ಶ್ರೀ ಕಾಶೀ ಮಠ ಸಂಸ್ಥಾನದಲ್ಲಿ ಭಜನಾ ಸಪ್ತಾಹ ಪ್ರಾರಂಭ.
ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಹೇವಿಳಂಬಿ ನಾಮ ಸಂವತ್ಸರದ ಚಾತುರ್ಮಾಸ ವ್ರತ ಪ್ರಯುಕ್ತ ಶ್ರೀ ಸಂಸ್ಥಾನದ ಆರಾಧ್ಯ ದೇವರುಗಳಾದ ಶ್ರೀ ವ್ಯಾಸರಘುಪತಿ ನರಸಿಂಹ ದೇವರ ಸನ್ನಿಧಿಯಲ್ಲಿ ಭಜನಾ ಸಪ್ತಾಹವು ಶ್ರೀ ಗಳವರ ಅಮೃತ ಹಸ್ತಗಳಿಂದ ದೀಪ ಪ್ರಜ್ವಲನೆಯ ಮುಖೇನ ವಿದ್ಯುಕ್ತವಾಗಿ ಪ್ರಾರಂಭಗೊಂಡಿತು. ನಿರಂತರ ಅಹೋರಾತ್ರಿ ಏಳು ದಿನಗಳ ಪರ್ಯಂತ ಭಜನೆ, ಸಂಕೀರ್ತನೆಗಳು ಜಿಲ್ಲೆಯ ವಿವಿಧ ಭಜನಾ ಮಂಡಳಿಗಳ ಗೌಡ ಸಾರಸ್ವತ ಸಮಾಜದ ಅಬಾಲ ವೃದ್ಧ ಸ್ತ್ತ್ರೀ – ಪುರುಷರು ಪಾಲ್ಗೊಳ್ಳಲಿರುವರು.
ಪ್ರಾರಂಭದಲ್ಲಿ ಶ್ರೀ ಸಂಸ್ಥಾನದ ದೇವರ ಸಮ್ಮುಖದಲ್ಲಿ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಮಹಾಪ್ರಾರ್ಥನೆ ನೆರವೇರಿಸಿಧರು ಬಳಿಕ ದೀಪ ಪ್ರಜ್ವಲನೆ ನಡೆಯಿತು. ಈ ಸಂಧರ್ಭದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಜಿ. ರತ್ನಕರ್ ಕಾಮತ್, ಅನಿಲ್ ಕಾಮತ್, ಶ್ರೀ ಮಹಾಲಸಾ ನಾರಾಯಣಿ ದೇವಳದ ಆಡಳಿತ ಮಂಡಳಿಯ ಮಾರೂರ್ ಪದ್ಮನಾಭ ಪೈ, ಸದಾಶಿವ ಪೈ, ಉಪಸ್ಥಿತರಿದ್ದರು .
ಚಿತ್ರ : ಮಂಜು ನೀರೇಶ್ವಾಲ್ಯ
Leave A Reply