ಪೊಲೀಸ್ ಕಾನ್ಸಟೇಬಲಿನ ಕೊಲೆಯತ್ನ ಆಗುವಷ್ಟು ನಮ್ಮ ಪೊಲೀಸ್ ಇಲಾಖೆ ಬಲಿಷ್ಟವಾಗಿದೆ!
ಮಂಗಳೂರಿನ ನಟ್ಟನಡು ಭಾಗದಂತೆ ಇರುವ ಹಳೆಯ ನ್ಯೂಚಿತ್ರಾ ಥಿಯೇಟರ್ ಬಳಿ ಹಾಡುಹಾಗಲೇ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಬೈಕಿನಲ್ಲಿ ಬಂದ ರಾಕ್ಷಸರು ತಲವಾರಿನಿಂದ ಹಲ್ಲೆ ಮಾಡುತ್ತಾರೆ ಎಂದರೆ ಮಂಗಳೂರು ನಗರದ ಪರಿಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂದು ನೀವೆ ಊಹಿಸಿ. ಇದರಲ್ಲಿ ಸಂಶಯವೇ ಬೇಡಾ, ಮಂಗಳೂರಿನ ಲಾ ಅಂಡ್ ಆರ್ಡರ್ ಪಾತಾಳಕ್ಕೆ ತಲುಪಿದೆ. ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಿನಿಂದ ಕ್ರೈಂ ರೇಟ್ ಸಿಕ್ಕಾಪಟ್ಟೆ ಏರಿದೆ. ಇಲ್ಲಿ ಹಲ್ಲೆ, ಕೊಲೆ ಯತ್ನ ಹಾಗೂ ಕೊಲೆ ಪ್ರಕರಣಗಳು ಯಾವಾಗ ಬೇಕಾದರೂ ಯಾರ ಮೇಲೆ ಬೇಕಾದರೂ ಆಗಬಹುದು ಎನ್ನುವ ವಾತಾವರಣ ಇದೆ. ನಿನ್ನೆ ಅಡ್ಡೂರ್ ಬಳಿ ಕೂಡ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆಯಾಗಿದೆ. ಹಿಂದಿನ ತಿಂಗಳಷ್ಟೇ ಸರಣಿ ಕೊಲೆ ಯತ್ನಗಳು ನಡೆದಿದ್ದವು. ಇಷ್ಟಾದರೂ ಇದನ್ನು ಪೊಲೀಸ್ ವೈಫಲ್ಯ ಎಂದು ಹೇಳದೆ ಮತ್ತೇನು ಹೇಳುವುದು. ಅಷ್ಟಕ್ಕೂ ನ್ಯೂಚಿತ್ರಾ ಬಳಿ ಗಣೇಶ್ ಕಾಮತ್ ಎನ್ನುವ ಪೊಲೀಸ್ ಸಿಬ್ಬಂದಿಯ ಮೇಲೆ ಕೊಲೆಯತ್ನ ಆಗಿರುವುದಕ್ಕೆ ಸಿಎಎ ವಿರುದ್ಧದ ದೇಶದ್ರೋಹಿಗಳ ಹೋರಾಟವನ್ನು ಹತ್ತಿಕ್ಕುವಲ್ಲಿ ಗಣೇಶ್ ಕಾಮತ್ ಕರ್ತವ್ಯ ನಿರ್ವಹಿಸಿದ್ದೇ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಹಿಡಿದು ತಕ್ಕಪಾಠ ಮಾಡಬಹುದು. ಆದರೆ ವಿಷಯ ಇರುವುದು ಮೂಲದಲ್ಲಿ. ಆವತ್ತು ಮಂಗಳೂರಿನಲ್ಲಿ ಸಿಎಎ ಗಲಭೆಯಾದಾಗ ಪೊಲೀಸ್ ಕಮೀಷನರ್ ಆಗಿದ್ದ ಹರ್ಷ ಅವರು ಸಾರ್ವಜನಿಕರಿಂದ ದೊಂಬಿ, ಗಲಭೆಗೆ ಸಂಬಂಧಿಸಿದ ದೃಶ್ಯಗಳು ಸಿಸಿ ಕ್ಯಾಮೆರಾ ಅಥವಾ ಇನ್ಯಾವುದೇ ವಿಡಿಯೋ ಇದ್ದರೆ ತಮಗೆ ಒಪ್ಪಿಸಿದರೆ ಅದನ್ನು ಪರಿಶೀಲಿಸಿ ದೊಂಬಿಯಲ್ಲಿ ಭಾಗವಹಿಸಿದವರನ್ನು ಬಂಧಿಸಲಾಗುವುದು ಎಂದು ಹೇಳಿದ್ದರು. ಆ ಪ್ರಕಾರ ಜನರು ಕೂಡ ಯಥೇಚ್ಚ ಪ್ರಮಾಣದಲ್ಲಿ ಗಲಭೆಕೋರರು ಕಾಣಿಸುತ್ತಿದ್ದ ವಿಡಿಯೋಗಳನ್ನು ಪೊಲೀಸ್ ಇಲಾಖೆಗೆ ನೀಡಿದ್ದರು. ಅಂತಹ ವಿಡಿಯೋಗಳನ್ನು ವರ್ಗೀಕರಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಅಧಿಕಾರಿಗಳು ಕಳುಹಿಸಿಕೊಟ್ಟಿದ್ದರು. ಆಯಾ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ತಮಗೆ ಬಂದ ವಿಡಿಯೋಗಳಲ್ಲಿರುವ ವ್ಯಕ್ತಿಗಳನ್ನು ನೋಡಿ ಅವರನ್ನು ಗುರುತು ಹಿಡಿದು ಪತ್ತೆ ಹಚ್ಚಿ ಬಂಧಿಸಿದ್ದರು. ಬಹುಶ: ಅದು ಒಟ್ಟು 106. ಅಷ್ಟು ಜನರನ್ನು ಬಂಧಿಸಿದ ಬಳಿಕ ಪೊಲೀಸರ ವಶಕ್ಕೆ ಪಡೆದುಕೊಳ್ಳುವ, ವಿಚಾರಿಸಿಕೊಳ್ಳುವ ವೇಗಕ್ಕೆ ಕಡಿವಾಣ ಬಿತ್ತು. ಅದರ ನಂತರ ಉನ್ನತ ಪೊಲೀಸ್ ಅಧಿಕಾರಿಗಳು ಮೌನಕ್ಕೆ ಜಾರಿದರು. ಅವರಿಗೆ ಯಾರದಾದರೂ ಒತ್ತಡವಿತ್ತಾ?
ಸರಿಯಾಗಿ ನೋಡಿದರೆ ನಿಜವಾಗಿ ಮುಂಚೂಣಿಯಲ್ಲಿದ್ದು ಗಲಭೆ, ದೊಂಬಿಯನ್ನು ಸೃಷ್ಟಿಸಿದಂತಹ ಆರೋಪಿಗಳ ಬಂಧನವಾಗಲೇ ಇಲ್ಲ. ಗಲಭೆಯ ಹಿಂದಿದ್ದ ಮೈಂಡ್ ಗಳು ಜಾರಿಕೊಂಡಿದ್ದರು. ಕೇಸು ನಿಧಾನವಾಗಿ ಹಳ್ಳ ಹಿಡಿದಿತ್ತು. ಅಸಂಖ್ಯಾತ ಜನರು ಸ್ಟೇಟ್ ಬ್ಯಾಂಕ್, ಬಂದರು ಪ್ರದೇಶದಲ್ಲಿ ಸೃಷ್ಟಿಸಿದ ಅಕ್ಷರಶ: ಪೊಲೀಸರ ವಿರುದ್ಧದ ಯುದ್ಧದಲ್ಲಿ ನಿಜವಾದ ಸಮಾಜಘಾತುಕರು ಕಂಬಿಯ ಹಿಂದೆ ಬರಲೇ ಇಲ್ಲ. ಇದು ಬಹುದೊಡ್ಡ ಆಪತ್ತು ಮುಂದೆ ಬರಲಿರುವ ಅಪಾಯದ ಸೂಚನೆಯಾಗಿತ್ತು. ಆವತ್ತು ಪೊಲೀಸರನ್ನು ಮಣಿಸುವಲ್ಲಿ ಕಲ್ಲು ತೂರಾಟಗಾರರು, ಬೆಂಕಿ ವೀರರು ಯಶಸ್ವಿಯಾಗದೇ ಇದ್ದಿರಬಹುದು. ಆದರೆ ಅವರಲ್ಲಿ ದ್ವೇಷದ ಜ್ವಾಲೆ ಪ್ರಜ್ವಲಿಸುತ್ತಿತ್ತು. ಅವರು ಈಗ ಒಂದೊಂದಾಗಿ ತಮ್ಮ ರೋಷವನ್ನು ಬಡಪಾಯಿ ಪೊಲೀಸ್ ಕಾನ್ಸಟೇಬಲ್ ಗಳ ಮೇಲೆ ತೀರಿಸಲು ಸಜ್ಜಾಗಿದ್ದಾರೆ. ಪೊಲೀಸ್ ಕಮೀಷನರ್, ಡಿಸಿಪಿ, ಎಸಿಪಿ ಶ್ರೇಣಿಯ ಅಧಿಕಾರಿಗಳನ್ನು ಮುಟ್ಟುವಷ್ಟು ಗಟ್ಸ್ ದುರುಳರಿಗೆ ಇರುವುದಿಲ್ಲ. ಈ ಕಾನ್ಸಟೇಬಲ್ ಗಳು ಪಾಪ, ಬಿಸಿಲಿಗೆ, ಮಳೆಗೆ ನಿಂತು ಯಾವಾಗ ತಮ್ಮ ರಸ್ತೆಯಲ್ಲಿ ಉನ್ನತ ಅಧಿಕಾರಿಗಳು ಗಸ್ತಿಗೆ ಬರುತ್ತಾರೆ ಎಂದು ಕಾದು ಸೆಲ್ಯೂಟ್ ಹೊಡೆಯುವ ನಡುವೆ ಹೀಗೆ ರಕ್ಕಸರಿಂದ ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಮಲಗಬೇಕಾಗುತ್ತದೆ. ಹೀಗಾದರೆ ಹೇಗೆ?
ನಗರದಲ್ಲಿ ಸರಿಯಾಗಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲ. ಕೆಲವರು ಆರಾಮವಾಗಿ ಬಂದು ನಗರದ ಗೋಡೆಗಳ ಮೇಲೆ ದೇಶದ್ರೋಹಿ ಹೇಳಿಕೆಗಳನ್ನು ಬರೆದು ಹೋಗುತ್ತಾರೆ. ಕೇಳಿದ್ರೆ ಅವರು ಪ್ರಚಾರಕ್ಕಾಗಿ ಬರೆದರು ಎಂದು ಪೊಲೀಸ್ ಕಮೀಷನರ್ ಸುದ್ದಿಗೋಷ್ಟಿಯಲ್ಲಿ ಹೇಳುತ್ತಾರೆ. ಇತ್ತ ಕಾನ್ಸಟೇಬಲ್ ಮೇಲೆ ತಲವಾರು ದಾಳಿಯಾಗುತ್ತದೆ. ಇದು ಕೂಡ ಪ್ರಚಾರಕ್ಕಾಗಿ ಮಾಡಿದ್ರು ಎಂದು ನಾಳೆ ಹೇಳಬಹುದು. ಅಡ್ಡೂರ್ ನಲ್ಲಿ ಒಬ್ಬನ ಮೇಲೆ ಹಲ್ಲೆಯಾಗಿ 24 ಗಂಟೆಯಾಗಿಲ್ಲ. ಬಹುಶ: ಅದು ಕೂಡ ಪ್ರಚಾರಕ್ಕಾಗಿಯೇ ಇರಬಹುದು. ಹೀಗೆ ಆದರೆ ಮಂಗಳೂರಿನಲ್ಲಿ ನಡೆಯುವುದೇ ಕಷ್ಟವಾಗಬಹುದು. ಯಾಕೆಂದರೆ ಪೊಲೀಸರ ಪ್ರಕಾರ ಪ್ರಚಾರದ ಹುಚ್ಚು ಇರುವವರು ಮಂಗಳೂರಿನಲ್ಲಿ ಬೀದಿಬೀದಿ ಸುತ್ತಾಡುತ್ತಿದ್ದಾರೆ. ಅವರು ಯಾವಾಗ ಯಾವ ಗೋಡೆ ಮೇಲೆ ಲಷ್ಕರ್ ಪರ ಬರೆಯುತ್ತಾರೋ, ಯಾವಾಗ ತಲವಾರು ಬೀಸುತ್ತಾರೋ, ಯಾವಾಗ ಯಾರ ಹೆಣ ಬೀಳುತ್ತೋ ಗೊತ್ತಿಲ್ಲ. ಪೊಲೀಸ್ ಕಮೀಷನರ್ ಅಧಿಕಾರಕ್ಕೆ ಬಂದ ಆರಂಭದಲ್ಲಿ ರೌಡಿಗಳ ಪೇರೇಡ್ ಮಾಡಿದ್ರು. ನಂತರ ಈಗ ಏನೂ ಇಲ್ಲ. ತಮ್ಮದೇ ಇಲಾಖೆಯ ಸಿಬ್ಬಂದಿಯ ಮೇಲೆ ಮತಾಂಧರು ಹಲ್ಲೆ ಮಾಡಿದ ನಂತರವೂ ಪೊಲೀಸರು ಎದ್ದೇಳದಿದ್ದರೆ, ಹದ್ದಿನಗಣ್ಣು ಬಳಸದೇ ಇದ್ದರೆ ಮುಂದಿನ ದಿನಗಳಲ್ಲಿ ನಮ್ಮನ್ನು ದೇವರೇ ಕಾಪಾಡಬೇಕು!!
Leave A Reply