವಿಷ್ನೇಶ್ ನಾಯಕ್ ದಾಳವಾಗುತ್ತಿದ್ದಾರೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search