• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ 250 ಅಲ್ಲ 550 ಸುಲಿಗೆ ಮಾಡುತ್ತಿದ್ದಾರೆ!!

Hanumantha Kamath Posted On April 20, 2021


  • Share On Facebook
  • Tweet It

ಒಂದು ಫೋಟೋ ಪೋಸ್ಟ್ ಮಾಡಿದ್ದೇನೆ. ಕೊರೊನಾ ವಾರಿಯರ್ಸ್ ಗಳಾಗಿರುವ ನರ್ಸ್ ಗಳು ಹೇಗೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಆಸ್ಪತ್ರೆಯ ಬಾಗಿಲಲ್ಲಿ ನಿಂತಿದ್ದಾರೆ. ಇದು ಬೇರೆ ಯಾವುದೋ ಊರಿನ ಫೋಟೋ ಅಲ್ಲ. ನಮ್ಮದೇ ಮಂಗಳೂರಿನಲ್ಲಿರುವ ಜಿಲ್ಲಾಸ್ಪತ್ರೆ ವೆನಲಾಕ್ ಹೊರಗೆ ಕಂಡುಬಂದಿರುವ ಫೋಟೋ. ನಾವು ಹೆಸರಿಗೆ ಬುದ್ಧಿವಂತರು. ಆದರೆ ಬುದ್ಧಿ ಎಷ್ಟಿದೆ ಎಂದು ಈ ಫೋಟೋ ಹೇಳುತ್ತದೆ. ಇನ್ನು ನಮ್ಮ ಜಿಲ್ಲಾಡಳಿತದ ನಿಯಮಗಳನ್ನು ನೋಡಿ. ನಿಯಮ ಮಾಡಬೇಕು ಎನ್ನುವ ಕಾರಣಕ್ಕೆ ಮಾಡಬಾರದು. ಒಂದು ನಿಯಮ ಮಾಡುವಾಗ ಅದಕ್ಕೆ ಸಮರ್ಥನೆ ನೀಡುವ ಹಾಗಿರಬೇಕು. ಈಗ ಬಂದಿರುವ ಕೊರೊನಾ ನಿಯಮಗಳಲ್ಲಿ ಒಂದಕ್ಕೆ ತಲೆ ಬುಡವೇ ಇಲ್ಲ. ಕಾರ್ಯಕ್ರಮಗಳಿಗೆ ಜನ ಸೇರುವ ಬಗ್ಗೆ ನಮ್ಮ ಘನವೆತ್ತ ಜನಪ್ರತಿನಿಧಿಗಳು ಅಧಿಕಾರಿಗಳ ಸಲಹೆ ಪಡೆದುಕೊಂಡು ನಿಯಮವನ್ನು ಜಾರಿಗೆ ತಂದಿದ್ದಾರೆ. ಅದೇನೆಂದರೆ ಶ್ರಾದ್ಧಕ್ಕೆ 25 ಜನ, ಮದುವೆಗೆ 100 ಜನ, ಭರ್ತಡೇಗೆ 50 ಜನ, ರಾಜಕೀಯ ಕಾರ್ಯಕ್ರಮಗಳಿಗೆ 200 ಜನ ಹೀಗೆ ಇವರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಅಂಕಿಸಂಖ್ಯೆಗೆ ಏನಾದರೂ ವೈಜ್ಞಾನಿಕ ಕಾರಣಗಳಿವೆಯಾ? ಈ ಬಗ್ಗೆ ಒಂದಿಷ್ಟು ಕಾಮನಸೆನ್ಸ್ ಇದ್ದವರಿಗೆ ಸರಿಯಾಗಿ ಗೊತ್ತಿದೆ, ಮದುವೆ ಹಾಗೂ ಶ್ರಾದ್ಧಕ್ಕೆ ಇರುವ ವ್ಯತ್ಯಾಸ. ಮದುವೆಗೆ ಬರುವ ಅತಿಥಿಗಳು ವೇದಿಕೆಗೆ ಹೋಗಿ ಅಲ್ಲಿ ವಧು, ವರನನ್ನು ಕೈಕುಲುಕಿ ನಂತರ ಅವರೊಂದಿಗೆ ಗ್ರೂಪ್ ಫೋಟೋ ತೆಗೆದು ಸಂತೋಷವನ್ನು ಸಂಭ್ರಮಿಸುವ ಪದ್ಧತಿ ಇದೆ. ಆದರೆ ಶ್ರಾದ್ಧದಲ್ಲಿ ಹಾಗಿಲ್ಲ. ಶ್ರಾದ್ಧಕ್ಕೆ ಆಮಂತ್ರಣ ಪಡೆದುಕೊಂಡವರು ಉಡುಗೊರೆ ತೆಗೆದುಕೊಂಡು ಬಂದು ವೇದಿಕೆಯಲ್ಲಿ ನಿಂತು ವಿಶ್ ಮಾಡಿ ನೆನಪಿಗೆ ಗ್ರೂಪ್ ಫೋಟೋಗೆ ನಿಲ್ಲಲ್ಲ. ಹಾಗಿರುವಾಗ ಹೆಚ್ಚು ಅಪಾಯ ಇರುವುದು ಶ್ರಾದ್ಧದಿಂದಲೋ ಅಥವಾ ಮದುವೆಯಿಂದಲೋ. ಯಾವುದಕ್ಕೆ ನೂರು ಜನರಿಗೆ ಅವಕಾಶ ಕೊಡಬೇಕು? ಯಾವುದಕ್ಕೆ ಕಡಿಮೆ ಜನರಿಗೆ ಅವಕಾಶ ನೀಡಬೇಕು. ಹಾಗಂತ ನಾನು ಮದುವೆಗಳನ್ನು ಕಡಿಮೆ ಜನರನ್ನು ಇಟ್ಟುಕೊಂಡು ಮಾಡಿ ಎಂದು ಕೂಡ ಹೇಳುತ್ತಿಲ್ಲ. ಯಾಕೆಂದರೆ ಬಂಟ್ಸ್ ಸಮುದಾಯದಲ್ಲಿ ಒಂದೊಂದು ಮದುವೆ ಎಂದರೆ ಅದು ಗುತ್ತಿನನವರ ಮದುವೆಯಾದರೆ ಒಂದು ಕುಟುಂಬದವರೇ ನೂರಾರು ಸಂಖ್ಯೆಯಲ್ಲಿ ಇರುತ್ತಾರೆ. ಹಾಗಂತ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಮದುವೆ ಮಾಡುವ ಸಮಯ ಇದು ಅಲ್ಲದೇ ಇರಬಹುದು. ಆದರೆ ಮದುವೆಗೆ ನೂರು ಜನರಿಗೆ ಅವಕಾಶ ಕೊಟ್ಟಿರುವ ನೀವು ರಾಜ್ಯ ಸರಕಾರದವರು ನಿಮ್ಮ ರಾಜಕೀಯ ಕಾರ್ಯಕ್ರಮಗಳಿಗೆ ಇನ್ನೂರು ಜನರಿಗೆ ಅವಕಾಶ ಕೊಟ್ಟಿದ್ದಿರಿ. ಅದೇ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಿದ್ದೀರಿ.

ರಾಜಕೀಯ ಕಾರ್ಯಕ್ರಮ ಮಾಡದೇ ಇದ್ದರೂ ಏನೂ ಆಗುವುದಿಲ್ಲ. ಯಾರೂ ಅಳುವುದಿಲ್ಲ. ಆದರೆ ನಮ್ಮ ತುಳುನಾಡಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳಾದ ಬ್ರಹ್ಮಕಲಶ, ನೇಮ, ಕೋಲ, ರಥೋತ್ಸವ ಹಾಗೂ ವರ್ಷಾವಧಿ ಉತ್ಸವಗಳೊಂದಿಗೆ ಜನರ ಧಾರ್ಮಿಕ ನಂಬಿಕೆಗಳಿವೆ. ಅದು ನಡೆಯದಿದ್ದರೆ, ಅದರಲ್ಲಿ ತಾವು ಭಾಗವಹಿಸಲು ಆಗದಿದ್ದರೆ ಮನಸ್ಸು ಘಾಸಿಗೊಳ್ಳುತ್ತದೆ. ಆದರೆ ಅದನ್ನು ನಡೆಸಲು ಅನುಮತಿ ಕೋರಿದರೆ ನೀವು ಇಲ್ಲವೆನ್ನುತ್ತೀರಿ. ಅದೇ ಮಾಸ್ಕ್ ಇಲ್ಲದೆ, ಒತ್ತೊತ್ತಿಗೆ ಕುಳಿತು ರಾಜಕೀಯ ಸಭೆ, ಸಮಾರಂಭ ನಡೆಸುತ್ತಿರಿ. ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತಿರುವಾಗಲೇ ಮೋದಿಯವರು ಮನವಿ ಮಾಡಿ ಸಾಧುಗಳನ್ನು ಅಲ್ಲಿಂದ ಕಳುಹಿಸಿದ್ದಾರೆ. ಅದೇ ಪಶ್ಚಿಮ ಬಂಗಾಲದಲ್ಲಿ ಲಕ್ಷಾಂತರ ಜನ ತಮ್ಮ ಚುನಾವಣಾ ಸಮಾವೇಶಕ್ಕೆ ಬಂದದ್ದಕ್ಕೆ ಆಶ್ಚರ್ಯಚಕಿತರಾಗಿ ಹೊಗಳಿದ್ದಾರೆ. ಇನ್ನು ರಾಜ್ಯದ ಶಿಕ್ಷಣ ಸಚಿವರ ಆಪ್ತ ಸಹಾಯಕರೊಬ್ಬರು ಕೊರೊನಾ ಪಾಸಿಟಿವ್ ಆಗಿ ವೆಂಟಿಲೇಟರ್ ಸಿಗದೇ ಪ್ರಾಣಬಿಟ್ಟಿದ್ದಾರೆ. ಜನ ಮಾತ್ರ ಕೊರೊನಾಗೆ ಡೋಂಟ್ ಕೇರ್ ಎಂದು ಮಾಸ್ಕ್ ಹಾಕದೇ ತಿರುಗುತ್ತಿದ್ದಾರೆ. ನಾಳೆ ಇದೇ ಜನರಲ್ಲಿ ಯಾರಿಗಾದರೂ ಪಾಸಿಟಿವ್ ಆಗಿ ಒದ್ದಾಡುವಾಗ ಅವರ ಮನೆಯವರು ಸರಕಾರವನ್ನು ಬೈಯುತ್ತಾರೆ. ಅಲ್ಲಿಯ ತನಕ ಮಾಸ್ಕ್ ಹಾಕದವನನ್ನು ಅವನ ಮನೆಯವರೇ ಬೈದು ಮಾಸ್ಕ್ ಹಾಕಿಸುವುದಿಲ್ಲ. ಇನ್ನು ಮಂಗಳೂರು ಮಹಾನಗರ ಪಾಲಿಕೆಯಿಂದ ಕೋವಿಡ್ ಮಾರ್ಷಲ್ ಗಳನ್ನು ನೇಮಕ ಮಾಡಿ ಅವರಿಗೆ ಕೋಟ್ ತರಹದ್ದು ಕೊಟ್ಟು ಮಾಸ್ಕ್ ಹಾಕದವರ ವಿರುದ್ಧ ಛೂ ಬಿಟ್ಟಿದ್ದಾರೆ. ಆದರೆ ಈ ಮಾರ್ಷಲ್ ಗಳಿಗೆ ಮಾಸ್ಕ್ ಹಾಕದವರಿಗೆ ಏನು ಮಾಡಬೇಕು ಎಂದು ತರಬೇತಿ ಕೊಟ್ಟಿಲ್ಲ. ಇವರಿಗೆ ದಂಡ ಹಾಕುವ ಅಧಿಕಾರ ಇಲ್ಲ. ದಂಡ ಹಾಕಬೇಕಾದರೇ ಇವರ ಜತೆ ಪಾಲಿಕೆಯ ಅಧಿಕಾರಿ ಒಬ್ಬರು ಇರಬೇಕು. ಪಾಲಿಕೆಯ ಅಧಿಕಾರಿ ಯಾರೂ ಇವರ ಜೊತೆ ಅಷ್ಟಾಗಿ ಹೋಗಲು ಆಸಕ್ತಿ ತೋರಿಸುವುದಿಲ್ಲ. ಯಾಕೆಂದರೆ ಕೊರೊನಾ ಓಡಿಸಿದರೆ ಏನು ಸಿಗುತ್ತದೆ. ಕಚೇರಿಯಲ್ಲಿ ಕುಳಿತರೆ ಕಿಸೆ ಭರ್ತಿಯಾಗುತ್ತದೆ, ಕೈ ಬಿಸಿಯಾಗುತ್ತದೆ ಎನ್ನುವ ಮನೋಭಾವನೆ. ಇನ್ನು ಖಾಸಗಿ ಆಸ್ಪತ್ರೆಗಳಿಗೆ ಬಂದವರು ಕೊರೊನಾ ಟೆಸ್ಟ್ ಮಾಡಿಸಿ ಹಣ ಇಲ್ಲ ಎಂದರೆ ಆ ಸ್ಯಾಂಪಲ್ ಅನ್ನು ಸರಕಾರಿ ಆಸ್ಪತ್ರೆಗೆ ಕಳುಹಿಸಿ ಎಂದು ಜಿಲ್ಲಾಡಳಿತ ಹೇಳಿದೆ. ಸ್ವಾಮಿ, ಅತೀ ಬುದ್ಧಿವಂತರೇ, ಟೆಸ್ಟ್ ಮಾಡಿಸಿದ ನಂತರ ಹೀಗೆ ಹಣ ಇಲ್ಲ ಎಂದರೆ ಬಿಡಲು ಅದೇನು ಹಳ್ಳಿಯ ಹೋಟೇಲಾ? ಮೊದಲು ಹಣ ಕಟ್ಟಿ ನಂತರ ಟೆಸ್ಟ್, ಗಿಸ್ಟ್ ಎಲ್ಲ ಮಾಡುವ ಎಂದು ಹೇಳಿಯೇ ಒಳಬಿಡುವ ಖಾಸಗಿ ಆಸ್ಪತ್ರೆಗಳ ಬಗ್ಗೆ ನಿಮಗೆ ಜ್ಞಾನದ ಕೊರತೆ ಇರಬಹುದು. ನಮಗೆ ಚೆನ್ನಾಗಿ ಗೊತ್ತಿದೆ. ಇನ್ನು ಕೊನೆಯದಾಗಿ ಕೊರೊನಾ ಲಸಿಕೆಗೆ 250 ರೂಪಾಯಿ ಕೊಟ್ಟರೆ ಖಾಸಗಿ ಆಸ್ಪತ್ರೆಯಲ್ಲಿಯೂ ಹಾಕಿಸಬಹುದು ಎಂದು ಸರಕಾರ ಹೇಳಿದೆ. ಆದರೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳು 550 ರೂಪಾಯಿ ಚಾರ್ಜ್ ಮಾಡುತ್ತಿವೆ. ಇದನ್ನು ತಡೆಯುವವರು ಇದ್ದಾರಾ ಎನ್ನುವುದು ಈಗ ಉಳಿದಿರುವ ಪ್ರಶ್ನೆ!

  • Share On Facebook
  • Tweet It


- Advertisement -


Trending Now
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
Hanumantha Kamath March 23, 2023
ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
Hanumantha Kamath March 22, 2023
Leave A Reply

  • Recent Posts

    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
    • ಯಾವ ಮುಸ್ಲಿಂ ರಾಜ ಜಾಗ ಕೊಟ್ಟಿದ್ದು ಮಿಥುನ್ ರೈ!!
  • Popular Posts

    • 1
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 2
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 3
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 4
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • 5
      ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search