• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಜನಸ್ನೇಹಿ ಪೊಲೀಸ್ ವಾತಾವರಣ ಕಲ್ಪಿಸುವುದು ಶಶಿಕುಮಾರ್ ಮುಂದಿರುವ ಮೊದಲ ಸವಾಲು!!

Hanumantha Kamath Posted On January 5, 2021
0


0
Shares
  • Share On Facebook
  • Tweet It

ಮಂಗಳೂರಿಗೆ ನೂತನ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ಅವರು ನೇಮಕವಾಗಿದ್ದಾರೆ. ಬಂದ ಕೂಡಲೇ ನೇರವಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ. ರಾತ್ರಿ ಕುಡಿದು ರಸ್ತೆಬದಿ, ಬೀದಿಬದಿಯಲ್ಲಿ ಹಾರಾಟ, ರಂಪಾಟ ಮಾಡುತ್ತಿದ್ದ ಕುಡುಕರನ್ನು ಹಿಡಿದು ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. ಅದೇ ರೀತಿಯಲ್ಲಿ ರಾತ್ರಿ ಜನರಿಗೆ ಎಲ್ಲೆಂದರಲ್ಲಿ ಅಡ್ಡ ಹಾಕುತ್ತಿದ್ದ ಮಂಗಳಮುಖಿಯರಲ್ಲಿ ಹಲವರನ್ನು ಹಿಡಿದು ಎಚ್ಚರಿಕೆ ಕೊಟ್ಟಿದ್ದಾರೆ. ಅವರ ಸಂಘಟನೆಯ ಪ್ರಮುಖರನ್ನು ಕರೆದು ಮಾತನಾಡಿದ್ದಾರೆ. ಹೀಗೆ ಬಹಳ ವೇಗವಾಗಿ ಮಂಗಳೂರಿನ ಬಗ್ಗೆ ತಿಳಿದುಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ. ಅದೇ ರೀತಿಯಲ್ಲಿ ಮೊನ್ನೆ ರಾತ್ರಿ ಮಂಗಳೂರಿನಲ್ಲಿ ಯಕ್ಷಗಾನ ನಡೆಯುತ್ತಿದ್ದ ಕಡೆ ಹೋಗಿ ಅದನ್ನು ವೀಕ್ಷಿಸಿ, ಪಾತ್ರಧಾರಿಗಳನ್ನು ಮಾತನಾಡಿಸಿ ಹುರಿದುಂಬಿಸಿ ಬಂದಿದ್ದಾರೆ. ಚಿತ್ರದುರ್ಗದ ಕೋಟೆಯ ಗೋಡೆಯನ್ನು ಹತ್ತಿ ಚಪ್ಪಾಳೆಗಿಟ್ಟಿಸಿಕೊಂಡ ಐಪಿಎಸ್ ಅಧಿಕಾರಿಯಾಗಿರುವ ಶಶಿಕುಮಾರ್ ಮನಸ್ಸು ಮಾಡಿದರೆ ಮಂಗಳೂರಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಒಂದು ಕಡೆಯಿಂದ ಶುದ್ಧಿಕರಿಸುತ್ತಾ ಬರುವುದು ತುಂಬಾ ಕಷ್ಟದ ಕೆಲಸವೇನಲ್ಲ. ಯಾಕೆಂದರೆ ನಾಗರಿಕರಲ್ಲಿ ಬಹುತೇಕ ಜನ ಸಭ್ಯರು. ಆದರೆ ವಿಷಯ ಇರುವುದು ಬಹಳ ಮುಖ್ಯವಾಗಿ ಗೋ ಹಾಗೂ ಲವ್. ಅಕ್ರಮ ಕಸಾಯಿಖಾನೆಯಲ್ಲಿ ಅಕ್ರಮ ಗೋತಳಿಗಳ ಮಾರಣ ಹೋಮ ಮತ್ತು ಲವ್ ಜಿಹಾದ್. ಇತ್ತೀಚೆಗೆ ಪೊಲೀಸ್ ಸಿಬ್ಬಂದಿಗಳ ಮೇಲೆನೆ ಹಲ್ಲೆ ಮಾಡುವಂತಹ ಪ್ರಕರಣಗಳು, ಹಿರಿಯ ನಾಗರಿಕರು ರಸ್ತೆಯಲ್ಲಿ ನಡೆದು ಹೋಗುವಂತಹ ಕುತ್ತಿಗೆಯ ಚೈನ್ ಹಿಡಿದು ಎಳೆಯುವಂತಹ ಪ್ರಕರಣಗಳನ್ನು ನೋಡಿದರೆ ಅದನ್ನು ಕೂಡ ಪೊಲೀಸ್ ಕಮೀಷನರ್ ಗಂಭೀರವಾಗಿ ತೆಗೆದುಕೊಳ್ಳಬೇಕಾಗಬಹುದು. ಅದರೊಂದಿಗೆ ಗಾಂಜಾ ಎಲ್ಲೆಲ್ಲಿಂದ ಪೂರೈಕೆಯಾಗುತ್ತದೆ ಎನ್ನುವುದು ಇಲ್ಲಿಯೇ ಹಲವಾರು ವರ್ಷಗಳಿಂದ ಇರುವ ಪೊಲೀಸ್ ಅಧಿಕಾರಿಗಳಿಗೆ ಗೊತ್ತೆ ಇರುತ್ತದೆ. ಅದನ್ನು ಕೂಡ ಭೇದಿಸುವ ಜವಾಬ್ದಾರಿ ಪೊಲೀಸ್ ಕಮೀಷನರ್ ಅವರ ಮೇಲೆ ಇದೆ. ಎಲ್ಲದರ ಜೊತೆ ಪೊಲೀಸ್ ಕಮೀಷನರೇಟ್ ಕಚೇರಿಯಲ್ಲಿ ಕಮೀಷನರ್ ಚೇಂಬರ್ ಜನಸ್ನೇಹಿಯಾಗಬೇಕಿದೆ. ಆಗ ಅರ್ಧದಷ್ಟು ಸಮಸ್ಯೆಗಳು ಪರಿಹಾರ ಕಾಣುತ್ತವೆ.

ಇನ್ನೊಂದು ಸವಾಲು ಎಂದರೆ ಪೊಲೀಸ್ ಕಮೀಷನರ್ ಪೂರ್ಣ ಪ್ರಮಾಣದಲ್ಲಿ ತಮ್ಮ ಅಧಿಕಾರವನ್ನು ತೋರಿಸಲು ಇದು ಸಕಾಲ. ಮಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ಗುಡ್ಡದಷ್ಟಿದೆ. ಇದರಿಂದ ನೇರವಾಗಿ ಪರಿಣಾಮ ಬೀರುವುದು ವಾಹನಗಳ ಸಂಚಾರದ ಮೇಲೆ. ಇದರಿಂದ ರೋಡ್ ಬ್ಲಾಕ್ ಅಥವಾ ರಸ್ತೆ ಜಾಮ್ ಎನ್ನುವುದು ಸಾಮಾನ್ಯವಾಗಿದೆ. ವಾಹನಗಳ ಟೋಯಿಂಗ್ ಮಾಡಿದಾಗ ಜನರ ಆಕ್ರೋಶ ವ್ಯಕ್ತವಾಗುತ್ತದೆ. ಶ್ರೀಮಂತರ ಕಾರುಗಳನ್ನು ಮುಟ್ಟದೆ ನಮ್ಮ ಬೈಕುಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತಾರೆ ಎನ್ನುವುದು ಜನಸಾಮಾನ್ಯರ ಅಳಲು. ಇದನ್ನು ಸರಿಪಡಿಸುವ ಜವಾಬ್ದಾರಿ ಕೂಡ ಪೊಲೀಸ್ ಇಲಾಖೆಯ ಮೇಲಿದೆ. ಏನು ಮಾಡಬಹುದು? ಎಲ್ಲೆಲ್ಲಿ ಅನಧಿಕೃತ ನಿರ್ಮಾಣಗಳಿಂದ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಚಲಿಸಲು ಕಷ್ಟವಾಗುವುದೋ ಅಂತಹ ಕಡೆಗಳಲ್ಲಿ ಆ ಅನಧಿಕೃತ ನಿರ್ಮಾಣಗಳನ್ನು ಕೆಡವಿ ಹಾಕುವ ಅಧಿಕಾರ ಪೊಲೀಸ್ ಇಲಾಖೆ ಬಳಸಬಹುದು. ಅನೇಕ ಕಡೆ ಫುಟ್ ಪಾತ್ ಅತಿಕ್ರಮಣವಾಗಿದೆ. ಇನ್ನು ಕೆಲವು ಕಡೆ ರಸ್ತೆಯನ್ನು ಅತಿಕ್ರಮಣ ಮಾಡಿ ಮಳಿಗೆಗಳ ವಸ್ತುಗಳನ್ನು ಇಡಲಾಗಿದೆ. ಅಲ್ಲಲ್ಲಿ ಪಾರ್ಕಿಂಗ್ ಇಲ್ಲದ ಕಡೆ ವಾಹನಗಳನ್ನು ನಿಲ್ಲಿಸುವುದನ್ನು ತಡೆಯಬಹುದಾಗಿದೆ. ಕೆಲವು ಮದುವೆ ಛತ್ರಗಳ ಹೊರಗೆ ವಾಹನಗಳು ಅಡ್ಡಾದಿಡ್ಡಿ ನಿಂತು ರಸ್ತೆ ಬ್ಲಾಕ್ ಆಗುತ್ತದೆ. ಇನ್ನು ಬಸ್ ಸ್ಟಾಪ್ ಗಳು ಕೂಡ ವೈಜ್ಞಾನಿಕವಾಗಿ ಇಲ್ಲ. ಸರ್ಕಲ್ ಬಳಿ ಬಸ್ ಸ್ಟಾಪ್ ಗಳಿವೆ. ಇದನ್ನು ಕೂಡ ತಮ್ಮ ವಿವೇಚನೆಯ ಆಧಾರದ ಮೇಲೆ ಪರಿಹರಿಸುವ ಜವಾಬ್ದಾರಿಯನ್ನು ಪೊಲೀಸ್ ಇಲಾಖೆ ವಹಿಸಬಹುದು.

ಇನ್ನು ನಿಜವಾದ ಇಚ್ಚಾಶಕ್ತಿ ಇದ್ದರೆ ಡ್ರಗ್ಸ್ ಜಾಲದಲ್ಲಿ ಇಲ್ಲಿಯ ತನಕ ಹಿಡಿದಿರುವ ಸಣ್ಣ ಸಣ್ಣ ಮೀನುಗಳ ಮೂಲಕ ತಿಮಿಂಗಿಲಗಳ ತನಕ ತಲುಪುವ ಕೆಲಸಗಳನ್ನು ಪೊಲೀಸ್ ಕಮೀಷನರ್ ಮಾಡಬಹುದು. ಇನ್ನು ಕುಡುಕರನ್ನು ಕರೆದು ಎಚ್ಚರಿಸಿದ ಹಾಗೆ ರೌಡಿಗಳನ್ನು ಕೂಡ ಕರೆದು ಎಚ್ಚರಿಕೆ ಕೊಡಬೇಕು. ಇದರೊಂದಿಗೆ ಟ್ರಾಫಿಕ್ ಜಾಮ್ ಪರಿಹಾರಕ್ಕೆ ಒಳಗೊಂಡು ಯಾವುದೇ ಶಾಂತಿ ಸುವ್ಯವಸ್ಥೆಗೆ ನಮ್ಮ ನಾಗರಿಕರ ಸಹಕಾರ ಕೇಳಿದರೆ ಖಂಡಿತವಾಗಿ ಮುಕ್ತ ಮನಸ್ಸಿನಿಂದ ಕೊಡಲು ನಾವು ಸಿದ್ಧವಿದ್ದೇವೆ. ಇನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಯುವ ಉತ್ಸಾಹಿ ಐಎಎಸ್ ಕಮೀಷನರ್ ಅಕ್ಷಯ್ ಶ್ರೀಧರ್ ಅವರು ಇದ್ದಾರೆ. ಅವರು ಮತ್ತು ಇವರು ಜಂಟಿಯಾಗಿ ಕರ್ತವ್ಯವನ್ನು ನಿರ್ವಹಿಸಿದರೆ ಮಂಗಳೂರನ್ನು ಎಲ್ಲಿಯೋ ತಲುಪಿಸಬಹುದು. ಚಂದ್ರಶೇಖರ್, ಹಿತೇಂದ್ರ ಪ್ರಸಾದ್, ಪಂಕಜ್ ಕುಮಾರ್ ಠಾಕೂರ್, ಶರಣಪ್ಪ, ಸುಬ್ರಹ್ಮಣ್ಯೇಶ್ವರ ರಾವ್ ಅವರಂತಹ ಪೊಲೀಸ್ ಅಧಿಕಾರಿಗಳು ಇಲ್ಲಿ ಬಂದು ಹೋಗಿದ್ದಾರೆ. ಜನಮಾನಸದಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ. ಈಗ ಶಶಿಕುಮಾರ್ ಅವರ ಸರದಿ!

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Hanumantha Kamath July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search