• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಹಣಕ್ಕಾಗಿ ಆಕ್ಸಿಜನ್ ಅಡಗಿಸಿಟ್ಟರೆ ಹೆಣವಾಗುತ್ತೀರಿ, ಹುಶಾರ್!

Hanumantha Kamath Posted On May 9, 2021
0


0
Shares
  • Share On Facebook
  • Tweet It

ನಮಗೆ ನಮ್ಮ ಕುಟುಂಬದಲ್ಲಿ ಒಬ್ಬನ ಬುದ್ಧಿ ಸರಿ ಇಲ್ಲದಿದ್ದರೆ ಸರಿ ಮಾಡುವುದು ಕಷ್ಟ ಎನ್ನುವ ಅನುಭವ ಇರುವಾಗ ಇಡೀ ದೇಶದಲ್ಲಿ 130 ಕೋಟಿ ಜನಸಂಖ್ಯೆ ಇರುವ, ಪ್ರಪಂಚದ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ, ಜಾಗತಿಕವಾಗಿ ಏಳನೇ ಅತೀ ವಿಶಾಲ ಭೂಭಾಗವನ್ನು ಹೊಂದಿರುವ ಭರತ ಖಂಡದ ಪ್ರಧಾನ ಮಂತ್ರಿಯೊಬ್ಬರು ಒಂದು ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರಲು ಅದೇಷ್ಟು ಪರಿಪಾಟಲು ಅನುಭವಿಸುತ್ತಿದ್ದಾರೋ ದೇವರಿಗೆ ಗೊತ್ತು. ನಿಜವಾಗಿಯೂ ಆಸ್ಪತ್ರೆಯಲ್ಲಿ ಬೆಡ್ಡಿನ ಕೊರತೆ ಆದರೆ ಸರಿ ಮಾಡಬಹುದು, ನಿಜವಾಗಿಯೂ ದೇಶದಲ್ಲಿ ಆಮ್ಲಜನಕದ ಕೊರತೆ ಉಂಟಾದರೆ ಅದನ್ನು ಪೂರೈಸಬಹುದು. ನಿಜವಾಗಿಯೂ ಲಸಿಕೆಯ ಕೊರತೆ ಬಂದರೆ ಉತ್ಪಾದಿಸಬಹುದು. ಆದರೆ ಎಲ್ಲವನ್ನು ಕಳುಹಿಸಿಕೊಟ್ಟ ಬಳಿಕವೂ ಅದನ್ನು ಅಡಗಿಸಿಟ್ಟು ನಂತರ ಹಾಹಾಕಾರ ಎಬ್ಬಿಸುವುದು ಇದೆಯಲ್ಲ, ಅದಕ್ಕಿಂತ ಅಸಹ್ಯ ಏನೂ ಇಲ್ಲ.

ಅದಕ್ಕೆ ನಾನು ಆರಂಭದಲ್ಲಿ ಹೇಳಿದ್ದು, ಕುಟುಂಬದ ಒಬ್ಬ ಸದಸ್ಯನ ಬುದ್ಧಿ ಹಾಳಾದರೆ ಸರಿ ಮಾಡಲು ಕಷ್ಟವಿರುವಾಗ 130 ಕೋಟಿಯಲ್ಲಿ ಅದೆಷ್ಟೋ ಕಿರಾತಕರು, ದುರುಳರು, ಮನುಷ್ಯರ ಮುಖವಾಡ ಹೊತ್ತ ರಕ್ಕಸರು ಇದ್ದಾಗ ಅವರನ್ನು ಸರಿಮಾಡಲು ಹೇಗೆ? ಬೆಂಗಳೂರಿನ ನಂತರ ಈಗ ಹಾಸನದಲ್ಲಿಯೂ ಬೆಡ್ ಬ್ಲಾಕ್ ಮಾಡುವ ದಂಧೆ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ದೇಶದ ಯಾವ ಯಾವ ಭಾಗಗಳಲ್ಲಿ ಹೀಗೆ ಆಗುತ್ತಿದೆಯೋ ಯಾರಿಗೆ ಗೊತ್ತು. ಎಲ್ಲವೂ ಬಯಲಿಗೆ ಬರಲ್ಲವಲ್ಲ. ಹಾಗೆ ಮನುಷ್ಯರೂಪಿ ರಾಕ್ಷಸರು ಬೆಡ್ ಬ್ಲಾಕ್ ಮಾಡಿರುವುದರಿಂದ ಅದೆಷ್ಟು ಅಮಾಯಕರು ಕೊನೆಯ ಕ್ಷಣಗಳಲ್ಲಿ ಬೆಡ್ ಸಿಗದೆ ಒದ್ದಾಡಿ ಪ್ರಾಣ ಬಿಟ್ಟಿದ್ದಾರೋ ಯಾರಿಗೆ ಗೊತ್ತು. ಈಗ ಬಂದಿರುವ ಮಾಹಿತಿಗಳ ಪ್ರಕಾರ ದೆಹಲಿಯ ಆಡಳಿತ ಪಕ್ಷದ ಮುಖಂಡ, ಸಚಿವ ಇಮ್ರಾನ್ ಹುಸೇನ್ ಎನ್ನುವ ಕೀಚಕನ ಮನೆಯಲ್ಲಿ ಅಡಗಿಸಿಟ್ಟ 639 ಆಕ್ಸಿಜನ್ ಸಿಲೆಂಡರ್ ಗಳು ಪತ್ತೆಯಾಗಿವೆ. ಒಂದು ಕಡೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರಕಾರ ಹತ್ತು ಆಕ್ಸಿಜನ್ ಪ್ಲಾಂಟ್ ನಿರ್ಮಿಸಿ ಎಂದು ಅನುದಾನ ಬಿಡುಗಡೆ ಮಾಡಿದರೆ ಒಂದನ್ನು ಕಟ್ಟಿ ಸುಮ್ಮನೆ ಕುಳಿತುಕೊಳ್ಳುತ್ತಾರೆ.

ಇನ್ನೊಂದು ಕಡೆ ಅವರ ಸರಕಾರದ ಸಚಿವನೊಬ್ಬ ಆಮ್ಲಜನಕ ಸಿಲೆಂಡರ್ ಅನ್ನು ಅಡಗಿಸಿಟ್ಟು ಕೃತಕ ಕೊರತೆ ಸೃಷ್ಟಿಸಿ ಜನರ ಪ್ರಾಣದ ಜೊತೆ ಆಟವಾಡುತ್ತಿದ್ದಾನೆ. ಇಷ್ಟೆಲ್ಲ ಇದ್ದರೂ ಕೇಜ್ರಿವಾಲ್ ನಿತ್ಯ ಹತ್ತಾರು ಬಾರಿ ಬೇರೆ ಬೇರೆ ವಾಹಿನಿಗಳಲ್ಲಿ ಬಂದು ಮೊಸಳೆಯ ಕಣ್ಣೀರು ತುಂಬುವಂತಹ ಮಾತುಗಳನ್ನು ಆಡುತ್ತಾರೆ. ಆ ಜಾಹೀರಾತುಗಳಿಗೆ ವ್ಯಯಿಸಿರುವ ಹಣದಿಂದ ಆಕ್ಸಿಜನ್ ಪ್ಲಾಂಟ್ ಕಟ್ಟಿದರೆ ಅದೆಷ್ಟು ಜನರ ಪ್ರಾಣ ಉಳಿಯುತ್ತಿತ್ತೋ? ಇದು ಇಷ್ಟಕ್ಕೆ ಮುಗಿಯಲಿಲ್ಲ. ಫರಿದಾಬಾದ್ ಎನ್ನುವ ಪ್ರದೇಶದಲ್ಲಿ ವಿಜೇಂದ್ರ ಮಾವಿ ಎಂಬ ಕಾಂಗ್ರೆಸ್ ಮುಖಂಡ ಆಕ್ಸಿಜನ್ ಸಿಲೆಂಡರ್ ಗಳನ್ನು ಅಕ್ರಮ ದಾಸ್ತಾನು ಮಾಡಿಕೊಂಡು ಒಂದೊಂದು ಸಿಲೆಂಡರ್ ಗಳನ್ನು ಕಾಳಸಂತೆಯಲ್ಲಿ 40 ಸಾವಿರ ರೂಪಾಯಿಗಳಿಗೆ ಮಾರುತ್ತಿದ್ದ. ಅವನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕೊರೊನಾ ಸೋಂಕಿತರ ಪಾಲಿಗೆ ಅಮೂಲ್ಯ ವಸ್ತುವಾಗಿರುವ ರೆಮಿಡೆಸಿವರ್ ಕಾಂಗ್ರೆಸ್ ಆಡಳಿತದ ಪಂಜಾಬಿನ ತೋಡುಗಳಲ್ಲಿ ಪತ್ತೆಯಾಗಿದೆ. ಹೀಗೆ ಆದರೆ ಒಬ್ಬ ಮೋದಿ ಏನು ಮಾಡಲು ಸಾಧ್ಯ? ಒಂದು ಕಡೆಯಲ್ಲಿ ಜನರ ಪ್ರಾಣವನ್ನು ಯಮ ಎಳೆದುಕೊಂಡು ಹೋಗುತ್ತಿದ್ದರೆ ಯಮನಿಗೆ ಸಹಾಯ ಮಾಡಲು ನಮ್ಮ ನಡುವಿನಲ್ಲಿಯೇ ಯಮ ಕಿಂಕರರು ಇದ್ದಾರೆ. ಇನ್ನು ಕೊರೊನಾ ಸೋಂಕಿತರಾಗಿದ್ದವರು ಪ್ರಾಣ ಬಿಟ್ಟರೆ ಅವರ ಹೆಣ ತೆಗೆದುಕೊಂಡು ಹೋಗಲು ಅವರ ಕುಟುಂಬದವರು ಮುಂದೆ ಬರುತ್ತಿಲ್ಲ ಎನ್ನುವುದೇ ಆಧಾರವಾಗಿಟ್ಟು ಸಾವಿರಾರು ರೂಪಾಯಿಗಳನ್ನು ವಸೂಲಿ ಮಾಡಿ ಹೆಣ ಸುಡುವ ದಂಧೆ ಶುರುವಾಗಿದೆ. ಮೇಲ್ನೋಟಕ್ಕೆ ಯಾವುದೋ ಸಂಘಟನೆಯ ಟಿ-ಶರ್ಟ್ ಧರಿಸಿರುವ ಹುಡುಗರಂತೆ ಕಾಣುವವರು ಹೆಣ ಸುಡುವುದನ್ನೆ ಬಂಡವಾಳ ಮಾಡುತ್ತಿದ್ದಾರೆ.

ಈ ನಡುವೆ ಕೆಲವರು ಆಕ್ಸಿಜನ್ ವಿಚಾರವನ್ನು ಇಟ್ಟುಕೊಂಡು ಸುಪ್ರೀಂಕೋರ್ಟ್, ಹೈಕೋರ್ಟ್ ಬಾಗಿಲು ಬಡಿಯುತ್ತಿದ್ದಾರೆ. ತಕ್ಷಣ 1350 ಟನ್ ಆಮ್ಲಜನಕವನ್ನು ಕರ್ನಾಟಕಕ್ಕೆ ನೀಡಿ ಎಂದು ಕರ್ನಾಟಕ ಹೈಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡುತ್ತದೆ. ನೀಡಬಹುದು, ಆದರೆ ಎಲ್ಲಿಂದ ನೀಡುವುದು. ಹೀಗೆ ದೇಶದ ಪ್ರತಿ ರಾಜ್ಯದ ಉಚ್ಚ ನ್ಯಾಯಾಲಯ ಆದೇಶ ನೀಡುತ್ತಾ ಹೋದರೆ ಅದನ್ನು ಪೂರೈಕೆ ಮಾಡಬೇಕಾದರೆ ಆಮ್ಲಜನಕ ಬೇಕಲ್ಲವೇ? ಕೊಟ್ಟ ಆಮ್ಲಜನಕವನ್ನು ಹೀಗೆ ಅಡಗಿಸಿಟ್ಟು ಕಳ್ಳಸಂತೆಕೋರರು ನುಂಗಿ ಹಾಕುತ್ತಿದ್ದರೆ ತರುವುದು ಎಲ್ಲಿಂದ? ಈಗ ಒಂದೆರಡು ಕಡೆ ಪೊಲೀಸರು ಪತ್ತೆಹಚ್ಚಿದ ಮಾಹಿತಿಗಳು ಬರುತ್ತಿವೆ. ಆದರೆ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ, ಪಶ್ಚಿಮ ಬಂಗಾಲದಿಂದ ಗುಜರಾತಿನ ತನಕ ಅದೆಷ್ಟು ಗೋಡೌನಗಳಲ್ಲಿ ಮೋದಿಯ ಹೆಸರು ಹಾಳು ಮಾಡಲು ಆಮ್ಲಜನಕವನ್ನು ಅಡಗಿಸಿಡಲಾಗಿದೆಯೋ ಯಾರಿಗೆ ಗೊತ್ತು? ನಾನು ಹೇಳುವುದೇನೆಂದರೆ ಈ ಸಮಯದಲ್ಲಿ ಆಮ್ಲಜನಕವನ್ನು ಕಳ್ಳಸಂತೆಯಲ್ಲಿ ಮಾರುವುದು ಅಥವಾ ಕೃತಕ ಅಭಾವ ಸೃಷ್ಟಿಸಲು ಅಡಗಿಸಿಟ್ಟುಕೊಳ್ಳುವುದು ಎರಡೂ ಕೂಡ ಘೋರ ಅಪರಾಧ. ಹೀಗೆ ಮಾಡಿದವರು ಪೊಲೀಸರ ಕಣ್ಣಿಗೆ ಮಣ್ಣೆರೆಚಬಹುದು. ಆದರೆ ದೇವರು ಎನ್ನುವ ಒಬ್ಬ ಶಕ್ತಿ ಇದ್ದಾನೆ. ಅದು ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆ ರೂಪದಲ್ಲಿ ಇರಬಹುದು. ಆ ಸರ್ವಶಕ್ತನ ಕಣ್ಣಿನಿಂದ ಪಾರಾಗಲು ಸಾಧ್ಯವೇ ಇಲ್ಲ. ನೀವು ಇವತ್ತು ಹಣಕ್ಕಾಗಿ ಹೀಗೆ ಮಾಡಿದರೆ ನಾಳೆ ಬೀದಿ ಹೆಣವಾದರೂ ಕೇಳುವವರಿಲ್ಲದ ಪರಿಸ್ಥಿತಿ ಬರಲಿದೆ!!

0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Hanumantha Kamath January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Hanumantha Kamath January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search