• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಿಜೆಪಿ ಆಡಳಿತದಲ್ಲಿ ಬಜರಂಗದಳ ವಿಚಾರಣೆ, ಎಸ್ ಡಿಪಿಐ ಆಚರಣೆ, ಏನಿದು ಯಡ್ಡಿ!!

AvatarHanumantha Kamath Posted On February 13, 2021


  • Share On Facebook
  • Tweet It

ಆಶ್ಚರ್ಯದಿಂದ ಒಂದು ಮಾತನ್ನು ಹೇಳಲೇಬೇಕು, ಅದೇನೆಂದರೆ ಮಂಗಳೂರು ಪೊಲೀಸರ ದ್ವಂದ್ವ ಮನಸ್ಸಿನ ಬಗ್ಗೆ. ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಪಡ್ಡೆ ಹುಡುಗರು ಆಚರಿಸಿಕೊಳ್ಳುತ್ತಾರೆ. ಆವತ್ತು ದಾರಿ ತಪ್ಪಿದ ಎಷ್ಟೋ ಪಾಗಲ್ ಪ್ರೇಮಿಗಳಿಂದ ಸಭ್ಯ ಹೆಣ್ಣುಮಕ್ಕಳಿಗೆ ಕಿರಿಕಿರಿಯಾಗುತ್ತದೆ. ಆ ವಿಷಯದಲ್ಲಿ ಬಜರಂಗದಳದ ಯುವ ಮುಖಂಡ ಪುನೀತ್ ಒಂದು ಪತ್ರಿಕಾ ಹೇಳಿಕೆಯನ್ನು ಕೊಡುತ್ತಾರೆ. ಅದರಲ್ಲಿ ” ಭಾರತ ದೇಶವು ಪುಣ್ಯಭೂಮಿ ವೈಶಿಷ್ಟ್ಯವಾದ ಸಂಸ್ಕೃತಿ ಸಂಸ್ಕಾರವನ್ನು ಹೊಂದಿದೆ. ಅಲ್ಲದೆ ನಮ್ಮ ಸಂಸ್ಕೃತಿ ಆಚರಣೆಗಳಿಗೆ ಅದರದ್ದೇ ಆದ ಮಹತ್ವವಿದ್ದು ಶತಮಾನಗಳ ಇತಿಹಾಸವನ್ನು ಹೊಂದಿದೆ. ಅದಾಗಿಯೂ ಭಾರತೀಯ ಸಂಸ್ಕೃತಿಗೆ ಸಡ್ಡು ಹೊಡೆಯುತ್ತಾ ಪಾಶ್ಚಿಮಾತ್ಯ ಸಂಸ್ಕೃತಿಗಳು ದಾಳಿ ಮಾಡುತ್ತಿವೆ. ನಮ್ಮ ಅಮೂಲ್ಯವಾದ ಸಂಸ್ಕೃತಿ ಆಚರಣೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ಪ್ರೇಮಿಗಳ ದಿನ.

ಹಾಗಾಗಿ ಬಜರಂಗದಳ ಪ್ರೇಮಿಗಳ ದಿನವನ್ನು ವಿರೋಧಿಸುತ್ತದೆ ಮತ್ತು ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು ಇದನ್ನು ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ. ಭಾರತೀಯ ಪರಂಪರೆಯಲ್ಲಿ ಪ್ರೇಮಿಗಳ ದಿನಾಚರಣೆ ಸರಿಯಲ್ಲ. ಆದ್ದರಿಂದ ಪ್ರೇಮಿಗಳ ದಿನಾಚರಣೆ ಆಚರಿಸಬಾರದು. ನಗರದ ಎಲ್ಲಾ ಹೂ ಅಂಗಡಿ ಮತ್ತು ಗಿಫ್ಟ್ ಸೆಂಟರ್ ಗಳು ಪ್ರೇಮಿಗಳ ದಿನಾಚರಣೆಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು ಮತ್ತು ಈ ಆಚರಣೆಗೆ ಯಾವುದೇ ಬೆಂಬಲ ಸೂಚಿಸಬಾರದು ಎಂದು ವಿನಂತಿಸುತ್ತೇವೆ””. ಇಂತಹ ಒಂದು ಮನವಿಯನ್ನು ಬಜರಂಗದಳದ ಸಂಚಾಲಕರಾದ ಪುನೀತ್ ಅತ್ತಾವರ್ ಮಾಧ್ಯಮಗಳಿಗೆ ಕಳುಹಿಸಿಕೊಟ್ಟಿದ್ದರು. ಇದರಿಂದ ಕೆರಳಿರುವ ಪೊಲೀಸರು ಅವರನ್ನು ಕರೆಸಿ ಒಂದು ಲಕ್ಷ ರೂಪಾಯಿ ಬಾಂಡಿಗೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಇದಕ್ಕಿಂತ ಮೊದಲು ಪುನೀತ್ ಬಗ್ಗೆ ಎರಡು ಪುಟಗಳ ವರದಿ ಕೂಡ ಬರೆದಿದ್ದಾರೆ. ಏನೋ ದೊಡ್ಡ ಪ್ರಮಾದವೇ ಆಗಿಹೋಯಿತೇನೋ ಎನ್ನುವ ರೀತಿಯಲ್ಲಿ ವರ್ತಿಸಿದ್ದಾರೆ.

ನಾನು ಕೇಳುವುದು ಇದೇನೂ ದೊಡ್ಡ ಅಪರಾಧವೇ? ಪ್ರೇಮಿಗಳ ದಿನವನ್ನು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಚರಿಸುವ ಕ್ರಮವೇ ಇಲ್ಲ. ಕೆಲವು ಶ್ರೀಮಂತ ಮನೆತನದ ಹುಡುಗರು ತಮ್ಮ ಶೋಕಿಗಾಗಿ ಪಾಪದ ಹುಡುಗಿಯರನ್ನು ಬಲೆಗೆ ಬೀಳಿಸಲು ಆವತ್ತು ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಈ ಬಾರಿ ಅದು ಆದಿತ್ಯವಾರವೇ ಪ್ರೇಮಿಗಳ ದಿನ ಬಂದಿದೆ. ಪ್ರೇಮಿಗಳ ದಿನದ ಬಗ್ಗೆ, ಆಗುವ ಅನಾಹುತದ ಬಗ್ಗೆ ಇದರ ಹಿಂದಿನ ಸಂಚಿಕೆಯಲ್ಲಿಯೇ ನಾನು ವಿವರವಾಗಿ ಬರೆದಿದ್ದೇನೆ. ಆದ್ದರಿಂದ ಈ ದಿನದಂದು ನಡೆಯುವ ಅನೈತಿಕ ಘಟನೆಗಳ ಬಗ್ಗೆ ಈ ಸಂಚಿಕೆಯಲ್ಲಿ ನಾನು ಪೋಸ್ಟ್ ಮಾರ್ಟ್ಂ ಮಾಡಲು ಹೋಗುವುದಿಲ್ಲ. ಇಲ್ಲಿ ಏನಿದ್ದರೂ ಪುನೀತ್ ಮೇಲೆ ಅಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವ ಪೊಲೀಸರ ಬಗ್ಗೆ ಬರೆಯಬೇಕಾಗಿದೆ.

ಪಾಂಡೇಶ್ವರ ಠಾಣೆಯ ಪೊಲೀಸರೇ ನಿಮಗೆ ಊರಿನ ಶಾಂತಿ, ಸುವ್ಯವಸ್ಥೆಯ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಇದ್ದ ಹಾಗೆ ವರ್ತಿಸಿದ್ದೀರಿ. ಇರಲಿ, ಅದೇ ಮೊನ್ನೆ ಎಸ್ ಡಿಪಿಐಯ ರಿಯಾಜ್ ಫರಂಗಿಪೇಟೆ ಎರಡೆರಡು ಸಲ ತಾಂಟ್ರೆ ಬಾ ತಾಂಟ್ ಎಂದು ಎದೆಗೆ ಬಡಿದುಕೊಂಡು ಹೇಳಿದನಲ್ಲ, ಆಗ ನಿಮ್ಮ ಕಿವಿ ಮುಚ್ಚಿ ಹೋಗಿತ್ತಾ? ರಿಯಾಜ್ ನಂತವರು ಮೈಕಿನಲ್ಲಿ ಅಷ್ಟು ಆವೇಶಭರಿತರಾಗಿ ಬೊಬ್ಬೆ ಹಾಕಿ ಹೇಳಿದಾಗ ಕಿವಿಗೆ ಹತ್ತಿ ಇಟ್ಟವರಂತೆ ವರ್ತಿಸಿದ ಪೊಲೀಸರೇ ನಿಮ್ಮ ಇದೇ ದ್ವಂದ್ವ ನಿಲುವುಗಳ ಬಗ್ಗೆ ಆಶ್ಚರ್ಯವಾಗುತ್ತಿದೆ ಎಂದು ಪ್ರಾರಂಭದಲ್ಲಿಯೇ ಹೇಳಿರುವುದು. ರಿಯಾಜ್ ಫರಂಗಿಪೇಟೆಯ ಹೇಳಿಕೆಯ ಬಳಿಕ ಅಲ್ಲಲ್ಲಿ ಹಿಂದೂ ಅಮಾಯಕರ ಮೇಲೆ ಹಲ್ಲೆಯಾಗಿರುವುದು ಪೊಲೀಸರಿಗೆ ಗೊತ್ತಿಲ್ಲವೋ ಅಥವಾ ಜಾಣ ಕುರುಡು ಆಗಿದೆಯೋ? ತಾವು ಓಪನ್ನಾಗಿ ಹೇಳಿದರೂ ಪೊಲೀಸರು ಏನೂ ಮಾಡಲಿಲ್ಲ ಎಂದು ರಿಯಾಜ್ ಗೆ ಖುಷಿಯಾಗಿರಬಹುದು.

ಯಾಕೆಂದರೆ ಈಗ ರಾಜ್ಯದಲ್ಲಿ ಇರುವುದು ಭಾರತೀಯ ಜನತಾ ಪಾರ್ಟಿಯ ಸರಕಾರ. ಆದರೆ ಇಲ್ಲಿ ಎಸ್ ಡಿಪಿಐಯ ಮುಖಂಡರು ಕೋಮು ಸೂಕ್ಷ್ಮ ನೆಲದಲ್ಲಿ ಎಂತಹ ಹೇಳಿಕೆಯನ್ನು ಕೂಡ ಬಹಿರಂಗವಾಗಿ ನೀಡಬಹುದು. ಅವರನ್ನು ಪೊಲೀಸರು ಏನೂ ಮಾಡುವುದಿಲ್ಲ, ಕನಿಷ್ಟ ಕರೆದು ಹೇಳುವುದಿಲ್ಲ. ಅದೇ ಒಬ್ಬ ಬಜರಂಗದಳ ಮುಖಂಡ ನಮ್ಮ ಸಂಸ್ಕೃತಿ ಅದು ಅಲ್ಲ ಎಂದರೆ ಅವರಿಗೆ ಒಂದು ಲಕ್ಷದ ಬಾಂಡ್ ಮತ್ತು ಮುಚ್ಚಳಿಕೆ. ಪೊಲೀಸರು ತಮ್ಮ ವರದಿಯಲ್ಲಿ ತಮ್ಮ ನೆನಪಿನಲ್ಲಿರುವ ಎಲ್ಲಾ ಸೆಕ್ಷನ್ ಗಳನ್ನು ಹಾಕಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಯಾರಾದರೂ ಲಿಖಿತ ಹೇಳಿಕೆ ಕೊಟ್ಟರೂ ಪೊಲೀಸರಿಗೆ ಇಂತಹ ಹೇಳಿಕೆಗಳಿಂದ ಸಮಾಜದಲ್ಲಿ ದೊಡ್ಡ ಆಪತ್ತು ಸಂಭವಿಸುತ್ತದೆ ಎಂದು ಅನಿಸುವುದಾದರೆ ಬಹಿರಂಗವಾಗಿ ತಮ್ಮ ಸಿದ್ಧಾಂತದ ವಿರೋಧಿಗಳಿಗೆ ಪಂಥಾಹ್ವಾನ ನೀಡಿದರೂ ಅದು ಗಲಭೆಗೆ ಕಾರಣವಾಗುವುದು ಎಂದು ಅನಿಸುವುದಿಲ್ಲ. ಒಂದು ಸುಮೋಟೋ ಪ್ರಕರಣ ದಾಖಲಿಸಲು ತಮಗೆ ಅಧಿಕಾರವಿದೆ ಎಂದು ಅನಿಸುವುದಿಲ್ಲ. ಅದೇ ಹಿಂದೂ ಮುಖಂಡರು ಹೇಳಿದರೆ ತಕ್ಷಣ ವಿಚಾರಣೆ ಮಾಡಬೇಕು ಎಂದು ಅನಿಸುತ್ತದೆ. ಎಸ್ ಡಿಪಿಐ ಉದ್ದೇಶ ಇರುವುದೇ ಗಲಭೆ ಎಬ್ಬಿಸುವುದು. ಆದರೆ ಅವರು ಮಾತನಾಡಿದರೆ ಅದು ಆಚರಣೆ, ಹಿಂದೂಗಳು ಮಾತನಾಡಿದರೆ ವಿಚಾರಣೆ. ಇದೆಲ್ಲ ನಡೆಯುತ್ತಿರುವುದು ಮಾನ್ಯ ಯಡಿಯೂರಪ್ಪನವರ ಬಿಜೆಪಿ ಆಡಳಿತದಲ್ಲಿ.!!

  • Share On Facebook
  • Tweet It


- Advertisement -


Trending Now
ರಸ್ತೆಯ ಮೇಲೆ ಬಾಕಿಯಾದ ಮಣ್ಣು, ಮರಳು ಕೃತಕ ನೆರೆಯ ಸಂಬಂಧಿಗಳು!!
Hanumantha Kamath March 5, 2021
ಸದನದಲ್ಲಿ ಜಾರಕಿಹೊಳಿ ವಿಷಯ ಬಿಟ್ಟು ಅಭಿವೃದ್ಧಿ ಚರ್ಚೆಯಾಗಲಿ!!
Hanumantha Kamath March 4, 2021
Leave A Reply

  • Recent Posts

    • ರಸ್ತೆಯ ಮೇಲೆ ಬಾಕಿಯಾದ ಮಣ್ಣು, ಮರಳು ಕೃತಕ ನೆರೆಯ ಸಂಬಂಧಿಗಳು!!
    • ಸದನದಲ್ಲಿ ಜಾರಕಿಹೊಳಿ ವಿಷಯ ಬಿಟ್ಟು ಅಭಿವೃದ್ಧಿ ಚರ್ಚೆಯಾಗಲಿ!!
    • ಹೊಸ ಮೇಯರ್ ಮಾಡಬೇಕಾದ ಮೊದಲ ಕೆಲಸಕ್ಕೆ ಗುಂಡಿಗೆ ಬೇಕು!!
    • ಮನ್ ಕಿ ಬಾತ್ ನಲ್ಲಿ ಅಡುಗೆ ಅನಿಲದ ರೇಟ್ ಬಗ್ಗೆ ಮೋದಿ ಮಾತನಾಡಲಿ!!
    • ಜಾತಿ ಮೀಸಲಾತಿ ತೆಗೆದು ಆರ್ಥಿಕ ಮೀಸಲಾತಿ ಜಾರಿಗೆ ಬರಲಿ!!
    • ಬಿಜೆಪಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದ 1 ವರ್ಷದಲ್ಲಿಯೇ ಲಗಾಮು ತಪ್ಪಿ ಹೋಗಿದೆ!!
    • ಪಾಲಿಕೆಯ ಹೊಸ ನಿಯಮದಿಂದ ಉದ್ದಿಮೆದಾರ ಬೀದಿಗೆ??
    • ನೀರು ಬರುತ್ತಿಲ್ಲ, ಮಣ್ಣು ತೆಗೆಸುವ ಗಂಡಸು ಪಾಲಿಕೆಯಲ್ಲಿ ಇದ್ದಾರಾ?
    • ಕಾಂಗ್ರೆಸ್ಸಿನ ಲೆಕ್ಕ ಕೊಡಿ ಅಭಿಯಾನ ಖಾದರ್ ಮನೆಯಿಂದಲೇ ಆರಂಭವಾಗಲಿ!!
    • ಖಾದರ್ ಸ್ವಕ್ಷೇತ್ರದಲ್ಲಿ ತ್ಯಾಜ್ಯ ಘಟಕ ಇಲ್ಲದಿದ್ದರೆ ಕಸ ಪಂಚಾಯತ್ ಅಂಗಳದಲ್ಲಿ ಸುರಿಯಬೇಕಾ!
  • Popular Posts

    • 1
      ರಸ್ತೆಯ ಮೇಲೆ ಬಾಕಿಯಾದ ಮಣ್ಣು, ಮರಳು ಕೃತಕ ನೆರೆಯ ಸಂಬಂಧಿಗಳು!!
    • 2
      ಸದನದಲ್ಲಿ ಜಾರಕಿಹೊಳಿ ವಿಷಯ ಬಿಟ್ಟು ಅಭಿವೃದ್ಧಿ ಚರ್ಚೆಯಾಗಲಿ!!
    • 3
      ಹೊಸ ಮೇಯರ್ ಮಾಡಬೇಕಾದ ಮೊದಲ ಕೆಲಸಕ್ಕೆ ಗುಂಡಿಗೆ ಬೇಕು!!
    • 4
      ಮನ್ ಕಿ ಬಾತ್ ನಲ್ಲಿ ಅಡುಗೆ ಅನಿಲದ ರೇಟ್ ಬಗ್ಗೆ ಮೋದಿ ಮಾತನಾಡಲಿ!!
    • 5
      ಜಾತಿ ಮೀಸಲಾತಿ ತೆಗೆದು ಆರ್ಥಿಕ ಮೀಸಲಾತಿ ಜಾರಿಗೆ ಬರಲಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia, Mangalore - 1

Press enter/return to begin your search