• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಇನ್ನು ಸೈಡ್ ಮೀರರ್ ಇಲ್ಲದಿದ್ದರೆ 500 ರೂ ದಂಡ!!

Hanumantha Kamath Posted On April 13, 2021
0


0
Shares
  • Share On Facebook
  • Tweet It

ನಮ್ಮ ಎಲ್ಲಾ ಜಾಗೃತ ಅಂಕಣದ ಹಿತೈಷಿಗಳಿಗೆ ಹೊಸ ವರುಷ ಯುಗಾದಿಯ ಹಾರ್ದಿಕ ಶುಭಾಶಯಗಳು. ಹೊಸ ವರುಷ ಎಂದ ಕೂಡಲೇ ಹೊಸ ನಿಯಮಗಳು ಬರಲು ಶುರುವಾಗುತ್ತಿದೆ. ಅದರಲ್ಲಿ ಈಗ ಬರುತ್ತಿರುವ ನಿಯಮದ ಬಗ್ಗೆ ಬೈಕ್ ಸವಾರರು ಶಾಕ್ ಅನುಭವಿಸಿದ್ದಾರೆ. ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಆಗಾಗ ಸರಕಾರದಿಂದ ಬೇರೆ ಬೇರೆ ನಿಯಮಗಳು ಜಾರಿಗೆ ಬರುತ್ತಲೇ ಇರುತ್ತವೆ. ಈಗ ಬಂದಿರುವ ಹೊಸ ನಿಯಮ ಏನೆಂದರೆ ದ್ವಿಚಕ್ರ ವಾಹನಗಳಿಗೆ ಸೈಡ್ ಮೀರರ್ ಇಲ್ಲದಿದ್ದರೆ ಅಂತವರಿಗೆ ಐನೂರು ರೂಪಾಯಿ ದಂಡ ಎನ್ನುವಂತಹ ಆದೇಶ ಜಾರಿಗೆ ಬಂದಂತಿದೆ. ನಾನು ಟ್ರಾಫಿಕ್ ರೂಲ್ಸ್ ಆಗಲಿ, ರೋಡ್ ರೂಲ್ಸ್ ಆಗಲಿ ಮಾಡುವುದಕ್ಕೆ ವಿರೋಧ ಇಲ್ಲ. ಆದರೆ ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಮಾತ್ರ ಕಾನೂನು ನಿಯಮಗಳು ಅದೇ ವಾಹನ ಸವಾರರು ಬಳಸುವ ರಸ್ತೆಗಳಿಗೆ ಯಾಕೆ ಇರುವುದಿಲ್ಲ. ಟ್ರಾಫಿಕ್ ಪೊಲೀಸರು ಅಲ್ಲಲ್ಲಿ ನಿಂತು ವಾಹನ ಸವಾರರನ್ನು ಅಡ್ಡ ಹಾಕಿ ಹೆಲ್ಮೆಟ್ ಹಾಕಿದ್ದಾರಾ, ತ್ರಿಬಲ್ ರೈಡ್ ಹೋಗುತ್ತಾರಾ, ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದಾರಾ, ಓನ್ ವೇಯಲ್ಲಿ ಹೋಗುತ್ತಿದ್ದಾರಾ, ಅದು ಇದೆಯಾ, ಇದು ಇದೆಯಾ ಎಂದು ಚೆಕ್ ಮಾಡಿ ಫೈನ್ ಹಾಕುತ್ತಾರೆ. ಅದು ಓಕೆ. ತಪ್ಪು ಮಾಡಿದವರು ದಂಡ ಕಟ್ಟಲಿ. ಆದರೆ ತಪ್ಪು ಒಂದೇ ಕಡೆಯಿಂದ ಮಾತ್ರ ಆಗುತ್ತಿದೆ ಎಂದು ಯಾಕೆ ಸರಕಾರ ತೀರ್ಮಾನಿಸುತ್ತದೆ. ಮೊದಲನೇಯದಾಗಿ ಎಷ್ಟೋ ರಸ್ತೆಗಳು ಸರಿ ಇರುವುದಿಲ್ಲ. ಎರಡನೇಯದಾಗಿ ಇರುವ ರಸ್ತೆಗಳಲ್ಲಿ ಹಂಪ್ ಎಲ್ಲಿ ಇದೆ ಎಂದು ಹತ್ತಿರ ಬರುವ ತನಕ ಗೊತ್ತಾಗುವುದಿಲ್ಲ. ಇನ್ನು ಕೆಲವು ಹಂಪ್ಸ್ ಬೆಕ್ಕು ಅರ್ಧ ತಿಂದು ಬಿಟ್ಟ ಬ್ರೆಡಿನಂತೆ ಇರುತ್ತದೆ. ಅದರಲ್ಲಿಯೇ ವಾಹನ ಚಲಾಯಿಸುತ್ತವೆ. ಇನ್ನು ಕೆಲವೆಡೆ ರಾತ್ರಿ ಸಂಚರಿಸುವಾಗ ಹಂಪ್ಸ್ ಗಳು ದೂರದಿಂದಲೇ ಗೊತ್ತಾಗಲು ಅಲ್ಲಿ ನೆಲ ಲೈಟುಗಳನ್ನು ಅಳವಡಿಸಿರುವುದಿಲ್ಲ. ಎಷ್ಟೋ ರಸ್ತೆಗಳ ಹಂಪ್ಸ್ ಗಳಿಗೆ ಜೀಬ್ರಾ ಕ್ರಾಸ್ ಗಳನ್ನೇ ಅಳವಡಿಸಿರುವುದಿಲ್ಲ. ಇಷ್ಟೆಲ್ಲಾ ನ್ಯೂನತೆಗಳನ್ನು ಸರಿ ಮಾಡದೇ ಸೈಡ್ ಮಿರರ್ ಇಲ್ಲ ಎನ್ನುವ ಕಾರಣಕ್ಕೆ ಇನ್ನು ಮುಂದೆ 500 ರೂಪಾಯಿ ದಂಡ ಬೇರೆ. ನಾಗರಿಕರಿಗೆ ಅತ್ಯುತ್ತಮ ರಸ್ತೆ ಕೊಡುವುದು ಸರಕಾರದ ಕರ್ತವ್ಯ. ಯಾಕೆಂದರೆ ವಾಹನ ಖರೀದಿಸುವಾಗಲೇ ರೋಡ್ ಟ್ಯಾಕ್ಸ್ ನಂತರ ಕಾರು ಸಹಿತ ಚತುಷ್ಪಥ ವಾಹನಗಳು ಹೋಗುವಾಗ ಟೋಲ್ ಫೀಸ್ ಸಹಿತ ವಿವಿಧ ರೀತಿಯಲ್ಲಿ ಹಣವನ್ನು ಕಟ್ಟಲೇಬೇಕಾಗುತ್ತದೆ. ಆದರೆ ಎಲ್ಲಿ ಜನಸಾಮಾನ್ಯರು ಅಗತ್ಯವಾಗಿ ಬಳಸುವ ರಸ್ತೆಗಳಲ್ಲಿ ಹೊಂಡ ಏನು ಸಮಸ್ಯೆ ಇದ್ದರೂ ಅದನ್ನು ನಿರ್ಮಿಸಿದ ಗುತ್ತಿಗೆದಾರರನ್ನು ಕೇಳುವವರಿಲ್ಲ. ಅವರಿಗೆ ಯಾವುದೇ ಫೈನ್ ಇಲ್ಲ. ಅವರು ತಮ್ಮ ತಪ್ಪಿಗೆ ಹೊಣೆಗಾರರಲ್ಲ. ಅವರು ಜನರ ತೆರಿಗೆಯ ಹಣವನ್ನು ಕಳಪೆ ಕಾಮಗಾರಿ ಮಾಡುವ ಮೂಲಕ ಹಾಳು ಮಾಡಿದರೂ ಅವರನ್ನು ಕೇಳುವವರಿಲ್ಲ. ಅವರು ಕೆಲಸ ಮಾಡಿದರು, ಕಳಪೆ ಮಾಡಿದರು, ಮತ್ತೆ ಆ ಕಳಪೆ ಕಾಮಗಾರಿ ಸರಿ ಮಾಡಲು ನಮ್ಮದೇ ತೆರಿಗೆಯ ಹಣ ಪೋಲು.
ಇನ್ನು ಪಾರ್ಕಿಂಗ್ ನಲ್ಲಿ ಅನಧಿಕೃತ ನಿರ್ಮಾಣಗಳನ್ನು ಮಾಡಿ ಒಬ್ಬ ಲಕ್ಷಾಂತರ ರೂಪಾಯಿ ಹಣ ಗುಳುಂ ಮಾಡುತ್ತಾ ಇದ್ದರೂ ಅವನನ್ನು ಕೇಳುವವರೇ ಇಲ್ಲ. ಅಂತಹ ಕಟ್ಟಡದ ಪಕ್ಕದಿಂದ ಸ್ಥಳೀಯಾಡಳಿತದ ಅಧಿಕಾರಿಗಳು ನಿತ್ಯ ಹೋಗಿ ಬರುತ್ತಿದ್ದರೂ ಅವರ ಕಣ್ಣ ಎದುರಿಗೆ ಆ ಕಟ್ಟಡ ಎದ್ದು ನಿಂತಿದ್ದರೂ ಯಾರೂ ಕೇಳುವುದಿಲ್ಲ. ಬೇಕಾದರೆ ಅಲ್ಲಿಯೇ ನಿಂತು ಅಧಿಕಾರಿಗಳು ಮಾಸ್ಕ್ ಹಾಕದವರಿಂದ ಫೈನ್ ವಸೂಲಿ ಮಾಡುತ್ತಾರೆ. ಅವರು ನಿಂತ ಜಾಗದ ಹಿಂದೆ ಇರುವ ಕಟ್ಟಡವೇ ಅಕ್ರಮ. ಹಾಗಂತ ಅದರ ಮಾಲೀಕರಿಗೆ ಏನೂ ದಂಡ ಇಲ್ಲ. ಇದು ನಮ್ಮ ವ್ಯವಸ್ಥೆ. ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಲು ಇಂತಹುದೇ ಕಟ್ಟಡಗಳಲ್ಲಿ ಸರಿಯಾದ ಪಾರ್ಕಿಂಗ್ ಇಲ್ಲದೆ ಗ್ರಾಹಕರು ರಸ್ತೆಗಳ ಪಕ್ಕದಲ್ಲಿ ವಾಹನಗಳನ್ನು ಬಿಟ್ಟು ಹೋಗಿರುವುದೇ ಕಾರಣವಾಗಿರುತ್ತದೆ. ಆದರೂ ಅವರಿಗೆ ಫೈನ್ ಇಲ್ಲ. ಇನ್ನು ಪಾರ್ಕಿಂಗ್ ಇಲ್ಲದ ಕಾರಣದಿಂದ ಬಡಪಾಯಿ ದ್ವಿಚಕ್ರ ಸವಾರ ತನ್ನ ಬೈಕನ್ನು ಅಲ್ಲಿಯೇ ಹೊರಗೆ ಬಿಟ್ಟು ಈಗ ಬರುತ್ತೇನೆ ಎಂದು ಒಳಗೆ ಹೋದವನು ಬರುವಷ್ಟರಲ್ಲಿ ಅವರ ಬೈಕ್ ಟೋ ಆಗಿರುತ್ತದೆ. ಅವನು ಟೋನವರನ್ನು ಶಪಿಸುತ್ತಾನೆ. ಯಾಕೆಂದರೆ ತನ್ನದಲ್ಲದ ತಪ್ಪಿಗೆ ಬೈಕ್ ಸವಾರ ಸಾವಿರ ರೂಪಾಯಿ ದಂಡ ಕಟ್ಟಿ ವಾಹನವನ್ನು ಬಿಡಿಸಿ ತರುವಾಗ ಅರ್ಧ ದಿನ ಕಳೆದಿರುತ್ತದೆ. ಅವನ ಹಣವೂ ವ್ಯರ್ಥ. ಶ್ರಮವೂ ವ್ಯರ್ಥ. ತಪ್ಪು ಅವನದ್ದಲ್ಲವೇ ಅಲ್ಲ. ಪಾರ್ಕಿಂಗ್ ಇದ್ದಲ್ಲಿ ಅವನು ಯಾಕೆ ಫುಟ್ ಫಾತ್ ಮೇಲೆ ನಿಲ್ಲಿಸುತ್ತಿದ್ದ. ಇಲ್ಲಿ ಅಮಾಯಕ ಬೈಕ್ ಸವಾರನಿಗೆ ದಂಡ. ಅದಕ್ಕೆ ಕಾರಣನಾದ ಆ ಅನಧಿಕೃತ ಕಟ್ಟಡದ ಮಾಲೀಕನಿಗೆ ಏನೂ ಇಲ್ಲ. ಇನ್ನು ಕಾರಿನವರನ್ನು ಟೋನವರು ಕೈ ಹಾಕುವುದೇ ಅಪರೂಪ. ಯಾಕೆಂದರೆ ಕಾರು ಟೋ ಮಾಡುವುದು ಅಷ್ಟು ಲಾಭದಾಯಕ ಅಲ್ಲ. ಒಂದು ವೇಳೆ ಟೋ ಮಾಡುವಾಗ ಹೆಚ್ಚು ಕಡಿಮೆ ಅದರ ಜವಾಬ್ದಾರಿ ಟೋ ಗುತ್ತಿಗೆದಾರರೇ ನೋಡಿಕೊಳ್ಳಬೇಕು. ಅದಕ್ಕೆ ಕಾರಿನವರು ಒಂದಿಷ್ಟು ಸೇಫ್. ಇಲ್ಲಿ ಒಂದು ಕಾರು ಅಡ್ಡಾದಿಡ್ಡಿ ಇಟ್ಟರೆ ಅದು ನಾಲ್ಕು ಬೈಕ್ ಗಳ ಜಾಗವನ್ನು ತಿಂದು ಹಾಕುತ್ತದೆ. ಅದು ಯಾರಿಗೂ ಬೇಡಾ. ಇವರು ಸೈಡ್ ಮಿರರ್ ಇಲ್ಲದ ಬೈಕ್ ಅನ್ನು ಹುಡುಕುತ್ತಾ ಇರುತ್ತಾರೆ. ಐನೂರು ರೂಪಾಯಿ ಫೈನ್ ಹಾಕಲು!
0
Shares
  • Share On Facebook
  • Tweet It




Trending Now
ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
Hanumantha Kamath July 2, 2025
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
Hanumantha Kamath July 2, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
  • Popular Posts

    • 1
      ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • 2
      ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • 3
      ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • 4
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 5
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!

  • Privacy Policy
  • Contact
© Tulunadu Infomedia.

Press enter/return to begin your search