• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆ ಮತ್ತು ಗುಜರಿಯವರ ನಡುವಿನ “ಪ್ರೇಮ” ಸಂಬಂಧದಿಂದ ಪಾಲಿಕೆಯಲ್ಲಿ ಧ್ವನಿ ಎತ್ತುವವರಿಲ್ಲ…

Tulunadu News Posted On January 20, 2021


  • Share On Facebook
  • Tweet It

ಧರ್ಮಕ್ಕೆ ಕೊಟ್ಟರೆ ನನಗೂ ಇರಲಿ, ನನ್ನ ಅಪ್ಪನಿಗೂ ಇರಲಿ ಎಂದು ಹೇಳುವ ಜಾಯಾಮಾನದವರು ಇರುವ ಕಡೆಯಲ್ಲಿ ನೀವು ಮೂವತ್ತಾರು ಸೆಂಟ್ಸ್ ಜಾಗಕ್ಕೆ ವರ್ಷಕ್ಕೆ 1,56,600 ರೂಪಾಯಿ ಬಾಡಿಗೆ ಎಂದು ಹೇಳಿದರೆ ಅವರು ಕೇಳುತ್ತಾರಾ? ಇನ್ನೂ ಕಡಿಮೆ ಮಾಡಿ, ಇನ್ನೂ ಕಡಿಮೆ ಮಾಡಿ ಎಂದು ದಂಬಾಲು ಬೀಳುತ್ತಲೇ ಇರುತ್ತಾರೆ. ನೀವೆ ಲೆಕ್ಕ ಹಾಕಿ. 1,56,600 ಎಂದದ್ದು ಮೂವತ್ತಾರು ಸೆಂಟ್ಸ್ ಜಾಗಕ್ಕೆ, ಅದು ಕೂಡ ಒಂದು ವರ್ಷದ ಅವಧಿಗೆ. ಅಂದರೆ ತಿಂಗಳಿಗೆ ಎಷ್ಟು ಆಯಿತು, 13050 ಆಯಿತು. ಹದಿಮೂರು ಸಾವಿರ ಐವತ್ತು ರೂಪಾಯಿ ಮೂವತ್ತಾರು ಸೆಂಟ್ಸ್ ಜಾಗಕ್ಕೆ ಅದು ಕೂಡ ಮಂಗಳೂರಿನ ಹೃದಯ ಭಾಗದಲ್ಲಿ, ಯಾರಿಗಾದರೂ ಸಿಗುತ್ತದಾ? ಇವತ್ತಿನ ದಿನಗಳಲ್ಲಿ 900 ಚದರ ಅಡಿ ವಿಸ್ತ್ರೀರ್ಣದ ಒಂದು ಮನೆಗೆ ಮಂಗಳೂರಿನಲ್ಲಿ ಹನ್ನೆರಡು ಸಾವಿರ ಬಾಡಿಗೆ ಇದೆ. ಹೀಗಿರುವಾಗ ಮೂವತ್ತಾರು ಸೆಂಟ್ಸ್ ಜಾಗ ಎಂದರೆ ಅದು ಕುಶಾಲಾ? ನಾನು ಹೇಳುವುದಾದರೆ ಮಂಗಳೂರು ಮಹಾನಗರ ಪಾಲಿಕೆಯವರು ಕೊಡಲೇಬಾರದಿತ್ತು. ಆದರೆ ಇವರಿಗೇನೂ ಇವರು ದುಡಿದು ಸಂಪಾದಿಸಿದ ಹಣದಲ್ಲಿ ಖರೀದಿಸಿದ ಜಾಗವಲ್ಲವಲ್ಲ, ಆದರಿಂದ ಪಾಲಿಕೆಯ ಹಿಂದಿನ ಮೇಯರ್, ಸದಸ್ಯರು ಬಾಯಿಗೆ ಬಂದ ಬಾಡಿಗೆಗೆ ಜಾಗ ಕೊಟ್ಟು ಬಿಟ್ಟಿದ್ದಾರೆ. ಆದರೆ ಕಥೆ ಅಷ್ಟಕ್ಕೆ ಮುಗಿಯಿತಾ, ಇಲ್ಲ.
2007, ಜೂನ್,12 ರಂದು ಮನಪಾದವರು ಮುಂಗಡ ಬಾಡಿಗೆ ಹಣ ಕಟ್ಟಿ ಜಾಗವನ್ನು ಬಳಸಿಕೊಳ್ಳಿ ಎಂದು ಆದೇಶ ಕೊಟ್ಟು ಕಾದದ್ದೇ ಬಂತು. ಒಂದು ವಾರದೊಳಗೆ ಹಣ ಕಟ್ಟಿ ಜಾಗವನ್ನು ಉಪಯೋಗಿಸಿ ಎಂದು ಪಾಲಿಕೆ ಹೇಳಿತ್ತು. ಇವರು ಇವತ್ತು ಹಣ ಕಟ್ಟುತ್ತಾರೆ, ನಾಳೆ ಹಣ ಕಟ್ಟುತ್ತಾರೆ ಎಂದು ಪಾಲಿಕೆ ಕಾಯುತ್ತಾ ಕುಳಿತುಕೊಳ್ಳುತ್ತದೆ. ಒಂದು ವಾರ Scrap Iron Merchant association ನವರು ಹಣ ಕಟ್ಟಲು ಬರಲಿಲ್ಲ. ಸರಿ, ಒಂದು ತಿಂಗಳು ಕಾಯೋಣ ಎಂದು ಪಾಲಿಕೆ ಅಂದುಕೊಂಡಿತ್ತೊ ಏನೋ, ಇವರು ಬರಲಿಲ್ಲ. Scrap Iron Merchant Association ನವರಿಗೆ ಒಂದು ವರ್ಷಕ್ಕೆ ಪಾಲಿಕೆಯವರು ನಿಗದಿಪಡಿಸಿದ ಬಾಡಿಗೆ ಹಣ ಇದೆಯಲ್ಲ, ಅದು ಏನೇನೂ ಅಲ್ಲ. ಅವರ ವಹಿವಾಟು ನೋಡಿದರೆ ಇದು ಅವರಿಗೆ ಚಿಲ್ಲರೆ ಮೊತ್ತ. ಏಕೆಂದರೆ ಈ ಬೀಬಿ ಅಲಾಬಿ ರಸ್ತೆ ಇದೆಯಲ್ಲ, ಅಲ್ಲಿ ನೀವು ಒಮ್ಮೆ ಹೋಗಿ ನೋಡಿ ಬಂದರೆ ಗೊತ್ತಾಗುತ್ತೆ, ಇವರದ್ದೇ ರಾಜ್ಯಭಾರ. ಆ ಇಡೀ ರಸ್ತೆಯನ್ನು ಇವರೇ ಗುತ್ತಿಗೆ ತೆಗೆದುಕೊಂಡಂತೆ ಆಡುತ್ತಿರುತ್ತಾರೆ. ಆದ್ದರಿಂದ ಬಹುಶ: ಈ ಚಿಕ್ಕ ಮೊತ್ತವನ್ನು ಕಟ್ಟಲು ಅವರಿಗೆ ಬರಲಿಕ್ಕೆ ಪುರುಸೊತ್ತು ಇರಲಿಕ್ಕಿಲ್ಲ ಎಂದು ಪಾಲಿಕೆ ಇನ್ನೊಂದು ತಿಂಗಳು ಕಾಯೋಣ ಎಂದು ನಿರ್ಧರಿಸಿತು. ಒಂದು ತಿಂಗಳು ಆಯಿತು, ಎರಡು ತಿಂಗಳು ಆಯಿತು, ಒಂದು ವರ್ಷ ಆಯಿತು. ಎಂಟು ವರ್ಷದ ಮೇಲಾಯಿತು. ಆ ವ್ಯಾಪಾರಿಗಳು ಬಾಡಿಗೆ ಹಣ ಒಂದು ರೂಪಾಯಿ ಕೂಡ ಕಟ್ಟಲು ಪಾಲಿಕೆಗೆ ಬರಲೇ ಇಲ್ಲ. ಅವರು ರಸ್ತೆಯಲ್ಲಿಯೇ ಇವತ್ತಿಗೂ ತಮ್ಮ ಗುಜರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಪಾಲಿಕೆ ನೀಡಿದ ಆ ಜಾಗದಲ್ಲಿ ಗೊಡಾನ್ ಮಾಡಿಕೊಂಡಿದ್ದಾರೆ. ಆವತ್ತಿನಿಂದ ಇವತ್ತಿನ ತನಕ ಒಂದೇ ಒಂದು ಒಪ್ಪಂದ ಇವರ ನಡುವೆ ನಡೆದಿಲ್ಲ. ಆವತ್ತು ಏನು ಜಾಗ ಕೊಡುತ್ತೇವೆ, ಬಾಡಿಗೆ ಇಷ್ಟಾಗುತ್ತದೆ, ಇಷ್ಟು ಮುಂಗಡ ಬಾಡಿಗೆ ಎಂದೆಲ್ಲ ಮಾತುಕತೆ ಆಗಿತ್ತೊ ಅದೇ ಲಾಸ್ಟ್. ನಂತರ ಏನೂ ಕಥೆಯಿಲ್ಲ. ಅವರೆನೊ ವ್ಯಾಪಾರಿಗಳು, ಅವರಾಗಿಯೇ ಬಂದು ಸತ್ಯಹರಿಶ್ಚಂದ್ರನ ತರಹ ಬಾಡಿಗೆ ಕಟ್ಟಿ ಹೋಗಲು ಅವರಿಗೇನೂ ಹೊಟ್ಟೆ ಬಂದಿಲ್ಲ. ಆದರೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಎಂಟು ವರುಷಗಳಿಂದ ಮಲಗಿದ್ದರಾ? ಈಗ ಬಿಡಿ, ಕಾಂಗ್ರೆಸ್ ಆಡಳಿತ ಇದಾಗಲೂ,ಮಧ್ಯದಲ್ಲಿ ಒಂದು ವರ್ಷ ಪಾಲಿಕೆ ಅಸ್ತಿತ್ವದಲ್ಲಿಯೇ ಇರಲಿಲ್ಲ. ಅದರ ನಡುವೆ ಪಾಲಿಕೆಯ ಕಮೀಷನರ್ ಅಂದರೆ ಒಂದು ತರಹ ಅತಿಥಿಗಳ ತರಹ ಅಗಿ ಹೋಗಿದ್ದರು. ಬರುತ್ತಿದ್ದರು, ಒಂದಿಷ್ಟು ದಿನ ಇದ್ದು ಹೋಗುತ್ತಿದ್ದರು. ಇದರೊಂದಿಗೆ ನಂತರ ಅಧಿಕಾರದಲ್ಲಿದ್ದ ಬಿಜೆಪಿ ಯಾಕೆ ಏನು ಮಾಡಿಲ್ಲ. ಅವರು ಈ ಬಗ್ಗೆ ಪ್ರಶ್ನೆ ಎತ್ತಬಹುದಿತ್ತಲ್ಲ. ಅವರು ಆವತ್ತು ಏನೂ ಮಾಡಿಲ್ಲ,ನಂತರ ವಿರೋಧ ಪಕ್ಷದಲ್ಲಿ ಇದ್ದೂ ಏನು ಮಾಡಲ್ಲಿಲ್ಲ. ಬಹುಶ: ಪಾಲಿಕೆಯ ವಿಪಕ್ಷ ಮುಖಂಡರ ಮತ್ತು ಗುಜರಿ ವ್ಯಾಪಾರಿಗಳ ನಡುವಿನ “ಪ್ರೇಮ” ಸಂಬಂಧದ “ಆನಂದ” ನನಗೆ ಗೊತ್ತಾಗಿಹೋಯಿತು. ಇನ್ನು ಸುಮ್ಮನೆ ಕುತರೆ ಆಗುವುದಿಲ್ಲ ಎಂದು ಕೊಂಡು ನಾನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಒಂದು application ಹಾಕಿದೆ. ಇದರಿಂದ ಪಾಲಿಕೆ ಸ್ವಲ್ಪ ಎಚ್ಚರಗೊಂಡಿತು. ಅಂದರೆ ತಕ್ಷಣ ಏನೂ ನಿದ್ರೆಯಿಂದ ಎಚ್ಚರಗೊಂಡಿರಲಿಲ್ಲ. ನಾನು application ಹಾಕಿದ್ದು 4.9.14 ರಂದು. ಪಾಲಿಕೆ 4.4.15ರಂದು ಒಂದು ನೋಟಿಸ್ ಜಾರಿಮಾಡುತ್ತದೆ.
ಆ ನೋಟಿಸಿನಲ್ಲಿ ಮೇಯರ್ ಅವರು ಏನು ಹೇಳಿದ್ದರು ಎಂದರೆ ಗುಜರಿ ವ್ಯಾಪಾರಿಗಳು 2006-07 ರ ಅವಧಿಯಿಂದ ಇವರೆಗೆ ಸಲ್ಲಿಸಬೇಕಾಗಿರುವ ಒಟ್ಟು ಬಾಡಿಗೆ ಮೊತ್ತ 14,09,400 ರೂಪಾಯಿಗಳನ್ನು ತಾನು ಜಾರಿ ಮಾಡಿದ ನೋಟಿಸು ತಲುಪಿದ ಏಳು ದಿನಗಳೊಳಗೆ ಪಾವತಿಸಬೇಕು. ತಪ್ಪಿದ್ದಲ್ಲಿ ಸದ್ರಿ ಜಮೀನನ್ನು ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲಿ ನನಗೆ ಇನ್ನೊಂದು ಸಂಶಯ ಬರುತ್ತದೆ. ನಾನು ಮಾಹಿತಿ ಹಕ್ಕಿನಲ್ಲಿ ಪ್ರಶ್ನೆ ಕೇಳಿದ ಏಳು ತಿಂಗಳ ತನಕ ಪಾಲಿಕೆ ಯಾಕೆ ಮೌನ ವಹಿಸಿತ್ತು. ಮೊದಲೇ ಎಂಟು ವರ್ಷ ತಡವಾಗಿದೆ. ಒಂದೇ ಒಂದು ರೂಪಾಯಿ ಹಣ ಬಂದಿಲ್ಲ. ನಾನು ಮಾಹಿತಿ ಹಕ್ಕಿನಲ್ಲಿ ಪ್ರಶ್ನೆ ಕೇಳಿ ಇವರನ್ನು ಎಬ್ಬಿಸಿದ ಬಳಿಕ ಮತ್ತೇ ಏಳು ತಿಂಗಳು ತಡವೇ. ಕಹಾನಿ ಅಬಿ ಬಿ ಬಾಕಿ ಹೇ…
  • Share On Facebook
  • Tweet It


- Advertisement -


Trending Now
ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
Tulunadu News May 27, 2023
ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
Tulunadu News May 25, 2023
Leave A Reply

  • Recent Posts

    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
    • ಕಾಂಗ್ರೆಸ್ ಬಾಯಿಗೆ ಬಂದ ತುತ್ತನ್ನು ಮೈಮೇಲೆ ಚೆಲ್ಲಿಕೊಂಡಿದೆ!!
    • ಕಾಂಗ್ರೆಸ್ಸಿಗರೇ ಕ್ಯಾಲ್ಕುಲೇಟರ್ ನಲ್ಲಿ ಲೆಕ್ಕ ಹಾಕಿ ಘೋಷಣೆ ಕೂಗಿ!!
  • Popular Posts

    • 1
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 2
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search