• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯೋಗ ಮಾಡುವಾಗ “ಅಲ್ಲಾ” ಅಥವಾ ಹೌದು ಏನು ಬೇಕಾದರೂ ಹೇಳಿ ಸಿಂಘ್ವಿ!!

Hanumantha Kamath Posted On June 23, 2021


  • Share On Facebook
  • Tweet It

ಕಾಂಗ್ರೆಸ್ ತನ್ನ ನಿರಂತರ ಸೋಲುಗಳಿಂದ ಪಾಠ ಕಲಿಯುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಚುನಾವಣೆಗಳು ಹತ್ತಿರಕ್ಕೆ ಬರುವಾಗ ಮೃಧು ಹಿಂದೂತ್ವ, ಪಂಚೆ,
ಕೊರಳಲ್ಲಿ ಮಾಲೆ ಧರಿಸಿ ದೇವಸ್ಥಾನಗಳನ್ನು ಸುತ್ತು ಬರುವ ರಾಹುಲ್ ಮತ್ತು ನಿತ್ಯ ಜೀನ್ಸ್, ಟೀಶರ್ಟ್ ಗಳಲ್ಲಿ ಇರುವ ಪ್ರಚಾರಕ್ಕೆ ಬರುವಾಗ ಅಪ್ಪಟ ಗೌರಮ್ಮನಂತೆ ವೇಷ ಧರಿಸುವ ಪ್ರಿಯಾಂಕಾ ಮಾಡುವ ಚುನಾವಣಾ ನಾಟಕಗಳನ್ನು ಹಳ್ಳ ಹಿಡಿಸಲು ಅವರದ್ದೇ ಪಕ್ಷದ ಮುಖಂಡರು ಸಾಕು. ಅಭಿಷೇಕ್ ಮನು ಸಿಂಘ್ವಿ ಎನ್ನುವ ಕಾಂಗ್ರೆಸ್ ವಕ್ತಾರರೂ, ರಾಜ್ಯಸಭಾ ಎಂಪಿ ಆಗಿದ್ದವರೂ, ಸುಪ್ರೀಂಕೋರ್ಟಿನ ವಕೀಲರಾಗಿದ್ದಂತಹ ಒಬ್ಬ ಮಹಾನುಭಾವರು ಇದ್ದಾರೆ. ಅವರಿಗೆ ಕಾಂಗ್ರೆಸ್ ಚುನಾವಣೆಗೆ ಹತ್ತಿರ ಬರುವಾಗ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವುದು ಮರೆತುಹೋಗಿದೆ. ಅದಕ್ಕಾಗಿ ಅವರು ಫ್ರೀ ಇದ್ದಾಗ ಕಾಂಗ್ರೆಸ್ಸಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಸುಮ್ಮನೆ ಒಂದೊಂದು ಡೈಲಾಗ್ ಬಿಸಾಡುತ್ತಾರೆ. ಅವರು ಅದರಿಂದ ಕಾಂಗ್ರೆಸ್ಸಿಗೆ ಸಿಕ್ಕಾಪಟ್ಟೆ ಲಾಭವಾಗುತ್ತೆ ಎಂದು ತಮ್ಮ ಕಾಲರನ್ನು ತಾವೇ ಎತ್ತಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ. ಆದರೆ ಇವರ ಡೈಲಾಗ್ ನಿಂದ ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಮುಂದಿನ ಬಾರಿ ಬರುವ ನಾಲ್ಕು ಸೀಟುಗಳು ಕೂಡ ಬರುವುದಿಲ್ಲ ಎನ್ನುವುದು ಅವರಿಗೆ ಗೊತ್ತಿಲ್ಲ. ಉತ್ತರ ಪ್ರದೇಶ ಸಹಿತ ರಾಷ್ಟ್ರದ ಐದಾರು ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇದೆ. ಅದರಲ್ಲಿಯೂ ಯುಪಿಯಲ್ಲಿ ಮರ್ಯಾದೆ ಉಳಿಸಿಕೊಳ್ಳಬೇಕಾದರೆ ರಾಹುಲ್ ಮತ್ತು ಪ್ರಿಯಾಂಕಾ ತುಂಬಾ ಬೆವರು ಸುರಿಸಬೇಕು. ಅಲ್ಲಿ ಮುಸ್ಲಿಮ್ ಮತಬ್ಯಾಂಕಿನಷ್ಟೇ ಬ್ರಾಹ್ಮಣರ ಮತಗಳು ಕೂಡ ಪ್ರಮುಖವಾಗಿರುತ್ತವೆ. ಬ್ರಾಹ್ಮಣರನ್ನು ಮಾಯಾವತಿ ದೂಷಿಸುವಾಗಲೆಲ್ಲ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಅಂತಹ ಯುಪಿಯಲ್ಲಿ ಮುಂದಿನ ಬಾರಿ ಭಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಬ್ರಾಹ್ಮಣರ ವೋಟ್ ಕೂಡ ನಿರ್ಣಾಯಕ. ಅದನ್ನು ತಮ್ಮತ್ತ ಸೆಳೆಯಲು ಸಮಾಜವಾದಿ ಪಾರ್ಟಿ ಕೂಡ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಎಲ್ಲಿಯ ತನಕ ಅಂದರೆ ಸ್ವತ: ಮುಲಾಯಂ ಸಿಂಗ್ ಯಾದವ್ ಪುತ್ರ ಅಲ್ಲಿನ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ತಾವು ಯುಪಿಗೆ ಹೊಸ ರೂಪ ಕೊಡಲು ಬರುತ್ತಿರುವ ಕೃಷ್ಣ ಎನ್ನುವ ಹೊಸ ಹಾಡೊಂದನ್ನು ತಮಗಾಗಿಯೇ ಬರೆಸಿದ್ದಾರೆ. ಯೋಗಿ ಆದಿತ್ಯನಾಥ್ ರಾಮನಾದರೆ, ತಾವು ಕೃಷ್ಣ ಎಂದು ತೋರಿಸುವ ಹುನ್ನಾರ ಅವರದ್ದು. ಹೀಗೆ ಬ್ರಾಹ್ಮಣರ ವೋಟಿನ ಮೇಲೆ ಎಲ್ಲ ಪಕ್ಷಗಳ ಕಸರತ್ತು ನಡೆಯುವಾಗಲೇ ಅಭಿಷೇಕ್ ಮನು ಸ್ವಿಂಘ್ವಿ ಕಾಂಗ್ರೆಸ್ ಪಕ್ಷದ ಕಾಲಿನ ಮೇಲೆ ತಾವೇ ಭಾರದ ಕಲ್ಲು ಎತ್ತಿಹಾಕಿಬಿಟ್ಟಿದ್ದಾರೆ.

ಯೋಗಾಸನ ಮಾಡುವಾಗ ಅದರಲ್ಲಿಯೂ ಸೂರ್ಯ ನಮಸ್ಕಾರ ಮಾಡುವಾಗ ಓಂ ಎನ್ನುವ ಶಬ್ದವನ್ನು ಎಷ್ಟು ಧೀರ್ಘವಾಗಿ ಆಗುತ್ತೋ ಅಷ್ಟು ಧೀರ್ಘವಾಗಿ ಎಳೆದುಕೊಳ್ಳುವ ಪ್ರಕ್ರಿಯೆ ಇದೆ. ಅದು ಕೂಡ ಸೂರ್ಯ ನಮಸ್ಕಾರದ ಒಂದು ಹಂತ. ಈ ಸಿಂಘ್ವಿಯವರದ್ದು ಏನು ತಕರಾರು ಎಂದರೆ ಓಂ ಬದಲು ಅಲ್ಲಾ ಎಂದು ಹೇಳಬೇಕು ಎನ್ನುವುದು. ಸಿಂಘ್ವಿ ಸಾಹೇಬರ ಈ ಹೊಸ ವರಸೆಯ ಉದ್ದೇಶ ಸ್ಪಷ್ಟ, ಏನೆಂದರೆ ಮೋದಿಯವರು ಯೋಗವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಅದಕ್ಕೆ ಅಧಿಕೃತ ಮುದ್ರೆ ಒತ್ತಿದರಲ್ಲ, ಅದರ ಬಳಿಕ ಸಿಂಘ್ವಿಯವರಿಗೆ ಏನು ಅನಿಸಿದೆ ಎಂದರೆ ಕಾಂಗ್ರೆಸ್ ಮುಸ್ಲಿಮರನ್ನು ಅರ್ಜೆಂಟಾಗಿ ಖುಷಿ ಪಡಿಸಬೇಕು. ಯೋಗ ನಮ್ಮ ಸನಾತನ ಸಂಸ್ಕೃತಿಯಲ್ಲಿ ಋಷಿಮುನಿಗಳು ದೇಹದ ಆರೋಗ್ಯವನ್ನು ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಲು ಕಂಡುಕೊಂಡಿದ್ದ ಉಪಾಯ. ಆಗ ಇಸ್ಲಾಂ ಭಾರತಕ್ಕೆ ಬಂದಿತ್ತೋ ಇಲ್ವೋ, ಅದರ ಮೊದಲೇ ಯೋಗ ಇಲ್ಲಿ ಇತ್ತು. ಇವತ್ತಿಗೂ ಕೆಲವು ಕಟ್ಟರ್ ಮೂಲಭೂತವಾದಿ ಮುಸ್ಲಿಂ ಸಂಘಟನೆಗಳು ಯೋಗ ಮಾಡುವಾಗ ಓಂ ಹೇಳುವುದನ್ನು ವಿರೋಧಿಸುತ್ತಿದ್ದರೂ ಬಹುತೇಕ ಎಲ್ಲ ಮುಸ್ಲಿಮರು ಯೋಗದ ದ್ವೇಷಿಗಳಲ್ಲ. ಯೋಗ ಮಾಡುವವರ ವಿರುದ್ಧ ಮುಸ್ಲಿಂ ಧರ್ಮಗುರುಗಳು ಯಾವುದೇ ಫತ್ವಾ ಹೊರಡಿಸಿಲ್ಲ. ಕ್ರಿಶ್ಚಿಯನ್ ರಾಷ್ಟ್ರಗಳಲ್ಲಿಯೂ ಯೋಗವನ್ನು ಮಾಡುತ್ತಾರೆ. ಯೋಗ ಮಾಡುವಾಗ ಓಂ ಹೇಳುವ ಬದಲು ಬೇರೆ ಯಾವುದೇ ಶಬ್ದವನ್ನು ಕೂಡ ಹೇಳಬಹುದು. ಸಿಂಘ್ವಿ ಬೇಕಾದರೆ ಅಲ್ಲಾ ಅಥವಾ ಹೌದು ಏನು ಬೇಕಾದರೂ ಹೇಳಲಿ. ಆದರೆ ಇವರು ಹೀಗೆ ಹೇಳುವ ಮೊದಲು ಒಮ್ಮೆ ರಾಹುಲ್ ಅಥವಾ ಪ್ರಿಯಾಂಕಾರನ್ನು ಕೇಳಲಿ. ಯಾಕೆಂದರೆ ಇದೇ ರಾಹುಲ್ ಇನ್ನಾರು ತಿಂಗಳು ಕಳೆದರೆ ಮೂಲೆಯಲ್ಲಿ ಬಿಸಾಡಿದ ತಮ್ಮ ಧೋತಿಯನ್ನು ತೆಗೆದು ಅದನ್ನು ಒಗೆದು, ಇಸ್ತ್ರೀ ಹಾಕಿ ಮತ್ತೆ ಉಟ್ಟು ಎಲ್ಲಿಂದಲಾದರೂ ಒಂದು ಹೊಸ ಜನಿವಾರ ತಂದು ಅದು ಎದ್ದು ಕಾಣುವಂತೆ ಹಾಕಿ, ಯುಪಿಯಲ್ಲಿ ದೇವಸ್ಥಾನಗಳು ಎಲ್ಲಿವೆ ಎಂದು ಲೆಕ್ಕ ಹಾಕಿ ಅಲ್ಲಿ ಕಷ್ಟಪಟ್ಟು ಸುತ್ತು ಹಾಕಿ, ವಿಡಿಯೋದವರು ಇದ್ದರೆ ಓಂ ಎಂದು ಹೇಳುತ್ತಾ ಸೂರ್ಯ ನಮಸ್ಕಾರ ಕೂಡ ಮಾಡಿಯಾರು. ನಂತರ ಚುನಾವಣೆ ಮುಗಿದ ಬಳಿಕ ಆ ಜನಿವಾರವನ್ನು ಎಲ್ಲಿಯಾದರೂ ಕಪಾಟಿನಲ್ಲಿ ಇಟ್ಟು ಯಾವುದಾದರೂ ಬ್ರಾಂಡೆಡ್ ಟೀ ಶರ್ಟ್ ಹಾಕಿ ವಿದೇಶಕ್ಕೆ ಹಾರಿ ತಮ್ಮ ಆಪ್ತ ಗೆಳತಿಯರೊಡನೆ ತಮ್ಮದೇ ಆಸನಗಳನ್ನು ಮಾಡಬಹುದು. ಆದರೆ ಇಲ್ಲಿ ಸಿಂಘ್ವಿಯಂತವರು ಅದೇ ಕಿತ್ತೋಗಿರುವ ಕಾಂಗ್ರೆಸ್ಸಿನ ಬೈಲಾ ಹಿಡಿದು ಮುಸ್ಲಿಮರತ್ತ ಕಾಳು ಎಸೆಯುತ್ತಿದ್ದಾರೆ!

  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
Hanumantha Kamath September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
Hanumantha Kamath September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search