ಹಾದಿ ತಪ್ಪಿಸಿದ ಐವನ್ ಡಿ ಸೋಜಾ ಪ್ರಕಟಣೆ, ರಸ್ತೆಗಿಳಿದ ವಾಹನಗಳು ಪೋಲೀಸ್ ವಶಕ್ಕೆ
ಮಂಗಳೂರು : ಬೆಳಗ್ಗೆ 10 ಗಂಟೆಯವರೆಗೆ ವಾಹನ ಬಳಸಿ ಓಡಾಡಬಹುದು ಎಂದು ಮಾಜಿ ಎಂಎಲ್ಸಿ ಐವನ್ ಡಿಸೋಜಾ ಅವರು ಹೊರಡಿಸಿದ್ದ ಪ್ರಕಟಣೆಯೊಂದು ನಾಗರಿಕರ ಹಾದಿ ತಪ್ಪಿಸಿದೆ. ಇದರ ಪರಿಣಾಮ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ೧೦೦ ಕ್ಕೂ ಅಧಿಕ ವಾಹನಗಳನ್ನು ಪೊಲೀಸ್ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಿನ್ನೆ ವಿಡಿಯೋ ಮೂಲಕ ಸ್ವತಃ ಪೊಲೀಸ್ ಕಮಿಷನರ್ ಅವರೇ ಅನಗತ್ಯ ಯಾರೂ ಸಂಚಾರ ಮಾಡಬಾರದು. ಎಲ್ಲರೂ ಅವರ ಮನೆಯ ಹತ್ತಿರದಲ್ಲಿನ ಅಂಗಡಿಗಳಲ್ಲಿ ಮಾತ್ರ ಖರೀದಿಸಬೇಕು. ಯಾರೂ ವಾಹನ ಬಳಸುವಂತಿಲ್ಲ. ಅನಿವಾರ್ಯತೆ ಇದ್ದರೆ ಮಾತ್ರ ವಾಹನಗಳ ಬಳಕೆ ಮಾಡಬೇಕೆಂದು ಆದೇಶಿಸಿದ್ದರು. ಆದರೆ ಲಾಕ್ಡೌನ್ಗೆ ಉತ್ತಮ ಬೆಂಬಲ ದೊರಕಿದ್ದ ನಗರದಲ್ಲಿ ಇಂದು ಬೆಳಗ್ಗಿನಿಂದಲೇ ಜನರು ನಗರದೆಲ್ಲೆಡೆ ಸಂಚರಿಸುತ್ತಿದ್ದರು
ಬೆಳಗ್ಗೆ 10ಗಂಟೆಯವರೆಗೆ ವಾಹನ ಉಪಯೋಗಿಸಲು ಯಾವುದೇ ಅಡ್ಡಿಯಿಲ್ಲ ಎಂದು ದ.ಕ. ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಈ ಬಗ್ಗೆ ತಾನು ಜಿಲ್ಲಾಧಿಕಾರಿಯವರಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿರುವೆ ಎಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಮಾಜಿ ಎಂಎಲ್ ಸಿ ಐವನ್ ಡಿಸೋಜಾ ಅವರು ಬರೆದುಕೊಂಡಿದ್ದರು.
ಹೀಗಾಗಿ ದಿನಸಿ ಸಾಮಗ್ರಿ, ತರಕಾರಿಗಳನ್ನು ಖರೀದಿಸಲು ವಾಹನಗಳಲ್ಲಿ ಕೆಲವರು ನಗರಕ್ಕೆ ಬಂದಿದ್ದಾರೆ. ಪೊಲೀಸರು ಅನಗತ್ಯವಾಗಿ ಸಂಚರಿಸುವವರ ವಾಹನಗಳನ್ನು ವಶ ಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave A Reply