• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಣ ಮಾಡುವ ವಿಷಯದಲ್ಲಿ ಕಾಂಗ್ರೆಸ್ ತರಹ ನಾವು ಅಲ್ಲ ಎಂದು ಬಿಜೆಪಿ ತೋರಿಸಲ್ವಾ!!

AvatarHanumantha Kamath Posted On January 8, 2021


  • Share On Facebook
  • Tweet It

ಭಾರತೀಯ ಜನತಾ ಪಾರ್ಟಿಯ ಸರಕಾರ ಬಂದರೂ ಅಷ್ಟೇ, ಕಾಂಗ್ರೆಸ್ ಇದ್ದರೂ ಇಷ್ಟೇ ಎನ್ನುವ ಭಾವನೆ ಜನರ ಮನಸ್ಸಿನಲ್ಲಿ ಬಂದರೆ ಮುಗಿಯಿತು. ಹಾಗೆ ಬರದಿರುವ ಹಾಗೆ ಮಾಡುವ ಜವಾಬ್ದಾರಿ ಪಾಲಿಕೆಯಲ್ಲಿ ಆಡಳಿತಕ್ಕೆ ಬಂದು ಎರಡನೇ ಮಳೆಗಾಲ ನೋಡುತ್ತಿರುವ ಬಿಜೆಪಿ ಮೇಲಿದೆ. ಮಂಗಳೂರಿನಲ್ಲಿ ಕೆಲವು ರಸ್ತೆಗಳು ಒಣಗಿರುವ ಬ್ರೆಡ್ಡಿನಂತೆ ಆಗಿ ಹೋಗಿವೆ. ಅದಕ್ಕೆ ಜಾಮ್ ಹಚ್ಚುವ ಹಾಗೆ ಡಾಮರಿನ ತೇಪೆಯನ್ನು ಹಚ್ಚಲು ಮುಂದಿನ ಎರಡು ತಿಂಗಳುಗಳು ಸೂಕ್ತ ಸಮಯ. ಆದರೆ ಆ ಕೆಲಸವನ್ನು ಗುತ್ತಿಗೆ ಮೂಲಕ ಕೊಡಲಾಗುತ್ತದೆ. ಅದಕ್ಕಾಗಿ ಗುತ್ತಿಗೆದಾರರನ್ನು ನೇಮಕ ಮಾಡಲು ಟೆಂಡರ್ ಕರೆಯಬೇಕು. ಆದರೆ ಟೆಂಡರ್ ಕರೆಯುವ ಕಾರ್ಯವೇ ಇನ್ನೂ ಪೂರ್ತಿ ಆಗಿಲ್ಲ. ಅಸಲಿಗೆ ಸ್ವಲ್ಪ ಟೆಂಡರ್ ಕರೆದಂತೆ ಆಗಿದೆ ಬಿಟ್ಟರೆ ಉಳಿದದ್ದು ದೊಡ್ಡ ಶೂನ್ಯ. ಇನ್ನು ಇವರು ನಿದ್ರೆಯಿಂದ ಎದ್ದು ಟೆಂಡರ್ ಕರೆದು ಕೆಲಸವನ್ನು ಹಂಚುವಾಗ ಎರಡು ತಿಂಗಳು ಜಾಸ್ತಿ ದಾಟಿ ಹೋಗಿರುತ್ತದೆ. ನಂತರ ಇವರು ಡಾಮರು ಹಾಕುವಾಗ ಮಳೆಯ ಹನಿಗಳು ಆಗಸದಿಂದ ಧರೆಗೆ ಇಳಿಯಲು ಕಾಯುತ್ತವೆ. ಇವರು ಹಾಕಿದ ಡಾಮರು ರಸ್ತೆಯ ಮೇಲೆ ಸೆಟಲ್ ಆಗುವಷ್ಟರಲ್ಲಿ ಮಳೆ ಭೂಮಿಯೊಂದಿಗೆ ಸರಸವಾಡಲು ಶುರುವಾಗಿರುತ್ತದೆ. ಇವರ ಡಾಮರು ರಸ್ತೆಯಿಂದ ತೋಡಿನ ಕಡೆಗೆ ದಾರಿ ಮಾಡಿರುತ್ತದೆ. ಅಲ್ಲಿಗೆ ಬಿಲ್ ಪಾಸಾಗಿರುತ್ತದೆ. ಯಾರ ಕಿಸೆಗೆ ಎಷ್ಟೆಷ್ಟು ಹೋಗಬೇಕೋ ಅಷ್ಟು ಹೋಗಿರುತ್ತದೆ. ನಮ್ಮ ತೆರಿಗೆಯ ಹಣ ಪೋಲಾಗಿರುತ್ತದೆ. ಕೆಲವರು ದುಂಡಗಾಗುತ್ತಾ ಹೋಗುತ್ತಾರೆ. ಹೊಸ ರಸ್ತೆ ಆದರೆ ಎರಡು ವರ್ಷಗಳ ತನಕ ಅದರ ನಿರ್ವಹಣೆಯನ್ನು ಗುತ್ತಿಗೆದಾರರ ನೋಡಬೇಕು. ಆದರೆ ಹಳೆ ರಸ್ತೆ ಆದರೆ ಅದಕ್ಕೆ ಎಷ್ಟು ಸಲ ಬೇಕಾದರೂ ನಮ್ಮ ನಿಮ್ಮ ತೆರಿಗೆಯ ಹಣದಲ್ಲಿ ಹೀಗೆ ಡಾಮರು ಹಾಕಿ ಗಾಯವನ್ನು ಮುಲಾಮಿನಿಂದ ಮುಚ್ಚಬಹುದು. ಗಾಯ ಒಣಗುವ ಮೊದಲು ಮುಲಾಮು ನೀರಾಗಿ ಹರಿದಿರುತ್ತದೆ. ಯಾರಿಗೂ ಗೊತ್ತಾಗುವುದಿಲ್ಲ. ಇಂತಹ ಒಂದು ಐಡಿಯಾವನ್ನು ಅದೆಷ್ಟೋ ಮಳೆಗಾಲದಿಂದ ಕಾಂಗ್ರೆಸ್ ಮಾಡಿಕೊಂಡು ಬರುತ್ತಿತ್ತು. ಆ ಹಣದ ಆಸೆಯಲ್ಲಿ ಎಷ್ಟೋ ವರ್ಷಗಳಿಂದ ಬಿಳಿ ಪ್ಯಾಂಟ್, ಬಿಳಿ ಶರ್ಟ್ ಹಾಕಿ ಅನೇಕ ಕಾಂಗ್ರೆಸ್ ಕಾರ್ಪೋರೇಟರ್ ಗಳು ಪಾಲಿಕೆಯ ಮೆಟ್ಟಿಲು ಹತ್ತುತ್ತಾರೆ. ಆದರೆ ಈಗ ಬಿಜೆಪಿ ಸರಕಾರ ಇದೆ. ಕಾಂಗ್ರೆಸ್ ಮಾಡಿದ ತಪ್ಪನ್ನು ಇವರು ಮಾಡಬಾರದಿತ್ತು.

ಇನ್ನು ಮಂಗಳೂರಿನಲ್ಲಿ ಕೃತಕ ನೆರೆ ಬರದೇ ಮಳೆಗಾಲ ಕಳೆದು ಹೋದರೆ ಅದು ಪವಾಡ ಎನ್ನುವ ಪರಿಸ್ಥಿತಿ ಇದೆ. ಕೃತಕ ನೆರೆ ಇಲ್ಲದಿದ್ದರೆ ಆ ವರ್ಷ ಮಳೆಯೇ ಕಡಿಮೆ ಬಂದಿರಬೇಕು ಎಂದು ಜನ ಅಂದುಕೊಳ್ಳುತ್ತಾರೆ. ಹಾಗಂತ ಈಗಿನ ಆಡಳಿತ ಮನಸ್ಸು ಮಾಡಿದರೆ ಅದು ತಪ್ಪಿಸಬಹುದು. ಮುಕ್ಕಾಲು ಬಿಜೆಪಿ ಕಾರ್ಪೋರೇಟರ್ ಗಳನ್ನೇ ಹೊಂದಿರುವ ಪಾಲಿಕೆಯಲ್ಲಿ ಯಾರಾದರೂ ಒಬ್ಬರು ಕಾರ್ಪೋರೇಟರ್ ಮುಂದೆ ಬಂದು ಲಿಖಿತವಾಗಿ ತಮ್ಮ ವಾರ್ಡಿನಲ್ಲಿ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರು ಒಂದು ಮೀಟರ್ ಅಗಲದ ತೋಡುಗಳ ಹೂಳು ತೆಗೆಯುತ್ತಿಲ್ಲ ಎಂದು ಬರೆದು ಕೊಟ್ಟಿದ್ದಾರಾ? ಇಲ್ಲ, ಹಾಗಾದರೆ ಆಂಟೋನಿಯವರು ಕ್ಲೀನಾಗಿ ಎಲ್ಲಾ ಒಂದು ಮೀಟರ್ ಅಗಲದ ತೋಡುಗಳ ತ್ಯಾಜ್ಯಗಳನ್ನು ಸ್ವಚ್ಚ ಮಾಡುತ್ತಿದ್ದಾರಾ? ಇಲ್ಲ, ಅವರು ಮಾಡುತ್ತಿಲ್ಲ. ಹಾಗಂತ ಇವರು ಬಾಯಿ ಬಿಡುತ್ತಿಲ್ಲ. ಆದರೆ ಪಾಲಿಕೆಯಿಂದ ತಿಂಗಳಿಗೆ ಒಂದೂಕಾಲು ಕೋಟಿಯಷ್ಟು ಬಿಲ್ ಆಂಟೋನಿಗೆ ಹೋಗುತ್ತಿದೆ. ಇನ್ನು ಆಂಟೋನಿ ವೇಸ್ಟ್ ನವರು ನೀಟಾಗಿ ತಮ್ಮ ಕರ್ತವ್ಯ ಮಾಡಿದಿದ್ದರೆ ಮಳೆಗಾಲದಲ್ಲಿ ಪ್ರತಿ ವಾರ್ಡಿಗೆ ಒಂದು ಗ್ಯಾಂಗ್ ಅನ್ನು ನೀಡುವ ಅನಿವಾರ್ಯತೆ ಪಾಲಿಕೆಗೆ ಬರುತ್ತಿರಲಿಲ್ಲ. ಈ ಗ್ಯಾಂಗ್ ಬಗ್ಗೆ ನಾನು ಕಾಂಗ್ರೆಸ್ ಇರುವಾಗಲೂ ಬರೆದಿದ್ದೇನೆ. ಒಂದು ಗ್ಯಾಂಗಿಗೆ ಒಂದು ವಾರ್ಡಿಗೆ ಒಂದು ತಿಂಗಳಿಗೆ ಎರಡುಕಾಲು ಲಕ್ಷ ಬಿಲ್ ಆಗುತ್ತದೆ. ಒಟ್ಟು ಎರಡು ತಿಂಗಳು ಒಂದೊಂದು ವಾರ್ಡ್ ಎಂದರೆ ಒಟ್ಟು ಎರಡುವರೆ ಲಕ್ಷ. ಹೀಗೆ ಅರವತ್ತು ವಾರ್ಡಿಗೆ ಒಂದೂವರೆ ಕೋಟಿ. ಅದರೊಂದಿಗೆ ರಾತ್ರಿಗೆ ಒಟ್ಟು ಎರಡು ಗ್ಯಾಂಗ್. ಇದು ಬಿಳಿಯಾನೆ ಎಂದರೆ ಅತಿಶಯೋಕ್ತಿ ಆಗಲ್ಲ. ಆಂಟೋನಿ ವೇಸ್ಟ್ ನವರು ಸರಿಯಾಗಿ ಹೂಳು ತೆಗೆದರೆ ಇಷ್ಟು ಹಣವನ್ನು ಗ್ಯಾಂಗಿಗೆ ಸುರಿಯುವ ಅಗತ್ಯ ಇರಲೇ ಇಲ್ಲ. ಕೆಲವೇ ಗ್ಯಾಂಗ್ ಗಳನ್ನು ಆಕ್ಟಿವ್ ಮಾಡಿ ಇಟ್ಟಿದ್ದರೆ ನಮ್ಮ ನಿಮ್ಮ ತೆರಿಗೆಯ ಹಣ ಉಳಿಯುತ್ತಿತ್ತು. ಇನ್ನು ನಿಮಗೆ ಗೊತ್ತಿರಲಿ, ಬಿಲ್ ಆಗುವಾಗ ಮಾತ್ರ ಒಂದೊಂದು ವಾರ್ಡಿಗೆ ಒಂದೊಂದು ಗ್ಯಾಂಗ್ ಎಂದು ದಾಖಲೆಯಲ್ಲಿ ಇರುತ್ತದೆ. ಅಸಲಿಗೆ ಒಬ್ಬ ಗುತ್ತಿಗೆದಾರ ತನಗೆ ಸಿಕ್ಕಿರುವ ನಾಲ್ಕೈದು ವಾರ್ಡಿಗೆ ಒಂದೇ ಗ್ಯಾಂಗ್ ಇಟ್ಟುಕೊಂಡು ಎರಡು ತಿಂಗಳು ಕಳೆದಿರುತ್ತಾನೆ. ಅಪ್ಪಟ ಭ್ರಷ್ಟಾಚಾರ.

ನಾನು ಹೇಳುವುದೇನೆಂದರೆ ಒಂದು ವೇಳೆ ಕೃತಕ ನೆರೆ ಬರುವಾಗ ಈ ಗ್ಯಾಂಗಿನವರು ತೋಡಿನ ಹೂಳು ತೆಗೆಯುವಾದರೆ ಇವರಿಂದಲೇ ಆ ಕೆಲಸ ಮಾಡಿಸಿ ಆಂಟೋನಿ ವೇಸ್ಟ್ ನವರಿಗೆ ಕೊಡುವ ಬಿಲ್ ನಲ್ಲಿ ಆ ಹಣವನ್ನು ಕಟ್ ಮಾಡಿಕೊಡಬೇಕು. ಇದು ನೋಡಿದರೆ ಅವರಿಗೂ ಹಣ ಕೊಡುವುದು. ಇವರಿಗೂ ಹಣ ಕೊಡುವುದು. ನಾವು ಮಾತ್ರ ಕೃತಕ ನೆರೆಯಿಂದ ಸಂಕಷ್ಟ ಅನುಭವಿಸುವುದು. ಯಾಕೋ, ಕೆಳಗಿನಿಂದ ಮೇಲಿನ ತನಕ ಕೇಸರಿಯೇ ಕಾಣುತ್ತಿದ್ದರೂ ಕಾಂಗ್ರೆಸ್ ಮೆಂಟಾಲಿಟಿಯಲ್ಲಿಯೇ ಇವರು ದಿನ ದೂಡುತ್ತಿದ್ದಾರೆ ಎಂದು ಅನಿಸುತ್ತದೆ. ಐಎಎಸ್ ಕಮೀಷನರ್, ಪ್ರಾಮಾಣಿಕ ಮೇಯರ್, ಯುವ ಶಾಸಕದ್ವಯರು, ನಿಷ್ಕಲಂಕ ಉಸ್ತುವಾರಿ ಸಚಿವರು ಎಲ್ಲಾ ಇದ್ದು ಹೀಗೆ ಆದರೆ ಅವರಿಗೂ ನಮಗೂ ಏನು ವ್ಯತ್ಯಾಸ ಎಂದು ಬಿಜೆಪಿ ಮತದಾರ ಕೇಳುತ್ತಿದ್ದಾನೆ!

  • Share On Facebook
  • Tweet It


- Advertisement -


Trending Now
ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
Hanumantha Kamath January 22, 2021
ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
Hanumantha Kamath January 21, 2021
Leave A Reply

  • Recent Posts

    • ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
    • ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
    • ಬಸ್ ನಲ್ಲಿ ಯುವತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಆರೋಪಿ ಹುಸೈನ್ ಬಂಧನ!
    • ಹಿಂದೂಗಳನ್ನು ಕೆಣಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ!!
    • 30 ವರ್ಷಗಳಿಂದ ನಗರ ಯೋಜನಾ ವಿಭಾಗದಲ್ಲಿ ಹೊರಳಾಡುತ್ತಿರುವವರಿಗೆ ಓಡಿಸಿ!!
    • ಪಾಲಿಕೆ ಮತ್ತು ಗುಜರಿಯವರ ನಡುವಿನ "ಪ್ರೇಮ" ಸಂಬಂಧದಿಂದ ಪಾಲಿಕೆಯಲ್ಲಿ ಧ್ವನಿ ಎತ್ತುವವರಿಲ್ಲ...
    • ಟ್ರಾಫಿಕ್ ಸಮಸ್ಯೆ ಪರಿಹಾರವಾದರೆ ಲಾಭ ನನಗೆ ಅಲ್ಲ, ನಿಮಗೆ ಮತ ನೀಡಿದ ಜನರಿಗೆ...
    • ಮಂಗಳೂರು ಗೋಲಿಬಾರ್ ರಿವೇಂಜ್, ಪೊಲೀಸ್ ಗಣೇಶ್ ಕಾಮತ್ ಕೊಲೆ ಯತ್ನ ಆರು ಆರೋಪಿಗಳು ಅರೆಸ್ಟ್!
    • ಸಹಾಯ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಎದುರು ಬೆತ್ತಲೆ ನಿಂತ ಉಳ್ಳಾಲ ಎಸ್ಡಿಪಿಐ ಮುಖಂಡ ಅರೆಸ್ಟ್!
    • ಮೋದಿಜಿ, ಏಳಿ, ಎದ್ದೇಳಿ, ಒಟಿಟಿ ಮುಗಿಸದೇ ನಿಲ್ಲದಿರಿ!!
  • Popular Posts

    • 1
      ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
    • 2
      ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
    • 3
      ಬಸ್ ನಲ್ಲಿ ಯುವತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಆರೋಪಿ ಹುಸೈನ್ ಬಂಧನ!
    • 4
      ಹಿಂದೂಗಳನ್ನು ಕೆಣಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ!!
    • 5
      30 ವರ್ಷಗಳಿಂದ ನಗರ ಯೋಜನಾ ವಿಭಾಗದಲ್ಲಿ ಹೊರಳಾಡುತ್ತಿರುವವರಿಗೆ ಓಡಿಸಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia, Mangalore - 1

Press enter/return to begin your search