• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಬಹರೈನ್ ಆಮ್ಲಜನಕದ ವಿಷಯದಲ್ಲಿ ಖಾದರ್ ಉರಿದದ್ದು ಸರಿಯಾ!

Hanumantha Kamath Posted On May 8, 2021
0


0
Shares
  • Share On Facebook
  • Tweet It

ಬಹರೈನ್ ನಿಂದ ಆಮ್ಲಜನಕವನ್ನು ಹೊತ್ತುಕೊಂಡ ಹಡಗು ಮಂಗಳೂರಿಗೆ ಬಂದಾಗ ಅದನ್ನು ಸ್ವಾಗತಿಸಲು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಹೋಗಿರುವುದರಲ್ಲಿ ಯಾವ ತಪ್ಪು ಕೂಡ ಇಲ್ಲ. ಬೇಕಾದರೆ ಯು.ಟಿ.ಖಾದರ್ ಅವರು ಕೂಡ ಹೋಗಬಹುದಿತ್ತು. ಇನ್ನು ಆಮ್ಲಜನಕದ ಹಡಗನ್ನು ಮಂಗಳೂರಿಗೆ ತರಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾರಾದರೂ ಧನ್ಯವಾದ ಅರ್ಪಿಸಿದ್ದಲ್ಲಿ ಅದು ಕೂಡ ತಪ್ಪು ಅಲ್ಲವೇ ಅಲ್ಲ. ಇನ್ನು ರೆಡ್ ಕ್ರಾಸ್ ನವರು ಕೊಟ್ಟಿದ್ದು, ಅದರಲ್ಲಿ ಮೋದಿಯವರ ಪಾತ್ರ ಏನು ಇಲ್ಲ ಎಂದು ಅಂದುಕೊಳ್ಳುವವರಿಗೆ ಒಂದು ವಿಷಯ ಗೊತ್ತಿರಲಿ. ಒಂದು ದೇಶದ ಇಮೇಜ್ ಚೆನ್ನಾಗಿದ್ದರೆ ಆ ದೇಶದ ಸಂಕಷ್ಟದ ಸಮಯದಲ್ಲಿ ಯಾವುದೇ ರಾಷ್ಟ್ರ ಸಹಾಯ ಮಾಡಲು ಮುಂದೆ ಬರುವುದು ಮಾತ್ರವಲ್ಲ, ಹಾತೊರೆಯುತ್ತದೆ. ಭಾರತಕ್ಕೆ ಆಮ್ಲಜನಕ ಪೂರೈಸಿದ್ದೇವೆ ಎನ್ನುವ ಹೆಮ್ಮೆ ಆ ರಾಷ್ಟ್ರಕ್ಕೆ ಸಿಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಮನ್ನಣೆ ಸಿಗುತ್ತದೆ. ಹಾಗಂತ ಇದೊಂದು ರೀತಿಯಲ್ಲಿ ಬಡ್ಡಿ ಇಲ್ಲದ ಸಾಲದಂತೆ. ಮುಂದೆ ಬೆಹರೇನ್ ಹೀಗೆ ಯಾವುದಾದರೂ ಸಂಕಷ್ಟಕ್ಕೆ ಬಿದ್ದಾಗ ನಮ್ಮ ಜವಾಬ್ದಾರಿಯೂ ಅಷ್ಟೇ ಇದೆ. ಇದೊಂದು ರೀತಿಯಲ್ಲಿ ಪರೋಕ್ಷ ಕೊಡುಕೊಳ್ಳುವಿಕೆಯ ಒಪ್ಪಂದ. ಒಂದು ವೇಳೆ ಈಗ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದರೆ ಮತ್ತು ಬೆಹರೇನ್ ಹೀಗೆ ಆಮ್ಲಜನಕ ಪೂರೈಸಿದ್ದರೆ ಆಗ ಇದೇ ಖಾದರ್ ಮಹಾಶಯರು ಮನಮೋಹನ್ ಸಿಂಗ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರೋ ಇಲ್ಲವೋ ಸೋನಿಯಾ ಹಾಗೂ ರಾಹುಲ್ ಗೆ ದೊಡ್ಡ ಥ್ಯಾಂಕ್ಸ್ ಎಂದು ಹೇಳಿ ತೊಕ್ಕೊಟ್ಟು ಸೇತುವೆ ಬಳಿ ಹೋರ್ಡಿಂಗ್ಸ್ ಹಾಕುತ್ತಿದ್ದರು. ಅಸಲಿಗೆ ಅಲ್ಲಿ ಆ ಸೋನಿಯಾ, ರಾಹುಲ್ ಪಾತ್ರವೇ ಇರಲ್ಲ ಎಂದು ಖಾದರ್ ಗೂ ಗೊತ್ತಿರುತ್ತದೆ. ಅಷ್ಟಕ್ಕೂ ಬೆಹರೇನ್ ಆಮ್ಲಜನಕಕ್ಕೆ ಬಿಜೆಪಿಗರು ಯಾಕೆ ಮೋದಿಗೆ ಕ್ರೆಡಿಟ್ ಕೊಡಬೇಕು? ಯಾಕೆಂದರೆ ಅದು ತಮ್ಮ ಸರಕಾರದಿಂದ ಆಗಿರುವ ಮಹಾದುಪಕಾರ ಎಂದು ಜನರಿಗೆ ಗೊತ್ತಾಗಬೇಕಲ್ಲ. ಅದರಲ್ಲಿ ಯಾಕೆ ಕಾಂಗ್ರೆಸ್ಸಿಗರು ಟೆನ್ಷನ್ ಮಾಡಿಕೊಳ್ಳಬೇಕು? ಇಂದಿರಾ ಕ್ಯಾಂಟೀನ್ ಎಂದು ತಾವು ಹೆಸರು ಇಟ್ಟಾಗ ಖಾದರ್ ಅವರೇ ಅದೇನು ಇಂದಿರಾ ಹಣದಿಂದ ತೆರೆದ ಕ್ಯಾಂಟಿನ್ ಆಗಿತ್ತಾ ಖಾದರ್? ಹಾಗಾದರೆ ನೀವು ಪ್ರತಿ ಕ್ಯಾಂಟೀನ್ ಉದ್ಘಾಟನೆಗೆ ನಿಂತು ಇಂದಿರಾ ಗಾಂಧಿ(!!)ಯವರನ್ನು ಹೊಗಳಲಿಲ್ಲವೇ? ಅಷ್ಟೇ ಅಲ್ಲ, ಮ್ಯೂಸಿಯಂ, ವಿಮಾನ ನಿಲ್ದಾಣ, ಕ್ರೀಡಾಂಗಣಕ್ಕೆ ನೆಹರು, ಇಂದಿರಾ ಹೆಸರಿಟ್ಟಾಗ ಅವರಿಗೂ ಅದಕ್ಕೂ ಏನು ಸಂಬಂಧ ಎಂದು ಯಾರಾದರೂ ಕೇಳಿದ್ರಾ ಖಾದರ್. ಹಾಗಿರುವಾಗ ಮೋದಿಗೆ ಧನ್ಯವಾದ ಹೇಳಿದರೆ ನಿಮಗೆ ಬರ್ನಲ್ ಅವಶ್ಯಕತೆ ಯಾಕೆ ಖಾದರ್. ಮೊದಲನೇಯದಾಗಿ ಇನ್ನು ಮುಂದೆ ಯಾವುದೇ ಸೌಲಭ್ಯದ ವಿಷಯದಲ್ಲಿ ಯಾರಿಗೂ ಕ್ರೆಡಿಟ್ ಕೊಡುವುದನ್ನೇ ನಿಲ್ಲಿಸೋಣ. ಯಾಕೆಂದರೆ ರಾಜಕಾರಣಿಗಳು ರಾಜಕೀಯ ಮಾಡಲು ಇರುವುದು ಹೌದಾದರೂ ಈಗ ಅದಕ್ಕೆ ಸಮಯವಲ್ಲ. ಬದುಕಿ ಉಳಿದರೆ ರಾಜಕೀಯ ಮಾಡಲು ತುಂಬಾ ಸಮಯವಿದೆ.

ಇನ್ನು ಬಿಬಿಎಂಪಿ ಬೆಡ್ ಬ್ಲಾಕಿಂಗ್ ಅವ್ಯವಹಾರದ ಬಗ್ಗೆ ಎದ್ದಿರುವ ಅಪಸ್ವರ. ಇದರಲ್ಲಿ ಈಗ ಭಾರತೀಯ ಜನತಾ ಪಾರ್ಟಿಯ ಶಾಸಕ ಸತೀಶ್ ರೆಡ್ಡಿಯವರ ಹೆಸರು ತಳಕು ಹಾಕಿಕೊಂಡಿದೆ. ಒಬ್ಬ ಶಾಸಕನಿಗೆ ಈ ದಿನಗಳಲ್ಲಿ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ ಎಂದು ಎಷ್ಟು ಒತ್ತಡ ಇರುತ್ತದೆ ಎನ್ನುವುದು ಅವರಿಗೆ ಮಾತ್ರ ಗೊತ್ತು. ಅದು ಯಾವುದೇ ಪಕ್ಷದ ಶಾಸಕ ಇರಲಿ. ಕೊಡಿಸದಿದ್ದರೆ ನೀನ್ಯಾವ ಸೀಮೆಯ ಶಾಸಕ. ಒಂದು ಬೆಡ್ ಕೊಡಿಸಲು ಯೋಗ್ಯತೆ ಇಲ್ವಾ? ಆಗದಿದ್ದರೆ ಹೇಳು ಎನ್ನುವ ಕುಹಕ ಇರುತ್ತದೆ. ಅದೇ ಬೆಡ್ ಇದೆಯಾ ಎಂದು ಬೆಂಗಳೂರಿನಂತಹ ಮಹಾನಗರದಲ್ಲಿ ಶಾಸಕರಾದವರು ಆಸ್ಪತ್ರೆಗಳಿಗೆ ಕೇಳಿದರೆ ಅಲ್ಲಿ ಕ್ಯಾರೇ ಮಾಡುವವರಿಲ್ಲ. ಆದ್ದರಿಂದ ಅನಿವಾರ್ಯವಾಗಿ ಸತೀಶ್ ರೆಡ್ಡಿ ಹೀಗೆ ಬ್ಲಾಕ್ ಮಾಡಿಸಿದ್ದರೆ ಮತ್ತು ಅದರಿಂದ ಅವರಿಗೆ ಆರ್ಥಿಕವಾಗಿ ಲಾಭದ ಯೋಚನೆಗಳಿಲ್ಲದಿದ್ದರೆ ಇದು ಅರ್ಧ ಸರಿ, ಅರ್ಥ ತಪ್ಪು. ಸರಿ ಯಾಕೆ ಎಂದರೆ ಅವರು ಅದನ್ನು ರಾಜಕೀಯ ವ್ಯಕ್ತಿಯಾಗಿ ಲಾಭದ ಉದ್ದೇಶವಿಲ್ಲದೆ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿರುತ್ತಾರೆ. ತಪ್ಪು ಯಾಕೆಂದರೆ ಇವರ ಕ್ಷೇತ್ರದವರಿಗೆ ಮಾತ್ರ ಸಂಕಷ್ಟದ ಸಮಯದಲ್ಲಿ ಅನುಕೂಲ, ಬೇರೆಯವರಿಗೆ ಆದರೆ ದೇವರೇ ಗತಿಯಾ? ಎನ್ನುವ ಪ್ರಶ್ನೆ ಕೂಡ ಮೂಡುತ್ತದೆ. ಇನ್ನು ತೇಜಸ್ವಿ ಸೂರ್ಯ ಸುದ್ದಿಗೋಷ್ಟಿ ಮಾಡಿ ಬಿಬಿಎಂಪಿಯಲ್ಲಿ ಅಕ್ರಮ ಮಾಡಿದ ಮುಸ್ಲಿಮರ ಹೆಸರುಗಳನ್ನು ಓದಿದರು. ಅದರಲ್ಲಿ ಕೋಮು ಹುಡುಕುವುದು ಎಷ್ಟು ಸರಿ ಎಂದು ಕೆಲವರ ಅನಿಸಿಕೆ. ಅದಕ್ಕೆ ಸರಿಯಾಗಿ ತನಗೆ ಕೊಟ್ಟಿದ್ದ ಪಟ್ಟಿಯನ್ನೇ ಓದಿದ್ದೇನೆ ಎಂದು ಸಂಸದರು ಹೇಳುತ್ತಾರೆ. ತೇಜಸ್ವಿ ಸೂರ್ಯ ಮೂಲತ: ತುಂಬಾ ಆಕ್ಟಿವ್ ಯುವಕ. ರಾಜಕೀಯದಲ್ಲಿ ಮೇಲೆ ಬರುವ ಅದಮ್ಯ ಚಿಂತನೆ ಇದೆ. ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಚಿಕ್ಕ ವಯಸ್ಸಿಗೆ ಸಂಸದರಾಗಿದ್ದಾರೆ. ಹೆಸರು ಮಾಡುವ ಹಂಬಲ ಸಹಜ. ಈಗ ಬಿಬಿಎಂಪಿ ಹಗರಣ ಬಯಲಿಗೆ ಎಳೆದು ಹೀರೋ ಕೂಡ ಆಗಿಬಿಟ್ಟಿದ್ದಾರೆ. ಈ ವಿಷಯದಲ್ಲಿ ಸತ್ಯ ಹೊರಗೆ ಬರಲಿ ಎನ್ನುವುದು ಪ್ರತಿಯೊಬ್ಬರ ಆಶಯ. ಯಾಕೆಂದರೆ ನಮ್ಮಲ್ಲಿ ಹಗರಣಗಳಿಗೆ ಆಯುಷ್ಯ ಕಡಿಮೆ. ಅದರ ಆರೋಪಿಗಳಿಗೆ ಆಯುಷ್ಯ ಜಾಸ್ತಿ!!

0
Shares
  • Share On Facebook
  • Tweet It




Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
Hanumantha Kamath July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
Hanumantha Kamath July 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search