ದೀಪಾವಳಿಯಂದು ಮೀನು ವಿವಾದ ಯಾಕಾಯಿತು?

ಗೋವಾದಲ್ಲಿರುವ ಪ್ರತಿಯೊಬ್ಬರನ್ನು ಪೋರ್ಚುಗೀಸರು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೊರಟ ಸಮಯ ಅದು. ಅಲ್ಲಿ ಇದ್ದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಯಾವ ಕಾರಣಕ್ಕೂ ಮತಾಂತರ ಆಗಲ್ಲ ಎಂದು ಪೋರ್ಚುಗೀಸರ ವಿರುದ್ಧ ಸೆಟೆದು ನಿಂತಿತು. ಎಷ್ಟೇ ದೌರ್ಜನ್ಯ, ಹಿಂಸೆಯ ನಡುವೆಯೂ ಪ್ರತಿಭಟಿಸಿದ ಅಸಂಖ್ಯಾತ ಜಿಎಸ್ ಬಿಗಳು ಪ್ರಾಣಾರ್ಪಣೆ ಮಾಡಿದರೇ ವಿನ: ಮತಾಂತರ ಆಗಲಿಲ್ಲ. ಅದರಲ್ಲಿ ಅನೇಕರು ಗೋವಾದಲ್ಲಿ ಇದ್ದಬದ್ದ ತಮ್ಮ ಆಸ್ತಿಪಾಸ್ತಿ, ಹಣ, ಬಂಗಾರ ಎಲ್ಲವನ್ನು ಬಿಟ್ಟು ಕರ್ನಾಟಕದ ಕರಾವಳಿಗೆ ಓಡಿ ಬಂದರು. ಆಗ ಅವರು ತಮ್ಮೊಂದಿಗೆ ತಂದದ್ದು ದೇವರನ್ನು ಮಾತ್ರ. ಒಂದು ಕಾಲದಲ್ಲಿ ಮಂಗಳೂರಿನಲ್ಲಿ ನವರಾತ್ರಿಯ ಸಂದರ್ಭದಲ್ಲಿ ವಿಸರ್ಜನೆಯ ದಿನ ದೇವಿಯ ಮೂರ್ತಿಯನ್ನು ಶೋಭಾಯಾತ್ರೆಯ ಮೂಲಕ ಹೊತ್ತುಕೊಂಡು ಹೋಗುತ್ತಿದ್ದಂತಹ ಕಾರ್ಯಕರ್ತರ ಮೇಲೆ ಅನ್ಯಧರ್ಮಿಯ ಪ್ರಾರ್ಥನಾ ಕೇಂದ್ರದಿಂದ ಕಲ್ಲುಗಳ ಸುರಿಮಳೆ, ದೊಣ್ಣೆಯ ಏಟು ಬಿದ್ದರೂ ಮೂರ್ತಿಯನ್ನು ಬಿಡದೆ ಏಟು ತಿಂದು ಶೋಭಾಯಾತ್ರೆಯನ್ನು ಪರಿಪೂರ್ಣಗೊಳಿಸಿದ ಮಹಾನ್ ಸಹಿಷ್ಣುತಾವಾದಿಗಳು ಇದೇ ಜಿಎಸ್ ಬಿಗಳು.
ಇಂತಹ ಮಹಾನ್ ಸಂಪ್ರದಾಯವಾದಿಗಳಾದ, ದೇವಭಕ್ತರಾದ ಜಿಎಸ್ ಬಿಗಳು ತಮ್ಮ ಆಚಾರ, ವಿಚಾರ, ಸಂಸ್ಕೃತಿಯಿಂದ ದೇವನೊಲುವೆ ಗಳಿಸಿ ಸರಕಾರದ ನೆರವು ಇಲ್ಲದೇ ಇದ್ದರೂ ಸ್ವಾವಲಂಬಿಗಳಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಬೆಳೆದು ನಿಂತಿದ್ದಾರೆ. ಅದು ಹೋಟೇಲುಗಳಿಂದ ಬ್ಯಾಂಕಿಂಗ್ ತನಕ, ಶಿಕ್ಷಣ ಸಂಸ್ಥೆಗಳಿಂದ ರಾಜಕಾರಣದತ್ತ ತಮ್ಮ ಛಾಪು ಮೂಡಿಸಿದ್ದಾರೆ. ನಂಬಿಕೆ ಮತ್ತು ವಿಶ್ವಾಸಕ್ಕೆ ಇನ್ನೊಂದು ಹೆಸರು ಎಂದು ಬೇರೆ ಸಮುದಾಯಗಳಿಂದ ಹೊಗಳಿಸಿಕೊಂಡಿರುವ ಜಿಎಸ್ ಬಿಗಳಲ್ಲಿ ಹಬ್ಬ, ಹರಿದಿನಗಳಿಗೆ ವಿಶೇಷ ಪ್ರಾಧ್ಯಾನತೆ ಇದೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಯುವ ತಲೆಮಾರನ್ನು ಮನಸ್ಸಿನಲ್ಲಿಟ್ಟು ಅಂತವರು ತಮ್ಮ ಸಮಾಜದ ಮೂಲಬೇರುಗಳಿಂದ ವಿಮುಖರಾಗಬಾರದು ಎನ್ನುವ ಕಾರಣಗಳಿಂದ ಹುಟ್ಟಿಕೊಂಡಿದ್ದೇ ಯೂತ್ ಆಫ್ ಜಿಎಸ್ ಬಿ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು, ಪರಮಪೂಜ್ಯ ಗುರುವರ್ಯರ ಆರ್ಶೀವಚನಗಳು, ಭಕ್ತಿ ಸಂಗೀತ, ಕಲೆ, ಸಂಸ್ಕೃತಿಯನ್ನು ಈಗಿನ ಯುವ ಸಮುದಾಯಕ್ಕೆ ಹಿರಿಯರ ಆಶಯವನ್ನು ದಾಟಿಸುವ ಮಾದರಿ ಕೆಲಸವನ್ನು ಯೂತ್ ಆಫ್ ಜಿಎಸ್ ಬಿ ಮಾಡುತ್ತಾ ಬರುತ್ತಿದೆ. ಅದರ ಅಂಗವಾಗಿ ದೀಪಾವಳಿಯ ಸಮಯದಲ್ಲಿ ಮೀನು ತಿನ್ನುವುದು ನಮ್ಮ ಸಂಪ್ರದಾಯ ಅಲ್ಲ ಎನ್ನುವ ಕಿವಿಮಾತನ್ನು ಹೇಳುವ ಕೆಲವೇ ನಿಮಿಷಗಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ವರ್ಷ 2019 ರಲ್ಲಿ ಪ್ರಚುರಪಡಿಸಲಾಗಿತ್ತು. ಆ ವಿಡಿಯೋ ನೋಡಿ ಅದರಲ್ಲಿದ್ದ ಸಂದೇಶವನ್ನು ಅಸಂಖ್ಯಾತ ಜಿಎಸ್ ಬಿಗಳು ಮನಸಾರೆ ಒಪ್ಪಿಕೊಂಡಿದ್ದಾರೆ. ನಮ್ಮಲ್ಲಿ ಯಾವುದೋ ಕಾಲಘಟ್ಟದಲ್ಲಿ ಯಾರೋ ಮಾಡಿದ ತಪ್ಪಿನಿಂದ ಈ ಕ್ರಮ ಬಂದಿರಬಹುದಾಗಿದ್ದೂ, ಇನ್ನು ಹೀಗೆ ದೀಪಾವಳಿಯ ದಿನ ಮೀನು ಸೇವಿಸಲ್ಲ, ಈ ಬಗ್ಗೆ ಜ್ಞಾನ ಮೂಡಿಸಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಆ ವಿಡಿಯೋದಲ್ಲಿ ಯಾವುದೇ ಹೇರಿಕೆಯ ರೀತಿಯ ಆದೇಶವಿರಲಿಲ್ಲ.
ವೈದಿಕ ಹಿನ್ನಲೆಯ ತಳಹದಿಯಲ್ಲಿ ಮೂಡಿಬಂದ ಕಳಕಳಿಯಿತ್ತು. ಆದರೆ ಇದನ್ನು ವಿರೋಧಿಸಬೇಕೆನ್ನುವ ಬೆರಳೆಣಿಕೆಯ ಜನರಿಗೆ ಅದರಲ್ಲಿ ಏನೋ ದೊಡ್ಡ ಅಪವಾದ ಕಂಡುಬಂದಿದೆ. ದುರಾದೃಷ್ಟವಶಾತ್ ಎಲ್ಲಾ ಕಡೆ ಇರುವಂತೆ ಜಿಎಸ್ ಬಿಗಳಲ್ಲಿಯೂ “ಬುದ್ಧಿಜೀವಿ” ಗಳೆನಿಸಿಕೊಂಡವರಿದ್ದಾ
Leave A Reply