• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಸಿಟಿ ರವಿ ತಮಿಳುನಾಡಿನಲ್ಲಿ ಕೊಟ್ಟ ಹೇಳಿಕೆ ನಮ್ಮ ರಾಜ್ಯಕ್ಕೆ ಅನ್ವಯ ಮಾಡಿ!!

Tulunadu News Posted On March 15, 2021
0


0
Shares
  • Share On Facebook
  • Tweet It

ಸರಕಾರಿ ನೌಕರರು ಯಾವ ಇಲಾಖೆಯಲ್ಲಿದ್ದರೂ ಅವರ ಹುಟ್ಟುಗುಣ ಒಂದೇ ಆಗಿರುತ್ತದೆ ಎನ್ನುವುದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಿಷಯದಲ್ಲಿ ನಿಜವಾಗಿದೆ. ಹಿಂದೂಗಳು ಆರಾಧಿಸುವ ಕೆಲವು ಪ್ರಮುಖ ಮತ್ತು ಹೆಚ್ಚು ಆದಾಯ ತರುವ ದೇವಸ್ಥಾನಗಳನ್ನು ಸರಕಾರ ಮುಜುರಾಯಿ ಇಲಾಖೆಯ ಮೂಲಕ ನಿರ್ವಹಿಸುತ್ತಿರುವುದು ಪ್ರತಿಯೊಬ್ಬ ಆಸ್ತಿಕ ಬಾಂಧವರಿಗೂ ಗೊತ್ತೆ ಇದೆ. ಅದಕ್ಕೆ ಸರಕಾರದಿಂದ ಆಡಳಿತಾಧಿಕಾರಿ ಎಂದು ನೇಮಕ ಮಾಡಲಾಗಿರುತ್ತದೆ. ಅವರು ದೇವರ ಹಣ, ಬಂಗಾರವನ್ನು ರಕ್ಷಿಸಬೇಕಾದ ಪ್ರಮುಖ ಹುದ್ದೆಯಲ್ಲಿ ಇರುತ್ತಾರೆ. ಆದರೆ ಅವರೇ ದೇವರ ಹಣವನ್ನು, ಬಂಗಾರವನ್ನು ಹೊಡೆಯಲು ಶುರು ಮಾಡಿದರೆ ಆಗ ಏನು ಮಾಡುವುದು? ಬೇಲಿಯೇ ಎದ್ದು ಹೊಲ ಮೇಯುವುದು ಅಂದರೆ ಇದೇ ಅಲ್ವಾ? ಇಂತವರು ದೇವರಿಗೂ ಹೆದರಲ್ವಾ ಎನ್ನುವುದೇ ಇವರ ಮೇಲಿನ ಅಸಹ್ಯಕ್ಕೆ ಕಾರಣ. ಲಂಚಕ್ಕೆ ಕೈ ಹಾಕುವುದು ಕೆಲವು ಸರಕಾರಿ ನೌಕರರ ಜಾಯಮಾನ. ಅವರ ಹಣೆಬರಹವನ್ನು ತಪ್ಪಿಸಲಾಗುವುದಿಲ್ಲ. ಆದರೆ ಏಕಾಏಕಿ ದೇವರ ಹಣಕ್ಕೆ ಕೈ ಚಾಚುವುದನ್ನು ಹೇಗೆ ಸಹಿಸುವುದು. ದೇವಸ್ಥಾನಕ್ಕೆ ಬರುವ ಭಕ್ತರು ಹುಂಡಿಗೆ ಹಾಕುವ ಕಾಣಿಕೆ, ಪೂಜೆ, ಪುರಸ್ಕಾರಕ್ಕೆ ಪಾವತಿಸುವ ಹಣ, ದೇವರಿಗೆ ಅರ್ಪಿಸುವ ಬಂಗಾರದ ಒಡವೆಗಳನ್ನು ನುಂಗಿದ ಅಪಕೀರ್ತಿ ಕೊಲ್ಲೂರಿನ ಆಡಳಿತಾಧಿಕಾರಿಯೊಬ್ಬರಿಗೆ ಬಂದಿದೆ. ಆ ವ್ಯಕ್ತಿಗೆ ನರಕದಲ್ಲಿಯೂ ಜಾಗ ಸಿಗದೇ ಅತಂತ್ರ ಪಿಶಾಚಿಯಾಗಿ ಶಿಕ್ಷೆ ಅನುಭವಿಸಲಿ ಎನ್ನುವುದು ಸಜ್ಜನ ಬಂಧುಗಳ ಪ್ರಾರ್ಥನೆ.
ಈ ವಿಷಯದಲ್ಲಿ ಮಾಹಿತಿ ಹಕ್ಕಿನ ಮೂಲಕ ಮಾಹಿತಿ ಕೇಳಿದ ಸನಾತನ ಸಂಸ್ಥೆ-ಹಿಂದೂ ಜನಜಾಗೃತಿ ಕಾರ್ಯಕರ್ತರಿಗೆ ಸಿಕ್ಕಿರುವ ಉತ್ತರ ದಂಗುಬಡಿಸುವಂತದ್ದು. ಸರಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಲಂಚ ಯಾಕೆ ಅಷ್ಟು ಆರಾಮವಾಗಿ ವಸೂಲಿ ಮಾಡುತ್ತಾರೆ ಎಂದರೆ ಅವರಿಗೆ ಯಾರೂ ಮೇಲಿನವರು ಕೇಳುತ್ತಾರೆ ಎನ್ನುವ ಹೆದರಿಕೆ ಇಲ್ಲ. ಯಾಕೆಂದರೆ ಮೇಲಿನವರಿಗೂ ಇಂತಿಷ್ಟು ಕೊಡಬೇಕು ಎಂದು ಮೊದಲೇ ನಿರ್ಣಯವಾಗಿರುತ್ತದೆಯಲ್ಲ, ಇನ್ನು ರೇಡ್ ಗಳಿಗೆಲ್ಲ ನಮ್ಮ ಸರಕಾರಿ ಅಧಿಕಾರಿಗಳು ಹೆದರುವುದೇ ಇಲ್ಲ. ಯಾಕೆಂದರೆ ಅದು ತಮ್ಮ ಜೀವಮಾನದಲ್ಲಿ ಸಾಮಾನ್ಯ ಎಂದು ಅವರು ನಿರ್ಧರಿಸಿಬಿಟ್ಟಿರುತ್ತಾರೆ. ಕೊಡುವವರಿಗೆ ಸರಿಯಾಗಿ ಕೊಟ್ಟು ಮತ್ತೆ ಅದೇ ಹುದ್ದೆಗೆ ಅವರು ಬಂದಿರುತ್ತಾರೆ. ಇನ್ನು ದೇವಸ್ಥಾನದ ಆಡಳಿತಾಧಿಕಾರಿ ಆದವರಿಗೆ ನಾವು ಎಷ್ಟೇ ಹೊಡೆದರೂ ದೇವರು ಏನಾದರೂ ಬಂದು ಕೇಳುತ್ತಾರಾ ಎನ್ನುವ ಅಸಡ್ಡೆ ಕೂಡ ಇರಬಹುದು. ಆದ್ದರಿಂದ ಶ್ರೀಮಂತ ದೇವಾಲಯಗಳ ಲೂಟಿ ಹೀಗೆ ಒಳಗೊಳಗೆ ಮುಂದುವರೆಯುತ್ತಿದ್ದರೆ ಈಗ ಭಕ್ತ ಮಹಾಶಯರ ಮುಂದೆ ಬರುತ್ತಿರುವ ಪ್ರಶ್ನೆ ನಮ್ಮ ಹಿಂದೂ ದೇವಾಲಯಗಳನ್ನು ಯಾಕೆ ಸರಕಾರ ವಹಿಸಿಕೊಳ್ಳಬೇಕು. ಹೀಗೆ ಭಕ್ತರು ಪ್ರಾರ್ಥಿಸಿ ನೀಡಿದ ಕಾಣಿಕೆ, ಬಂಗಾರವನ್ನು ಹೊಡೆಯುವುದೇ ಆದರೆ ನಾವು ಭಕ್ತಿಯಿಂದ ನೀಡಿದ ಆ ಕಾಣಿಕೆಗಳಿಗೆ ಬೆಲೆ ಇಲ್ಲವೇ?
ಈಗ ಭಾರತೀಯ ಜನತಾ ಪಾರ್ಟಿಯ ಸರಕಾರ ಇದೆ. ಪಾರ್ಟಿ ವಿದ್ ಡಿಫರೆನ್ಸ್ ಎಂದು ಅದರ ಮುಖಂಡರು ಹೇಳಿಕೊಳ್ಳುತ್ತಾರೆ. ಅಂತವರಿಗೆ ಈ ಮುಜುರಾಯಿ ಇಲಾಖೆಯ ಆಡಳಿತಾಧಿಕಾರಿಗಳು ದೇವಸ್ಥಾನಗಳ ಹಣವನ್ನು ಹೊಡೆಯುತ್ತಿರುವುದನ್ನು ನೋಡುವಾಗ ಏನೂ ಅನಿಸುವುದಿಲ್ಲವೇ? ಹಿಂದೂತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬರುವಾಗ ದೇವಸ್ಥಾನಗಳಿಗೆ ಎಡತಾಕುವ ರಾಜಕಾರಣಿಗಳು ಹೀಗೆ ಆಡಳಿತಾಧಿಕಾರಿಗಳು ಹಣ ಹೊಡೆಯುವುದನ್ನು ನೋಡಿಯೂ ಮೌನವೇಕೆ? ಯಾಕೆಂದರೆ ಇಚ್ಚಾಶಕ್ತಿಯ ಕೊರತೆ.
ಹೆಚ್ಚಿನ ಜನರಿಗೆ ಗೊತ್ತೇ ಇರುವ ಹಾಗೆ ಬೇರೆ ಧರ್ಮದ ಆರಾಧನಾ ಕೇಂದ್ರಗಳು ಸರಕಾರದ ಹಿಡಿತದಲ್ಲಿ ಇರುವುದಿಲ್ಲ. ಹಿಂದೂ ದೇವಾಲಯಗಳನ್ನು ಮಾತ್ರ ಸರಕಾರ ಸರಕಾರಿಕರಣ ಮಾಡಿದೆ. ಆದರೆ ಅದೇ ಹಿಂದೂ ದೇವಾಲಯಗಳ ಆದಾಯವನ್ನು ಬೇರೆ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಹಾಕಲು ಸರಕಾರ ಹಿಂದೆ ಮುಂದೆ ನೋಡುವುದಿಲ್ಲ ಎನ್ನುವ ಭಾವನೆ ಜನರಿಗೆ ಇದೆ. ಇನ್ನು ಶ್ರೀಮಂತ ದೇವಾಲಯಗಳು ಎಂದ ಮಾತ್ರಕ್ಕೆ ಅವು ನೋಡಲು ಅಭಿವೃದ್ಧಿಯಾದಂತೆ ಕಾಣುವುದಿಲ್ಲ. ಯಾಕೆಂದರೆ ಅಂತಹ ದೇವಾಲಯಗಳಿಗೆ ದೊಡ್ಡ ದೊಡ್ಡ ಅಭಿವೃದ್ಧಿ ಬಿಡಿ, ಒಂದು ಟಾಯ್ಲೆಟ್ ಕಟ್ಟಬೇಕಾದರೂ ಇರುವ ಸರಕಾರಿ ಪ್ರಕ್ರಿಯೆ ಮುಗಿಯುವಾಗ ವರ್ಷಗಳು ತಗಲುತ್ತವೆ. ಬೇಕಾದರೆ ಕಟೀಲು ದೇವಸ್ಥಾನದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅಲ್ಲಿ ಭಕ್ತರು ನೀಡುವ ಕೊಡುಗೆಯಿಂದಲೇ ಆಗಬೇಕಾಗಿದ್ದ ಚಿನ್ನದ ರಥಕ್ಕೆ ಸರಕಾರದಿಂದ ಒಪ್ಪಿಗೆ ಸಿಗಬೇಕಾದರೆ ಆರು ವರ್ಷಗಳು ಹಿಡಿದಿದ್ದವು. ಅದೇ ಒಂದು ದೇವಸ್ಥಾನ ಖಾಸಗಿ ಆಡಳಿತ ಮಂಡಳಿಯ ಸುಪರ್ದಿಯಲ್ಲಿದ್ದರೆ ಅವರು ಆದಾಯವನ್ನು ತಮ್ಮ ಸ್ವಂತಕ್ಕೆ ಬಳಸುತ್ತಾರೆ ಎಂದು ಆರೋಪಗಳು ಕೆಲವರಿಂದ ಇದ್ದರೂ ದೇವಸ್ಥಾನದ ಮೂಲಭೂತ ಸೌಕರ್ಯಗಳು, ದೇವಸ್ಥಾನದ ಆದಾಯದಿಂದ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಸಹಿತ ದೇವಸ್ಥಾನಕ್ಕೆ ಅಗತ್ಯವಾಗಿ ಬೇಕಾಗಿರುವ ಸೌಕರ್ಯಗಳು ಬಹಳ ಶಿಸ್ತಿನಿಂದ ನಡೆಯುತ್ತಿರುತ್ತವೆ.
ಇತ್ತೀಚೆಗೆ ತಮಿಳುನಾಡು ಚುನಾವಣೆಯ ಗಡಿಬಿಡಿಯಲ್ಲಿ ಓಡಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ತಮಿಳುನಾಡಿನಲ್ಲಿ ಎನ್ ಡಿಎ ಸರಕಾರ ಬಂದರೆ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಬಿಡಿಸಿ ಜನರ ಕೈಗೆ ಒಪ್ಪಿಸುವುದಾಗಿ ಹೇಳಿದ್ದಾರೆ. ಇಂತಹ ಹೇಳಿಕೆಗಳಿಂದ ಬಿಜೆಪಿಗೆ ಚುನಾವಣಾ ದೃಷ್ಟಿಯಿಂದ ಏನೂ ಪ್ರಯೋಜನವಾಗುತ್ತೋ ದೇವರೇ ಬಲ್ಲ. ಆದರೆ ಅದೇ ಫಾರ್ಮುಲಾವನ್ನು ಸಿಟಿ ರವಿ ತಮ್ಮದೇ ಪಕ್ಷದ ಸರಕಾರ ಇರುವ ಕರ್ನಾಟಕದಲ್ಲಿ ಯಾಕೆ ಅಳವಡಿಸಬಾರದು!!
0
Shares
  • Share On Facebook
  • Tweet It




Trending Now
ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
Tulunadu News August 30, 2025
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
Tulunadu News August 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!
    • ತಿಮರೋಡಿ ಮನೆ ಮೇಲೆ ಬೆಳ್ಳಂಬೆಳಗ್ಗೆ SIT ದಾಳಿ.. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪ!
  • Popular Posts

    • 1
      ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • 2
      ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • 3
      ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • 4
      ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • 5
      ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..

  • Privacy Policy
  • Contact
© Tulunadu Infomedia.

Press enter/return to begin your search