ಪಬ್ಬಸ್ ಬಳಿ ಚೂರಿ ಇರಿತ ಪ್ರಕರಣದ ಆರೋಪಿಗಳು ಅರೆಸ್ಟ್!
ದಿನಾಂಕ 07-02-2021 ರಂದು ರಾತ್ರಿ ಸಮಯ 09.20 ಗಂಟೆ ಸುಮಾರಿಗೆ ದೀಪಕ್ ಕುಮಾರ್ ಎಂಬವರಿಗೆ ಲಾಲ್ ಬಾಗ್ ಬಳಿ ಮೂರು ಜನ ಅಪರಿಚಿತರು ದ್ವಿ ಚಕ್ರ ವಾಹನದಲ್ಲಿ ಬಂದು ಎಡಕೈಯ ಮುಂಗೈಗೆ ಯಾವುದೋ ಮಾರಕಾ ಆಯುಧದಿಂದ ಇರಿದ ರಕ್ತದ ಗಾಯ ಉಂಟು ಮಾಡಿರುವ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿರುತ್ತದೆ.
ಆದರಂತೆ ಆರೋಪಿಗಳ ಪತ್ತೆಯ ಶ್ರೀ ವಿನಯ್ ಗಾಂವ್ಕರ್ ಉಪ ಪೊಲೀಸ್ ಆಯುಕ್ತರು ( ಅಪರಾಧ) ರವರ ಮಾರ್ಗದರ್ಶನಲ್ಲಿ ಶ್ರೀ ಜಗಧೀಶ್ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಮೊಹಮ್ಮದ್ ಶರೀಫ್ ಪೊಲೀಸ್ ನಿರೀಕ್ಷಕರು ಉರ್ವಾ ಪೊಲೀಸ್ ಠಾಣೆ, ಶ್ರೀಮತಿ ಶ್ರೀಕಲಾ, ಕೆಟಿ ಪಿ.ಎಸ್.ಐ. ( ಕಾ ಮತ್ತು ಸು) ಶ್ರೀ ಧನರಾಜ್ ಪಿ.ಎಸ್.ಐ. (ಅಪರಾಧ), ಹಾರುನ್ ಅಖ್ತರ್ ಪಿ.ಎಸ್.ಐ ಬರ್ಕೆ ಪೊಲೀಸ್ ಠಾಣೆ. ಶ್ರೀ ಶೀತಲ್ ಪಿ.ಎಸ್.ಐ ದಕ್ಷಿಣ ಪೊಲೀಸ್ ಠಾಣೆ, ನಾಗರಾಜ್ ಪಿ.ಎಸ್.ಐ ಉತ್ತರ ಠಾಣೆ, ಹಾಗೂ ಸಿಬ್ಬಂದಿಯವರ ಸಹಾಯದಿಂದ ಪ್ರಕರಣದ ಪ್ರಮುಖ ಆರೋಪಿಗಳು ಕುದ್ರೋಳಿ ನಿವಾಸಿಗಳಾದ ಮೊಹಮ್ಮದ್ ಫಾಯಿಕ್ (18) , 2) ಮೊಹಮ್ಮದ್ ಶಾಹಿಲ್ ಪ್ರಾಯ 19 ವರ್ಷ ಮತ್ತು ಇನ್ನೋರ್ವ ಅಪ್ರಾಪ್ತ ಬಾಲಕ ನನ್ನು ವಿಶೇಷ ತಂಡ ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಈ ಪ್ರಕರಣದಲ್ಲಿ ಬಾಗಿಯಾದ ಇತರರ ಬಗ್ಗೆ ತನಿಖೆ ಮುಂದುವರಿಸಲಾಗಿದೆ.
Leave A Reply