ನೀರಿನ ಬಾಕಿ ವಸೂಲಿ ಕೇವಲ ಘೋಷಣೆಯಾಗಿಯೇ ಉಳಿಯಿತು!
Posted On November 27, 2020
ಕವಿತಾ ಸನಿಲ್ ಅವರು ತಾನು ಮೇಯರ್ ಅದ ಕೊಡಲೇ ತಾನು ಜನರು ಬಾಕಿ ಇಟ್ಟಿರುವ ನೀರಿನ ಬಿಲ್ ಸುಮಾರು 20 ಕೋಟಿಯಷ್ಟನ್ನು ವಸೂಲಿ ಮಾಡುತ್ತೇವೆ ಎಂದು ಮೆಯರ್ ಕವಿತಾ ಸನಿಲ್ ಅವರು ಘೋಷಿಸಿದ್ದರು.ಅಷ್ಟಕ್ಕೂ ಜನರು ಹತ್ತು ಸಾವಿರಕ್ಕಿಂತಲೂ ಹೆಚ್ಚು ಬಾಕಿ ಇಟ್ಟಿರುವ ನೀರಿನ ಬಿಲ್ 20 ಕೋಟಿಯನ್ನು ವಸೂಲು ಮಾಡಲು ನಾವು ಕ್ರಮ ಕೈಗೊಳ್ಳುತ್ತೆವೆ ಎಂದು ಹೇಳಿದ್ದು ಕವಿತಾ ಸನಿಲ್ ಅವರು ಪ್ರಥಮರೇನಲ್ಲ ಅಥವಾ ಪಾಲಿಕೆಯನ್ನು ಎರಡೂ ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಹತ್ತಿರದಿಂದ ನೋಡಿಕೊಂಡು ಬರುತ್ತಿರುವುದರಿಂದ ಅವರು ಕೊನೆಯವರೂ ಆಗುವ ಸಾಧ್ಯತೆ ಇಲ್ಲ.ಅದಕ್ಕಿಂತ ಮೊದಲು ಹರಿನಾಥ್ ಅವರು ಮೇಯರ್ ಆಗಿದ್ದಾಗಲೂ ಇದೇ ಮಾತನ್ನು ಹೇಳಿದ್ದರು. ಅವರ ಕಾಲದಲ್ಲಿ 10 ಕೋಟಿ ನೀರಿನ ಬಿಲ್ ಬಾಕಿ ಇತ್ತು. ಎಇಇ ನೇತೃತ್ವದಲ್ಲಿ ಐದು ಟೀಮ್ ಆಗಿತ್ತು. ದಿನಕ್ಕೆ ಇಷ್ಟು ಹಣ ವಸೂಲಿ ಮಾಡುವ ಗುರಿ ನಿಗದಿಪಡಿಸಲಾಗಿತ್ತು. ಮೊದಲ ತಿಂಗಳಲ್ಲಿ ಒಂದೂವರೆ ಕೋಟಿ, ಎರಡನೇಯ ತಿಂಗಳಲ್ಲಿ 50 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಮೂರನೇ ತಿಂಗಳಲ್ಲಿ ಕೇವಲ ಹತ್ತು ಲಕ್ಷ ವಸೂಲಿಯಾಗಿತ್ತು.
ಅವರ ಮೊದಲು ಜೆಸಿಂತಾ ಮೇಯರ್ ಆಗಿದ್ದಾಗಲೂ ಇದೇ ಮಾತನ್ನು ಹೇಳಿದ್ದಾರೆ. ಮುಂದೆ ಯಾರಾದರೂ ಬೇರೆ ಮೇಯರ್ ಬಂದರೂ ಬಾಕಿ ಇರುವ ಇಂತಿಂಷ್ಟು ಕೋಟಿಯನ್ನು ವಸೂಲಿ ಮಾಡಿಯೇ ಮಾಡುತ್ತೇವೆ ಎಂದು ಮೇಯರ್ ಅದ ಕೂಡಲೇ ರ್ಘೋಷಣೆ ಮಾಡಿದರೆ ಅದರಲ್ಲಿ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ. ಇದೊಂದು ಸಂಪ್ರದಾಯವಾಗಿ ಜಾರಿಯಲ್ಲಿದೆ ಎನ್ನುವುದು ಮಾತ್ರ ಬೇಸರದ ವಿಷಯ. ಬಹುಶ: ಕವಿತಾ ಸನಿಲ್ ಹೋಗುವ ಸ್ಪೀಡ್ ನೋಡಿದ್ರೆ ಇಪ್ಪತ್ತು ಕೋಟಿಯಲ್ಲಿ ಹತ್ತು ಕೋಟಿ ವಸೂಲಿ ಮಾಡಿದರೂ ಅದು ಒಂದಷ್ಟರ ಮಟ್ಟಿಗೆ ಸಾಧನೆಯಾಗ ಬಹುದೆಂದು ನಾನು ಸಂತೋಷ ಪಟ್ಟೆ ಇಲ್ಲದಿದ್ದರೆ ಏನಾಗುತ್ತೆ ಎಂದರೆ ಮೇಯರ್ ಅವರು ಘೋಷಣೆ ಮಾಡಿ ಹೋಗುತ್ತಾರೆ. ಘೋಷಣೆ ಆದ ಒಂದೆರಡು ತಿಂಗಳು ಈ ಅಧಿಕಾರಿಗಳು ಹೇಗೆ ಫೀಲ್ಡಿಗೆ ಹೊರಡುತ್ತಾರೆ ಎಂದರೆ ಬಾಕಿ ಇರುವವರ ಕಾಲರ್ ಪಟ್ಟಿ ಹಿಡಿದೇ ವಸೂಲಿ ಮಾಡುತ್ತಾರೋ ಎನ್ನುವ ಜೋಶ್ ಇರುತ್ತದೆ. ಇಪ್ಪತ್ತು ಕೋಟಿಯಲ್ಲಿ ಒಂದಿಷ್ಟು ಲಕ್ಷ ಸಂಗ್ರಹ ಆದ ಕೂಡಲೇ ಮೇಯರ್ ಸ್ಥಾನದಲ್ಲಿ ಇದ್ದವರು ಮತ್ತೊಮ್ಮೆ ಸುದ್ದಿಗೋಷ್ಟಿ ಮಾಡುತ್ತಾರೆ. ನಾವು ಒಂದು ಕೋಟಿ ಬಾಕಿಯನ್ನು ಒಂದು ತಿಂಗಳಲ್ಲಿ ಸಂಗ್ರಹ ಮಾಡಿದ್ದೇವೆ ಎಂದು ಘೋಷಿಸುತ್ತಾರೆ. ಅಕ್ಕಪಕ್ಕದಲ್ಲಿ ಕುಳಿತ ಉಪಮೇಯರ್, ಸಚೇತಕರು, ಹಿರಿಯ ಸದಸ್ಯರು ಪಾಲಿಕೆಗೆ ಚಿನ್ನದ ಬಾಗಿಲು ಬಂತೇನೋ ಎನಿಸುವ ಮಟ್ಟಿಗೆ ಫೋಸ್ ಕೊಡುತ್ತಾರೆ. ಒಂದು ತಿಂಗಳಿಗೆ ಒಂದೂವರೆ ಕೋಟಿ ಸಂಗ್ರಹ ಎಂದರೆ ತನ್ನ ಅಧಿಕಾರಾವಧಿಯ ಒಳಗೆ ಎಲ್ಲವೂ ವಸೂಲಿ ಆಗಿಯೇ ಆಗುತ್ತದೆ ಎಂದು ಒಂದು ಭ್ರಮೆಯನ್ನು ವರದಿಗಾರರ ಮನಸ್ಸಿನಲ್ಲಿ ಮೂಡಿಸಲಾಗುತ್ತದೆ. ಅದು ಮಾರನೇ ದಿನ ಹೈಲೈಟ್ ಆಗುತ್ತದೆ. ಬಾಕಿ ಇಟ್ಟಿರುವ ಶ್ರೀಮಂತರು ಒಳಗೊಳಗೆ ಮುಸಿ ಮುಸಿ ನಗುತ್ತಾರೆ. ಆ ಕಥೆ ಏನು? ಯಾಕೆ ಇವರಿಗೆ ಎಲ್ಲಾ ಬಾಕಿಯನ್ನು ಸಂಗ್ರಹ ಮಾಡಲು ಆಗುವುದಿಲ್ಲ, ಅದು ಪ್ರತ್ಯೇಕ ಕಥೆ. ಕರೆಂಟ್ ಬಿಲ್ ಅನ್ನು ಕರೆಕ್ಟಾಗಿ ಕಟ್ಟುವ ಜನ ನೀರಿನ ಬಿಲ್ ಬಂದಾಗ ಯಾಕೆ ಸೋಮಾರಿ ಆಗುತ್ತಾರೆ. ಒಂದೊಂದು ಲಕ್ಷ ನೀರಿನ ಬಿಲ್ ಬಾಕಿ ಇಟ್ಟವರು, ಸಾವಿರಾರು ರೂಪಾಯಿ ಬಾಕಿ ಇಟ್ಟವರು ಯಾಕೆ ಆರಾಮವಾಗಿರುತ್ತಾರೆ.ಎಲ್ಲಾ ಪಾಲಿಕೆ ಸದಸ್ಯರ ಮತ್ತು ನೀರಿನ ವಿಭಾಗದ ಅಧಿಕಾರಿಗಳ Understanding
- Advertisement -
Leave A Reply