ಎಲ್ಲರೂ ಕೈಬಿಟ್ಟಾಗ ಮುಸ್ಲಿಮರಿಂದ ಗೆದ್ದೆ ಎಂದುಕೊಂಡ ಮಮತಾ ಹೊಸ ಆಟ ಇದು!!
ಪಶ್ಚಿಮ ಬಂಗಾಲದ ವಿಧಾನಸಭಾ ಚುನಾವಣೆಗಳಿಗೆ ಆರು ತಿಂಗಳು ಇರುವಾಗ ಭಾರತೀಯ ಜನತಾ ಪಕ್ಷದ ಮುಖಂಡರು ವಿಶೇಷವಾಗಿ ತೇಜಸ್ವಿ ಸೂರ್ಯನಂತವರು ಬಂಗಾಳಕ್ಕೆ ಹೋಗಿ ರ್ಯಾಲಿ ಮಾಡುವಾಗ ಎಲ್ಲಿಂದಲೋ ಆಸಿಡ್ ಬಾಂಬ್ ಗಳು, ಪೆಟ್ರೋಲ್ ಬಾಂಬ್ ಗಳು ಬಂದು ಬೀಳುತ್ತಿದ್ದವಲ್ಲ, ಆವಾಗಲೇ ಸ್ಪಷ್ಟವಾಗಿತ್ತು. ಅಲ್ಲಿ ಇರುವುದು ರಾಕ್ಷಸಿ ರಾಜ್ಯ. ಅಂತಹ ರಾಜ್ಯವನ್ನು ಆಳುತ್ತಿದ್ದ ಮಮತಾ ಬ್ಯಾನರ್ಜಿ ಎನ್ನುವ ಹೊರಗಿನಿಂದ ಸಾಧ್ವಿಯಂತೆ ಕಾಣುವ ಒಳಗಿನಿಂದ ಅಪ್ಪಟ ರಾಕ್ಷಸಿ ಕೃತ್ಯಕ್ಕೆ ಇಂಬು ಕೊಡುವವಳನ್ನು ದೀದಿ ಎಂದು ಕರೆಯುವ ಅವಶ್ಯಕತೆ ಏನಿತ್ತು? ದೀದಿ ಎಂದರೆ ಅಕ್ಕ. ಅಕ್ಕನ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ತಾಯಿಯ ನಂತರ ಅಕ್ಕನೇ ತಾಯಿ. ಆದರೆ ದೀದಿಯ ಹೆಸರಿನಲ್ಲಿ ಮಮತಾ ಎನ್ನುವ ಶಬ್ದಕ್ಕೆ ವಿರೋಧವಾಗಿ ವರ್ತಿಸುವ ಕ್ರೂರಿಯನ್ನು ಬಂಗಾಳದ ಮೂಲಕ ಪ್ರಪಂಚ ನೋಡುತ್ತಿದೆ. ಕಾಲಿಗೆ ಹವಾಯಿ ಚಪ್ಪಲಿ ಹಾಕಿ, ಶ್ವೇತಾ ಬಣ್ಣದ ಸೀರೆ ಸುತ್ತಿದ ಕೂಡಲೇ ಆಕೆ ಮಮತಾಮಯಿ ಎಂದುಕೊಂಡರೆ ಅದಕ್ಕಿಂತ ದುರಂತ ಬೇರೆ ಇಲ್ಲ. ಯಾವಾಗ ನೋಡಿದರೂ ಮೂಗಿನ ಮೇಲೆ ಸಿಟ್ಟು, ಅಪರಾತ್ರಿಯಲ್ಲಿಯೂ ಅನಗತ್ಯವಾಗಿ ಸಿಡಿದೇಳುವ ಪ್ರವೃತ್ತಿ, ಯಾರಿಗೆ ಬೇಕಾದರೂ ಚಾಲೆಂಜ್ ಮಾಡುವ ದಾಷ್ಟ್ಯತನ ಮತ್ತು ನಾನು ಯಾರಿಗೂ ಕೇರ್ ಮಾಡಲ್ಲ ಎನ್ನುವ ಅಹಂಕಾರ ಒಟ್ಟು ಸೇರಿದರೆ ಅದು ಮಮತಾ ಬ್ಯಾನರ್ಜಿ. ಅವರಿಗೆ ಈ ಬಾರಿ ಗೆಲುವು ಅಷ್ಟು ಸುಲಭವಿರಲಿಲ್ಲ ಎನ್ನುವ ಹೆದರಿಕೆ ಕಣಕಣದಲ್ಲಿಯೂ ಇತ್ತು. ಸರಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಜನಸಾಮಾನ್ಯರ ಕೆಲಸಗಳು ಸರಕಾರಿ ಕಚೇರಿಯಲ್ಲಿ ನಡೆಯಲು ಇದೇ ಟಿಎಂಸಿ ಗೂಂಡಾಗಳು ಅಷ್ಟು ಸುಲಭದಲ್ಲಿ ಬಿಡುತ್ತಿರಲಿಲ್ಲ. ಮಮತಾ ಸುತ್ತ ಪ್ರಭಾವಿಗಳ ಸಿಂಡಿಕೇಟ್ ಸುತ್ತುವರೆದಿದ್ದ ಕಾರಣ ಆಕೆ ಜನರ ಸಂಕಷ್ಟವನ್ನು ಅರಿಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಬಂಗಾಳದ ಮೇಲ್ಜಾತಿಗಳು ಕೂಡ ಬ್ಯಾನರ್ಜಿಯಿಂದ ದೂರವಾಗಿದ್ದರು. ಆದರೆ ಐನಾತಿ ಟೈಮಿನಲ್ಲಿ ಮಮತಾಳನ್ನು ಕೈ ಹಿಡಿದು ದಡ ಸೇರಿಸಲೇಬೇಕು ಎಂದು ಒಟ್ಟಾಗಿ ನಿಂತದ್ದು ಅಲ್ಪಸಂಖ್ಯಾತರ ಮತಬ್ಯಾಂಕುಗಳು. ಸಾಮಾನ್ಯವಾಗಿ ಕಾಂಗ್ರೆಸ್ಸಿನ ಸುಭದ್ರ ಮತಕೋಟೆಗಳಾಗಿದ್ದ ಅಲ್ಪಸಂಖ್ಯಾತರು ಕಳೆದ ಬಾರಿ ಕಾಂಗ್ರೆಸ್ಸಿನೊಂದಿಗೆ ಇದ್ದ ಕಾರಣ ಆ ಪಕ್ಷ 44 ಸೀಟುಗಳನ್ನು ಪಡೆದಿತ್ತು. ಒಂದಿಷ್ಟು ಕಮ್ಯೂನಿಸ್ಟರೊಂದಿಗೆ ಇದ್ದ ಕಾರಣ ಅವರಿಗೂ ಮರ್ಯಾದೆ ಉಳಿಸಲು ಸಾಧ್ಯವಾಗಿತ್ತು. ಆದ್ದರಿಂದ ಕಳೆದ ಬಾರಿ ಅಧಿಕಾರಕ್ಕೆ ಬಂದಿದ್ದರೂ ಮಮತಾ ವಿರುದ್ಧ ಆಡಳಿತ ಅಲೆ ಈ ಬಾರಿ ಜೋರಾಗಿ ಬೀಸಿತ್ತು. ಮೇಡಂ ಈ ಬಾರಿ ಅಷ್ಟು ಸುಲಭವಾಗಿ ಗೆಲ್ಲಲ್ಲ ಎಂದು ಟಿಎಂಸಿ ಹಾಲಿ ಶಾಸಕರೇ ಗುನುಗಿಕೊಳ್ಳಲು ಶುರು ಮಾಡಿದ್ದರು. ಅದಕ್ಕೆ ಸರಿಯಾಗಿ ಭಾಜಪಾ ರಾಮನ ಜಪವನ್ನು ಮಾಡುತ್ತಾ ಅಖಾಡಕ್ಕೆ ಇಳಿದುಬಿಟ್ಟಿತ್ತಲ್ಲ, ಮಮತಾಳಿಗೆ ಎದುರಿಗೆ ಕಂಡಿದ್ದು ಅಪ್ಪಟ ಕತ್ತಲು. ಬಿಜೆಪಿಯ ಶ್ರೀರಾಮ ಜಪ ಎಷ್ಟು ಸ್ಟ್ರಾಂಗ್ ಆಗಿ ಬಂಗಾಳದ ಗಲ್ಲಿಗಲ್ಲಿಯೂ ಮುಟ್ಟಿತ್ತು ಎಂದರೆ ಅಲ್ಪಸಂಖ್ಯಾತರು ಎದ್ದುಬಿಟ್ಟರು. ಈ ಬಾರಿ ನಾವು ವಿಭಜಿಸಲ್ಪಟ್ಟರೆ ಮೋದಿ, ಶಾ ಗೆಲ್ಲುತ್ತಾರೆ ಎಂದು ಅಂದುಕೊಂಡ ಮುಸ್ಲಿಮರು ಬಿಜೆಪಿ ಗೆಲುವಿಗೆ ಅಡ್ಡ ನಿಂತುಬಿಟ್ಟರು. ಅದರಿಂದಾಗಿ ಕನಿಷ್ಟ 96 ಕ್ಷೇತ್ರಗಳಲ್ಲಿ ಬಿಜೆಪಿ 1000 ಮತಗಳಿಗಿಂತಲೂ ಕಡಿಮೆ ಅಂತರದಲ್ಲಿ ಸೋತಿದೆ. ಇಲ್ಲೆಲ್ಲ ಮುಸ್ಲಿಮರು ಕಾಂಗ್ರೆಸ್ಸಿಗೆ ಹಾಕಿಲ್ಲ. ಮಮತಾ ಮೇಲೆ ಪ್ರೀತಿ ಇಲ್ಲದಿದ್ದರೂ ಬಿಜೆಪಿ ಮೇಲೆ ಕೋಪ ಇರುವುದರಿಂದ ಅಷ್ಟು ಕಡೆ ಬಿಜೆಪಿಗೆ ಅದು ಕಷ್ಟವಾಯಿತು. ಈಗ ಗೆದ್ದ 75 ಹಾಗೂ ಆ 96 ಸೇರಿದ್ದರೆ ಮಮತಾ ನಂದಿಗ್ರಾಮದ ತರಹ ಉದ್ದುದ್ದಕ್ಕೆ ಮಲಗಬೇಕಾಗಿತ್ತು. ಯಾವಾಗ ಮುಸ್ಲಿಮರು ಕೈ ಹಿಡಿದು ದಡ ಸೇರಿಸಿದ್ದು ಎಂದು ಗ್ಯಾರಂಟಿಯಾಯಿತೋ ಮಮತಾ ನೀವು ಕೊಟ್ಟ ಗೆಲುವಿನ ಭೀಕ್ಷೆಯನ್ನು ಸ್ವೀಕರಿಸಿದ್ದೇನೆ. ವಿಜಯೋತ್ಸವ ನಿಮಗೆ ಬೇಕಾದ ಹಾಗೆ ಮಾಡಿ, ನಾನು ಇದ್ದೇನೆ ಎಂದು ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟಳು. ಆಗಲೇ ಬಂಗಾಲದ ಮೂಲಭೂತವಾದಿ ಅಲ್ಪಸಂಖ್ಯಾತರು ಹೊಸ ಹುಮ್ಮಸ್ಸಿನೊಂದಿಗೆ ಆಖಾಡಕ್ಕೆ ಇಳಿದು ಇನ್ನು ನಿಜವಾದ ಆಟ ಶುರು ಎಂದು ಬೊಬ್ಬೆ ಹೊಡೆದದ್ದು. ಪೊಲೀಸರ ಸುಪರ್ದಿಯಲ್ಲಿಯೇ ಅನೇಕ ಕಡೆ ಹಿಂದೂಗಳ ಮೇಲೆ ಹಲ್ಲೆ, ಕೊಲೆಯತ್ನ ಹಾಗೂ ಕೊಲೆಗಳು ನಡೆದು ಹೋಗಿದೆ. ಬಿಜೆಪಿ ಪಕ್ಷದ ಕಚೇರಿಗಳಿಗೆ ಬೆಂಕಿ ಕೊಡಲಾಗಿದೆ, ಬಿಜೆಪಿ ಬೆಂಬಲಿತರ ಅಂಗಡಿಗಳಿಗೆ ಬೆಂಕಿ ಕೊಟ್ಟು ಧ್ವಂಸ ಮಾಡಲಾಗಿದೆ. ಅದಕ್ಕಿಂತಲೂ ಹೀನ ಕೃತ್ಯ ಎಂದರೆ ಹೆಣ್ಣು ಮಗಳಾಗಿ ಅದರಲ್ಲಿಯೂ ಹಿಂದೂ ಹೆಣ್ಣುಮಗಳಾಗಿ ಮಮತಾ ಸಭ್ಯತೆಯ ಪರಿಧಿ ದಾಟಲು ತನ್ನ ಗೆಲುವಿನ ಕಾರಣೀಕೃತರಿಗೆ ಅವಕಾಶ ನೀಡಿದ್ದು. ಅದರ ಬಳಿಕವೇ ಹಿಂದೂ ಯುವತಿಯರ ರೇಪ್ ಆಗಿದೆ. ಮಕ್ಕಳ ಮುಂದೆನೆ ತಂದೆ, ತಾಯಿಯನ್ನು ಎಳೆದೆಳೆದು ಹೊಡೆಯಲಾಗಿದೆ. ರಕ್ತ ಹರಿದಿದೆ ಮತ್ತು ಮಮತಾ ಆ ರಕ್ತದಲ್ಲಿ ಆಟವಾಡಲು ತನ್ನ ಗೆಲುವಿಗೆ ಕಾರಣರಾದವರಿಗೆ ಅವಕಾಶ ನೀಡಿದ್ದಾರೆ. ಇದರಿಂದ ದೇಶಕ್ಕೆ ಹೋದ ಸಂದೇಶ ಏನೇ ಇರಲಿ, ತನ್ನನ್ನು ಇನ್ನು ಐದು ವರ್ಷ ಏನೂ ಮಾಡಲು ಸಾಧ್ಯವಿಲ್ಲ ಎಂದು ಬ್ಯಾನರ್ಜಿ ಅಂದುಕೊಂಡಿರಬಹುದು. ಒಂದು ವೇಳೆ ರಾಷ್ಟ್ರಪತಿ ಶಾಸನ ಅಲ್ಲಿ ತಂದರೆ ಸಂಶಯವೇ ಅಲ್ಲ, ಅವಳ ಓರಗೆಯ ಕೇರಳದ ಪಿಣರಾಯಿ, ತಮಿಳುನಾಡಿನ ಸ್ಟಾಲಿನ್, ಮಹಾರಾಷ್ಟ್ರದ ಉದ್ಭವ್, ಉತ್ತರಪ್ರದೇಶದ ಮುಲಾಯಂ ಸಿಂಗ್ ಸಹಿತ ಇನ್ನಿತರರು ಬೊಬ್ಬೆ ಹೊಡೆಯುತ್ತಾರೆ. ಅಲ್ಲಿಯ ತನಕ ಇವರ್ಯಾರಿಗೂ ಹಿಂದೂಗಳ ಮಾರಣ ಹೋಮ ಕಾಣಿಸಲ್ಲ. ಹಾಗಂತ ಹಿಂದೂಗಳ ಸಾವನ್ನು ಅಷ್ಟು ಸುಲಭವಾಗಿ ಬಿಡಲು ಮೋದಿ ಸರಕಾರ ಬಿಡುವುದಿಲ್ಲ. ಇವತ್ತು ಅಲ್ಪಸಂಖ್ಯಾತರ ಹಂಗಿನಲ್ಲಿ ಅಧಿಕಾರಕ್ಕೆ ಮರಳಿರುವ ಮಮತಾ ಮುಂದೆ ಇವರ ಮುಂದೆನೆ ಮಂಡಿ ಊರಬೇಕಾಗುತ್ತದೆ. ಯಾಕೆಂದರೆ ಇವರ ಆಟೋಪಟ ಸಿಕ್ಕಾಪಟ್ಟೆ ಬೆಳೆದು ಅದೇ ರಾಷ್ಟ್ರಪತಿ ಆಳ್ವಿಕೆಗೆ ಕಾರಣವಾದರೆ!
Leave A Reply