• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ತಂದೆ ಮಾಡಿದ ದುರಾಚಾರವನ್ನೇ ಮಗ ಮುಂದುವರೆಸುತ್ತಿದ್ದಾನೆ!!

Hanumantha Kamath Posted On January 8, 2021
0


0
Shares
  • Share On Facebook
  • Tweet It

ಒಬ್ಬ ಮುಖ್ಯಮಂತ್ರಿ ತನ್ನ ಜಾತಿ, ಧರ್ಮ ಯಾವುದೇ ಇರಲಿ ತಾನು ಆಳುವ ರಾಜ್ಯದಲ್ಲಿ ಎಲ್ಲಾ ಜಾತಿ, ಧರ್ಮದವರ ಪರವಾಗಿ ಆಡಳಿತ ನಡೆಸಬೇಕೆ ವಿನ: ತನ್ನ ಧರ್ಮವನ್ನು ರಾಜ್ಯದ ಮೇಲೆ ಹೇರಬಾರದು. ಒಂದು ವೇಳೆ ತನ್ನ ಧರ್ಮವನ್ನು ಹೇರಿಲ್ಲ ಎನ್ನುವುದಾಗಿ ವಾದಿಸುವುದಾದರೆ ತನ್ನ ಧರ್ಮದವರು ಮಾಡುವ ದೌರ್ಜನ್ಯವನ್ನು ನೋಡಿ ಕಣ್ಣು ಮುಚ್ಚಿ ಕುಳಿತುಕೊಳ್ಳಬಾರದು. ಯಾರು ತಪ್ಪು ಮಾಡಿದ್ದಾರೋ ಅವರನ್ನು ಹೆಡೆಮುರಿ ಕಟ್ಟಿ ದಂಡಿಸಬೇಕು. ಹಾಗೆ ಒಂದು ವೇಳೆ ಮಾಡದೇ ಹೋದರೆ ಅಂತಹ ಮುಖ್ಯಮಂತ್ರಿಯನ್ನು ಜಗನ್ ಮೋಹನ್ ರೆಡ್ಡಿ ಎಂದೇ ಕರೆಯಬೇಕಾಗುತ್ತದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಮೂಲತ: ಹಿಂದೂ ಧರ್ಮದವರಾಗಿದ್ದರು. ಆದರೆ ಅವರ ತಂದೆಯ ಕಾಲದಲ್ಲಿಯೇ ಅಥವಾ ಅದಕ್ಕಿಂತ ಮೊದಲೇ ಇಡೀ ಕುಟುಂಬ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದೆ. ಅವರು ಕ್ರೈಸ್ತರಾಗಿರುವುದು ಅವರ ವೈಯಕ್ತಿಕ ವಿಷಯ. ಅದಕ್ಕೆ ಭಾರತದಂತಹ ರಾಷ್ಟ್ರದಲ್ಲಿ ಸ್ವಾತಂತ್ರ್ಯವಿದೆ. ಆದರೆ ತಾವು ಕ್ರೈಸ್ತರು ಎನ್ನುವ ಕಾರಣಕ್ಕೆ ಹಿಂದೂ ದೇವಾಲಯಗಳ ಮೇಲೆ ಆಗುತ್ತಿರುವ ದಾಳಿಗಳನ್ನು ರೆಡ್ಡಿಗಾರು ಸುಮ್ಮನೆ ನೋಡಿ ಕುಳಿತುಕೊಳ್ಳಬಾರದಲ್ಲ. ಅದು ಈಗ ಸಮರೋಪಾದಿಯಲ್ಲಿ ಆಗುತ್ತಿದೆ ಎನ್ನುವುದೇ ಸಂಕಟದ ವಿಷಯ.
ಇಡೀ ದೇಶದಲ್ಲಿ ದಕ್ಷಿಣ ಭಾರತವನ್ನು ತೆಗೆದುಕೊಂಡರೆ ತಮಿಳುನಾಡು, ಆಂಧ್ರ, ಕೇರಳ ಮತ್ತು ಕರ್ನಾಟಕ ಅನೇಕ ಧಾರ್ಮಿಕ ಕೇಂದ್ರಗಳನ್ನು, ದೇವಾಲಯಗಳನ್ನು ಹೊಂದಿರುವ ರಾಜ್ಯಗಳು. ತಿರುಪತಿಯಂತಹ ದೇಶ, ವಿದೇಶದ ಭಕ್ತರನ್ನು ಆಕರ್ಷಿಸುವ ದೇವಾಲಯ ಇರುವುದೇ ಆಂಧ್ರದಲ್ಲಿ. ಏಳು ಬೆಟ್ಟದ ಮೇಲೆ ತಿರುಮಲ ವೆಂಕಟರಮಣ ಸ್ವಾಮಿ ವಿರಾಜಮಾನವಾಗಿ ಕುಳಿತಿದ್ದಾರೆ. ಜಗನಿಗಿಂತ ಮೊದಲು ಅವರ ತಂದೆ ವೈ ಎಸ್ ರಾಜಶೇಖರ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ತಿರುಪತಿಯ ಬೆಟ್ಟದ ಮೇಲೆ ಚರ್ಚು ನಿರ್ಮಿಸಲು ಜಾಗ ಕೊಟ್ಟು ಮತಭ್ರಷ್ಟನಾಗಿದ್ದರು. ದೇವಾಲಯದಲ್ಲಿ ಕ್ರೈಸ್ತರನ್ನು ವಿವಿಧ ಆಯಕಟ್ಟಿನ ಜಾಗಗಳಿಗೆ ನೇಮಿಸಿ ದುಷ್ಟ ಕೆಲಸಗಳಿಗೆ ನಾಂದಿ ಹಾಡಿದ್ದರು. ನಂತರ ಏನಾಯಿತು ಎನ್ನುವುದನ್ನು ಪ್ರಪಂಚವೇ ನೋಡಿದೆ. ರಾಜಶೇಖರ್ ರೆಡ್ಡಿ ಆಗಸದಲ್ಲಿ ಹಾರಾಡುವಾಗಲೇ ಹೆಲಿಕಾಪ್ಟರ್ ಸ್ಫೋಟಗೊಂಡು ಚಿಂದಿ ಚಿತ್ರಾನ್ನವಾಗಿ ಹೋಗಿಬಿಟ್ಟರು. ಅದನ್ನು ನೋಡಿಯಾದರೂ ಜಗನ್ ಗೆ ಬುದ್ಧಿ ಬರಬಹುದು ಎಂದು ಆಂಧ್ರ ಅಂದುಕೊಂಡಿತ್ತು. ಕೆಲವು ಸಮಯ ಜಗನ್ ಸುಮ್ಮನಿದ್ದ. ತಾನು ಚುನಾವಣೆಗೆ ಸ್ಪರ್ಧಿಸುವಾಗ ಹಿಂದೂ ಎಂದೇ ಬಿಂಬಿಸಲು ಹೋದ. ಯಾಕೆಂದರೆ ಹಿಂದೂಗಳ ಮತ ಸೆಳೆಯದಿದ್ದರೆ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಗೊತ್ತಿತ್ತಲ್ಲ. ಯಾವಾಗ ಸಿಎಂ ಆಗಿ ಆಯ್ಕೆಗೊಂಡನೊ ನಂತರ ತನ್ನ ನಿಜವಾದ ಬುದ್ಧಿ ತೋರಿಸಿದ. ಈಗ ಪರಿಸ್ಥಿತಿ ಎಲ್ಲಿಯ ತನಕ ಬಂದು ತಲುಪಿದೆ ಎಂದರೆ ಆಂಧ್ರದ ದೇವಾಲಯಗಳು ಅಕ್ಷರಶ: ಅಪಾಯ ಸ್ಥಿತಿಯಲ್ಲಿವೆ. ಕೇವಲ 72 ಗಂಟೆಗಳಲ್ಲಿ 3 ದೇವಾಲಯಗಳು ಧ್ವಂಸಗೊಂಡಿವೆ. ಸುಬ್ರಹ್ಮಣೇಶ್ವರ ಸ್ವಾಮಿಯ ವಿಗ್ರಹದ ಕೈ ತುಂಡರಿಸಲಾಗಿದೆ. 400 ವರ್ಷಗಳ ಪ್ರಾಚೀನ ಶ್ರೀರಾಮ ಮೂರ್ತಿಯ ಶಿರ ಕಡಿಯಲಾಗಿದೆ. ಕೋಮಲಮ್ಮ ದೇವಿಯ ಪಾದುಕೆಗಳನ್ನು ಕಿತ್ತು ಹಾಕಲಾಗಿದೆ. ಆಂಧ್ರ ಪ್ರದೇಶದ ರಾಮ ತೀರ್ಥದಲ್ಲಿ ಪ್ರಭು ಶ್ರೀ ರಾಮನ ಮೂರ್ತಿಯ ಭಂಗ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುರೋಹಿತರು ಕಣ್ಣೀರಿಟ್ಟು ಬೇಡಿಕೊಳ್ಳುತ್ತಿದ್ದಾರೆ. ನಮ್ಮ ರಾಮನಿಗೆ ರಕ್ಷಣೆ ಇಲ್ಲದಿದ್ದರೆ ನಮಗೆ ಎಲ್ಲಿ ನ್ಯಾಯ ಸಿಗುವುದು ಎಂದು ದೇವಾಲಯದ ಅರ್ಚಕರು ಕಣ್ಣೀರು ಹಾಕುತ್ತಿದ್ದಾರೆ. ಯಾವ ನಾಡಿನಲ್ಲಿ ಸಾಧು ಸಂತರು ವೈದಿಕರು ಪುರೋಹಿತರು ಕಣ್ಣೀರು ಸುರಿಸುತ್ತಾರೋ ಆ ನಾಡಿನಲ್ಲಿ ಅಧರ್ಮ ತಲೆ ಎತ್ತುತ್ತಿದೆ ಎಂದೇ ಅರ್ಥ. ನಮ್ಮ ಪರಂಪರೆಯ ರಕ್ಷಣೆಗೆ ನಾವೀಗ ಕಟಿಬದ್ಧರಾಗಬೇಕಿದೆ. ಇದಿಷ್ಟೇ ಅಲ್ಲದೆ ಜಗನ್ ಆಳ್ವಿಕೆಯಲ್ಲಿ ಹತ್ತಾರು ದೇವಾಲಯಗಳು ಸುದ್ದಿಯೇ ಇಲ್ಲದೆ ಪರಕೀಯರ ದಾಳಿಗೊಳಗಾಗುತ್ತಿವೆ. ಪರಕೀಯರು ಎಂದರೆ ಮೊಹಮ್ಮದ್ ಘಜ್ನಿಯೇ ಆಗಬೇಕಿಲ್ಲ. ಜಗನ್ ಆಳ್ವಿಕೆಯಲ್ಲಿ ಪ್ರತಿಯೊಬ್ಬ ಹಿಂದೂ ವಿರೋಧಿ ಮೊಹಮ್ಮದ್ ಘಜ್ನಿಯೇ ಆಗಿದ್ದಾನೆ.
ಒಂದನಂತೂ ಜಗನ್ಮೋಹನ್ ರೆಡ್ಡಿಗಾರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ತಿರುಪತಿಯ ದೇವರ ಕೋಪ ಒಳ್ಳೆಯದಲ್ಲ. ಅದನ್ನು ಅವರ ಕುಟುಂಬ ಈಗಾಗಲೇ ಅನುಭವಿಸಿದೆ. ತಂದೆಯ ಗೋರಿಯ ಮೇಲೆ ಸಾಮ್ರಾಜ್ಯ ಕಟ್ಟಿರುವ ಜಗನ್ ತಂದೆ ಮಾಡಿದ ತಪ್ಪನ್ನೇ ಪುನರಾವರ್ತಿಸುತ್ತಿದ್ದಾರೆ. ಅವರಿಗೆ ಗೊತ್ತಿಲ್ಲದ ವಿಷಯವೇನೆಂದರೆ ದೇವರ ಶಾಪದೊಂದಿಗೆ ಜನರ ಪ್ರೀತಿಯೂ ಕಡಿಮೆಯಾದರೆ ಕೊನೆಗೆ ವಿಜಯವಾಡದ ಬಸ್ ಸ್ಟ್ಯಾಂಡಿನಲ್ಲಿ ತಟ್ಟೆ ಹಿಡಿದು ನಿಲ್ಲಬೇಕಾದ ಪರಿಸ್ಥಿತಿ ಬರಬಹುದು. ಅಧಿಕಾರ ಇದ್ದಾಗ ಹಿಂದೂ ದೇವಾಲಯಗಳ ಮೇಲೆ ಆಗುತ್ತಿರುವ ದಾಳಿಯ ಹಿಂದೆ ಯಾರಿದ್ದಾರೆ ಎಂದು ತಿಳಿಯುವುದು ಒಬ್ಬ ಸಿಎಂಗೆ ಕಷ್ಟವೇನಲ್ಲ. ಗೊತ್ತಿದ್ದೂ ಸುಮ್ಮನಿರುವುದು ಮಾತ್ರ ಅಕ್ಷಮ ಅಪರಾಧ. ಹಿಂದೂಗಳು ಶಾಂತಿಪ್ರಿಯರು. ಹಾಗಂತ ರಬ್ಬರ್ ಎಳೆದಂತೆ ಎಳೆಯುತ್ತಾ ಹೋದರೆ ಸುಮ್ಮನಿರುವುದಿಲ್ಲ. ಗ್ಯಾಸಿನ ಮೇಲಿಟ್ಟ ಹಾಲು ಉಕ್ಕುವ ಮೊದಲೇ ಗ್ಯಾಸ್ ಬಂದ್ ಮಾಡಬೇಕು. ಹಾಗೆಯೇ ಹಿಂದೂಗಳು ಸಹನಾ ಶಕ್ತಿಯನ್ನು ಕಳೆದುಕೊಳ್ಳುವ ಮೊದಲೇ ಸಮಾಧಾನಪಡಿಸಬೇಕು. ಇಲ್ಲದಿದ್ದರೆ ಮುಂದಿದೆ ಕೆಟ್ಟ ಕಾಲ!
0
Shares
  • Share On Facebook
  • Tweet It




Trending Now
ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
Hanumantha Kamath July 7, 2025
ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
Hanumantha Kamath July 7, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
  • Popular Posts

    • 1
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 2
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 3
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • 4
      ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 5
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!

  • Privacy Policy
  • Contact
© Tulunadu Infomedia.

Press enter/return to begin your search