ಮಂಗಳೂರು ಅಕ್ರಮವಾಗಿ ನುಸುಳಿದ್ದ ಶ್ರೀಲಂಕಾ 38 ಪ್ರಜೆಗಳ ಬಂಧನ!

ಮಂಗಳೂರು ಅಕ್ರಮವಾಗಿ ನುಸುಳಿದ್ದ ಶ್ರೀಲಂಕಾ ಪ್ರಜೆಗಳ ಬಂಧನ , ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ, ಶ್ರೀಲಂಕಾದಿಂದ ತಮಿಳುನಾಡಿನ ತೂತುಕುಡಿಗೆ ಬಂದು ಅಲ್ಲಿಂದ ಕೆನಡಾಗೆ ಹೋಗುವವರಿದ್ದರು, ಆದರೆ ತಮಿಳುನಾಡು ಚುನಾವಣೆ ಹಿನ್ನೆಲೆ ಅವರನ್ನ ಮಂಗಳೂರಿಗೆ ತಂದು ಬಿಡಲಾಗಿತ್ತು. ಅಲ್ಲಿ ಚುನಾವಣೆ ಹಿನ್ನೆಲೆ ತಪಾಸಣೆ ಕಾರ್ಯ ಚುರುಕಾಗಿದ್ದ ಹಿನ್ನೆಲೆ ಮಂಗಳೂರಿಗೆ ಎಂಟ್ರಿ , ಮಂಗಳೂರಿಗೆ ಬಂದು ಇಲ್ಲಿನ ಲಾಡ್ಜ್ ಗಳಲ್ಲಿ ತಿಂಗಳಿನಿಂದ ವಾಸ್ತವ್ಯ ಹೂಡಿದ್ದರು.
https://www.facebook.com/TulunaduNews/videos/303305251317120
ಹೀಗಾಗಿ ಸದ್ಯ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ 38 ಜನರನ್ನ ವಶಕ್ಕೆ ಪಡೆದಿದ್ದು, ಉಳಿದವರ ಹುಡುಕಾಟ ಮುಂದುವರೆದಿದೆ. ಮಂಗಳೂರಿನಲ್ಲಿ ಇವರಿಗೆ ಆಶ್ರಯ ಕೊಡಲು ನೆರವು ನೀಡಿದವರ ಬಗ್ಗೆಯೂ ತನಿಖೆ ಆರಂಭವಾಗಿದೆ. ಬೇರೆ ದೇಶದ ವ್ಯಕ್ತಿಗಳು ಮಂಗಳೂರಿಗೆ ಆಗಮಿಸಿ ಅಕ್ರಮ ಆಶ್ರಯ ಪಡೆದಿರುವ ಬಗ್ಗೆ ತನಿಖೆ ಮುಂದುವರೆದಿದೆ. ಇವರಿಗೆ ಆಶ್ರಯ ಕೊಟ್ಟ ಕಾರಣ ಮತ್ತು ನೆರವು ನೀಡಿದ ಕಾರಣ ಇಲ್ಲಿನ ಆರು ಜನರನ್ನ ವಶಕ್ಕೆ ಪಡೆಯಲಾಗಿದೆ.ಅವರಲ್ಲಿ ಕೆಲವರು ಇಂಗ್ಲೀಷ್ ಮಾತನಾಡ್ತಿದಾರೆ, ಬಹುತೇಕ ತಮಿಳು ಮಾತನಾಡುವವರಿದ್ದಾರೆ
ಶ್ರೀಲಂಕಾದಿಂದ ಮಾರ್ಚ್ 17ಕ್ಕೆ ಹೊರಟು ತಮಿಳುನಾಡಿಗೆ ಬಂದಿದ್ದಾರೆ.ಇವರಲ್ಲಿ ಬಹುತೇಕ ಮಂದಿ ಶ್ರೀಲಂಕಾದ ಉತ್ತರ ಭಾಗದವರು. ಮಂಗಳೂರಿನ ಎರಡು ಲಾಡ್ಜ್ ಮತ್ತು ಎರಡು ಮನೆಗಳಲ್ಲಿ ವಾಸ್ತವ್ತ ಹೂಡಿದ್ದರು. ತಮಿಳುನಾಡು ಗುಪ್ತಚರ ಇಲಾಖೆ ಪ್ರಕಾರ ಇವರು ಕೆಲಸಕ್ಕಷ್ಟೇ ಕೆನಡಾಗೆ. ಇವರಿಗೆ ಶ್ರೀಲಂಕಾ ಮತ್ತು ತಮಿಳುನಾಡಿನಲ್ಲಿ ಏಜೆಂಟ್ ಇದ್ದಾರೆ. ಮಂಗಳೂರಿನಲ್ಲೂ ಇವರಿಗೆ ಏಜೆಂಟ್ ಗಳಿರೋ ಸಾಧ್ಯತೆಯಿದ್ದು, ತನಿಖೆ ನಡೆಸ್ತಿದೇವೆ
Leave A Reply