ಪಾಕಿಸ್ತಾನದಲ್ಲಿರುವ ಅಪ್ಪಂದಿರಿಗೆ ಜೈಕಾರ ಹಾಕಿದವರ ವಿರುದ್ಧ ಬಿಜೆಪಿಯ ಪ್ರತಿಭಟನೆ!!

ಒಂದು ಗ್ರಾಮ ಪಂಚಾಯತ್ ನ ನಾಲ್ಕು ಸೀಟುಗಳನ್ನು ಗೆದ್ದಿರುವುದಕ್ಕೆ ಬೆಳ್ತಂಗಡಿಯ ಎಸ್ ಡಿಪಿಐ ಕಾರ್ಯಕರ್ತರು ಪಾಕಿಸ್ತಾನದಲ್ಲಿರುವ ತಮ್ಮ ಅಪ್ಪಂದಿರಿಗೆ ಜೈಕಾರ ಹಾಕಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೇ ಈ ರೀತಿ ಆದರೆ ನಾಳೆ ಇವರೇನಾದರೂ ಸಂಸದರೋ, ಶಾಸಕರೋ ಆದರೆ ಆ ಕ್ಷೇತ್ರ ಮಿನಿ ಪಾಕಿಸ್ತಾನ ಆಗುವುದರಲ್ಲಿ ಸಂಶಯವಿಲ್ಲ. ಈ ನೆಲದಲ್ಲಿ ಹುಟ್ಟಿ, ಇಲ್ಲಿನ ಸರಕಾರಗಳು ನೀಡುವ ಸಾಸಿವೆಯಿಂದ ಆಗಸದ ತನಕ ಪ್ರತಿ ಯೋಜನೆಯ ಅಷ್ಟೂ ಲಾಭವನ್ನು ಸಾರಾಸಗಟಾಗಿ ಪಡೆದು, ಇಲ್ಲಿಯ ಎಲ್ಲಾ ಉಚಿತಗಳನ್ನು ಎರಡೂ ಕೈಗಳಿಂದ ಬಾಚಿಕೊಂಡು, ಇಲ್ಲಿನ ಗಾಳಿ, ನೀರು ಸೇವಿಸಿ ಒಂದು ಗ್ರಾಮ ಪಂಚಾಯತ್ ನ ಬೆರಳೆಣಿಕೆಯ ಸೀಟುಗಳನ್ನು ಗೆದ್ದ ಕೂಡಲೇ ಇವರು ಈ ಪರಿ ಪಾಪಿ ರಾಷ್ಟ್ರಕ್ಕೆ ಜಿಂದಾಬಾದ್ ಕೂಗುತ್ತಾರೆ ಎಂದರೆ ನಿಜಕ್ಕೂ ಅಲ್ಲಿ ಇಮ್ರಾನ್ ಖಾನ್ ಇಂತವರನ್ನು ಹುಟ್ಟಿಸಿದ್ದಕ್ಕೆ ತಡ ರಾತ್ರಿ ಎದ್ದು ಹಾಲು ಕುಡಿದಷ್ಟು ಸಂತೋಷ ಪಟ್ಟಿರಬೇಕು. ಇಂತಹ ಸಂದರ್ಭದಲ್ಲಿ ಆಶ್ಚರ್ಯ ಎನ್ನುವಂತೆ ಕಾಂಗ್ರೆಸ್ ಈ ಘೋಷಣೆಗಳನ್ನು ವಿರೋಧಿಸದೇ ಮೌನವಾಗಿ ಕುಳಿತಿರುವುದು. ಕಳೆದ ಚುನಾವಣೆಯಲ್ಲಿ ಧಮಯ್ಯ ನಿಮ್ಮ ಅಭ್ಯರ್ಥಿಯನ್ನು ಹಿಂದಕ್ಕೆ ತೆಗೆದುಕೊಳ್ಳಿ ಎಂದು ಎಸ್ ಡಿಪಿಐಗಳನ್ನು ಕಾಡಿ ಬೇಡಿದ ಬಂಟ್ವಾಳದಲ್ಲಿ ರೈಗಳು ಕೊನೆಗೂ ಗೆಲ್ಲಲಾಗಿರಲಿಲ್ಲ. ಖಾದರ್ ಅವರಿಗೆ ಇಂತವರು ಯಾವತ್ತಿಗೂ ತಲೆನೋವಿನ ಸಂಗತಿ. ಆದರೆ ಎಸ್ ಡಿಪಿಐಗಳಿಗೆ ಬೈದರೆ ಮುಸ್ಲಿಮರಿಗೆ ಬೈದಂತೆ ಎಂದು ಅಂದುಕೊಂಡಿರುವ ಕಾಂಗಿಗಳು ಇನ್ನು ಕೂಡ ಎಚ್ಚೆತ್ತುಕೊಂಡಿಲ್ಲ. ಅದು ಕಾಂಗ್ರೆಸ್ಸಿನ ಹಣೆಬರಹ ಎಂದು ಇಟ್ಟುಕೊಳ್ಳೋಣ. ಆದರೆ ಭಾರತೀಯ ಜನತಾ ಪಾರ್ಟಿಗೆ ಏನಾಗಿದೆ. ಸ್ವಾಮಿ, ನೀವು ಆಡಳಿತಕ್ಕೆ ಬಂದು ಒಂದೂವರೆ ವರ್ಷಗಳಾಗಿದೆ. ಪಾಲಿಕೆಯಿಂದ ಕೇಂದ್ರದ ತನಕ ನೀವೆ ಅಧಿಕಾರದಲ್ಲಿದ್ದೀರಿ. ಆದರೆ ಇವತ್ತಿಗೂ ಡಿಸಿ ಕಚೇರಿಯ ಹೊರಗೆ ಗುಂಪು ಸೇರಿ ಹೋರಾಟ ಮಾಡುತ್ತೀರಿ. ಯಾರ ವಿರುದ್ಧ?
ಬಿಜೆಪಿಯನ್ನು, ಹಿಂದೂತ್ವವಾದಿಗಳನ್ನು ಬೆಳಗ್ಗಿನಿಂದ ರಾತ್ರಿಯ ತನಕ ನಖಾಶಿಖಾಂತ ದ್ವೇಷಿಸುವ ವಾಂತಿ ಭಾರತಿ ಪತ್ರಿಕೆಯ 18 ನೇ ವಾರ್ಷಿಕ ವಿಶೇಷಾಂಕ ಪತ್ರಿಕೆಯ ಬಿಡುಗಡೆಗೆ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೋಗಿ ಪ್ರಜಾಪ್ರಭುತ್ವ ಹಾಗೂ ಜನರ ಧ್ವನಿಗೆ ಶಕ್ತಿ ತುಂಬಿದ ಪತ್ರಿಕೆ ಎಂದು ಹೊಗಳಿ ಬರುತ್ತಾರೆ. ಅದೇ ಪತ್ರಿಕೆ ಎಸ್ ಡಿಪಿಐಗಳನ್ನು ಬೆಂಬಲಿಸಿ ಮಾತನಾಡುತ್ತದೆ. ನೀವು ಅವರ ವಿರುದ್ಧವೂ ಹೋರಾಟ ಮಾಡುತ್ತೀರಾ? ಉಜಿರೆಯಲ್ಲಿ ಎಸ್ ಡಿಪಿಐ ಕಾರ್ಯಕರ್ತರು ತಾವು ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ್ದನ್ನು ವರದಿ ಮಾಡಿದ ದಿಗ್ವಿಜಯ್ ಟಿವಿ ವಾಹಿನಿಯ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಬಿಜೆಪಿಯ ಡಿಸಿಎಂ ತಮ್ಮ ಪಕ್ಷದ ವಿರುದ್ಧ ಕೆಂಡ ಕಾರುವ ಪತ್ರಿಕೆಯನ್ನು ಹಾಡಿ ಹೊಗಳುತ್ತಾರೆ. ಮೊನ್ನೆ ಒಂದು ವಾಹಿನಿಯಲ್ಲಿ ಸಿಎಫ್ ಐ ಮುಖಂಡನೊಬ್ಬ ಆರ್ ಎಸ್ ಎಸ್ ಭಯೋತ್ಪಾದನಾ ಚಟುವಟಿಕೆ ನಡೆಸುತ್ತದೆ ಎಂದು ಬಹಿರಂಗವಾಗಿ ಹೇಳುತ್ತಿದ್ದ. ಅದೇ ಪ್ಯಾನಲ್ ನಲ್ಲಿ ಇದ್ದ ಬಿಜೆಪಿ ವಕ್ತಾರರಿಗೆ ಮಾತ್ರ ಪಿಎಫ್ ಐ ಭಯೋತ್ಪಾದನಾ ಚಟುವಟಿಕೆ ನಡೆಸುತ್ತದೆ, ಅದನ್ನು ನಿಷೇಧಿಸಬೇಕು ಎನ್ನುವ ಧಮ್ ಇರಲಿಲ್ಲ. ಇವತ್ತಿಗೂ ಎಸ್ ಡಿಪಿಐ ಚುನಾವಣೆಗೆ ನಿಲ್ಲುವುದರಿಂದ ತಮಗೆ ಲಾಭ ಎಂದು ಬಿಜೆಪಿ ಅಂದುಕೊಂಡಿದೆ. ಅದಕ್ಕೆ ಅವರಿಗೆ ಎಸ್ ಡಿಪಿಐಯನ್ನಾಗಿ, ಪಿಎಫ್ ಐ ಅನ್ನಾಗಿ ನಿಷೇಧಿಸುವ ಗಟ್ಸ್ ಬಂದಿಲ್ಲ. ಎರಡೂವರೆ ವರ್ಷದ ಹಿಂದೆ ಹೊಸದಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಶಾಸಕರೊಬ್ಬರು ಹೇಳುತ್ತಿದ್ದರು “ನಾವಿನ್ನು ರಾಜ್ಯ ಸರಕಾರವನ್ನು ಒತ್ತಾಯಿಸುತ್ತೇವೆ, ಆಗ್ರಹಿಸುತ್ತೇವೆ ಎಂದು ಹೇಳಬಾರದು, ಇನ್ನೇನಿದ್ದರೂ ಮನವಿ ಮಾತ್ರ” ಆದರೂ ಬಿಜೆಪಿ ತಾವು ಅಧಿಕಾರದಲ್ಲಿದ್ದೇವೆ ಎನ್ನುವುದನ್ನು ಮರೆತು ವಾರಕ್ಕೆ ಎರಡು ಸಲ ಪ್ರತಿಭಟನೆ ನಡೆಸುತ್ತದೆ. ಇಂತಹ ವಿಷಯಗಳಲ್ಲಿ ಕೇಸರಿ ಪಕ್ಷದವರಿಗಿಂತ ಕಾಂಗ್ರೆಸ್ ಬೆಟರ್. ಅವರಾದರೂ ಒಪನ್ ಆಗಿ ಎಸ್ ಡಿಪಿಐಗಳೊಂದಿಗೆ ಹಾಸಿಗೆ ಹಂಚಿಕೊಳ್ಳುತ್ತಾರೆ. ಈ ಬಿಜೆಪಿಯವರು ಎದುರಿನಿಂದ ಗೌರಮ್ಮನಂತೆ ತೋರಿಸುತ್ತಾ ಹಿಂದಿನ ಬಾಗಿಲಿನಿಂದ ಒಳಗೆ ಹೋಗಿ ಮಂಚ ಹತ್ತುತ್ತಾರೆ. ಬಿಜೆಪಿಯವರಿಗೆ ನಿಜಕ್ಕೂ ಪಿಎಫ್ ಐಗಳನ್ನು ಬಗ್ಗುಬಡಿದು ಸಮಾಜಕ್ಕೆ ಒಳ್ಳೆಯದು ಮಾಡಬೇಕೆನ್ನುವ ಮನಸ್ಸು ಇದ್ದರೆ ಈಗ ಸಿಕ್ಕಿರುವ ಎಷ್ಟೋ ಸಾಕ್ಷ್ಯಗಳು ಪಿಎಫ್ ಐಗಳನ್ನು ನಿಷೇಧಿಸಲು ಸಾಕು. ಇಲ್ಲಿ ನೋಡಿದರೆ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಬಿಜೆಪಿಯವರು ಪತ್ರಿಕಾ ಪ್ರಕಟನೆ, ಸುದ್ದಿಗೋಷ್ಟಿ ಮಾಡಿ ಪಿಎಫ್ ಐಗಳ ಬಂಡವಾಳ ಹೇಳುವ ಬದಲು ನಿಮ್ಮದೇ ಸರಕಾರ ಇದೆಯಲ್ಲ, ಅವರಿಗೆ ಒತ್ತಡ ತರಲು ಆಗುವುದಿಲ್ಲವೆ? ಸಿಎಎ ವಿರುದ್ಧದಿಂದ ಹಿಡಿದು ಮಂಗಳೂರಿನ ಗೋಡೆ ಬರಹದ ತನಕ ಹಬ್ಬಿರುವ ಜಾಲವನ್ನು ಮುರಿದು ಹಾಕಲು ಬೇಕಾಗಿರುವುದು ಇಚ್ಚಾಶಕ್ತಿ. ಅದು ಕಿವಿ ಸರಿಯಾಗಿ ಕೇಳಿಸದ, ಬೆಳಿಗ್ಗೆ ಹೇಳಿದ್ದು ಮಧ್ಯಾಹ್ನ ಮರೆತು ಹೋಗುವ, ಪಕ್ಷ ಅವಕಾಶ ಕೊಟ್ಟರೆ ಅಲ್ಪಸಂಖ್ಯಾತರ ಟೋಪಿ ಹಾಕಿ ಉದ್ದುದ್ದ ಅಡ್ಡ ಬೀಳಲು ತಯಾರಿರುವ ಸರಕಾರಕ್ಕೆ ಏನು ಹೇಳಿ ಪ್ರಯೋಜನ!
https://www.facebook.com/TulunaduNews/videos/1329851874053832
Leave A Reply