ಎನ್ ಆರ್ ಸಿ ಗೋಲಿಬಾರ್ ಗೆ ಪ್ರತಿಕಾರವಾಗಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ತಲವಾರು ದಾಳಿ?
			      		
			      		
			      			Posted On December 16, 2020			      		
				  	
				  	
							0
						
						
										  	 
			    	    ಮಂಗಳೂರು: ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ರಥಬೀದಿ ನ್ಯೂಚಿತ್ರ ಟಾಕೀಸ್ ಮುಂಭಾಗದಲ್ಲಿ ನಡೆದಿದೆ.

ಎನ್.ಆರ್.ಸಿ – ಸಿಎಎ ಕಾಯ್ದೆ ವಿರೋಧಿಸಿ ಕಳೆದ ವರ್ಷ ನಡೆಸಿದ್ದ ಹಿಂಸಾತ್ಮಕ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಗೋಲಿಬಾರ್ ಗೆ ಇಬ್ಬರು ಮೃತಪಟ್ಟ ಘಟನೆಯ ಪ್ರತಿಕಾರವಾಗಿ ಮಂಗಳೂರಿನಲ್ಲಿ ಪೊಲೀಸ್ ಪೇದೆಯೊಬ್ಬರ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ ಎನ್ನುವ ಶಂಕೆಯಿದೆ. ಈಗಾಗಲೇ ಭಯೋತ್ಪಾದಕ ಸಂಘಟನೆ ಲಷ್ಕರ್ ಪರವಾಗ ಗೋಡೆ ಬರಹದಲ್ಲಿ ಉಗ್ರ ಚಟುವಟಿಕೆಗಳು ಸಕ್ರಿಯವಾಗಿರುವ ಕುರಿತು ಅನುಮಾನ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಮತ್ತೆ ಮಂಗಳೂರಿನಲ್ಲಿ ಗಲಭೆ ನಡೆಸುವ ಹುನ್ನಾರವಿದೆಯೇ ಎನ್ನುವ ಅನುಮಾನ ಕಾಡಿದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿರುವ ಪೊಲೀಸ್ ಪೇದೆ ಗಣೇಶ್ ಕಾಮತ್ ಪ್ರಾಣಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 
		    				         
								     
								    








