ಹಣ ಇದವರು ಮಂಗಳೂರಿನಲ್ಲಿ ಹೇಗೆ ಬೇಕು ಹಾಗೆ ಕಟ್ಟಡ ಕಟ್ಟ ಬಹುದು ಪಾಲಿಕೆಯವರು ಏನೂ ಕ್ರಮ ಜರುಗಿಸುವುದಿಲ್ಲ
ನಾವು ದೇವರಿಗೆ ಏನು ಬೇಕು ಎಂದು ಬೇಡಿಕೊಳ್ಳುತ್ತೆವೆಯೊ ಅದನ್ನು ದೇವರು ನಮಗೆ ಕೊಡುತ್ತಾನೆ. ಆದರೆ ನೀವು ಏನೂ ಬೇಡದೆ ಹೋದರೆ ನಿಮಗೆ ಏನು ಬೇಕೊ ಅದನ್ನೆಲ್ಲಾ ಕೊಡುತ್ತಾನೆ. ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮಿಜಿಯವರ ದಿವ್ಯವಾಣಿಯನ್ನು ಬರೆಯುವ ಖುಷಿಯೇ ಬೇರೆ ಮತ್ತು ಅದು ನೂರಕ್ಕೆ ನೂರರಷ್ಟು ಸತ್ಯ. ಆದರೆ ಕೆಲವರು ಭಗವಂತ ಕೊಡುತ್ತಾನೆ ಎಂದು ಇದ್ದಬದ್ದದ್ದೆಲ್ಲಾ ಬೇಡುತ್ತಾರೆ ಮತ್ತು ಅದನ್ನು ದುರುಪಯೋಗ ಪಡಿಸುತ್ತಾರೆ. ಶ್ರೀನಿವಾಸ್ ಹೊಟೇಲಿನವರು ಕಾನೂನನ್ನು ಗಾಳಿಗೆ ತೂರಿ ಹೇಗೆ ಅಕ್ರಮವಾಗಿ ಮಹಡಿಯನ್ನು ಕಟ್ಟಿದ್ದಾರೆ . ಹೋಟೇಲಿನವರದ್ದು ಆಡಳಿತ ಕಚೇರಿ ಇರುವುದು ಅವರ ಹೊಟೇಲಿನ ಕೆಲವೇ ಹೆಜ್ಜೆಗಳ ದೂರದಲ್ಲಿರುವ ಫೆಲಿಕ್ಸ್ ಪೈ ಬಜಾರ್ ನ ಕಟ್ಟಡದಲ್ಲಿ. ಹೋಟೇಲಿನವರು ಅಕ್ರಮವಾಗಿ ಮಹಡಿಯನ್ನು ತೆರೆದಿಟ್ಟು ವ್ಯಾಪಾರ ಮಾಡುತ್ತಿರುವ ಬಗ್ಗೆ ನಾನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದೂರೊಂದನ್ನು ದಾಖಲಿಸಿದ್ದೆ. ಅದರ ವಿಚಾರಣೆ ನಡೆದು ಆ ಹೆಚ್ಚುವರಿ ಅಕ್ರಮ ಮಹಡಿಯನ್ನು ಕೆಡವಬೇಕೆಂದು ಆದೇಶ ಕೂಡ ಜಾರಿಗೆ ಬಂದಿತ್ತು. ಆದರೆ ಇಲ್ಲಿಯ ತನಕ ಮನಪಾದಲ್ಲಿ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳಾಗಲೀ ಅಥವಾ ಕಮೀಷನರ್ ಅವರಾಗಲೀ ಅದನ್ನು ಕೆಡವುದರ ಬಗ್ಗೆ ಧೈರ್ಯ ಮಾಡಲಿಲ್ಲ ಈಗ ಅಕ್ರಮ ಮಹಡಿಯ ಮೇಲೆ ಇನ್ನೊಂದ ತಗಡು ಶೀಟಿನ ಹೆಚ್ಚುವರಿ ಮಹಡಿ ನಿರ್ಮಿಸಿದ್ದಾರೆ ಅದರೂ ಪಾಲಿಕೆಯ ನಗರ ಯೋಜನಾ ವಿಭಾಗದ ಅಧಿಕಾರಿಗಳು ತಮ್ಮ ಕಿಸೆ ತುಂಬಿಸಿಕೊಂಡು ಕಣ್ಣು ಕಾಣದಂತೆ ನಟಿಸುತ್ತಿದ್ದಾರೆ.ಇನ್ನು ಮುಕ್ಕದಲ್ಲಿ ಶ್ರೀನಿವಾಸ್ ಕಾಲೇಜಿನವರ ಆಸ್ಪತ್ರೆಯ ಬಗ್ಗೆನೂ ಬರೆಯಲಿದೆ. ಸದ್ಯಕ್ಕೆ ಈಗ ಮಂಗಳೂರಿನ ಹೃದಯ ಭಾಗದ ಬಗ್ಗೆ ಮಾತ್ರ.ನೋಡೊಣ ಹೊಸ ಕಮಿಷನರ್ ಹೊಸ ಮೇಯರ್ ಏನು ಮಾಡುತ್ತಾರೆ ಎಂದು.
Leave A Reply