• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನೀವು ಕಟ್ಟುವ ತೆರಿಗೆ ಹಣ ಮಂಗಳೂರು ಒನ್ ಕೌಂಟರಿನಲ್ಲಿ ಗುಳುಂ… ಗೋವಿಂದ….

Hanumantha Kamath Posted On December 2, 2020


  • Share On Facebook
  • Tweet It

ಒಂದು ಒಳ್ಳೆಯ ಸಿನೆಮಾ ಬಂದಿರುತ್ತದೆ. ನೀವು ಸಿನೆಮಾ ನೋಡಲು ಟಾಕೀಸಿಗೆ ಹೋಗುತ್ತೀರಿ. ಕೌಂಟರಿನಲ್ಲಿ ಹಣ ಕೊಟ್ಟು ಟಿಕೇಟ್ ತೆಗೆದುಕೊಳ್ಳುತ್ತಿರಿ. ಒಳಗೆ ಹೋಗಿ ಸಿನೆಮಾ ನೋಡಿ ಬರುತ್ತಿರಿ. ಅಲ್ಲಿಗೆ ನಿಮ್ಮ ಮತ್ತು ಅವರ ವ್ಯವಹಾರ ಮುಗಿಯಿತು. ಸಿನೆಮಾ ಮಂದಿರದವರು ನೀವು ಕೊಟ್ಟ ಹಣವನ್ನು ಸಿನೆಮಾದ producerರಿಗೆ ಕೊಟ್ಟಿಲ್ಲದಿದ್ದರೆ ಅದಕ್ಕೆ ನೀವು ಜವಾಬ್ದಾರರಲ್ಲ. ಇನ್ನೂ ಜನರೇ ಇರಲಿಲ್ಲ, ಆದ್ದರಿಂದ ಹಣ ಬಂದಿಲ್ಲ ಎಂದು ಸಿನೆಮಾ ಮಂದಿರದವರು producerರಿಗೆ ಸುಳ್ಳು ಹೇಳಿದರೆ ಅದರಿಂದ ಆತನಿಗೆ ಲಾಸ್ ಆದರೆ ಅದು ಆ producerನ ನಷ್ಟ. ಸಾಮಾನ್ಯವಾಗಿ ಟಿಕೇಟು ಹರಿದು ಕೊಡುವುದರಿಂದ ಅಲ್ಲಿ ಮೋಸ ಆಗುವುದು ಕಡಿಮೆ. ಆದರೆ ಅಲ್ಲಿ ಕೂಡ producer ರನ್ನು ಮೋಸ ಮಾಡಬಹುದು. ಆದರೆ ಅದು ಸಿನೆಮಾ ಮಂದಿರದವರ ಮತ್ತು producerರ ಅಥವಾ ಹಂಚಿಕೆದಾರರ ನಡುವಿನ ವಿಷಯವಾದ್ದರಿಂದ ಸಾಮಾನ್ಯ ಜನರಿಗೆ ಅದು ಸಂಬಂಧವಿಲ್ಲ. ಆದರೆ ಅದೇ ಶೈಲಿಯ ಕಥೆ ನಿಮ್ಮ ಮತ್ತು ಪಾಲಿಕೆಯ ನಡುವೆ ನಡೆದರೆ ಆಗ ಯಾರಿಗೆ ನಷ್ಟ?ಅಂದರೆ ನೀವು ಕಟ್ಟಿದ ತೆರಿಗೆ ಹಣ ಇಲ್ಲಿ ಪಾಲಿಕೆಗೆ ಮುಟ್ಟಿಲ್ಲದಿದ್ದರೆ ಅದು ಯಾರ ತಪ್ಪು?
ಭಾರತೀಯ ಜನತಾ ಪಕ್ಷದ ಸರಕಾರ ಕಳೆದ ಬಾರಿ ರಾಜ್ಯದಲ್ಲಿ ಇದ್ದಾಗ ನಗರಾಭಿವೃದ್ಧಿ ಸಚಿವರಾಗಿದ್ದವರು ಸಜ್ಜನ ರಾಜಕಾರಣಿ ಸುರೇಶ್ ಕುಮಾರ್. ಅವರ ಅಧಿಕಾರಾವಧಿಯಲ್ಲಿ ಅವರು ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಅದರ ಹೆಸರೇ ಮಂಗಳೂರು ಒನ್. ಇಲ್ಲಿ ಮಂಗಳೂರು ಓನ್ ಹಾಗೆ ಬೆಂಗಳೂರಿನಲ್ಲಿ ಬೆಂಗಳೂರು ಒನ್ ಎನ್ನುವ ಹೊಸ ವ್ಯವಸ್ಥೆಯಿಂದ ತೆರಿಗೆ ಕಟ್ಟುವ ನಾಗರಿಕರಿಗೆ ತಮ್ಮ ಕೆಲಸ ಸುಲಭವಾಗಲಿ ಎನ್ನುವುದು ಅವರ ಅನಿಸಿಕೆ ಆಗಿತ್ತು. ಜನರಿಗೆ ಎಲ್ಲಾ ರೀತಿಯ ತೆರಿಗೆ ಕಟ್ಟುವುದಕ್ಕೆ ಒಂದೇ ಕಡೆ ವ್ಯವಸ್ಥೆಯಾಗಲಿ ಎನ್ನುವ ಸದುದ್ದೇಶ ಇದರ ಹಿಂದೆ ಇತ್ತು. ಈ ಕೌಂಟರ್ ಮಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಒಂದು ಕೋಣೆಯಲ್ಲಿ ನಡೆಯುತ್ತಿತ್ತು. ಇದು ಬೆಳಿಗ್ಗೆ ಏಳು ಗಂಟೆಯಿಂದ ರಾತ್ರಿ ಎಂಟು ಗಂಟೆಯ ತನಕ ನಿರಂತರವಾಗಿ ನಡೆಯುತ್ತಿದ್ದರಿಂದ ಪಾಲಿಕೆಯ ವ್ಯಾಪ್ತಿಯ ಜನರಿಗೆ ತುಂಬಾ ಅನುಕೂಲಕರವಾಗುತ್ತಿತ್ತು. ನೀವು ನಿಮ್ಮ ಕಟ್ಟಡದ ತೆರಿಗೆಯನ್ನು ಕಟ್ಟುವುದಿದ್ದರೆ ಅದಕ್ಕೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪುಸ್ತಕ ಎನ್ನುವುದನ್ನು ಒಂದು ಕೊಡುತ್ತಿದ್ದರು. ಅದರಲ್ಲಿ ನೀವು ನಿಮ್ಮ ಕಟ್ಟಡದ ವಿವರಗಳನ್ನು ಮತ್ತು ಕಟ್ಟುವ ತೆರಿಗೆಯನ್ನು
ಅಲ್ಲಿರುವ ಕಾಲಂಗಳಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಬರೆದು ಹಣ ಕಟ್ಟಿ ಬರಬೇಕಾಗಿತ್ತು. ಮಂಗಳೂರು-ಓನ್ ಅಲ್ಲಿ ನೀವು ಕಟ್ಟುವ ಹಣವನ್ನು ತೆಗೆದುಕೊಂಡು ನಿಮ್ಮ ಸ್ವಯಂ ಘೋಷಿತ ಆಸ್ತಿ ತೆರಿಗೆ ಪುಸ್ತಕಕ್ಕೆ ಒಂದು ಸೀಲ್ ಹೊಡೆದು ಕೊಡುತ್ತಿದ್ದರು. ನೀವು ನಿಮ್ಮ ತೆರಿಗೆ ಕಟ್ಟುವ ಪುಸ್ತಕಕ್ಕೆ ಸೀಲ್ ಬಿತ್ತಲ್ಲ, ಆ ಪುಸ್ತಕವನ್ನು ತೆಗೆದುಕೊಂಡು ಮನೆಗೆ ಬರುತ್ತಿದ್ದಿರಿ. ನಿಮ್ಮ ಮನಸ್ಸಿನಲ್ಲಿ ಏನು? ನೀವು ಸ್ವಯಂ ಘೋಷಿತ ಆಸ್ತಿ ತೆರಿಗೆ ಕಟ್ಟಿದ್ದೀರಿ ಎಂದೇ ಇರುತ್ತಿತ್ತು. ಆದರೆ ವಾಸ್ತವ ಏನು? ನಿಮ್ಮ ಹಣ ಆ ಕೌಂಟರಿನ ಒಳಗೆನೆ ಗುಳುಂ ಆಗುತ್ತಿತ್ತು. ನೀವು ಕಟ್ಟಿದ ಹಣವನ್ನು ಕಂಪ್ಯೂಟರಿನಲ್ಲಿ ಎಂಟ್ರಿ ಮಾಡುತ್ತಲೇ ಇರಲಿಲ್ಲ. ಅದು ನಿಮಗೆ ಗೊತ್ತಾಗುವುದಿಲ್ಲ. ಹೇಗೆಂದರೆ ನಿಮಗೆ ಅದು ಸಂಬಂಧಪಡದ ವಿಷಯ ಎಂದೇ ಇರುತ್ತಿತ್ತು. ಹೇಗೂ ನನ್ನ ಪುಸ್ತಕದಲ್ಲಿ ಸೀಲ್ ಬಿದ್ದಿದ್ದೆಯಲ್ಲ, ನಾನು ನಿಯಮ ಪ್ರಕಾರ ನಡೆದುಕೊಂಡಿದ್ದೇನೆ ಎಂದು ಇರುತ್ತಿತ್ತು. ಅದು ಸರಿ ಕೂಡ. ಆದರೆ ಮಂಗಳೂರು ಓನ್ ಕೆಲವು ಸಿಬ್ಬಂದಿ ಮಾತ್ರ ನಿಮ್ಮ ಬಳಿ ಮುಗುಳ್ನಗುತ್ತಾ ಹಣ ಪಡೆದುಕೊಂಡು ಅದನ್ನು ತಮ್ಮ ಕಿಸೆಗೆ ಇಳಿಸಿಕೊಳ್ಳುತ್ತಿದ್ದರು. ಯಾವಾಗ ಆ ಹಣ ಕಂಪ್ಯೂಟರಿನಲ್ಲಿ ಎಂಟ್ರಿ ಆಗುವುದಿಲ್ಲವೊ ಅದು ಪಾಲಿಕೆಯನ್ನು ಸೇರುತ್ತಿರಲಿಲ್ಲ. ಅದರಿಂದ ನಿಮ್ಮ ಹಣ ಗೋವಿಂದ ಆಗುತ್ತಿತ್ತು.
ಈ ವಿಷಯ ಆವತ್ತಿನ ದಿನಗಳಲ್ಲಿ Indian Express ನ ಮಂಗಳೂರು ಆವೃತ್ತಿಯಲ್ಲಿ ಬಂದಿತ್ತು.ಅಗ ಮಂಗಳೂರಿನ ವರದಿಗಾರರಾಗಿರುವ ರಾಜೇಶ್ ಶೆಟ್ಟಿಯವರು “ಮಂಗಳೂರು ಓನ್ ನಲ್ಲಿ ಮೂರು ಕೋಟಿಯ ಗೋಲ್ ಮಾಲ್ ಆಗಿದೆ” ಎನ್ನುವ ವಿಷಯದಲ್ಲಿ ವರದಿ ಮಾಡಿದ್ದರು. ಆ ವರದಿಯ ಆಧಾರದ ಮೇಲೆ ಪಾಲಿಕೆಯ ಪರಿಷತ್ ನಲ್ಲಿ ಬಿಜೆಪಿಯ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ವಿಜಯಕುಮಾರ್ ಶೆಟ್ಟಿಯವರು ಪ್ರಶ್ನೆ ಎತ್ತಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ಸಿನ ಸದಸ್ಯರ ನಡುವೆ ಮಾತಿನ ಚಕಮಕಿ ಆಗಿತ್ತು. ಆಗ ಮನಪಾದಲ್ಲಿ ಮೇಯರ್ ಆಗಿದ್ದವರು ಮಹಾಬಲ ಮಾರ್ಲ . ಮಹಾಬಲ ಮಾರ್ಲ ಅವರು ಒಂದು ಸಮಿತಿಯನ್ನು ರಚಿಸಿದರು. ಅದರ ಅಧ್ಯಕ್ಷತೆಯನ್ನು ಬಿಜೆಪಿ ಸದಸ್ಯ ವಿಜಯಕುಮಾರ್ ಶೆಟ್ಟಿ ಅವರಿಗೆ ವಹಿಸಿಕೊಡಲಾಯಿತು. ಈ ಸಮಿತಿಗೆ ಒಂದು ತಿಂಗಳ ಅವಧಿ ಕೊಟ್ಟು ಅಷ್ಟರಲ್ಲಿ ಮಂಗಳೂರು ಓನ್ ಇದರ ಎಲ್ಲಾ ಗೋಲ್ ಮಾಲ್ ಗಳ ವರದಿ ಕೊಡಬೇಕೆಂದು ಸೂಚಿಸಲಾಯಿತು. ಈ ಸಮಿತಿಯವರು ವರದಿ ಕೊಟ್ಟರಾ? ಪತ್ರಿಕೆ ಓದಿ ಪರಿಷತ್ ನಲ್ಲಿ ಪ್ರಶ್ನೆ ಕೇಳಿದವರಿಗೆ ಆ ಗೋಲ್ ಮಾಲ್ ನ ಹಕೀಕತ್ತು ಗೊತ್ತಿತ್ತಾ? ಒಂದು ತಿಂಗಳ ಬಳಿಕ ಏನಾಯಿತು?
  • Share On Facebook
  • Tweet It


- Advertisement -


Trending Now
ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
Hanumantha Kamath July 5, 2022
ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
Hanumantha Kamath July 4, 2022
Leave A Reply

  • Recent Posts

    • ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
  • Popular Posts

    • 1
      ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • 2
      ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • 3
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 4
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 5
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search