ಉಪೇಂದ್ರ ಕಟ್ಟುವ ಹೊಸ ಪಕ್ಷ ಯಾವುದು?
ನಟ, ನಿರ್ಧೇಶಕ ಉಪೇಂದ್ರ ಭಾರತೀಯ ಜನತಾ ಪಾರ್ಟಿ ಸೇರುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇವತ್ತು ತಮ್ಮ ಖಾಸಗಿ ರೆಸಾರ್ಟ್ ಉಪ್ಪೀಸ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಬಿಜೆಪಿ ಸೇರುವ ಕುರಿತು ಯಾವುದೇ ಮಾತುಗಳನ್ನು ಆಡಲಿಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರುತ್ತಾರೆ ಉಪೇಂದ್ರ ಎಂದು ಕೆಲವು ಮಾಧ್ಯಮಗಳಲ್ಲಿ ಗಾಸಿಪ್ ಹರಡಿತ್ತು. ಅದಕ್ಕೆ ಸರಿಯಾಗಿ ಉಪೇಂದ್ರ ಇವತ್ತೆ ಸುದ್ದಿಗೋಷ್ಟಿ ಕೂಡ ಕರೆದಿದ್ದರು.
ತಾನು ರಾಜಕೀಯ ಎಂಟ್ರಿ ಮಾಡುತ್ತೇನೆ ಎಂದು ಹೇಳಿದ್ದು ನಿಜ, ಆದರೆ ತನ್ನ ರಾಜಕೀಯ ಪಕ್ಷದ ನಿರ್ಧಾರವಾಗಿಲ್ಲ. ತಾನು ಹೊಸ ಕಲ್ಪನೆಯಡಿ ಪ್ರಜಾನೀತಿ ಮಾಡಲು ಉದ್ದೇಶಿಸಿದ್ದು ಅದರ ಪ್ರಕಾರ ಮುನ್ನಡೆಯುವುದಾಗಿ ಅವರು ಹೇಳಿದ್ದಾರೆ. ನಮಗೆ ಬೇಕಾಗಿರುವುದು ಜನನಾಯಕರಲ್ಲ, ಹಾಗೇ ಜನಸೇವಕರೂ ಅಲ್ಲ, ನಮಗೆ ಬೇಕಾಗಿರುವುದು ಕಾರ್ಮಿಕರು. ತಾನು ಈ ವರ್ತಮಾನದಲ್ಲಿ ಬದುಕುವವನು, ನಾಳೆಯ ವಿಷಯ ಗೊತ್ತಿಲ್ಲ. ಹೊಸ ಹೊಸ ಐಡಿಯಾ ಇರುವ ಜನರು ನನ್ನೊಂದಿಗೆ ಬರಬೇಕು ಎಂದು ಅವರು ಹೇಳಿದ್ದಾರೆ. ಪೊಲಿಟಿಕಲ್ ಐಡಿಯಾ ಹೇಗಿರಬೇಕು ಎನ್ನುವುದನ್ನು ಜನ ಇಮೇಲ್ ಮೂಲಕ ತಿಳಿಸಬಹುದು ಎಂದು ಉಪೇಂದ್ರ ಮೂರು ಇಮೇಲ್ ಐಡಿಯಾಗಳನ್ನು ಕೊಟ್ಟಿದ್ದಾರೆ.
ಹೊಸಪಕ್ಷ ಕಟ್ಟುತ್ತೀರಾ ಎನ್ನುವ ಪ್ರಶ್ನೆಗೆ ಅದಕ್ಕೆ ನಿಮ್ಮ ಸಲಹೆ ಬೇಕು ಎಂದು ಹೇಳಿದ ಉಪೇಂದ್ರ, ಈಗ ಪಕ್ಷ ಕಟ್ಟಿ ನಂತರ ಅಧಿಕಾರಕ್ಕೆ ಬಂದ ಪಕ್ಷದೊಂದಿಗೆ ವಿಲೀನ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಅದು ಈಗಲೇ ಹೇಳಲು ಹೇಗೆ ಸಾಧ್ಯ ಎಂದು ನಟ ಅಭಿಪ್ರಾಯ ಪಟ್ಟಿದ್ದಾರೆ.
ತಾನು ಎಲ್ಲರ ಅಭಿಪ್ರಾಯ ಪಡೆದು ಮುನ್ನಡೆಯುತ್ತೇನೆ ಎಂದು ಹೇಳಿದ ಉಪೇಂದ್ರ, ಪಾರದಶ್ಯಕವಾಗಿ ನಡೆಯುವ ಮೂವ್ ಮೆಂಟ್ ಬೇಕು ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಾರಾಪತ್ನಿ ಪ್ರಿಯಾಂಕ ಅವರು ಬಹಳ ವರ್ಸದಿಂದ ಅವರು ಕನಸು ಕಟ್ಟಿಕೊಂಡಿದ್ದರು, ಅದು ಈಗ ಜಾರಿಗೆ ಬರುತ್ತಿದೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಶೈಲಿಯಲ್ಲಿ ಉಪೇಂದ್ರ ಪಕ್ಷ ಕಟ್ಟುತ್ತಾರಾ ಎನ್ನುವ ಪ್ರಶ್ನೆ ಈಗ ಉದ್ಭವಿಸಿದೆ. ಉಪೇಂದ್ರ ಸುದ್ದಿಗೋಷ್ಟಿಯ ನಡುವೆ ಅಮಿತಾ ಶಾ ಬೆಂಗಳೂರು ಭೇಟಿಯ ಸುದ್ದಿ ಕನ್ನಡ ವಾಹಿನಿಯಲ್ಲಿ ಸೈಡ್ ಲೈನ್ ಆಗಿದೆ
Leave A Reply