• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಇನ್ನಷ್ಟು ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆಯಾಗುವ ಮೊದಲೇ!!

Tulunadu News Posted On February 3, 2021
0


0
Shares
  • Share On Facebook
  • Tweet It

ಲಾಠಿ ಹಿಡಿದು ಕರ್ತವ್ಯದಲ್ಲಿದ್ದ ಒಬ್ಬ ಸಾಮಾನ್ಯ ಪೊಲೀಸ್ ಪೇದೆಯನ್ನು ತಲವಾರಿನಂತಹ ಆಯುಧ ಹಿಡಿದು ಕೊಲ್ಲಲು ಹೋಗುವುದು ಅದ್ಯಾವ ಗಂಡಸುತನ ಎನ್ನುವುದನ್ನು ಈಗ ಸೆರೆ ಸಿಕ್ಕಿರುವ ಮಾಯಾ ಹಾಗೂ ಕಾರ್ಖಾನಾ ಗ್ಯಾಂಗ್ ನವರೇ ಹೇಳಬೇಕು. ಇಂತಹ ಸಮಾಜಘಾತುಕರನ್ನು ಹೆಡೆಮುರಿ ಕಟ್ಟಿ ಪೊಲೀಸ್ ಕಮೀಷನರ್ ಹೇಗೆ ವಿಚಾರಿಸಬೇಕೋ ಹಾಗೆ ವಿಚಾರಿಸಿಕೊಂಡು ಬಿಡುಗಡೆಯಾದ ಬಳಿಕವೂ ಪೊಲೀಸರ ಮೇಲೆ ಹಲ್ಲೆ ಮಾಡಲು ಯೋಚಿಸಿದರೂ ಅವರ ನರದಲ್ಲಿ ನೋವು ಝಳ್ಳೆಂದು ಹೊಳೆಯಬೇಕು. ಹಾಗೇ ಮಾಡಿಬಿಡಬೇಕು. ಯಾಕೆಂದರೆ ನ್ಯೂಚಿತ್ರಾ ಬಳಿ ಅಪ್ರಾಪ್ತ ವಯಸ್ಸಿನ ಹುಡುಗನಿಂದ ಹಲ್ಲೆಗೊಳಗಾದ ಗಣೇಶ್ ಕಾಮತ್ ಅದೃಷ್ಟ ದೊಡ್ಡದಿತ್ತು. ದೊಡ್ಡದೇನೂ ಆಗಲಿಲ್ಲ. ಆದರೆ ಆರೋಪಿಗಳನ್ನು ಹೀಗೆ ಬಿಟ್ಟರೆ ಮುಂದಿನ ಬಾರಿ ಇದು ಅತಿರೇಕಕ್ಕೆ ಹೋಗುತ್ತದೆ. ಇದರಿಂದ ಆಗುವುದೇನು? ದೇಶದ್ರೋಹಿಗಳು ತಮ್ಮ ಕಾರ್ಯದಲ್ಲಿ ಸಫಲರಾಗುತ್ತಾರೆ ಮತ್ತು ಪಾಪದ ಪೊಲೀಸ್ ಸಿಬ್ಬಂದಿಗಳು ಬಲಿಯಾಗುತ್ತಾರೆ.
ಮಾಯಾ ಗ್ಯಾಂಗ್ ಹಾಗೂ ಕಾರ್ಖಾನಾ ಗ್ಯಾಂಗ್ ಸೆರೆ ಸಿಕ್ಕಿದೆಯಲ್ಲ, ಅವರ ಬಳಿ ಪ್ರತೀಕಾರ ತೆಗೆದುಕೊಳ್ಳಬೇಕೆಂದು ನಿರ್ಧಾರವಾದ ಪೊಲೀಸ್ ಸಿಬ್ಬಂದಿಗಳ ಪಟ್ಟಿಯೇ ಇದೆ. ಅದರಲ್ಲಿ ಗಣೇಶ್ ಕಾಮತ್ ಹೆಸರು ಮೇಲೆ ಇತ್ತೆಂದು ತೋರುತ್ತದೆ. ನಾನು ಏನು ಹೇಳುವುದೇನೆಂದರೆ ಒಂದು ಗಲಭೆ ಆಗುವಾಗ ಪೊಲೀಸ್ ಸಿಬ್ಬಂದಿಗಳ ಜವಾಬ್ದಾರಿ ಏನು? ನಮಗೆ ಏನೂ ಉಸಾಬರಿ ಬೇಡಾ ಎಂದು ದೂರ ನಿಲ್ಲುವುದಾ? ಅಲ್ಲಿ ಸ್ಥಳದಿಂದ ಓಡಿ ಹೋಗುವುದಾ? ಅಥವಾ ಗಲಭೆಯನ್ನು ನಿಯಂತ್ರಿಸಲು ಪ್ರಯತ್ನ ಮಾಡುವುದಾ? ಒಂದು ವೇಳೆ ಗಲಭೆ ನಿಯಂತ್ರಣಕ್ಕೆ ಬರಲು ಪೊಲೀಸ್ ಉನ್ನತಾಧಿಕಾರಿ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿದಾಗ ಇಲ್ಲ ನಮಗೆ ಹೆದರಿಕೆ ಆಗುತ್ತದೆ, ನಾಳೆ ಆ ಗಲಭೆಕೋರರಲ್ಲಿ ಯಾರಾದರೂ ನಮಗೆ ಬಂದು ಹೊಡೆದರೆ ಎಂದು ಉನ್ನತ ಅಧಿಕಾರಿಗಳ ಆದೇಶವನ್ನು ಪೊಲೀಸ್ ಸಿಬ್ಬಂದಿ ತಳ್ಳಿ ಹಾಕಬೇಕಾ? ಅವರು ನಿಯಮಬದ್ಧವಾಗಿ ಪಾಲಿಸಿದರೆ ಆಗ ಪೊಲೀಸ್ ಸಿಬ್ಬಂದಿಗಳ ಮೇಲೆ ದ್ವೇಷ ಸಾಧಿಸುವ ಕೆಲಸ ಆಗುತ್ತದೆ ಎಂದಾದರೆ ನಾವು ಪ್ರಜ್ಞಾವಂತ ನಾಡಿನಲ್ಲಿ ಇದ್ದೇವಾ ಅಥವಾ ಪಾಕಿಸ್ತಾನದಲ್ಲಿ ಇದ್ದೇವಾ?
ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮತೀಯವಾದಿಗಳ ಹೋರಾಟ ನಡೆಯುವಾಗ ಗಲಭೆ, ದೊಂಬಿ ವಿಪರೀತಗೊಂಡು ಪೊಲೀಸರು ಅನಿವಾರ್ಯವಾಗಿ ಮಾಡಿದ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿದ್ದರು. ಅಲ್ಲಿಗೆ ಆ ಹೋರಾಟ ಮುಗಿಯಬೇಕಿತ್ತು. ನಂತರ ರಾಜ್ಯ ಸರಕಾರ ಆ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಲು ಪಕ್ಕದ ಜಿಲ್ಲೆಯ
ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿತ್ತು. ಅವರು ನೂರಾರು ಸಾಕ್ಷಿಗಳನ್ನು ವಿಚಾರಿಸಿ ವರದಿ ತಯಾರಿಸಿದ್ದರು. ಆ ಸಮಯದಲ್ಲಿ ಪೊಲೀಸ್ ಕಮೀಷನರ್ ಆಗಿದ್ದವರು ಡಾ.ಹರ್ಷ. ಅವರಿಗೆ ಆಗ ಭಾರತೀಯ ಜನತಾ ಪಾರ್ಟಿಯ ಸರಕಾರ ಸೂಕ್ತವಾಗಿ ಸಹಕಾರ ನೀಡಿದ್ದರೆ ಪ್ರಕರಣ ಒಂದು ತಾರ್ಕಿಕ ಅಂತ್ಯಕ್ಕೆ ಬರುತ್ತಿತ್ತು. ಆದರೆ ಹಾಗೆ ಆಗಲಿಲ್ಲ. ವಿಕಾಸ್ ಕುಮಾರ್ ಕಮೀಷನರ್ ಆಗಿದ್ದಾಗಲೂ ಏನೂ ನಡೆಯಲಿಲ್ಲ. ನಡೆದದ್ದು ಪೊಲೀಸರ ಮೇಲೆ ಹಲ್ಲೆ ಮಾತ್ರ. ಆದರೆ ಶಶಿಕುಮಾರ್ ಕಮೀಷನರ್ ಆಗಿ ಬಂದ ಮೇಲೆ ಈ ಫೈಲುಗಳನ್ನು ತೆರೆಯಿಸಿ ಗ್ಯಾಂಗುಗಳ ಮೇಲೆ ಮುಗಿಬಿದ್ದಿದ್ದಾರೆ.
ಇನ್ನು ದೇವಸ್ಥಾನ, ದೈವಸ್ಥಾನಗಳನ್ನು ಅಪವಿತ್ರಗೊಳಿಸಲು ಪ್ರಯತ್ನಿಸಿದವರನ್ನು ಕೂಡ ಪೊಲೀಸ್ ಕಮೀಷನರ್ ನೇತೃತ್ವದ ತಂಡ ಬಂಧಿಸಿದೆ. ಇನ್ನು ಆಗಾಗ ಬೇರೆ ಬೇರೆ ಕಡೆ ರೌಡಿಗಳ ಪೆರೇಡ್ ಕೂಡ ಪೊಲೀಸ್ ಕಮೀಷನರ್ ಮಾಡಿಸುತ್ತಿದ್ದಾರೆ. ನಿಜಕ್ಕೂ ಇದೆಲ್ಲ ಅಭಿನಂದಾನರ್ಹ ಕಾರ್ಯ. ಯಕ್ಷಗಾನವನ್ನು ವೀಕ್ಷಿಸಿ, ಕಲಾವಿದರ ಬೆನ್ನುತಟ್ಟುತ್ತಾ, ಒಂದೆಡೆ ಹಾಡುತ್ತಾ, ಇನ್ನೊಂದೆಡೆ ಆಡುತ್ತಾ, ಮತ್ತೊಂದೆಡೆ ಕರ್ತವ್ಯವನ್ನು ಕೂಡ ಸಮರ್ಪಕವಾಗಿ ಮಾಡುತ್ತಿರುವ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಜನರ ಪ್ರೀತಿ, ವಿಶ್ವಾಸವನ್ನು ಚೆನ್ನಾಗಿ ಗಳಿಸುತ್ತಿದ್ದಾರೆ. ಅಲ್ಲಲ್ಲಿ ಪಥ ಸಂಚಲನಾ ಮಾಡುತ್ತಾ ಜನರಲ್ಲಿ ಧೈರ್ಯ ತುಂಬುತ್ತಿದ್ದಾರೆ. ಅವರಿಗೆ ಫ್ರೀ ಹ್ಯಾಂಡ್ ನೀಡಿದರೆ ಅವರು ಮಂಗಳೂರನ್ನು ಒಂದೆಡೆಯಿಂದ ಅಪರಾಧ ಮುಕ್ತವನ್ನಾಗಿ ಮಾಡುತ್ತಾ ಬರಬಹುದು. ಅವರು ಮಾಯಾ ಹಾಗೂ ಕಾರ್ಖಾನಾ ಗ್ಯಾಂಗ್ ಅನ್ನು ಬಂಧಿಸಿದಾಗ ಅದರಲ್ಲಿ ಎಸ್ ಡಿಪಿಐ ಮುಖಂಡ ಕೂಡ ಇರುವ ಮಾಹಿತಿ ಬರುತ್ತಿದೆ. ಸಾಮಾನ್ಯವಾಗಿ ಅಪರಾಧಿಕ ಪ್ರಕರಣಗಳಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಸಿಕ್ಕಿಬಿದ್ದಾಗ ಅವರು ನಮ್ಮವರಲ್ಲ ಎನ್ನುವುದನ್ನು ಎಸ್ ಡಿಪಿಐ ಮಾಡುತ್ತಾ ಬಂದಿದೆ. ಆದರೆ ಈಗ ಸ್ವತ: ನಾಯಕರೇ ಸಿಕ್ಕಿ ಬೀಳುವ ಪರಿಸ್ಥಿತಿ ಇದೆ. ಅವರು ನಮ್ಮವರಲ್ಲ ಎಂದು ಹೇಳುವ ಅವಕಾಶವೂ ಪಕ್ಷದ ಮುಖಂಡರಿಗೆ ಇಲ್ಲ. ಯಾಕೆಂದರೆ ಸಿಕ್ಕಿಬಿದ್ದವರೇ ಯಾವುದೋ ವಿಷಯದಲ್ಲಿ ಜಿಲ್ಲಾಡಳಿತದ ಅಧಿಕಾರಿ ಒಬ್ಬರಿಗೆ ಮನವಿ ಕೊಟ್ಟಂತಹ ಫೋಟೋ ಇದೆ. ಒಟ್ಟಿನಲ್ಲಿ ಎಸ್ ಡಿಪಿಐ ಮುಖಂಡರು ವಿವಿಧ ಪ್ರಕರಣದಲ್ಲಿ ಸಿಕ್ಕಿಬೀಳುತ್ತಾರೆ. ಆದರೆ ಏನೇ ಆಗಲಿ ಕೈಲಾಗದವ ಮಾತ್ರ ಒಬ್ಬ ಪೊಲೀಸ್ ಸಿಬ್ಬಂದಿಯ ಮೇಲೆ ಕೈಮಾಡಬಲ್ಲ!
0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
Tulunadu News July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Tulunadu News July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search