ಸ್ಪಿನ್ ಡ್ರಿಫ್ಟ್ ನಲ್ಲಿ ಬಿಲ್ ಕೊಡುವಾಗ ಲೂಟಿಕೋರನ ಬಗ್ಗೆ ಎಚ್ಚರ ಇರಲಿ!!
ಮಂಗಳೂರಿನಲ್ಲಿ ಸ್ಪಿನ್ ಡ್ರಿಫ್ಟ್ ಎನ್ನುವ ಪಬ್ ಇದೆ. ಅಲ್ಲಿ ಚೇತನ್ ಶೆಟ್ಟಿ ಎನ್ನುವ ಮ್ಯಾನೇಜರ್ ಇದ್ದಾನೆ. ಆತ ಪಕ್ಕಾ 420 ಎನ್ನುವ ಶಬ್ದಕ್ಕೆ ಅನ್ವರ್ಥ ನಾಮವಾಗಿ ಬೆಳೆಯುತ್ತಿದ್ದಾನೆ. ಅವನು ಗ್ರಾಹಕರನ್ನು ಹೇಗೆ ಲೂಟುತ್ತಾನೆ ಎನ್ನುವುದೇ ಆಶ್ಚರ್ಯ. ಅವನ ಹೊಸ ಗೇಮ್ ಪ್ಲಾನ್ ಎಂತವರನ್ನು ದಂಗುಪಡಿಸುತ್ತದೆ. ನೀವು ಸ್ಪಿನ್ ಡ್ರಿಫ್ಟ್ ಇದರ ಗ್ರಾಹಕರಾಗಿದ್ದರೆ ಅಥವಾ ನಿಮ್ಮ ಸ್ನೇಹಿತರೋ, ಸಂಬಂಧಿಗಳೋ ಅಲ್ಲಿನ ಗ್ರಾಹಕರಾಗಿದ್ದಲ್ಲಿ ನೀವು ಈ ಜಾಗೃತ ಅಂಕಣವನ್ನು ಓದಲೇಬೇಕು.
ನೀವು ಐಶಾರಾಮಿ ಪಬ್ ಅಥವಾ ಹೋಟೇಲಿಗೆ ಹೋಗಿ ಆಹಾರ, ಪಾನೀಯ ಸೇವಿಸಿದ ನಂತರ ನಿಮಗೆ ಬಿಲ್ ಒಂದು ಪುಸ್ತಕದ ಆಕಾರದಲ್ಲಿರುವ ಬಾಕ್ಸ್ ಒಳಗೆ ಬರುತ್ತದೆ. ನೀವು ಅದನ್ನು ತೆರೆದು ನೋಡಿದಾಗ ಅದರಲ್ಲಿ ಬಿಲ್ ಕಾಣುತ್ತದೆ. ಸಾಮಾನ್ಯವಾಗಿ ನಾವು ಅಂತಿಮ ಮೊತ್ತವನ್ನು ನೋಡಿ ಅದಕ್ಕೆ ಸರಿಯಾಗಿ ಹಣವನ್ನು ಇಡುತ್ತೇವೆ. ಉದಾಹರಣೆಗೆ ಏಳು ಸಾವಿರದ ಎಂಟು ನೂರಾ ಹದಿನೈದು ರೂಪಾಯಿ ಬಿಲ್ ಆಯಿತು ಎಂದರೆ ನಾವು ಅಷ್ಟೇ ಮೊತ್ತವನ್ನು ತೆಗೆದು ಇಡಲು ಹೋಗುವುದಿಲ್ಲ. ಅದರ ಬದಲಿಗೆ ಎಂಟು ಸಾವಿರ ರೂಪಾಯಿ ಇಡುತ್ತೇವೆ. ಹಣ ಮತ್ತು ಬಿಲ್ ನೊಂದಿಗೆ ಆ ಕಾರ್ಡ್ ತರಹ ಇರುವಂತಹುದನ್ನು ತೆಗೆದುಕೊಂಡು ಹೋಗುವ ವೇಟರ್ ನಂತರ ಬಾಕಿ ಮೊತ್ತವನ್ನು ತಂದು ಮತ್ತೆ ನಿಮ್ಮ ಟೇಬಲಿನ ಮೇಲೆ ಇಡುತ್ತಾರೆ. ನೀವು ಅದರಲ್ಲಿ ಒಂದಿಷ್ಟು ಟಿಪ್ಸ್ ಎಂದು ಬಿಟ್ಟು ಉಳಿದ ಹಣವನ್ನು ನಿಮ್ಮ ಪರ್ಸಿಗೆ ಹಾಕುತ್ತೀರಿ ಮತ್ತು ಎದ್ದು ಹೊರಡುತ್ತೀರಿ. ಇದು ಎಲ್ಲರ ಬದುಕಿನಲ್ಲಿ ಒಂದಲ್ಲ ಒಂದು ಸಲ ನಡೆದು ಬಂದಿರುವ ಸಂಪ್ರದಾಯ. ಇದರಲ್ಲಿ ವಿಶೇಷ ಏನಿರಲ್ಲ.
ಆದರೆ 420 ಚೇತನ್ ಶೆಟ್ಟಿ ಇದರಲ್ಲಿಯೇ ಒಂದು ಟ್ರಿಕ್ಸ್ ಹುಡುಕಿಕೊಂಡಿದ್ದಾನೆ. ಅವನು ಅದಕ್ಕಾಗಿ ಹರಡಿರುವ ಬಲೆ ಎಂತವರಿಗೂ ಶಾಕ್ ತರುತ್ತದೆ. ನೀವು ಸ್ಪಿನ್ ಡ್ರಿಫ್ಟ್ ನಲ್ಲಿ ಊಟ, ಪಾನೀಯ ಎಲ್ಲ ಸೇವಿಸಿದ ನಂತರ ನಿಮ್ಮ ಬಳಿ ಬಿಲ್ ಸಹಜವಾಗಿ ಬರುತ್ತದೆಯಲ್ಲ. ಅದರಲ್ಲಿ ಇರುವ ಮೊತ್ತವನ್ನು ನೋಡಿದ ನೀವು ನಿಮ್ಮ ಗೆಳೆಯರು ಅದರಲ್ಲಿ ಹಣವನ್ನು ಇಡುತ್ತೀರಿ. ಅದನ್ನು ವೇಟರ್ ತೆಗೆದುಕೊಂಡು ಹೋಗುತ್ತಾನೆ. ಎರಡೇ ನಿಮಿಷದಲ್ಲಿ ವಾಪಾಸು ಬರುತ್ತಾನೆ ಮತ್ತು ನಿಮ್ಮ ಬಳಿ ಹೇಳುತ್ತಾನೆ ಏನೆಂದರೆ ನೀವು ಎಂಟು ಸಾವಿರ ರೂಪಾಯಿ ಬಿಲ್ಲಿನಲ್ಲಿ ಐದು ನೂರು ರೂಪಾಯಿಯ 16 ನೋಟು ಇಟ್ಟು ಕೊಟ್ಟಿರುತ್ತೀರಿ. ಆದರೆ ವೇಟರ್ ನೀವು ಐನೂರು ರೂಪಾಯಿಯ ಹದಿನಾರು ನೋಟು ಇಡುವ ಕಡೆ ಹದಿನಾಲ್ಕು ಮಾತ್ರ ಇಟ್ಟಿದ್ದೀರಿ ಎಂದು ಹೇಳುತ್ತಾನೆ. ನೀವು ಒಂದು ಕ್ಷಣ ಶಾಕ್ ಗೆ ಒಳಗಾದರೂ ಏನೋ ಕುಡಿದ ಮತ್ತಿನಲ್ಲಿ ಲೆಕ್ಕ ತಪ್ಪಿರಬಹುದು ಎಂದು ಅಂದುಕೊಂಡು ಸಾರಿ ಎಂದು ಐನೂರು ರೂಪಾಯಿಯ ಮತ್ತೆರಡು ನೋಟುಗಳನ್ನು ಅವನಿಗೆ ಕೊಡುತ್ತೀರಿ.
ನೀವು ಆ ಬಗ್ಗೆ ತುಂಬಾ ಯೋಚಿಸಲು ಹೋಗುವುದಿಲ್ಲ ಯಾಕೆಂದರೆ ನಿಮ್ಮೊಳಗೆ ಇರುವ ಪಾನೀಯ ನಿಮಗೆ ತುಂಬಾ ಯೋಚಿಸಲು ಬಿಡುವುದಿಲ್ಲ. ಸ್ಪಿನ್ ಡ್ರಿಫ್ಟ್ ಗೆ ಪ್ರೇಮಿಗಳಾಗಿರುವ ಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೂ ಹೀಗೆ ನೋಟುಗಳು ಕಡಿಮೆ ಇದೆ ಎಂದು ಹೇಳಿ ಅವರಿಂದಲೇ ಸಾರಿ ಎಂದು ಹೇಳಿಸಿ ದೋಚುವ ಕೆಲಸ ರಾಜಾರೋಶವಾಗಿ ನಡೆಯುತ್ತದೆ. ನೀವು ನಿಮ್ಮ ಪ್ರಿಯತಮೆಯೊಂದಿಗೆ ಇರುವಾಗ ವೇಟರ್ ನೊಂದಿಗೆ ಮಾತಿಗೆ ಇಳಿದು ಜಗಳ ಮಾಡುವುದಿಲ್ಲ. ಯಾಕೆಂದರೆ ಅದರಿಂದ ನಿಮ್ಮ ಬಗ್ಗೆ ನಿಮ್ಮ ಪ್ರೇಯಸಿ ತಪ್ಪು ತಿಳಿದುಕೊಳ್ಳಬಹುದು ಎನ್ನುವ ಆತಂಕ ನಿಮ್ಮಲ್ಲಿ ಇರುತ್ತದೆ. ಇನ್ನು ಅಲ್ಲಿಗೆ ಬರುವ ಜೋಡಿಗಳು ಒಂದೆರಡು ಸಾವಿರ ರೂಪಾಯಿಗಳಿಗೆ ಚರ್ಚೆಗೆ ಇಳಿದು ಗಲಾಟೆ ಮಾಡುವ ಮೂಡಿನಲ್ಲಿ ಇರುವುದೇ ಇಲ್ಲ. ಶ್ರೀಮಂತ ಕುಟುಂಬದ ಅಥವಾ ಐಟಿ ಕಂಪೆನಿಗಳಲ್ಲಿ ಯಥೇಚ್ಚವಾಗಿ ದುಡಿಯುವ ಪಡ್ಡೆಗಳಿಗೆ ಗೆಳತಿಯ ಎದುರು ಹಣ ಮುಖ್ಯ ಅಲ್ಲ ಎನ್ನುವ ಭ್ರಮೆ ಇರುವುದರಿಂದ ಅವರು ಕೇಳಲು ಹೋಗುವುದಿಲ್ಲ. ಹೀಗೆ ನಿತ್ಯ ಬೇರೆ ಬೇರೆ ಮಿಕಗಳು ಸಿಗುವುದರಿಂದ ದಂಡಿಯಾಗಿ ಚೇತನ್ ಶೆಟ್ಟಿ ದುಂಡಗಾಗುತ್ತಾ ಹೋಗಿದ್ದಾರೆ. ಇವರು ಇದಕ್ಕಾಗಿ ವೇಟರ್ ಗಳನ್ನು ಕೂಡ ಸೆಟ್ ಮಾಡಿರುವ ರೀತಿಯನ್ನು ನೀವು ತಿಳಿದುಕೊಳ್ಳಲೇಬೇಕು. ಯಾಕೆಂದರೆ ಚೇತನ್ ಶೆಟ್ಟಿ ಹೆಣೆದ ಗೇಮ್ ನಲ್ಲಿ ಸಪ್ಲೈಯರ್ಸ್ ಗಳೇ ದಾಳಗಳು. ಅವರಿಂದಲೇ ಸುಳ್ಳನ್ನು ನುಡಿಸುವ ಚೇತನ್ ಶೆಟ್ಟಿ ನಿತ್ಯ ಹೀಗೆ ಲೂಟುವ ಹಣದಲ್ಲಿ ಒಂದಿಷ್ಟು ಚಿಲ್ಲರೆ ವೇಟರ್ ಗಳಿಗೆ ಕೊಟ್ಟು ಅವರಿಂದ ಇಂತಹ ನೀಚ ಕೆಲಸ ಮಾಡಿಸುತ್ತಾನೆ. ಇತ್ತೀಚೆಗೆ ನಮ್ಮ ಆತ್ಮೀಯರೊಬ್ಬರು ಇವನು ಹೆಣೆದ ಬಲೆಗೆ ಸಿಲುಕಿದ್ದರು. ಅವರು ಎರಡು ಸಲ ಹೀಗೆ ಮೋಸಕ್ಕೆ ಒಳಗಾದ ನಂತರ ಮೂರನೇ ಸಲ ಸರಿಯಾಗಿ ನೋಡಿ ಎರಡೆರಡು ಬಾರಿ ಚೆಕ್ ಮಾಡಿಯೇ ಹಣ ಇಟ್ಟರು. ಆಗಲೂ ವೇಟರ್ ಗಳು ಅದೇ ರಾಗ ಎಳೆದಿದ್ದಾರೆ. ಆರಂಭದಲ್ಲಿ ಇದು ವೇಟರ್ ಗಳ ಕಾರುಬಾರು ಎಂದು ಅಂದುಕೊಂಡರೂ ನಂತರ ಮ್ಯಾನೇಜರ್ ಚೇತನ್ ಶೆಟ್ಟಿ ಈ ಜಾಲದ ಸೂತ್ರಧಾರ ಎಂದು ತಿಳಿದುಬಂದಿದೆ. ಅವರು ನೇರವಾಗಿ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಅಬಕಾರಿ ಆಯುಕ್ತರಿಗೆ ದೂರು ನೀಡಿದ್ದಾರೆ. ಒಬ್ಬ ಮ್ಯಾನೇಜರ್ ಈ ರೀತಿ ವಂಚಿಸುವುದರಿಂದ ಉಳಿದ ಹೋಟೇಲ್, ಪಬ್ ಗಳ ಮ್ಯಾನೇಜರ್ ಗಳಿಗೂ ಕಳಂಕ ತರುತ್ತಾನೆ. ಚೇತನ್ ಶೆಟ್ಟಿಯಿಂದ ಸ್ಪಿನ್ ಡ್ರಿಫ್ಟ್ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತದೆ. ಈತ ಹೀಗೆ ಮಾಡುವ ಬದಲು ಸ್ಪಿನ್ ಡ್ರಿಫ್ಟ್ ಹೊರಗೆ ತಟ್ಟೆ ಹಿಡಿದು ಕೂತರೆ ಕುಡುಕರು ಉದಾರ ಮನಸ್ಸಿನಿಂದ ಹಣ ಹಾಕಬಹುದು!!
Leave A Reply