• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಉತ್ತರಪ್ರದೇಶದಲ್ಲಿ ಚುನಾವಣೆಗೆ ವಿಪಕ್ಷ ಸಿದ್ಧತೆ, ಮೊದಲ ಅಸ್ತ್ರ ಅಯೋಧ್ಯೆ!!

Tulunadu News Posted On June 18, 2021
0


0
Shares
  • Share On Facebook
  • Tweet It

ಆರಂಭದಲ್ಲಿಯೇ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಅಯೋಧ್ಯೆಯ ಭವ್ಯ ರಾಮಮಂದಿರದ ವಿಷಯದಲ್ಲಿ ಅನಗತ್ಯ ಅಡಚಣೆ, ಗೊಂದಲ ತರುವವರನ್ನು ದೇವರು ಕ್ಷಮಿಸಲಾರ. ಇನ್ನು ವಿಷಯಕ್ಕೆ ಬರೋಣ. ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ ದೇಶದ ಮತ್ತು ವಿದೇಶದ ಆಸ್ತಿಕಬಂಧುಗಳಿಂದ ಸಾಕಷ್ಟು ದೇಣಿಗೆ ಹರಿದುಬರುತ್ತಿದೆ. ಅದೆಲ್ಲವೂ ಅವರ ವಿಶ್ವಾಸ ಮತ್ತು ಭಕ್ತಿಯ ಸಂಕೇತ. ಆ ಹಣದಲ್ಲಿ ಅವ್ಯವಹಾರ ಆಗಲು ಸಾಧ್ಯವೇ ಇಲ್ಲ. ಯಾಕೆಂದರೆ ಆ ಒಂದೊಂದು ರೂಪಾಯಿಯ ಹಿಂದೆಯೂ ರಾಮಚಂದ್ರನಿದ್ದಾನೆ. ಸ್ವಂತಕ್ಕೆ ಯಾರಾದರೂ ಬಳಸುವುದು ಬಿಡಿ, ಯೋಚಿಸಿದರೂ ಅಂತಹ ವ್ಯಕ್ತಿ ಸುಟ್ಟು ಭಸ್ಮವಾಗುತ್ತಾನೆ. ಹಾಗಿರುವಾಗ ಅದರಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಆಗಿದೆ ಎನ್ನುವುದು ಶುದ್ಧ ಭ್ರಮೆ ಮತ್ತು ಅಪ್ಪಟ ಸುಳ್ಳು. ಇದೆಲ್ಲಾ ಯಾಕೆ ಆಗುತ್ತಿದೆ ಎನ್ನುವ ವಿಷಯಕ್ಕೆ ಬರೋಣ. ಅಕ್ರಮ ಭೂ ಖರೀದಿ ವ್ಯವಹಾರದಲ್ಲಿ ಅವ್ಯವಹಾರ ಆಗಿದೆ ಎಂದು ಸಮಾಜವಾದಿ ಪಾರ್ಟಿ ಹಾಗೂ ಆಮ್ ಆದ್ಮಿ ಪಾರ್ಟಿಯ ಮುಖಂಡರಿಂದ ಸುದ್ದಿಗೋಷ್ಟಿ ನಡೆದಿದೆ. ಇದಕ್ಕೆ ಕಾಂಗ್ರೆಸ್ ಕೂಡ ಧ್ವನಿಗೂಡಿಸುತ್ತಿದೆ. ಈ ಮೂಲಕ ಏಳು ತಿಂಗಳ ನಂತರ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ವಿದ್ಯುಕ್ತವಾಗಿ ಪ್ರತಿಪಕ್ಷಗಳು ತಮ್ಮ ತಯಾರಿಯನ್ನು ಆರಂಭಿಸಿವೆ. ರಾಮ ಮಂದಿರ ನಿರ್ಮಾಣ ಆಗುತ್ತಿರುವುದೇ ಪ್ರತಿಪಕ್ಷಗಳಿಗೆ ಮೊದಲನೇಯದಾಗಿ ಬಿಸಿತುಪ್ಪ. ಸಮರ್ಥನೆ ಕೊಡಲು ಸಾಧ್ಯವಿಲ್ಲ. ಹಾಗೆಂದು ವಿರೋಧಿಸುತ್ತಾ ಕುಳಿತುಕೊಂಡರೆ ಜನರಿಂದ ತೆಗಳಿಕೆ ಶುರುವಾಗುತ್ತದೆ. ಆದ್ದರಿಂದ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ವಿಪಕ್ಷಗಳು ಯುಪಿಯಲ್ಲಿ ಇಡುತ್ತಿವೆ. ಹೀಗಿರುವಾಗಲೇ ಅವುಗಳಿಗೆ ಈಗ ಯಾವುದೇ ತಳಹದಿ ಇಲ್ಲದ ವಿಷಯವೊಂದು ಸಿಕ್ಕಿದೆ ಮತ್ತು ಈ ಮೂಲಕ ರಾಮಜನ್ಮಭೂಮಿ ಟ್ರಸ್ಟ್ ಅನ್ನು ಕಟಕಟೆಯಲ್ಲಿ ನಿಲ್ಲಿಸಲು ಅವು ಪೂರ್ಣರೀತಿಯ ಪ್ರಯತ್ನವನ್ನು ಮಾಡುತ್ತಿವೆ. ವಾಸ್ತವ ಎಂದರೆ ಹಲವು ವರ್ಷಗಳ ಹಿಂದೆಯೇ ಭೂಮಾಲೀಕರಿಂದ ಈಗ ವಿಪಕ್ಷಗಳು ಎತ್ತಿರುವ ಜಾಗದ ಖರೀದಿ ಒಪ್ಪಂದ ಆಗಿತ್ತು. ಅದನ್ನು ಅವರು ಮಾರ್ಚ್ ತಿಂಗಳಲ್ಲಿ ಹಿಂದಿನ ಬೆಲೆಗೆ ಖರೀದಿ ನೋಂದಣಿ ಪೂರ್ಣಗೊಳಿಸಿ, ನಂತರ ಪ್ರಚಲಿತ ಮಾರುಕಟ್ಟೆ ಬೆಲೆಗೆ ಟ್ರಸ್ಟ್ ಗೆ ಮಾರಾಟ ಮಾಡಿದ್ದಾರೆ. ಈ ಸುಧೀರ್ಘ ಪ್ರಕ್ರಿಯೆ ಮರೆಮಾಚಿ ದಿಢೀರ್ ಖರೀದಿಯ ಆರೋಪ ಮಾಡಲಾಗಿದೆ. ಮತ್ತೊಂದು ವಿಷಯ ಏನೆಂದರೆ ಯಾವಾಗ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಲಿ ಎಂದು ನ್ಯಾಯಾಲಯ ಆದೇಶ ಹೊರಡಿಸಿತೋ ಆವತ್ತಿನಿಂದ ಅಯೋಧ್ಯೆಯಲ್ಲಿ ಭೂಮಿಯ ಬೆಲೆ ಗಗನಕ್ಕೆ ಏರಿದೆ. ಯಾಕೆಂದರೆ ಭವಿಷ್ಯದಲ್ಲಿ ಅಯೋಧ್ಯೆ ವಿಶ್ವಪ್ರಸಿದ್ಧ ಆಸ್ತಿಕ ಬಂಧುಗಳ ನೆಚ್ಚಿನ ತಾಣವಾಗಿದೆ. ಒಂದು ಸಲ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನೋಡಬೇಕು ಎಂದು ಈ ದೇಶದ ಮುಕ್ಕಾಲು ಭಾಗ ಜನ ತೀರ್ಮಾನಿಸಿದರೂ ನೀವು ಅಂದುಕೊಳ್ಳಿ ಅದು ಎಷ್ಟರ ಮಟ್ಟಿಗೆ ಪ್ರವಾಸಿತಾಣವಾಗಬಹುದು. ಹಾಗಿರುವಾಗ ಅಲ್ಲಿ ವಿವಾದಗಳು, ಆರೋಪ, ಪ್ರತ್ಯಾರೋಪಗಳು, ನ್ಯಾಯಾಲಯದಲ್ಲಿ ತನಿಖೆ ನಡೆಯುವ ದಿನಗಳಲ್ಲಿ ಅಲ್ಲಿ ಭೂಮಿಯನ್ನು ಯಾರೂ ಕೇಳುವವರು ಇರಲಿಲ್ಲ. ಕೇವಲ ಎರಡು ಲಕ್ಷ ಬೆಲೆಬಾಳುತ್ತಿದ್ದ ಜಾಗಗಳು ಈಗ ಕೋಟಿಗೆ ಮಾರಾಟವಾಗುತ್ತಿದೆ. ಅಲ್ಲಿ ಸ್ವಂತಭೂಮಿ ಹೊಂದಿದವರು ದಿಢೀರನೇ ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ರಾಮ ಮಂದಿರ ನಿರ್ಮಾಣವಾಗುವಾಗ ದೇವಸ್ಥಾನದ ಸುತ್ತಲೂ ಯಾತ್ರಿಕರ ಅನುಕೂಲಕ್ಕಾಗಿ ಮತ್ತು ಸುರಕ್ಷೆಯ ದೃಷ್ಟಿಯಿಂದ ಅಕ್ಕಪಕ್ಕದ ಜಮೀನನ್ನು ಖರೀದಿಸುವ ಅಗತ್ಯ ಟ್ರಸ್ಟಿಗೆ ಇದೆ. ಆದರೆ ಈಗ ಆ ಭೂಮಿಗಳ ರೇಟ್ ಹಿಂದಿನಂತೆ ಇಲ್ಲವೇ ಇಲ್ಲ. ರಾಮಜನ್ಮಭೂಮಿಯ ಸುತ್ತಲೂ ಅನೇಕ ಸಣ್ಣಪುಟ್ಟ ದೇವಸ್ಥಾನಗಳು, ಒಂದಿಷ್ಟು ಮನೆಗಳು ಕೂಡ ಇವೆ. ಅವರ ಭೂಮಿಯನ್ನು ಖರೀದಿಸಿ ಅವರಿಗೆ ಬೇರೆ ಕಡೆ ಮನೆ ಕಟ್ಟಲು ಮತ್ತು ಸ್ಥಳಾಂತರವಾಗುವ ದೇವಸ್ಥಾನಗಳಿಗೆ ಬೇರೆಡೆ ಕಟ್ಟಲು ಅನುಕೂಲಕರ ಜಾಗವನ್ನು ನೋಡುವ ಜವಾಬ್ದಾರಿ ಕೂಡ ಈ ಟ್ರಸ್ಟ್ ಮೇಲಿದೆ. ಇಲ್ಲದಿದ್ದರೆ ರಾಮಮಂದಿರ ನಿರ್ಮಾಣವಾಗುವಾಗ ಅಕ್ಕಪಕ್ಕದ ಅನೇಕ ದೇವಸ್ಥಾನಗಳನ್ನು ಕೆಡವಲಾಯಿತು. ಅವುಗಳಿಗೆ ಬೇರೆಡೆ ಕಟ್ಟಲು ಏನೂ ವ್ಯವಸ್ಥೆ ಮಾಡಿಲ್ಲ ಎಂದು ಇದೇ ವಿಪಕ್ಷಗಳು ಬೊಬ್ಬೆ ಹಾಕುತ್ತವೆ. ಆದ್ದರಿಂದ ರಾಮಮಂದಿರದ ನಿರ್ಮಾಣದ ಜೊತೆಗೆ ಆ ಭಾಗದ ಬೇರೆ ಸ್ಥಳಾಂತರವಾಗಬೇಕಾದ ದೇವಸ್ಥಾನಗಳ ಜವಾಬ್ದಾರಿ ಕೂಡ ಈ ಟ್ರಸ್ಟ್ ಮೇಲಿದೆ. ಇನ್ನು ಈ ಎಲ್ಲ ವ್ಯವಹಾರಗಳು ಸಂಪೂರ್ಣ ಆನ್ ಲೈನ್ ಮೂಲಕವೇ ನಡೆಯಲಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಇಲ್ಲಿಯವರೆಗೆ ಖರೀದಿಸಿದ ಎಲ್ಲಾ ಭೂಮಿಗಳನ್ನು ಹೊರಗಡೆ ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿದೆ. ಆದರೆ ವಿಪಕ್ಷಗಳಿಗೆ ಇದನ್ನು ಅರಗಿಸಲು ಆಗುತ್ತಿಲ್ಲ. ಇಂತಹ ಆರೋಪಗಳಿಗೆಲ್ಲ ರಾಮಭಕ್ತರು ತಯಾರಾಗಿಯೇ ಇರಬೇಕಾಗುತ್ತದೆ. ಟ್ರಸ್ಟ್ ನವರು ಕೂಡ ಮಾನಸಿಕವಾಗಿ ತಯಾರಾಗಿಯೇ ಇರುತ್ತಾರೆ. ಏಕೆಂದರೆ ನ್ಯಾಯಾಲಯದಲ್ಲಿ ವಿವಾದ ಇದ್ದಷ್ಟು ದಿನ ಕೇಸ್ ಎಷ್ಟು ವರ್ಷಗಳಾಗುತ್ತೋ ಅಷ್ಟು ವರ್ಷ ಎಳೆಯುವ ಪ್ರಯತ್ನವನ್ನು ಕಾಂಗ್ರೆಸ್ ನವರು ಮಾಡುತ್ತಲೇ ಇದ್ದರು. ಏನಾದರೂ ಮಾಡಿ ರಾಮಮಂದಿರ ತೀರ್ಪು ಹೊರಗೆ ಬರದಂತೆ ತಮ್ಮ ಗರಿಷ್ಟ ಪ್ರಯತ್ನ ಮಾಡಿದ್ದರು. ಈಗ ಕಟ್ಟುವ ತನಕ ಅವರ ಉಪದ್ರವ ಇದ್ದೇ ಇರುತ್ತದೆ. ಕಟ್ಟಿ ಮುಗಿದ ನಂತರವೂ ಅದು ಏನಾದರೊಂದು ರೂಪದಲ್ಲಿ ಮುಂದುವರೆಯುತ್ತದೆ. ಒಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರ ಇದ್ದಷ್ಟು ದಿನ ಯೋಜನೆ ಸುರಕ್ಷಿತವಾಗಿ ನಡೆಯುತ್ತದೆ. ಏನಾದರೂ ಗ್ರಹಚಾರಕ್ಕೆ ಸರಕಾರ ಬದಲಾಗಿ ಚೌಚೌ ಸರಕಾರಗಳು ಬಂದವೋ ನಂತರ ಎಲ್ಲವೂ ರಾಮಚಂದ್ರನೇ ಬಲ್ಲ!

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Tulunadu News June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search