• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೀನುಗಾರರಿಗೆ, ಖಾಸಗಿ ಬಸ್ಸಿನವರಿಗೆ ಏನೂ ಕೊಡಿಸಲಾಗದ ಸಚಿವರು ಹೊರಗೆ ಮುಖ ತೋರಿಸುತ್ತಾರಾ?

Hanumantha Kamath Posted On May 23, 2021


  • Share On Facebook
  • Tweet It

ರಾಜ್ಯ ಸರಕಾರದಿಂದ ಆರ್ಥಿಕ ಪ್ಯಾಕೇಜು ಘೋಷಣೆಯಾಗಿದೆ. ಅದರ ಅರ್ಥ ನಾವು ಇನ್ನೊಂದಿಷ್ಟು ದಿನ ಲಾಕ್ ಡೌನ್ ಮುಂದುವರೆಸುತ್ತೇವೆ. ನೀವು ಮಾನಸಿಕವಾಗಿ ತಯಾರಾಗಿರಿ ಎನ್ನುವ ಸಂದೇಶ. ಅದು ನಿಜವೆಂದು ಸಾಬೀತು ಕೂಡ ಆಗಿದೆ. ಪ್ಯಾಕೇಜು ಘೋಷಣೆಯಾದ ಎರಡೇ ದಿನಕ್ಕೆ ಮತ್ತೆ 14 ದಿನ ಲಾಕ್ ಡೌನ್ ಮುಂದುವರೆಸಲಾಗಿದೆ. ಒಂದು ರೀತಿಯಲ್ಲಿ ನಿರೀಕ್ಷಣಾ ಜಾಮೀನು ತೆಗೆದುಕೊಂಡ ಶೈಲಿ ಇದು. 1100 ಕೋಟಿ ರೂಪಾಯಿ ಪ್ಯಾಕೇಜುಗಳಲ್ಲಿ ಒಂದಿಷ್ಟು ಕೋಟಿ ಜಾಹೀರಾತುಗಳಿಗೆ ಹೋಗಿದೆ. ಮರುದಿನ ಎಲ್ಲಾ ಪತ್ರಿಕೆಗಳ ಮುಖಪುಟ ಫುಲ್ ಇವರದ್ದೇ ಜಾಹೀರಾತು. ಸಹಜವಾಗಿ ವಿಪಕ್ಷಗಳು ಈ ಪ್ಯಾಕೇಜು ಕೇವಲ ಕಣ್ಣೊರೆಸುವ ತಂತ್ರ ಎಂದು ಹೀಗಳೆದಿವೆ. ಸರಿಯಾಗಿ ಈ ಪ್ಯಾಕೇಜು ಕಾರ್ಮಿಕರಿಗೆ ತಲುಪಲಿ ಎನ್ನುವುದು ನಾವು ಮಾಡಬಹುದಾದ ಕನಿಷ್ಟ ಪ್ರಾರ್ಥನೆ. ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಎರಡು ಅಥವಾ ಮೂರು ಸಾವಿರ ರೂಪಾಯಿಗಳನ್ನು ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಕೊಡಲಿ, ಒಳ್ಳೆಯದು. ಆದ್ರೆ ಕಾರ್ಮಿಕರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವಲ್ಲಿ ರಾಜ್ಯ ಸರಕಾರದ ಅಧಿಕಾರಿಗಳು ವಿಫಲರಾಗಿದ್ದಾರೆ ಎನ್ನುವುದು ನಿಜ.

ಬೆಂಗಳೂರಿನ ವಿಧಾನಸೌಧದಲ್ಲಿ ಕುಳಿತುಕೊಂಡು ಪ್ಯಾಕೇಜ್ ತಯಾರಿಸುವ ಅಧಿಕಾರಿಗಳಿಗೆ ಕರಾವಳಿಯ ಮೀನುಗಾರರಾಗಲಿ, ಇಲ್ಲಿನ ಖಾಸಗಿ ಬಸ್ಸು ಕಾರ್ಮಿಕರಾಗಲಿ ನೆನಪಾಗಲು ಸಾಧ್ಯವೇ ಇಲ್ಲ. ಇನ್ನು ಅವರು ಸರಿಯಾಗಿ ಮಾಹಿತಿ ಕೊಡದಿದ್ದರೆ ನಮ್ಮ ಮುಖ್ಯಮಂತ್ರಿಗಳು ನೆನಪು ಮಾಡಿಕೊಂಡು ಹೇಳುವಂತಹ ವ್ಯವಧಾನ ತೋರಿಸಲು ಸಾಧ್ಯವೇ ಇಲ್ಲ. ಆಗ ನಾವು ಗೆಲ್ಲಿಸಿ ಕಳುಹಿಸಿರುವ ಶಾಸಕರು, ಸಚಿವರು ಅದರ ಜವಾಬ್ದಾರಿ ಹೊರಬೇಕು. ಸಚಿವರಿಗೆ ಇಲ್ಲಿನ ಮೀನುಗಾರರ, ಬಸ್ ಕಾರ್ಮಿಕರ ಸಮಸ್ಯೆ ಗೊತ್ತಿಲ್ಲವೇ. ಗೊತ್ತಿದೆ. ಪ್ಯಾಕೇಜು ತಯಾರಾಗುತ್ತಿದೆ ಎಂದು ಮೊದಲೇ ಸುದ್ದಿ ತಲುಪಿರುತ್ತದೆ. ಅದರ ವಾಸನೆ ಹಿಡಿದು ಇಂತಿಂತಹ ಅಧಿಕಾರಿಗಳನ್ನು ಭೇಟಿಯಾಗಿ ನಮ್ಮ ಕರಾವಳಿಯ ಕಾರ್ಮಿಕರ ಕ್ಷೇತ್ರಗಳನ್ನು ಅದರಲ್ಲಿ ಸೇರಿಸಬೇಕು. ಅಧಿಕಾರಿಗಳಲ್ಲಿ ವಿಚಾರಿಸಿದರೆ ಇವರಿಗೆ ಏನಾದರೂ ನಷ್ಟ ಇದೆಯಾ? ಈಗ ಬಸ್ಸಿನವರನ್ನೇ ತೆಗೆದುಕೊಳ್ಳೋಣ. ಯಾವುದೇ ಪಕ್ಷದವರ ಸಮಾವೇಶವನ್ನೇ ತೆಗೆದುಕೊಳ್ಳೋಣ. ಅಲ್ಲಿ ಜನರನ್ನು ಸೇರಿಸಬೇಕಾದರೆ ಬಸ್ಸಿನವರು ಬೇಕು. ಆಗ ಪಕ್ಷದ ಮುಖಂಡರು ನೇರವಾಗಿ ಫೋನ್ ಮಾಡುವುದು ಬಸ್ಸಿನ ಮಾಲೀಕರನ್ನು. ನೀವು ಎಷ್ಟು ಬಸ್ಸುಗಳನ್ನು ಕಳುಹಿಸಿಕೊಡಬಹುದು ಎಂದೇ ಕೇಳುತ್ತಾರೆ. ಆಗ ಪ್ರತಿ ಬಸ್ಸಿನ ಮಾಲೀಕರು ತಮ್ಮ ಕೈಯಲ್ಲಿ ಆಗುವಷ್ಟು ಬಸ್ಸುಗಳನ್ನು ಕಳುಹಿಸಿಕೊಡುತ್ತಾರೆ. ಒಬ್ಬೊಬ್ಬ ಮಾಲೀಕನಿಂದ ಉದಾಹರಣೆಗೆ ನಾಲ್ಕು ಬಸ್ಸುಗಳು ಬಂತು ಎಂದು ಅಂದುಕೊಳ್ಳೋಣ. ಅದರಲ್ಲಿ ಎರಡು ಸಂಪೂರ್ಣ ಉಚಿತ. ಉಳಿದೆರಡು ಬಸ್ಸುಗಳ ಡಿಸೀಲ್ ಚಾರ್ಜ್ ಆದರೂ ಕೊಡಿ ಎಂದು ಮಾಲೀಕರು ಹೇಳಿರುತ್ತಾರೆ. ಆ ನಂತರ ಬಸ್ಸಿನ ಧಣಿಯ ಸೂಚನೆಯ ಮೇರೆಗೆ ಬಸ್ಸಿನ ಚಾಲಕರು ಕಾರ್ಯಕರ್ತರನ್ನು ಪೀಕ್, ಡ್ರಾಪ್ ಮಾಡುವ ಕರ್ತವ್ಯ ನಿರ್ವಹಿಸುತ್ತಾರೆ. ಚಾಲಕರುಗಳಿಗೂ ಸಮಾವೇಶದ ಆಯೋಜಕರಿಗೂ ದೂರದೂರಕ್ಕೂ ಸಂಬಂಧ ಇರುವುದಿಲ್ಲ. ಇನ್ನು ಕೆಲವು ಸಮಾವೇಶದ ಬಳಿಕ ಪರಿಸ್ಥಿತಿ ತುಂಬಾ ಬಿಗಿಯಾಗುತ್ತದೆ. ಆಗ ಇದೇ ಚಾಲಕರು ತಮ್ಮ ಜೀವವನ್ನು ಪಣಕ್ಕೆ ಇಟ್ಟು ಕಾರ್ಯಕರ್ತರನ್ನು ಮನೆಗೆ ತಲುಪಿಸಬೇಕು. ಈ ಸಂದರ್ಭದಲ್ಲಿ ಬಸ್ಸುಗಳಿಗೆ ಕಲ್ಲು, ಪೆಟ್ರೋಲ್ ಬಾಂಬ್ ಎಸೆಯುವಂತಹ ಘಟನೆಗಳು ಕೂಡ ನಡೆಯುತ್ತವೆ.

ಆಗ ಹೆಚ್ಚು ಕಡಿಮೆ ಆದರೆ ಅಮಾಯಕ ಚಾಲಕರ ಪ್ರಾಣಕ್ಕೆ ತೊಂದರೆ ಉಂಟಾಗುತ್ತದೆ. ಇನ್ನು ಯಾವುದೇ ಪಕ್ಷ ಕರಾವಳಿಯಲ್ಲಿ ಕರೆಕೊಡುವ ಬಂದ್ ಯಶಸ್ವಿಯಾಗಲೂ ಕೂಡ ಬಸ್ ಮಾಲೀಕರ ಸಹಕಾರ ಬೇಕು. ಆಯಿತು, ಪಕ್ಷಗಳ ಮುಖಂಡರು ಹೇಳಿದ್ರು ಎಂದು ಮಾಲೀಕರು ಬಸ್ ಬಂದ್ ಮಾಡುತ್ತಾರೆ. ನಾಳೆ ಬಸ್ ತೆಗೆಯಬೇಡಾ ಎಂದು ಚಾಲಕನಿಗೆ ಫೋನ್ ಮಾಡಿ ಹೇಳುತ್ತಾರೆ. ಆಗಲೂ ಅನುಭವಿಸಬೇಕಾದವರು ಇದೇ ಚಾಲಕರು. ಅವರಿಗೆ ಆ ದಿನದ ಸಂಬಳ ಕಟ್. ಅಷ್ಟಕ್ಕೂ ಕರಾವಳಿಯ ಖಾಸಗಿ ಬಸ್ಸುಗಳಲ್ಲಿ ಚಾಲಕ, ನಿರ್ವಾಹಕ, ಕ್ಲೀನರ್ ಆಗಿ ದುಡಿಯುವವರಿಗೆ ಯಾವುದೇ ಉದ್ಯೋಗದ ಭದ್ರತೆ ಇಲ್ಲ. ಇವತ್ತು ದುಡಿದರೆ ಇವತ್ತು. ಇಎಸ್ ಐ, ಪಿಎಫ್, ಇನ್ಸೂರೆನ್ಸ್ ಏನೂ ಇರುವುದಿಲ್ಲ. ಅವರಲ್ಲಿ ಅನೇಕರು ಇವತ್ತು ಒಂದು ಬಸ್ಸಿನಲ್ಲಿ ದುಡಿದರೆ ನಾಳೆ ಇನ್ನೊಂದು ಬಸ್ಸಿನಲ್ಲಿ. ಕೆಲಸ ಸಿಕ್ಕಿದರೆ ಚಾನ್ಸ್. ಹೀಗಿರುವಾಗ ಸಮಾವೇಶ ಅಥವಾ ಬಂದ್ ಎರಡಕ್ಕೂ ಮೊದಲು ಬೇಕಾಗಿರುವುದು ಬಸ್ಸುಗಳು. ಆದರೆ ಆರ್ಥಿಕ ಪ್ಯಾಕೇಜು ಕೊಡುವ ವಿಷಯ ಬಂದಾಗ ಇಂತಹ ಚಾಲಕರು, ನಿರ್ವಾಹಕರು, ಕ್ಲೀನರ್ಸ್ ಯಾರಿಗೂ ನೆನಪಾಗುವುದೇ ಇಲ್ಲ. ನೆನಪು ಮಾಡಿಕೊಡಬೇಕಾದ ಜನಪ್ರತಿನಿಧಿಗಳು ವಾರ್ ರೂಂಗಳಲ್ಲಿ ಬಿಝಿ. ನಂತರ ನಾವು ಈ ಬಗ್ಗೆ ಸಿಎಂ ಗಮನಕ್ಕೆ ತರುತ್ತೇವೆ ಎಂದು ನಾಟಕದ ಡೈಲಾಗ್ ಹೇಳುವ ಬದಲು ಮೊದಲೇ ತಮ್ಮ ಸಚಿವರಿಗೆ ಹೇಳಿ ಒತ್ತಡ ಹಾಕಿಸಬಹುದಲ್ಲ. ಸಚಿವರು ಕೇವಲ ಮನವಿ ತೆಗೆದುಕೊಳ್ಳಲು ಇರುವುದಾ? ಇನ್ನು ಮೀನುಗಾರಿಕೆಗೆ ಹೋಗುವ ಯುವಕರಿಗೂ ಏನಾದರೂ ಪ್ಯಾಕೇಜು ಕೊಡಲೇಬೇಕಿತ್ತು. ಅವರಿಗೂ ಈ ಬಾರಿ ಆದಾಯಕ್ಕೆ ದಕ್ಕೆ ಬಿದ್ದಿದೆ. ಅದನ್ನೇ ನಂಬಿ ಇರುವುದರಿಂದ ಕುಟುಂಬವನ್ನು ಕೂಡ ಸಾಕುವುದು ಕಷ್ಟವಾಗಿದೆ. ಬಹುತೇಕ ಮೀನುಗಾರರು ಬಿಜೆಪಿಯ ವೋಟ್ ಬ್ಯಾಂಕ್. ಅವರ ಮುಖಂಡರಲ್ಲಿ ಕೆಲವರಿಗೆ ಬಿಜೆಪಿಯಲ್ಲಿ ರಾಷ್ಟ್ರೀಯ ಜವಾಬ್ದಾರಿ ಇದೆ. ಆದರೂ ಏನೂ ಸಿಕ್ಕಿಲ್ಲ. ಮೀನುಗಾರಿಕೆಗೆ ತೆರಳುವವರಿಗೆ ಒಳ್ಳೆಯ ಫಸಲು ಕೈಗೆ ಬಂದರೆ ಮಾತ್ರ ಒಂದಿಷ್ಟು ಇನ್ಸೆಟಿವ್ಸ್ ಸಿಗುತ್ತದೆ ಬಿಟ್ಟರೆ ಇಲ್ಲದಿದ್ದರೆ ಸಾಮಾನ್ಯ ಆದಾಯ ಅವರ ಮಾಲೀಕರ ಜೇಬು ಸೇರುತ್ತದೆ. ಯಾಕೋ, ತಮ್ಮವರಿಗೆ ಏನೂ ಸಿಗಲಿಲ್ಲ ಎಂದು ಚೌಚೌ ಸರಕಾರ ಇದ್ದಾಗ ಬೀದಿರಂಪ ಮಾಡುತ್ತಿದ್ದ ಕರಾವಳಿಯ ಬಿಜೆಪಿ ಶಾಸಕರು ತಮ್ಮ ಪಕ್ಷ ಇದ್ದಾಗಲೂ ಇಂತವರಿಗೆ ಏನೂ ಸಿಗದೇ ಇದ್ದಾಗ ಮೊಸಳೆ ಕಣ್ಣೀರು ಸುರಿಸುವುದು ಆಶ್ಚರ್ಯ ಎನಿಸುತ್ತದೆ!!

  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Hanumantha Kamath June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Hanumantha Kamath June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search