ಆಂಟೋನಿಯವರು ಎಮೋಶನಲ್ ಬ್ಲ್ಯಾಕ್ ಮೇಲ್ ಮಾಡುವ ಶೈಲಿ ಬೇರೆನೇ ಇದೆ….
Posted On January 11, 2021
ಮಂಗಳೂರು ಮಹಾನಗರ ಪಾಲಿಕೆ ತೊಟ್ಟಿರಹಿತ ನಗರ ಆಗಿದೆಯಾ? ಇಲ್ಲ, ಇವತ್ತಿಗೂ ನೀವು ಪಾಲಿಕೆಯ ಒಳಗಿನ ಯಾವುದೇ ರಸ್ತೆಯನ್ನು ನೋಡಿ ಅಲ್ಲೊಂದು ತೊಟ್ಟಿ ಅಥವಾ ಡಸ್ಟ್ ಬಿನ್ ಕಾಣಲು ಸಿಕ್ಕೆ ಸಿಗುತ್ತದೆ. ಅಷ್ಟಕ್ಕೂ ಭಾರತದ Supream ನ್ಯಾಯಾಲಯದ ಆದೇಶದ ಪ್ರಕಾರ ಯಾವುದೇ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಡಸ್ಟ್ ಬಿನ್ ಗಳು ಇರಲೇಬಾರದು. ಅದಕ್ಕಾಗಿ ಹಿಂದಿನ ಭಾರತೀಯ ಜನತಾಪಕ್ಷದ ಸರಕಾರ ಪಾಲಿಕೆಯ ಸ್ವಚ್ಚತೆಯೆಂಬ ಅಭಿವೃದ್ಧಿಯ ದೃಷ್ಟಿಯಲ್ಲಿ ಜಾಗತಿಕ ಟೆಂಡರ್ ಅನ್ನು ಕರೆದಿತ್ತು. ಆಂಟೋನಿ ವೇಸ್ಟ್ ನವರನ್ನು ಒಬ್ಬರೇ ಇಲ್ಲಿ ಟೆಂಡರಿಗೆ ಬಂದಿದ್ದು. ನಂತರ ಬಿಜೆಪಿ ಅಡಳಿತ ಪಾಲಿಕೆಯಲ್ಲಿ ಬಿದ್ದು ಹೋಯಿತು. ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದರು. ಇವರು ಆಂಟೋನಿಯವರ ಕೆಲಸಕ್ಕೆ ಚಾಲನೆ ಕೊಟ್ಟರು. ಮಂಗಳೂರು ನಗರ ದಕ್ಷಿಣ ಮತ್ತು ಮಂಗಳೂರು ಉತ್ತರ ಎಂದು ಎರಡು ಭಾಗಗಳಾಗಿ ಮಾಡಲಾಗಿದೆ. ಅದು ತ್ಯಾಜ್ಯ ಸಂಗ್ರಹ ಸುಲಭವಾಗಲಿ ಎನ್ನುವ ಕಾರಣಕ್ಕೆ. ಆದರೆ ಅಸಲಿ ವಿಷಯ ನಿಮಗೆ ಗೊತ್ತಾಗಲೇಬೇಕು.
ದಕ್ಷಿಣದಲ್ಲಿ ಕಸ ಎತ್ತಿ ಡಂಪಿಂಗ್ ಯಾರ್ಡ ನಲ್ಲಿ ಹಾಕಿದರೆ ಒಂದು ಟನ್ ಗೆ 2051 ರೂಪಾಯಿ ಇವರಿಗೆ ಸಿಗುತ್ತದೆ. ಅದೇ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಇವರು ಎತ್ತುವ ತ್ಯಾಜ್ಯವನ್ನು ಇವರು ಡಂಪಿಂಗ್ ಯಾರ್ಡ ನಲ್ಲಿ ಸುರಿದಾಗ ಇವರಿಗೆ ಒಂದು ಟನ್ ಗೆ 3201 ರೂಪಾಯಿ ಇವರ ಲೆಕ್ಕಕ್ಕೆ ಹೋಗುತ್ತದೆ. ಅದಕ್ಕೆ ಆಂಟೋನಿಯಂತಹ ಲೂಟಿಕೋರರಂತಿರುವ ಸಂಸ್ಥೆಗಳು ದಕ್ಷಿಣದಲ್ಲಿ ಕಸ ಎತ್ತಿ ಅಲ್ಲಿ ಅದನ್ನು ಉತ್ತರದಿಂದ ಕಸ ಒಟ್ಟು ಮಾಡಿದ್ದು ಎಂದು ಹೇಳೀ 2051 ರೂಪಾಯಿ ಜಾಗದಲ್ಲಿ ಟನ್ ಗೆ 3201 ರೂಪಾಯಿ ಪಡೆದುಕೊಳ್ಳುತ್ತವೆ. ಅಂದರೆ ಒಂದು ಟನ್ ಗೆ ಬರೋಬ್ಬರಿ 1150 ರೂಪಾಯಿ ನಿವ್ವಳ ಡಬಲ್ ಗೇಮ್ ಲಾಭ. ಅದು ಯಾವ ಮಟ್ಟಕ್ಕೆ ಮುಟ್ಟಿದೆ ಎಂದರೆ ಮಂಗಳೂರು ನಗರ ದಕ್ಷಿಣದಲ್ಲಿ ತ್ಯಾಜ್ಯ ಸಂಗ್ರಹಿಸುವುದು ಅಲ್ಲಿ ಹೋಗಿ ಅದನ್ನು ಉತ್ತರದ ಖಾತೆಯಲ್ಲಿ ಸೇರಿಸುವುದು. ಉತ್ತರದ ಎಷ್ಟೋ corporator ಗಳ wardನಲ್ಲಿ ಸರಿಯಾಗಿ ಕಸ, ತ್ಯಾಜ್ಯ ಸಂಗ್ರಹಣೆ ಆಗುವುದೇ ಇಲ್ಲ. ಕಾರಣ ಅಲ್ಲಿ ಸಂಗ್ರಹವಾಗುವ ತ್ಯಾಜ್ಯಕ್ಕೆ ರೇಟು ಕಡಿಮೆಯಲ್ವಾ. ಅದಕ್ಕಾಗಿ ಎಲ್ಲ ತ್ಯಾಜ್ಯ ಸಂಗ್ರಹಣಾ ವಾಹನಗಳು ದಕ್ಷಿಣದಲ್ಲಿ ಬಿಝಿ. ಹಾಗಂತ ಇವರು ದಕ್ಷಿಣದಲ್ಲಾದರೂ ಸರಿಯಾಗಿ ಮಾಡುತ್ತಾರಾ.ಬೋಳೂರು ತಿಲಕ ನಗರ ಮತ್ತುಅಸುಪಾಸು ಸರಿಯಾಗಿ ಕಸ ಕೊಂಡು ಹೋಗದೆ ಇರುವುದರಿಂದ ಅಲ್ಲಿನ ನಾಗರಿಕರು ಕಸವನ್ನು ನದಿಗೆ ಬಿಸಾಡುತ್ತಿದ್ದರು ಇಲ್ಲಿನ ಹೊಸ ಕಾರ್ಪೊರೇಟ್ರ ಜಗದೀಶ್ ಶೆಟ್ಟಿಯವರು ನಾಗರಿಕರಿಗೆ ಸಮಾಜಯಿಸಿ ಈಗ ನದಿಗೆ ಬಿಸಾಡುವುದನ್ನು ನಿಲ್ಲಿಸಿದಾರೆ ಇಲ್ಲಿ ಯಾವುದೆ ವಾಹನ ಅವರ ಮನೆಯ ಹೊರಗೆ ನಿಂತು ಹೊರಗೆ ಇಟ್ಟ ಕಸವನ್ನು ತೆಗೆದುಕೊಂಡು ಹೋಗಿಲ್ಲ.
ಇನ್ನೂ ಇವರು ಹೇಳುವ ಕೋಟಿ ಕೋಟಿ ಬಾಕಿ ಇದೆ ಎನ್ನುವುದು ಅಪ್ಪಟ ಸುಳ್ಳು. ಇವರು ಕೆಲಸ ನಿಲ್ಲುತ್ತೆವೆ ಎಂದು ಬ್ಲ್ಯಾಕ್ ಮೇಲ್ ಮಾಡುವುದು ಇದು ಮೊದಲನೇಯದಲ್ಲ. ಹಿಂದೆ ಇವರು ಹೇಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಹೇಳುತ್ತೆನೆ. ಇವರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಪಾಲಿಕೆಯವರು ಹಣ ಕೊಡದೇ ಹೋದರೆ ಇವರು ನೇರವಾಗಿ ಮಂಗಳೂರು ನಗರ ದಕ್ಷಿಣದ ಹಿಂದಿನ ಶಾಸಕರ ಬಳಿ ಹೋಗುತ್ತಿದ್ದರು. ಸರ್, ಇವರು ಪ್ರತಿಯೊಂದಕ್ಕೆ ಹಣ ಕಟ್ ಮಾಡುತ್ತಿದ್ದಾರೆ. ಹೀಗೆ ಆದರೆ ನಮಗೆ ಕಷ್ಟವಾಗುತ್ತದೆ. ನಾಳೆಯಿಂದ ನಾವು ಕೆಲಸ ನಿಲ್ಲಿಸುತ್ತಿದ್ದೇವೆ. ನೀವು ಒಂದೆರಡು ಕೋಟಿ ಕೊಡಿಸಿದರೆ ನಾವು ಏನಾದರೂ ಮಾಡಬಹುದು” ಇವರು ಕೆಲಸ ನಿಲ್ಲಿಸುತ್ತೇವೆ ಎಂದು ಇಮೋಷನಲ್ ಬ್ಲ್ಯಾಕ್ ಮೇಲ್ ಮಾಡಿದ ತಕ್ಷಣ ಮಾಜಿ ಶಾಸಕರಿಗೆ ಟೆನ್ಷನ್ ಆಗುತ್ತಿತ್ತು. ನಾಳೆ ಇವರು ನಿಜವಾಗಿಯೂ ಕೆಲಸ ನಿಲ್ಲಿಸಿದರೆ ಜನರ ಎದುರು ಮುಖ ತೋರಿಸುವುದು ಹೇಗೆ. ಈ ತ್ಯಾಜ್ಯ ಒಂದೆರಡು ದಿನ ಸಂಗ್ರಹವಾಗದೇ ಇದ್ದರೆ ತನಗೆ ಇದು ತೊಂದರೆ ಎಂದು ಹೆದರಿ ತಕ್ಷಣ ಪಾಲಿಕೆಯ ಕಮೀಷನರ್ ಅವರಿಗೆ ಫೋನ್ ಮಾಡುತ್ತಿದ್ದರು. ಅವರಿಗೆ ಎರಡು ಕೋಟಿ ತಕ್ಷಣ ರಿಲೀಸ್ ಮಾಡಿಬಿಡಿ ಎಂದು ಒತ್ತಡ ಹಾಕುತ್ತಿದ್ದರು. ಮೊದಲೆ ಇಲ್ಲಿ ಹೆಪ್ಸಿಬಾ ರಾಣಿ ಕೊರ್ಲಪಾಟಿಯವರಿಗೆ ಆದ ಕಥೆ ಅಗಿನ ಆಯುಕ್ತ ಗೋಪಾಲಕೃಷ್ಣ ಅವರಿಗೆ ಗೊತ್ತೆ ಇದೆ. ಹಾಗಿರುವಾಗ ಮತ್ತೇ ತಾನೇಕೆ ತೊಂದರೆಗೆ ಸಿಕ್ಕಿ ಬೀಳುವುದು ಎಂದು ಆಲೋಚಿಸಿ ತಕ್ಷಣ ಎರಡು ಕೋಟಿಗೆ ಸಹಿ ಹಾಕುತ್ತಿದ್ದರು. ಅಲ್ಲಿಗೆ ಈ ಆಂಟೋನಿಯವರು ಸುಮ್ಮನಾಗುತ್ತಿರಲಿಲ್ಲ. ಸೀದಾ ಉತ್ತರದ ಮಾಜಿ ಶಾಸಕರ ಬಳಿ ಹೋಗುತ್ತಿದ್ದರು. “ಸರ್, ದಕ್ಷಿಣದ ಶಾಸಕರು ಅವರ ಕ್ಷೇತ್ರದ ಹಣ ಕೊಡಿಸಿದ್ದಾರೆ. ನಿಮ್ಮ ಕ್ಷೇತ್ರದ ಹಣ ನಾವು ಕೇಳಿದರೆ ಕೊಟ್ಟಿಲ್ಲ. ನಾಳೆ ನಾವು ಈ ಭಾಗದಲ್ಲಿ ಕೆಲಸ ನಿಲ್ಲಿಸುತ್ತೇವೆ. ಕೆಟ್ಟ ಹೆಸರು ಬರುವುದು ನಿಮಗೆ” ತಕ್ಷಣ ಮಾಜಿ ಶಾಸಕರು ಕಮೀಷನರ್ ಅವರಿಗೆ ಫೋನ್ ಮಾಡಿ ” ಏನ್ರೀ, ನನ್ನ ಹೆಸರು ಹಾಳಾಗಲು ಕಾಯ್ತಾ ಇದ್ದೀರಾ” ಎನ್ನುತ್ತಿದ್ದರು. ಅಲ್ಲಿಗೆ ಇನ್ನೊಂದೆರಡು ಕೋಟಿ ಆಂಟೋನಿ ಜೇಬಿಗೆ ಸೇರುತ್ತಿತ್ತು. ಇದು ಆಂಟೋನಿ ಅವರ ಸ್ಟೈಲ್.
- Advertisement -
Leave A Reply